ಮುದ್ರಾ ಯೋಜನೆ ಗ್ರಾಮೀಣ ಭಾಗದಲ್ಲೂ ಶಕ್ತಿ | ಕೇರಳದ ಹಳ್ಳಿಯೊಂದರ ಮಾದರಿ ಬೇಕರಿ |

August 29, 2024
8:29 PM

ಗ್ರಾಮೀಣ ಆರ್ಥಿಕತೆ ಬೆಳೆಯಬೇಕು ಹಾಗೂ ಸ್ವಉದ್ಯೋಗ ಹೆಚ್ಚಾಗಬೇಕು. ಇದಕ್ಕೇನು..? ಸರ್ಕಾರ ಮುದ್ರಾ ಯೋಜನೆ ಜಾರಿ ಮಾಡಿದೆ. ಇದು ಗ್ರಾಮೀಣ ಭಾಗದ ಯುವಕರನ್ನು ತಲುಪಬೇಕಾದರೆ ಹಲವಾರು ಅಡೆ ತಡೆಗಳು ಇವೆ. ಈ ನಡುವೆಯೇ ಸಾಧಿಸಿ  ಮದ್ರಾ ಯೋಜನೆ ಪಡೆದು ಈ ಮೂಲಕ ಯಶಸ್ವಿಯಾಗಿಸಿಕೊಂಡವರು ಕೇರಳದ ಥಾಮಸ್ ಕುಟಿಯಾನಿಕಲ್ ಮತ್ತು ಅವರ ಪತ್ನಿ ರಾಣಿ.

Advertisement
Advertisement
Advertisement

ಇಡುಕ್ಕಿಯ ಕಂಜಿಕುಝಿಯಲ್ಲಿರುವ ಮಾಡರ್ನ್ ಬೇಕರ್ಸ್ ಮುದ್ರಾ ಯೋಜನೆಯಿಂದ ಪ್ರಯೋಜನ ಪಡೆಯುತ್ತಿರುವ ಉತ್ತಮ ಮಾದರಿಯಾಗಿದೆ. ಗ್ರಾಮೀಣ ಭಾಗಕ್ಕೆ ಆರ್ಥಿಕ ಶಕ್ತಿಯನ್ನು ನೀಡುವ ಈ ಯೋಜನೆಯಲ್ಲಿ ಇದು ವ್ಯಾಪಾರ, ಉತ್ಪಾದನೆ ಮತ್ತು ಸೇವಾ ವಲಯಗಳಲ್ಲಿ ತೊಡಗಿರುವ ಸೂಕ್ಷ್ಮ ಉದ್ಯಮಗಳಿಗೆ ಸಹಾಯ ಮಾಡುತ್ತದೆ.ಪ್ರಧಾನ ಮಂತ್ರಿ ಮುದ್ರಾ ಯೋಜನೆಯು ಭಾರತದಲ್ಲಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.

Advertisement

ಈ ಯೋಜನೆಯನ್ನು ಬಳಸಿಕೊಂಡಿರುವ ಅನೇಕ ಮಂದಿ ಇದ್ದಾರೆ. ಆದರೆ ಕೇರಳದ ಇಡುಕ್ಕಿಯ ಕಂಜಿಕುಝಿಯಲ್ಲಿರುವ ಮಾಡರ್ನ್ ಬೇಕರ್ಸ್ ಗಮನ ಸೆಳೆದಿದೆ. ಮಾಡರ್ನ್ ಬೇಕರ್ಸ್ ಕಂಜಿಕುಝಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪುಟ್ಟ ಉದ್ಯಮವಾಗಿದೆ. ಬೇಕರಿ ವಸ್ತುಗಳು, ಟೀ ಸ್ಟಾಲ್‌ಗಳ ಜೊತೆಗೆ ಕಾಂಡಿಮೆಂಟ್ಸ್ ಮತ್ತು ದಿನಬಳಕೆಯ ವಸ್ತುಗಳನ್ನು ಈ ಉದ್ಯಮದ ಮೂಲಕ ಮಾರಾಟ ಮಾಡಲಾಗುತ್ತದೆ.

Advertisement

ಈ ಉದ್ಯಮವನ್ನು ಥಾಮಸ್ ಕುಟಿಯಾನಿಕಲ್ ಮತ್ತು ಅವರ ಪತ್ನಿ ರಾಣಿ ನಡೆಸುತ್ತಿದ್ದಾರೆ. ಉದ್ಯಮ ಆರಂಭಿಸಲು ಚೇಲಚುವಾಡ್ ಯೂನಿಯನ್ ಬ್ಯಾಂಕ್ ನಿಂದ ಸಾಲ ಪಡೆಯಲಾಗಿತ್ತು. ಪ್ರಧಾನಮಂತ್ರಿ ಮುದ್ರಾ ಯೋಜನೆಯ ಬೆಂಬಲದೊಂದಿಗೆ, ಅವರು ಉತ್ತಮ ರೀತಿಯಲ್ಲಿ ಉದ್ಯಮ ಮುನ್ನಡೆಸಲು ಸಾಧ್ಯವಾಗಿದೆ. ಇಡುಕ್ಕಿ ಹೈರೇಂಜ್‌ನಲ್ಲಿ ಗ್ರಾಮೀಣ ಪ್ರದೇಶದಲ್ಲಿ ಸಣ್ಣ ಉದ್ಯಮಗಳು ಮತ್ತು ವ್ಯವಹಾರಗಳ ಮೂಲಕ ಅನೇಕ ಜನರು ಪ್ರಧಾನ ಮಂತ್ರಿ ಮುದ್ರಾ ಯೋಜನೆಯ ಫಲಾನುಭವಿಗಳಾಗಿದ್ದಾರೆ.

ಮುದ್ರಾ ಯೋಜನೆಯನ್ನು ಪಡೆದುಕೊಳ್ಳಲು ಹಲವಾರು ಮಂದಿ ಆಸಕ್ತರಿದ್ದಾರೆ. ಆದರೆ ಹಲವು ತಡೆಗಳು ಇಲ್ಲಿ ಗ್ರಾಮೀಣ ಯುವಕರಿಗೆ ಇದೆ. ಈ ಎಲ್ಲಾ ತಡೆಗಳನ್ನು ದಾಟಿ ಯಶಸ್ವಿ ಉದ್ಯಮ ನಡೆಸಬಹುದು ಎನ್ನುವುದಕ್ಕೆ ಇದೊಂದು ಉತ್ತಮವಾದ ಉದಾಹರಣೆಯಾಗಿದೆ.

Advertisement

PM Mudra Yojana aims to promote Micro, Small and Medium Enterprises in India. Modern Bakers at Kanjikuzhi in Idukki is a well-progressing initiative benefiting from this scheme, which will help micro-enterprises engaged in trade, manufacturing and service sectors. Modern Bakers is a enterprise operating in Kanjikuzhi. Bakery items, tea stalls along with condiments and daily necessities are sold through this enterprise. This organization is run by Thomas Kutianikal and his wife Rani. A loan was obtained from Chelachuvad Union Bank to start the venture. With the support of PM Mudra Yojana, they are able to take this initiative forward in a good way. Many people have become beneficiaries of PM Mudra Yojana in Idukki High Range through small enterprises and businesses in rural areas.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕೋಲಾರದಲ್ಲಿ ಅತೀ ಹೆಚ್ಚು ನಕಲಿ ವೈದ್ಯರು…! | ನಕಲಿ ವೈದ್ಯರ ಕಡಿವಾಣಕ್ಕೆ ಕಟ್ಟುನಿಟ್ಟಿನ ಕ್ರಮ
November 21, 2024
7:36 PM
by: The Rural Mirror ಸುದ್ದಿಜಾಲ
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ  ಮನವಿ
November 21, 2024
7:32 PM
by: The Rural Mirror ಸುದ್ದಿಜಾಲ
ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ದೆಹಲಿಯಲ್ಲಿ ಲಭ್ಯ | 2.5 ಲಕ್ಷ ಲೀಟರ್ ಹಾಲು ದೆಹಲಿಗೆ ಪೂರೈಸಲು ತೀರ್ಮಾನ |
November 21, 2024
7:25 PM
by: ದ ರೂರಲ್ ಮಿರರ್.ಕಾಂ
ಹುಣಸೆ ಹಣ್ಣು ಸಂರಕ್ಷಣೆ, ಮಾರಾಟದ ತರಬೇತಿ ಕಾರ್ಯಾಗಾರ
November 21, 2024
7:09 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror