ಸಾಧನೆ ಮತ್ತು ಯಶಸ್ಸು

February 9, 2026
7:34 AM
ಸಾಧನೆ ಮತ್ತು ಯಶಸ್ಸು ಏಕಾಏಕಿ ಸಿಗುವ ಅದೃಷ್ಟವಲ್ಲ; ಅದು ಪ್ರತಿದಿನದ ಶ್ರಮ, ನಂಬಿಕೆ ಮತ್ತು ಕರ್ತವ್ಯದ ಫಲ ಎಂಬ ಸಂದೇಶ ನೀಡುವ ಪ್ರೇರಣಾದಾಯಕ ಬೆಳಗಿನ ಚಿಂತನ.

ಸಾಧನೆ ಎನ್ನುವುದು ಏಕಾಏಕಿ ಸಿಗುವ ಫಲವಲ್ಲ. ನಮಗೆ ಕಾಣುವುದು ಫಲಿತಾಂಶಗಳು ಮಾತ್ರಾ. ಅದರ ಹಿಂದಿನ ಶ್ರಮ ಕಾಣದು. “ಅವನು ಮಾಡಿದ, ನಾನೂ ಮಾಡುವೆ” ಎಂದರೆ ಸಾಧ್ಯವಿಲ್ಲ. ಈ ಸಾಧನೆಯು ಪ್ರತಿದಿನದ ಸಣ್ಣ ಪ್ರಯತ್ನಗಳ, ಸೋಲುಗಳಿಂದ ಕಲಿತ ಪಾಠಗಳು ಮತ್ತು ಕೈ ಬಿಡದ ಮನೋಭಾವದ ಫಲ. ಎಲ್ಲರಿಗೂ ಯಶಸ್ಸು ಒಂದೇ ರೀತಿಯಲ್ಲಿ ಬರುವುದಿಲ್ಲ; ಆದರೆ ಪ್ರಯತ್ನ ಮಾಡುವ ಹಕ್ಕು ಎಲ್ಲರಿಗೂ ಸಮಾನ. ಕೆಲವೊಮ್ಮೆ ನಮ್ಮ ಶ್ರಮಕ್ಕೆ ತಕ್ಷಣ ಫಲ ಸಿಗದಿರಬಹುದು. ಆದರೆ ಆ ಕ್ಷಣಗಳೇ ನಮ್ಮೊಳಗಿನ ಶಕ್ತಿಯನ್ನು ಹೆಚ್ಚುಗೊಳಿಸುತ್ತವೆ. ನಿಂತುಬಿಟ್ಟರೆ ಸಾಧನೆ ಇಲ್ಲ; ನಡೆಯುತ್ತಲೇ ಇದ್ದರೆ ದಾರಿ ತಾನಾಗಿಯೇ ಕಾಣುತ್ತದೆ.

ಭಗವದ್ಗೀತೆ ಹೇಳುವಂತೆ, “ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ”  ಅಂದರೆ, ನಿನಗೆ ಹಕ್ಕಿರುವುದು ಕರ್ಮಕ್ಕೆ ಮಾತ್ರ, ಫಲದ ಮೇಲೆ ಅಲ್ಲ. ಫಲದ ಬಗ್ಗೆ ಅತಿಯಾಗಿ ಚಿಂತಿಸದೆ, ಇಂದಿನ ಕರ್ತವ್ಯವನ್ನು ಪ್ರಾಮಾಣಿಕವಾಗಿ ನೆರವೇರಿಸಿದಾಗ ಯಶಸ್ಸು ತನ್ನ ಸಮಯಕ್ಕೆ ತಾನೇ ಬರುತ್ತದೆ. ಪ್ರತಿದಿನದ ಶ್ರಮವೇ ನಾಳೆಯ ಸಾಧನೆಗೆ ಬೀಜ. ಇಂದು ನಂಬಿಕೆ ಇಟ್ಟು ಮಾಡಿದ ಕೆಲಸವೇ, ನಾಳೆ ಬದುಕಿಗೆ ಹೊಸ ಅರ್ಥ ಕೊಡುತ್ತದೆ. ಅದರ ಜೊತೆಗೇ, ಇನ್ನೊಬ್ಬನ ಸಾಧನೆಗೂ ಅಡ್ಡಿಯಾಗಬೇಡ, ಮರುಗಬೇಡ, ಮತ್ಸರವೂ ಪಡಬೇಡ. ಸಾಧ್ಯವಾದರೆ ಬೆನ್ನುತಟ್ಟು, ಸಾಧನೆಯ ದಾರಿಯನ್ನು ತಿಳಿ, ಅದೂ ಅನುಭವ ಕೊಡುತ್ತದೆ… ಶುಭದಿನ…

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ 4 ಸಾವಿರ ಹುದ್ದೆಗಳು ಖಾಲಿ – ಆರಂಭದಲ್ಲಿ 1 ಸಾವಿರ ಹುದ್ದೆಗಳ ಭರ್ತಿಗೆ ಕ್ರಮ
March 24, 2026
7:12 AM
by: ಮಿರರ್‌ ಡೆಸ್ಕ್
ಇನ್ಸ್ಪೈರ್ ಅವಾರ್ಡ್ ಗೆ ಅಜ್ಜಾವರ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಆಯ್ಕೆ
March 23, 2026
10:18 PM
by: ದ ರೂರಲ್ ಮಿರರ್.ಕಾಂ
ನೆಮ್ಮದಿಗಾಗಿ ಬದುಕಿ; ಹಣ-ಅಧಿಕಾರಕ್ಕಾಗಿ ಅಲ್ಲ
March 23, 2026
9:12 PM
by: ದ ರೂರಲ್ ಮಿರರ್.ಕಾಂ
ಅಡಿಕೆ ಆಮದು ಎಂಬ ‘ಮಾಯಾಜಾಲ’: ನಡೆಯುತ್ತಿದೆಯೇ ಬೆಳೆಗಾರರ ಮೇಲೆ ಸೈಕಲಾಜಿಕಲ್ ಅಟ್ಯಾಕ್…!?
March 23, 2026
8:55 PM
by: ಅರುಣ್‌ ಕುಮಾರ್ ಕಾಂಚೋಡು

You cannot copy content of this page - Copyright -The Rural Mirror