ಬ್ಯಾಡಗಿ ಮೆಣಸಿನಕಾಯಿ ದರ ದಿಢೀರ್‌ ಕುಸಿತ | ರೈತರಿಂದ ಆಕ್ರೋಶ, ಪ್ರತಿಭಟನೆ | ಪೊಲೀಸರನ್ನೇ ಅಟ್ಟಾಡಿಸಿದ ರೈತರು

March 12, 2024
11:53 AM

ಯಾವುದೇ ಕೃಷಿ ಉತ್ಪನ್ನಗಳ ದರ ಏರಿಳಿಕೆ ಸಾಮಾನ್ಯ. ಆದರೆ ರೈತರು ಇದನ್ನೇ ಉಗ್ರರೂಪ ತಾಳಿ ಪ್ರತಿಭಟಿಸುವುದು ನಿಜಕ್ಕೂ ದುರದೃಷ್ಟಕರ ಸಂಗತಿ. ಗೂಂಡಾಗಿರಿ ಮಾಡಿ, ಕಚೇರಿ, ವಾಹನಗಳನ್ನು ಧ್ವಂಸ ಮಾಡಿ ಬೆಂಕಿ ಹಚ್ಚಿ ಪ್ರತಿಭಟಿಸುವ ರೈತ ನಿಜಕ್ಕೂ ಆತ ರೈತನೇ ಅಲ್ಲ. ಇದು ಅವನ ಸಂಪತ್ತು. ಅದನ್ನು ಅವನೇ ಹಾಳುಗೈದರೆ ಯಾರಿಗೆ ನಷ್ಟ..? ರೈತ ಅಂದರೆ ತಾಳ್ಮೆ ಪ್ರತೀಕ. ಸಮಾಧಾನ, ಕಾಯುವಿಕೆ, ಅನುಸರಿಸಿಕೊಂಡು ಹೋಗೋದು ಅವನ ರಕ್ತದಲ್ಲೇ ಇರುತ್ತದೆ. ಆದರೆ ಇಲ್ಲಿ ನಡೆದದ್ದು ಏನು..?

Advertisement

ಬ್ಯಾಡಗಿ ಮೆಣಸಿನಕಾಯಿ (Byadagi Red Chilies) ದರ ದಿಢೀರ್‌ ಕುಸಿತದಿಂದ ಆಕ್ರೋಶಗೊಂಡಿರುವ ರೈತರು ಹಾವೇರಿಯಲ್ಲಿ (Haveri) ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆ ನಿಯಂತ್ರಣಕ್ಕೆ ಮುಂದಾದ ಪೊಲೀಸರನ್ನೇ ರೈತರು ಅಟ್ಟಾಡಿಸಿದ್ದಾರೆ. ದಿಢೀರ್ ಮೆಣಸಿನಕಾಯಿ ದರ ಕಡಿಮೆಯಾದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ರೈತರು (Farmers) ಮಾರುಕಟ್ಟೆ ಆಡಳಿತ ಕಚೇರಿಗೆ (Market Administration Office) ಕಲ್ಲುತೂರಿ, ವಾಹನಗಳಿಗೆ ಬೆಂಕಿ ಇಟ್ಟ ಘಟನೆ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ (Byadgi Chilli Market)  ನಡೆದಿದೆ.

ಕ್ವಿಂಟಾಲ್ ಮೆಣಸಿನಕಾಯಿಗೆ ಕಳೆದ ವಾರ 20 ಸಾವಿರ ರೂ. ದರ ನಿಗದಿಯಾಗಿತ್ತು. ಆದರೆ ಈ ವಾರ 12 ಸಾವಿರ ರೂ. ದರ ನಿಗದಿ ಮಾಡಿದ್ದಕ್ಕೆ ಆಕ್ರೋಶಗೊಂಡ ರೈತರು ಎಪಿಎಂಸಿ ಕಚೇರಿ ಮುಂದೆ ಇರುವ ಆಡಳಿತ ಕಚೇರಿಗೆ ಕಲ್ಲು ತೂರಿದ್ದಾರೆ. ಕಚೇರಿಯ ಮುಂದೆ ನಿಂತಿದ್ದ ಸರ್ಕಾರಿ ಕಾರಿನ ಗಾಜು ಪುಡಿಪುಡಿಯಾಗಿದೆ. ಇನ್ನೊಂದು ಕಾರನ್ನು ಎತ್ತಿ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಪಿಎಂಸಿ ಆಡಳಿತ ಕಚೇರಿಯ ಮುಂಭಾಗದಲ್ಲಿ ಅಗ್ನಿಶಾಮಕ ದಳ ವಾಹನ, ಎಪಿಎಂಸಿ ಕಾರಿನ ಜೊತೆ ಖಾಸಗಿ ವ್ಯಕ್ತಿಗಳ ಎರಡು ಕಾರು, 10 ಬೈಕಿಗೆ ಬೆಂಕಿ ಹಚ್ಚಲಾಗಿದೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಲು ಹರಸಾಹಸ ಪಡುವಂತಾಗಿತ್ತು.

ಪ್ರತಿಭಟನೆ ತಡೆಯಲು ಬಂದ ಪೊಲೀಸರನ್ನೇ ರೈತರು ಓಡಿಸಿದ್ದಾರೆ. ಆಡಳಿತದ ಕಚೇರಿ ಬಳಿ ಬಂದ 15 ಕ್ಕೂ ಅಧಿಕ ಪೊಲೀಸರು ಪ್ರತಿಭಟನಾಕಾರರನ್ನು ನಿಯಂತ್ರಿಸಲಾಗದೇ ಸ್ಥಳದಿಂದ ಓಡುತ್ತಿರುವ ದೃಶ್ಯದ ವೀಡಿಯೋ ವೈರಲ್‌ ಆಗಿದೆ. ಕೈಯಲ್ಲಿ ದೊಣ್ಣೆ ಹಿಡಿದು ಪ್ರತಿಭಟನಾಕಾರರು ಪೊಲೀಸರನ್ನು ಓಡಿಸಿದ್ದಾರೆ. ತಮಗೆ ಅಪಾಯ ಆಗಬಹುದೆಂಬ ಭೀತಿಯಿಂದ ಪೊಲೀಸರು ಸ್ಥಳದಿಂದ ಓಡಿ ಹೋಗಿದ್ದಾರೆ. ಈ ವೇಳೆ ಇಬ್ಬರು ಪೊಲೀಸರಿಗೆ ಗಾಯವಾಗಿದೆ.

ಕಳೆದ ಬಾರಿ ಮೆಣಸಿನ ಬೆಲೆ ಗಗನಕ್ಕೇರಿತ್ತು. ಆಗ ಗ್ರಾಹಕರೇನಾದ್ರು ಇದೇ ಸ್ಥಿತಿಯಲ್ಲಿ ಪ್ರತಿಭಟಿಸಿ ಮೆಣಸಿನಕಾಯಿ  ಗೋಡೌನ್‌ ಗಳಿಗೆ ಬೆಂಕಿ ಹಚ್ಚಿದ್ದರೆ ಏನಾಗುತ್ತಿತ್ತು..? ಏಕಾಏಕಿ ಅತಿರೇಕಕ್ಕೆ ಹೋಗಿ ಮನುಷ್ಯತ್ವ ಕಳೆದುಕೊಂಡು ನ್ಯಾಯ ಕೇಳುವ ಈ ರೀತಿಯ ವ್ಯವಸ್ಥೆ ಆಗಬಾರದಿತ್ತು.

– ಅಂತರ್ಜಾಲ ಮಾಹಿತಿ

Farmers who are outraged by the sudden fall in the price of Byadagi Red Chilies are protesting in Haveri. Farmers beat up the police who came forward to control the protest. An incident took place in Byadgi Chilli Market where angry farmers pelted stones at the Market Administration Office and set vehicles on fire due to the sudden reduction in the price of chillies.

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಪುತ್ತೂರು ಜಾತ್ರೆ ಎಂದರೆ “ನಮ್ಮ ಮನೆ ಉತ್ಸವ”
April 17, 2025
10:44 AM
by: ದ ರೂರಲ್ ಮಿರರ್.ಕಾಂ
ಕೆಲವು ವಿಶೇಷ ಯೋಗಗಳು ಮತ್ತು ಗ್ರಹಗಳ ಸಂಯೋಜನೆ
April 17, 2025
5:27 AM
by: ದ ರೂರಲ್ ಮಿರರ್.ಕಾಂ
ಮೀಸಲಾತಿಗಾಗಿ ಜಾತಿಯಾಗುವ ಮತಧರ್ಮ
April 16, 2025
9:41 PM
by: ಡಾ.ಚಂದ್ರಶೇಖರ ದಾಮ್ಲೆ
ಸರಕಾರಿ ಶಾಲೆಯಲ್ಲಿ ಬೆಳೆಸಿದ ತರಕಾರಿ ಜಿಲ್ಲಾಧಿಕಾರಿಗೆ ಕೊಡುಗೆ
April 16, 2025
8:40 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group