ಸಾಧನೆ ಎನ್ನುವುದು ಏಕಾಏಕಿ ಸಿಗುವ ಫಲವಲ್ಲ. ನಮಗೆ ಕಾಣುವುದು ಫಲಿತಾಂಶಗಳು ಮಾತ್ರಾ. ಅದರ ಹಿಂದಿನ ಶ್ರಮ ಕಾಣದು. “ಅವನು ಮಾಡಿದ, ನಾನೂ ಮಾಡುವೆ” ಎಂದರೆ ಸಾಧ್ಯವಿಲ್ಲ. ಈ ಸಾಧನೆಯು ಪ್ರತಿದಿನದ ಸಣ್ಣ ಪ್ರಯತ್ನಗಳ, ಸೋಲುಗಳಿಂದ ಕಲಿತ ಪಾಠಗಳು ಮತ್ತು ಕೈ ಬಿಡದ ಮನೋಭಾವದ ಫಲ. ಎಲ್ಲರಿಗೂ ಯಶಸ್ಸು ಒಂದೇ ರೀತಿಯಲ್ಲಿ ಬರುವುದಿಲ್ಲ; ಆದರೆ ಪ್ರಯತ್ನ ಮಾಡುವ ಹಕ್ಕು ಎಲ್ಲರಿಗೂ ಸಮಾನ. ಕೆಲವೊಮ್ಮೆ ನಮ್ಮ ಶ್ರಮಕ್ಕೆ ತಕ್ಷಣ ಫಲ ಸಿಗದಿರಬಹುದು. ಆದರೆ ಆ ಕ್ಷಣಗಳೇ ನಮ್ಮೊಳಗಿನ ಶಕ್ತಿಯನ್ನು ಹೆಚ್ಚುಗೊಳಿಸುತ್ತವೆ. ನಿಂತುಬಿಟ್ಟರೆ ಸಾಧನೆ ಇಲ್ಲ; ನಡೆಯುತ್ತಲೇ ಇದ್ದರೆ ದಾರಿ ತಾನಾಗಿಯೇ ಕಾಣುತ್ತದೆ.
ಭಗವದ್ಗೀತೆ ಹೇಳುವಂತೆ, “ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ” ಅಂದರೆ, ನಿನಗೆ ಹಕ್ಕಿರುವುದು ಕರ್ಮಕ್ಕೆ ಮಾತ್ರ, ಫಲದ ಮೇಲೆ ಅಲ್ಲ. ಫಲದ ಬಗ್ಗೆ ಅತಿಯಾಗಿ ಚಿಂತಿಸದೆ, ಇಂದಿನ ಕರ್ತವ್ಯವನ್ನು ಪ್ರಾಮಾಣಿಕವಾಗಿ ನೆರವೇರಿಸಿದಾಗ ಯಶಸ್ಸು ತನ್ನ ಸಮಯಕ್ಕೆ ತಾನೇ ಬರುತ್ತದೆ. ಪ್ರತಿದಿನದ ಶ್ರಮವೇ ನಾಳೆಯ ಸಾಧನೆಗೆ ಬೀಜ. ಇಂದು ನಂಬಿಕೆ ಇಟ್ಟು ಮಾಡಿದ ಕೆಲಸವೇ, ನಾಳೆ ಬದುಕಿಗೆ ಹೊಸ ಅರ್ಥ ಕೊಡುತ್ತದೆ. ಅದರ ಜೊತೆಗೇ, ಇನ್ನೊಬ್ಬನ ಸಾಧನೆಗೂ ಅಡ್ಡಿಯಾಗಬೇಡ, ಮರುಗಬೇಡ, ಮತ್ಸರವೂ ಪಡಬೇಡ. ಸಾಧ್ಯವಾದರೆ ಬೆನ್ನುತಟ್ಟು, ಸಾಧನೆಯ ದಾರಿಯನ್ನು ತಿಳಿ, ಅದೂ ಅನುಭವ ಕೊಡುತ್ತದೆ… ಶುಭದಿನ…
ಅಡಿಕೆ ಮಾರುಕಟ್ಟೆಯಲ್ಲಿ ವರ್ತಕರ ಸಿಂಡಿಕೇಟ್ ಮತ್ತು ವಿದೇಶಿ ಆಮದು ಬೆಲೆ ಅಸ್ಥಿರತೆಗೆ ಕಾರಣವಾಗಿವೆ.…
ಭಾರತದಲ್ಲಿ ವಿದ್ಯುತ್ ಉತ್ಪಾದನೆ ಸಾಮರ್ಥ್ಯದಲ್ಲಿ ಐತಿಹಾಸಿಕವಾಗಿ 55 ಗಿಗಾವ್ಯಾಟ್ ಹೆಚ್ಚಳವಾಗಿದೆ. ನವೀಕರಿಸಬಹುದಾದ ಇಂಧನ…
ದೇಶದಲ್ಲಿ LPG ವಿತರಣೆ ಸಾಮಾನ್ಯವಾಗಿದ್ದು, ಒಂದೇ ದಿನ 51.5 ಲಕ್ಷ ಸಿಲಿಂಡರ್ ವಿತರಿಸಲಾಗಿದೆ.…
ರೈತರ ಪಂಪ್‌ಸೆಟ್‌ಗಳಿಗೆ ದಿನಕ್ಕೆ 7 ಗಂಟೆ ವಿದ್ಯುತ್ ನೀಡಲು ಸರ್ಕಾರ ಕ್ರಮ ಕೈಗೊಳ್ಳುತ್ತಿದೆ.…
2026ರ ಮುಂಗಾರು ಸಾಮಾನ್ಯವಾಗಿ ಆರಂಭವಾದರೂ ನಂತರ ಮಳೆಯ ಕೊರತೆ ಸಂಭವಿಸಬಹುದು. ಎಲ್‌ನಿನೋ ಪರಿಣಾಮದಿಂದ…
ಕರ್ನಾಟಕದಲ್ಲಿ ಇನ್ನೂ ಕೆಲ ದಿನಗಳು ಬಿಸಿಲು ತಾಪಮಾನ ಹೆಚ್ಚಾಗಿದ್ದು, ತುಂತುರು ಮಳೆ ಮಾತ್ರ…