ರಾಜ್ಯ ಪ್ರವಾಸದಲ್ಲಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ವಿದ್ಯಾಕಾಶಿ ಧಾರವಾಡಕ್ಕೆ ಆಗಮಿಸಿದ್ದರು. ಐಐಐಟಿ ಉದ್ಘಾಟನೆಯನ್ನು ಮಾಡಿದ ರಾಷ್ಟ್ರಪತಿ ಮುರ್ಮು ಅವರಿಗೆ ಸುಧಾ ಮೂರ್ತಿಯವರು ವಿಶೇಷವಾಗಿ ಕೌದಿ ಕೊಟ್ಟು ಗೌರವಿಸಿದ್ದಾರೆ.
ವೇದಿಕೆ ಮೇಲೆ ರಾಷ್ಟ್ರಪತಿ ಅವರಿಗೆ ಸ್ವಾಗತ ನೀಡಿದ ಸುಧಾ ಮೂರ್ತಿ ಅವರು, ಕೌದಿ ಜೊತೆ ರೇಷ್ಮೆ ಸೀರೆ ಕೂಡಾ ಕೊಟ್ಟಿದ್ದಾರೆ. ವಿಶೇಷ ಅಂದರೆ ಮೂರು ಸಾವಿರ ದೇವದಾಸಿಯರಿಂದ ತಯಾರಾದ ‘ಕೌದಿ’ ಯನ್ನು ರಾಷ್ಟ್ರಪತಿಗಳಿಗೆ ಗಿಫ್ಟ್ ಆಗಿ ಕೊಟ್ಟಿದ್ದಾರೆ. ರಾಯಚೂರಿನ ಮೂರು ಸಾವಿರ ದೇವದಾಸಿಯರು ಈ ಕೌದಿಯನ್ನು ತಯಾರು ಮಾಡಿದ್ದು, ಇವರನ್ನು ಸಮಾಜಕ್ಕೆ ಮರಳಿ ತರುವಲ್ಲಿ ಸುಧಾ ಮೂರ್ತಿ ಸಾಕಷ್ಟು ಪರಿಶ್ರಮ ಹಾಕಿದ್ದರು. ಅದಕ್ಕೆ ಆ ದೇವದಾಸಿಯರು ಇವರಿಗೆ ತಾವು ತಯಾರಿಸಿದ ಕೌದಿಯನ್ನು ಕೊಟ್ಟಿದ್ದಾರೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel