ಹುಟ್ಟು – ಸಾವಿನ ನಡುವಿನ ಬದುಕಿನಲ್ಲಿ ಸಾಧನೆಯ ಶಿಖರ…..

April 11, 2021
10:36 AM
ಹೌದು, ಈ ಜಗತ್ತಿನಲ್ಲಿ ಹುಟ್ಟಿದ ಪ್ರತಿಯೊಬ್ಬ ವ್ಯಕ್ತಿಗೂ ಸಾವು ಇದ್ದೇ ಇರುತ್ತದೆ. ಸಾವು  ಯಾರನ್ನೂ, ಯಾವತ್ತೂ ಬೇದ-ಬಾವ ಮಾಡುವುದಿಲ್ಲ. ಆದರೆ ಹುಟ್ಟಿ ಯಾರಿಗೂ ಕಾಣದೇ ಸತ್ತು ಹೋಗುವುದಕ್ಕಿಂತ  ಹುಟ್ಟು-ಸಾವಿನ ಮದ್ಯದ ಜೀವನದಲ್ಲಿ ಏನಾದರೊಂದು ಸಾಧಿಸುವುದೇ ನಿಜವಾದ ಜೀವನ.
ಹುಟ್ಟು-ಸಾವಿನ ಮಧ್ಯೆ ಈ ಜಗತ್ತಿನಲ್ಲಿ ನಾವು ನಮ್ಮದೇ ಆದ ಒಂದು 𝐢𝐝𝐞𝐧𝐭𝐢𝐭𝐲 ಕ್ರಿಯೇಟ್ ಮಾಡಬೇಕು.  ಸಾಧನೆಯ ಹಾದಿಯಲ್ಲಿ ಸೋಲು ಮಾಮೂಲಿ, ಒಮ್ಮೆ ಸೋತರೆ ಮತ್ತೊಮ್ಮೆ ಪ್ರಯತ್ನಿಸಬೇಕು, ಮತ್ತೆ ಸೋತರೆ ಇನ್ನೊಮ್ಮೆ ಪ್ರಯತ್ನಿಸಬೇಕು. “ಪ್ರಯತ್ನಂ ಸರ್ವಸಿದ್ದಿ ಸಾಧನಂ” ಎಂಬ ಮಾತಿನಂತೆ ಪ್ರಯತ್ನ ಎಂಬ ಒಂದು ಪದವನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದೇ ಆದಲ್ಲಿ ನಮಗೆ ಗೆಲುವು ಕಟ್ಟಿಟ್ಟ ಬುತ್ತಿ. ನಾವು ನಮ್ಮ ಪ್ರಯತ್ನವನ್ನು ಪ್ರಾಮಾಣಿಕತೆಯಿಂದ ಮಾಡುತ್ತಲೇ ಇದ್ದರೆ ಗೆಲುವು ನಮಗೆ ಒಂದಲ್ಲಾ ಒಂದು ರೂಪದಲ್ಲಿ ದೊರಕಿಯೇ ದೊರಕುತ್ತದೆ.
“ಪ್ರಯತ್ನವನ್ನು ನಂಬು ಅದೃಷ್ಟವನ್ನಲ್ಲ” ಎಂಬ ಮಾತಿನಂತೆ ನಾವು ನಮ್ಮ ಜೀವನದಲ್ಲಿ ಪ್ರಯತ್ನವನ್ನು ನಂಬಬೇಕೇ ಹೊರತು ಪ್ರತೀ ದಿನ ಪ್ರತೀ ಕ್ಷಣ ಅದೃಷ್ಟವನ್ನು ನಂಬಿ ಬದುಕಬಾರದು. ಏಕೆಂದರೆ ಅದೃಷ್ಟ ದೊರಕಬೇಕಾದರೆ ಅಲ್ಲಿ ನಮ್ಮ ಪ್ರಯತ್ನ ಇರಲೇಬೇಕು.
ಗುರಿ ಸಾಧನೆಗಾಗಿ ಹಗಲು ರಾತ್ರಿ ಕಠಿಣ ಪರಿಶ್ರಮ ಪಡಬೇಕು ಹಾಗೂ ಸಾಧನೆಯ ಹಾದಿಯಲ್ಲಿ ಗೆಲುವು ಸಾಧಿಸಬೇಕಾದರೆ ನಾವು ನಮ್ಮ ಜೀವನದಲ್ಲಿ ಕೆಲವನ್ನು ತ್ಯಾಗ ಮಾಡುತ್ತಾ ಹೋಗಬೇಕಾಗುತ್ತದೆ. ಹಾಗೆಂದು ನಾವು ಕಳೆದುಕೊಂಡಿದ್ದೇಲ್ಲಾ ಮತ್ತೆ ಸಿಗುವುದಿಲ್ಲ ಎಂದು ಹೇಳಲಾಗುವುದಿಲ್ಲ. ನಮ್ಮ ಗುರಿಯನ್ನು ನಾವು ತಲುಪಿದ ನಂತರ ನಾವು ಕಳೆದುಕೊಂಡಿದ್ದೇಲ್ಲವೂ ನಮಗೆ ದೊರಕುತ್ತಾ ಹೋಗುತ್ತದೆ. ಆದರೆ ಅದಕ್ಕೆ ಮುಖ್ಯವಾಗಿ ತಾಳ್ಮೆ ಇರಬೇಕು.
ಮುಸ್ಸಂಜೆಯಲ್ಲಿ ಸೂರ್ಯ ತಾನು ಮುಳುಗುವ ಸಮಯದಲ್ಲಿ, ” ನಾ ಕೊಟ್ಟ ಅಮೂಲ್ಯವಾದ ದಿನವನ್ನು ನೀ ಮಣ್ಣು ಮಾಡಿದೆಯಲ್ಲಾ ಮಾನವ”  ಎಂದು ಹೇಳುತ್ತಾನಂತೆ…..”, ಇದರ ಅರ್ಥವೇನೆಂದರೆ ಸಮಯ ಎಂಬುವುದು ನಮ್ಮ ಜೀವನದ ಅತ್ಯಂತ ಅಮೂಲ್ಯವಾದ ಸಂಪತ್ತು. ಹಣ, ಆಸ್ತಿ ಎಲ್ಲವನ್ನೂ ಕಳೆದುಕೊಂಡರೆ ಮತ್ತೆ ಗಳಿಸಬಹುದು. ಆದರೆ ಕಳೆದುಹೋದ ಸಮಯ ಮತ್ತೆ ಎಂದೂ ತಿರುಗಿ ಬರುವುದಿಲ್ಲ. ನಾವು ಈ ಸಮಯವನ್ನು ಮತ್ತೆ ಸಂಪಾದಿಸಲು ಸಾಧ್ಯವಿಲ್ಲ. ಆದ್ದರಿಂದ ಸಿಕ್ಕಿದ ಸಮಯವನ್ನು ಸೂಕ್ತ ರೀತಿಯಲ್ಲಿ ಬಳಸಿಕೊಂಡವನು ಜೀವನದಲ್ಲಿ ಗೆದ್ದೇ ಗೆಲ್ಲುತ್ತಾನೆ. ಗೆಲ್ಲೋಣ ಬನ್ನಿ…
# ಉಲ್ಲಾಸ್ ಕಜ್ಜೋಡಿ

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಸುನಿತಾ ವಿಲಿಯಮ್ಸ್ ಈ ಸಮಾಜಕ್ಕೆ ಸ್ಫೂರ್ತಿ ಏಕೆ…?
March 17, 2025
10:34 AM
by: ವಿವೇಕಾನಂದ ಎಚ್‌ ಕೆ
ಮುಂದಿನ ಸೂರ್ಯಗ್ರಹಣದ ಪ್ರಭಾವಗಳು ಏನು..? ಯಾವ ರಾಶಿಯವರಿಗೆ ಉತ್ತಮ..?
March 17, 2025
6:13 AM
by: ದ ರೂರಲ್ ಮಿರರ್.ಕಾಂ
ಅಂತರಂಗ | ಸ್ವಾರ್ಥರಹಿತ ಬೇಡಿಕೆಗಳಿಗೆ ರಾಜಕೀಯದಲ್ಲಿ ಮಾನ್ಯತೆಯಿಲ್ಲ…!
March 16, 2025
8:13 AM
by: ರಮೇಶ್‌ ದೇಲಂಪಾಡಿ
ಬದುಕು ಪುರಾಣ | ಎಲ್ಲರೊಳಗೂ ‘ಕುಂಭಕರ್ಣ’ನಿದ್ದಾನೆ!
March 16, 2025
8:00 AM
by: ನಾ.ಕಾರಂತ ಪೆರಾಜೆ

You cannot copy content of this page - Copyright -The Rural Mirror