ಅಜೀರ್ಣ-ಹುಳಿ ತೇಗು, ಗ್ಯಾಸ್ ಗಳಿಂದ ಬಳಲುತ್ತಿದ್ದೀರಾ? | ಊಟ ಮಾಡುವಾಗ ಈ ಅಂಶಗಳನ್ನು ನೆನಪಿಡಿ.. | ಅಜೀರ್ಣದ ಸಮಸ್ಯೆಗಳಿಂದ ಮುಕ್ತರಾಗುವಿರಿ

March 29, 2024
9:40 PM

ಇಂದಿನ ದಿನಗಳಲ್ಲಿ ಜನರ ಆಹಾರ ಪದ್ಧತಿ(Food System) ಸಂಪೂರ್ಣ ಬದಲಾಗುತ್ತಿದೆ. ಸಮಯದ ಅಭಾವ, ಸರಿಯಾದ ಆಹಾರ ಸೇವಿಸದಿರುವುದು, ಪ್ರತಿ ಬಾರಿ ಅತಿಯಾಗಿ ತಿನ್ನುವುದು, ಅಪೌಷ್ಟಿಕ ಆಹಾರ(Nutritional food) ಸೇವನೆ, ಕರಿದ ಮತ್ತು ಮಸಾಲೆಯುಕ್ತ ಆಹಾರಗಳು ಜೀರ್ಣಕ್ರಿಯೆಯನ್ನು ಕುಂಠಿತಗೊಳಿಸುವುದಲ್ಲದೆ, ತೂಕ ಹೆಚ್ಚಾಗುವುದು(Weight gain) ಮತ್ತು ಇತರ ಗಂಭೀರ ಕಾಯಿಲೆಗಳಿಗೆ(Deseace) ಕಾರಣವಾಗುತ್ತವೆ. ಇದು ಆರೋಗ್ಯದ(Health) ಕ್ಷೀಣತೆಗೆ ಕಾರಣವಾಗುತ್ತದೆ.

ಮುಖ್ಯವಾಗಿ ಮಲಬದ್ಧತೆ, ಗ್ಯಾಸ್, ಅಸಿಡಿಟಿ, ಉಬ್ಬರ ಇತ್ಯಾದಿಗಳಿಂದ ದಿನವಿಡೀ ಕೆಲಸದಲ್ಲಿ ಗಮನ ಹರಿಸುವುದು ಕಷ್ಟವಾಗುತ್ತದೆ ಮತ್ತು ತಿಂದ ಆಹಾರವು ಬೇಗನೆ ಜೀರ್ಣವಾಗುವುದಿಲ್ಲ. ಊಟ ಮಾಡುವಾಗ ಯಾವ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು, ತಿನ್ನುವಾಗ ಮತ್ತು ಕುಡಿಯುವಾಗ ಯಾವ ವಿಶೇಷ ಕಾಳಜಿ ವಹಿಸಬೇಕು? ಎಂದು ತಿಳಿಯಿರಿ. ಇದರಿಂದ ಹೊಟ್ಟೆಯ ಅಸ್ವಸ್ಥತೆಗಳು ನಮ್ಮನ್ನು ಕಾಡುವುದಿಲ್ಲ.

ಅಜೀರ್ಣವಾಗದಿರಲು ಯಾವ ಕಾಳಜಿ ವಹಿಸಬೇಕು? : 

ಆಹಾರ: ಆಹಾರದಲ್ಲಿ ಹೆಚ್ಚು ಸಂಸ್ಕರಿಸಿದ ಆಹಾರವನ್ನು ಸೇವಿಸುವುದನ್ನು ತಪ್ಪಿಸಿ, ಅಂದರೆ ಕರಿದ, ಮಸಾಲೆಯುಕ್ತ, ಅನೇಕ ಪದಾರ್ಥಗಳನ್ನು ಮಿಶ್ರಣ ಮಾಡಿದ, ಹೆಚ್ಚು ರುಚಿಕರವಾಗಿಸಲು ಹೆಚ್ಚು ಸಂಸ್ಕರಿಸಿದ ಆಹಾರ, ಫಾಸ್ಟ್ ಫುಡ್, ಬೇಕರಿ ಪದಾರ್ಥಗಳನ್ನು ತಪ್ಪಿಸಿ. ಸಾಧ್ಯವಾದಷ್ಟು ನೈಸರ್ಗಿಕ ಆಹಾರವನ್ನು ನೈಸರ್ಗಿಕ ರೂಪದಲ್ಲಿಯೇ ಸೇವಿಸಿ ಅಥವಾ ಅತಿ ಕಡಿಮೆ ಸಂಸ್ಕರಿಸಿದ ಆಹಾರವನ್ನು ಸೇವಿಸಿ.

ನಿಯಮಿತತೆ: ಆಹಾರ ಸೇವನೆಯಲ್ಲಿ ನಿಯಮಿತತೆ ಮತ್ತು ಸಮಯವನ್ನು ಪಾಲಿಸುವುದು ಮುಖ್ಯ, ಅಕಾಲಿಕ ತಿನ್ನುವುದು, ಮನಸ್ಸಿಗೆ ಬಂದಾಗಲೆಲ್ಲ ತಿನ್ನುವುದು ಅಥವಾ ಆಗಾಗ್ಗೆ ಏನನ್ನಾದರೂ ಬಾಯಾಡಿಸುವುದು, ಈ ಎಲ್ಲಾ ಅಭ್ಯಾಸಗಳು ಜೀವನದ ಸಮಸ್ಯೆಗಳನ್ನು ಉಂಟುಮಾಡುತ್ತವೆ ಮತ್ತು ಇತರ ಕಾಯಿಲೆಗಳನ್ನು ಸಹ ಆಹ್ವಾನಿಸುತ್ತವೆ. ಒಮ್ಮೆ ಊಟ ಮಾಡಿದರೆ ಅಥವಾ ಸಾಕಷ್ಟು ತಿಂದಿದ್ದರೆ ಕನಿಷ್ಠ ಮೂರೂವರೆ ನಾಲ್ಕು ಗಂಟೆಗಳ ಕಾಲ ನೀರು, ಎಳೆನೀರು, ತಾಜಾ ನೀರುಮಜ್ಜಿಗೆ ಹೊರತುಪಡಿಸಿ ಬೇರೆ ಯಾವುದೇ ಆಹಾರವನ್ನು ಸೇವಿಸಬಾರದು. ಒಂದು ಕಡಲೆಕಾಯಿ ಅಥವಾ ಕಡಲೆಯ ಕಾಳನ್ನು ಸಹ ತಿನ್ನಬೇಡಿ.

ನೀರು ಕುಡಿಯಿರಿ: ಊಟಕ್ಕೆ 50 ನಿಮಿಷಗಳ ಮೊದಲು ಯಾವಾಗಲೂ ನೀರು ಕುಡಿಯಿರಿ ಊಟದ ಜೊತೆಗೆ ಅಥವಾ ಊಟದ ನಂತರ ಕನಿಷ್ಠ 50 ನಿಮಿಷಗಳ ಕಾಲ ನೀರನ್ನು ಕುಡಿಯಬೇಡಿ. ಉತ್ತಮ ಆರೋಗ್ಯಕ್ಕಾಗಿ ದೇಹವನ್ನು ಯಾವಾಗಲೂ ಸಾಕಷ್ಟು ಜಲೀಕರಿಸ ಬೇಕು. ಏಕೆಂದರೆ, ಅಂತಹ ಸ್ಥಿತಿಯಲ್ಲಿ, ಜೀರ್ಣಕ್ರಿಯೆ ಸೇರಿದಂತೆ ದೇಹದ ಎಲ್ಲಾ ಕಾರ್ಯಗಳು ಸರಿಯಾಗಿ ಕಾರ್ಯನಿರ್ವಹಿಸುತ್ತವೆ. ನೀವು ದಿನವಿಡೀ ಸಾಕಷ್ಟು ನೀರು ಕುಡಿಯಬೇಕು. ಅಲ್ಲದೆ ನೀರಿನಂಶ ಹೆಚ್ಚಿರುವ ಆಹಾರಗಳನ್ನು ಸೇವಿಸಿ.

ಶುಂಠಿ:ಆಹಾರದಲ್ಲಿ ಶುಂಠಿಯನ್ನು ಸೇರಿಸುವುದರಿಂದ ಅಜೀರ್ಣ ಮತ್ತು ಮಲಬದ್ಧತೆ ಕಡಿಮೆಯಾಗುತ್ತದೆ. ಶುಂಠಿ ಜೀರ್ಣಕ್ರಿಯೆಯನ್ನು ಬಲಪಡಿಸುತ್ತದೆ ಮತ್ತು ದೇಹದಲ್ಲಿನ ಕಾಯಿಲೆಗಳನ್ನು ಸಹ ಗುಣಪಡಿಸುತ್ತದೆ. ನೀವು ಹಸಿ ಶುಂಠಿಯನ್ನು ಅಗಿಯಬಹುದು ಅಥವಾ ಶುಂಠಿ ಟೀ, ಶುಂಠಿ ನೀರು, ಶುಂಠಿ ಕ್ಯಾಂಡಿ ತಿನ್ನಬಹುದು.

ಮಜ್ಜಿಗೆ:ನೀವು ಯಾವುದೇ ಋತುವಿನಲ್ಲಿ ಮಜ್ಜಿಗೆ ಕುಡಿಯಬಹುದು. ಮಜ್ಜಿಗೆ ಪ್ರೋಬಯಾಟಿಕ್ ಆಹಾರವಾಗಿದೆ. ಮಜ್ಜಿಗೆ ಉತ್ತಮ ಬ್ಯಾಕ್ಟೀರಿಯಾಗಳಿಂದ ಸಮೃದ್ಧವಾಗಿದೆ. ಇದು ಜೀರ್ಣಕ್ರಿಯೆಯಲ್ಲಿ ಯಾವುದೇ ಸಮಸ್ಯೆಯನ್ನು ಉಂಟುಮಾಡುವುದಿಲ್ಲ. ಮಜ್ಜಿಗೆಯನ್ನು ಆಹಾರದಲ್ಲಿ ಸೇರಿಸುವುದರಿಂದ ಹೊಟ್ಟೆಯು ತಂಪಾಗಿರುತ್ತದೆ ಮತ್ತು ಆಹಾರವನ್ನು ತ್ವರಿತವಾಗಿ ಜೀರ್ಣಿಸುತ್ತದೆ. ಆಯುರ್ವೇದದಲ್ಲಿ ಯಾವಾಗಲೂ ಊಟದ ನಂತರ ಮಜ್ಜಿಗೆ ಕುಡಿಯುವುದು ಒಳ್ಳೆಯದು ಎಂದು ಪರಿಗಣಿಸಲಾಗಿದೆ.

ಓಮಿನ ಕಾಳು:ಊಟವಾದ ನಂತರ ಅರ್ಧ ಚಮಚ ಓಂ ಕಾಳುಗಳನ್ನು ಜಗಿಯುವುದು ಹೊಟ್ಟೆಗೆ ಒಳ್ಳೆಯದು, ಅಥವಾ ಕಾಲು ಚಮಚ ಓಂ ಕಾಳು, ಕಾಲು ಚಮಚ ಜೀರಿಗೆ ಪುಡಿ, ಚಿಟಿಕೆ ಇಂಗು ಮತ್ತು ಚಿಟಿಕೆ ಕರಿ ಉಪ್ಪನ್ನು ಮಜ್ಜಿಗೆಗೆ ಬೆರೆಸಿ ಊಟದ ನಂತರ ಕುಡಿಯುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ ಮತ್ತು ಎಲ್ಲಾ ಅಜೀರ್ಣ ಸಮಸ್ಯೆಗಳನ್ನು ನಿವಾರಿಸುತ್ತದೆ.

ಶತಪಾದ : ಕೆಲವರಿಗೆ ಊಟವಾದ ತಕ್ಷಣ ಮಲಗುವ ಅಭ್ಯಾಸವಿರುತ್ತದೆ. ಆದರೆ ಸಮಯಕ್ಕೆ ಈ ಅಭ್ಯಾಸವನ್ನು ತಪ್ಪಿಸಿ. ತಿಂದ ನಂತರ ನಡೆಯುವುದು ಅಥವಾ ಹಗುರವಾದ ಚಟುವಟಿಕೆಗಳನ್ನು ಮಾಡುವುದು ಉತ್ತಮ. ಕನಿಷ್ಠ 10 ರಿಂದ 15 ನಿಮಿಷಗಳ ಕಾಲ ಸಾಮಾನ್ಯ ನಡಿಗೆ ಅವಶ್ಯಕ. ಇದು ಆಹಾರದ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ನಂತರ ಮಲಬದ್ಧತೆ ಅಥವಾ ವಾಯುವಿಕಾರ ಸಮಸ್ಯೆಗಳನ್ನು ಉಂಟುಮಾಡುವುದಿಲ್ಲ.

ಬರಹ :
ಸಂಕಲನ ಮತ್ತು ಸಂಪಾದನೆ: ಡಾ. ಪ್ರ. ಅ. ಕುಲಕರ್ಣಿ
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ವರದಿ | 25.03.2026 | ಕರಾವಳಿಯಲ್ಲಿ ಇಂದು ಸಂಜೆ ಮಳೆ ಸಾಧ್ಯತೆ | ಏಪ್ರಿಲ್‌ 5ರವರೆಗೆ ಬೇಸಿಗೆ ಮಳೆ ಸಕ್ರಿಯ!
March 25, 2026
12:30 PM
by: ಸಾಯಿಶೇಖರ್ ಕರಿಕಳ
ಹವಾಮಾನ ವರದಿ | 24-03-2026 | ಕರ್ನಾಟಕದಲ್ಲಿ ಮತ್ತೆ ಮಳೆ ಅಲರ್ಟ್‌ | ಈ ದಿನದಿಂದ ಮಳೆ ವ್ಯಾಪ್ತಿ ಹೆಚ್ಚಳ ಸಾಧ್ಯತೆ..!
March 24, 2026
12:24 PM
by: ಸಾಯಿಶೇಖರ್ ಕರಿಕಳ
ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ 4 ಸಾವಿರ ಹುದ್ದೆಗಳು ಖಾಲಿ – ಆರಂಭದಲ್ಲಿ 1 ಸಾವಿರ ಹುದ್ದೆಗಳ ಭರ್ತಿಗೆ ಕ್ರಮ
March 24, 2026
7:12 AM
by: ಮಿರರ್‌ ಡೆಸ್ಕ್
ಇನ್ಸ್ಪೈರ್ ಅವಾರ್ಡ್ ಗೆ ಅಜ್ಜಾವರ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಆಯ್ಕೆ
March 23, 2026
10:18 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror