ಕಬ್ಬು ಬೆಳೆಗಾರರ ಸಮಸ್ಯೆ | ವಾರದಲ್ಲಿ ಕಬ್ಬಿಗೆ ದರ ನಿಗದಿ ಭರವಸೆ ನೀಡಿದ ಸಚಿವರು |

Advertisement
Advertisement

ರಾಜ್ಯದಲ್ಲಿ ಕಬ್ಬು ಬೆಳೆಗಾರರ ಹಿತದೃಷ್ಟಿಯಿಂದ ಮುಂದಿನ ಒಂದು ವಾರದೊಳಗೆ ಕಬ್ಬಿಗೆ ದರ ನಿಗದಿ ಮಾಡಲಾಗುವುದು  ಎಂದು ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ಭರವಸೆ ನೀಡಿದರು.

Advertisement

ರಾಜ್ಯದಲ್ಲಿ ಕಬ್ಬು ಬೆಳೆಗಾರರು ಸಾಕಷ್ಟು ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಉತ್ತಮ ದರ ಸಿಗದೆ ಕಂಗಾಲಾಗಿದ್ದಾರೆ. ಹೀಗಾಗಿ ರೈತ ಸಂಘಟನೆಗಳು ಸರ್ಕಾರವನ್ನು ಎಚ್ಚರಿಸಿ ಸೂಕ್ತ ದರ ಲಭ್ಯವಾಗುವಂತೆ ಸರ್ಕಾರ ಗಮನಹರಿಸಬೇಕು ಎಂದು ಒತ್ತಾಯಿಸಿದ್ದರು.

Advertisement
Advertisement

ಕಬ್ಬು ಬೆಳೆಗಾರರ ಬೇಡಿಕೆಗೆ ಸೂಕ್ತ ಮನ್ನಣೆ ದೊರೆಯದೇ ಇದ್ದರೆ ಹೋರಾಟ ತೀವ್ರಗೊಳಿಸಲಾಗುವುದು  ಎಂದು ರಾಜ್ಯ ಕಬ್ಬು ಬೆಳೆಗಾರ ಸಂಘದ ರಾಜ್ಯಾಧ್ಯಕ್ಷ ಕುರುಬೂರ್ ಶಾಂತಕುಮಾರ್ ಹೇಳಿದ್ದರು. ಇದೆಲ್ಲದರ ನಡುವೆ ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸಿದ್ದು ವಾರದಲ್ಲಿ ಕಬ್ಬಿಗೆ ದರ ನಿಗದಿ ಮಾಡಲಾಗುವುದು  ಎಂದು ಸಚಿವರು ಭರವಸೆ ನೀಡಿದ್ದಾರೆ.

ಬೆಲೆ ನಿಗದಿ ಹಾಗೂ ಹಿಂದಿನ ವರ್ಷದ ಹಣ ಪಾವತಿ ಮಾಡದೆ ಸಕ್ಕರೆ ಕಾರ್ಖಾನೆ ತೆರೆಯವಾರದು ಎಂದು ಕಬ್ಬು ಬೆಳೆಗಾರರು ಆಕ್ರೋಶ ವ್ಯಕ್ತಪಡಿಸಿ ಕೆಲವು ಕಡೆ ಪ್ರತಿಭಟನೆ ನಡೆಸಿದ್ದರು.

Advertisement
Advertisement

ಈ ನಡುವೆ ಸಚಿವ ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಕಬ್ಬು ಬೆಳೆಗಾರರ ಸಂಘದ ಪ್ರಮುಖರ ಜೊತೆ ಸಭೆ ನಡೆಸಿ ಚರ್ಚಿಸಿದರು.ಮುಂದೆ ಇಲಾಖೆಯ ಬಗ್ಗೆ ಯಾವುದೇ ದೂರುಗಳಿದ್ದರೆ ಕಾಲ್‌ ಸೆಂಟರ್‌ ಮೂಲಕ ತಿಳಿಸಬಹುದು ಎಂದರು.

 

Advertisement
Advertisement
Advertisement
Advertisement

Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement

Be the first to comment on "ಕಬ್ಬು ಬೆಳೆಗಾರರ ಸಮಸ್ಯೆ | ವಾರದಲ್ಲಿ ಕಬ್ಬಿಗೆ ದರ ನಿಗದಿ ಭರವಸೆ ನೀಡಿದ ಸಚಿವರು |"

Leave a comment

Your email address will not be published.


*