ಸುಳ್ಯದ ವಿದ್ಯುತ್ ಸಮಸ್ಯೆ ಪ್ರತೀ ವರ್ಷವೂ ಚರ್ಚೆಯಾಗುತ್ತದೆ. ಆದರೆ ಪರಿಹಾರ ಮಾತ್ರಾ ಶೂನ್ಯ. ಈ ಬಾರಿಯೂ ಸುಳ್ಯ ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿ ವಿದ್ಯುತ್ ಸಮಸ್ಯೆ ತಲೆದೋರಿದೆ. ಮಳೆಗಾಲದ ಈ ಅವಧಿಯಲ್ಲಿ ಗ್ರಾಮೀಣ ಭಾಗದಲ್ಲಿ ಎರಡು-ಮೂರು ದಿನಗಳ ಕಾಲ ಕತ್ತಲೆಯಲ್ಲಿ ಕಳೆಯುತ್ತದೆ. ಈ ನಡುವೆಯೇ ಸುಳ್ಯದ 110 ಕೆವಿ ಸಬ್ ಸ್ಟೇಶನ್ ಬಗ್ಗೆಯೂ ಚರ್ಚೆಯಾಗಿದೆ. ಇದೀಗ ಸುಳ್ಯದ ಮಾಧ್ಯಮಗಳು ಹೇಳುವುದು ಸುಳ್ಳೋ ಅಥವಾ ಹೇಳಿಕೆಗಳು ಸುಳ್ಳೋ ? ಎಂದು ಸಾರ್ವಜನಿಕರು ಪ್ರಶ್ನೆ ಮಾಡುವಂತಾಗಿದೆ. ಮಾಧ್ಯಮಗಳೂ ಏಕೆ ಇಂತಹ ಹೇಳಿಕೆಗಳನ್ನು ಪ್ರಶ್ನಿಸುವುದಿಲ್ಲ ಎಂದು ವಿದ್ಯುತ್ ಬಳಕೆದಾರರು ಕೇಳುತ್ತಾರೆ.
ಸುಳ್ಯದ ವಿದ್ಯುತ್ ಸಮಸ್ಯೆಗೆ ಏಕೆ ಮುಕ್ತಿ ಸಿಗುತ್ತಿಲ್ಲ ? ಹೀಗೆಂದು ಸುಳ್ಯದ ಜನರು ಕೇಳುತ್ತಾರೆ. ಇದಕ್ಕೆ ಉತ್ತರ 110 ಕೆವಿ ವಿದ್ಯುತ್ ಸಬ್ ಸ್ಟೇಶನ್ ಆದ ಕೂಡಲೇ ಎಂದು ಮೆಸ್ಕಾಂ ಮೂಲಗಳು ಹೇಳುತ್ತವೆ. ಪ್ರತೀ ಮಳೆಗಾಲವು ಕೂಡಾ ಅಲ್ಲಲ್ಲಿ ವಿದ್ಯುತ್ ತಂತಿ ತುಂಡಾಗುವುದೂ ಸೇರಿದಂತೆ ಮರದ ಗೆಲ್ಲು ತಾಗುವುದರಿಂದ ಟ್ರಿಪ್ ಆಗಿ ವಿದ್ಯುತ್ ಕಡಿತ ಉಂಟಾಗುತ್ತದೆ. ಗ್ರಾಮೀಣ ಭಾಗದಲ್ಲಿ ಮರ ಬಿದ್ದು ಕಂಬ ತುಂಡಾಗಿ ವಿದ್ಯುತ್ ಸರಬರಾಜು ಕಡಿತವಾಗುತ್ತದೆ. ಹೀಗಾಗಿ ಸುಳ್ಯಕ್ಕೆ ವಿದ್ಯುತ್ ಪ್ರತೀ ಮಳೆಗಾಲವೂ ಸಮಸ್ಯೆಯೇ ಆಗಿದೆ. ಆದರೆ 110 ಕೆವಿ ವಿದ್ಯುತ್ ಸಬ್ ಸ್ಟೇಶನ್ ಆದರೆ ಸುಳ್ಯದವರೆಗಿನ ವಿದ್ಯುತ್ ಸರಬರಾಜು ಯಾವುದೇ ತಡೆ ಇಲ್ಲದೆ ಬರಲು ಸಾಧ್ಯವಿದೆ ಎನ್ನುವುದು ಮೆಸ್ಕಾಂ ಮೂಲಗಳ ಅಭಿಪ್ರಾಯ.
ಹಾಗಿದ್ದರೆ 110 ಕೆವಿ ವಿದ್ಯುತ್ ಸಬ್ ಸ್ಟೇಶನ್ ಕೆಲಸ ಏನಾಗಿದೆ ಎಂದು ಕೇಳಿದರೆ ಕಳೆದ 3 ವರ್ಷಗಳಿಂದ ಹೇಳಿಕೆಗಳು ಬರುತ್ತವೆ. ಆದರೆ ಪ್ರಗತಿ ಕಾಣುತ್ತಿಲ್ಲ ಎಂದು ಸಾರ್ವಜನಿಕರು ಹೇಳುತ್ತಾರೆ. ಮಾಧ್ಯಮಗಳು ಈ ಬಗ್ಗೆ ಪ್ರಶ್ನಿಸಿದರೆ “ಮಾಧ್ಯಮಗಳು ಆದದ್ದು ಬರೆಯುತ್ತಿಲ್ಲ ಎನ್ನುವ ಆರೋಪ” ಕೇಳಿಬರುತ್ತದೆ. ಹಾಗಿದ್ದರೆ ಕಳೆದ ಮೂರು ವರ್ಷದಲ್ಲಿ 110 ಕೆವಿ ವಿದ್ಯುತ್ ಸಬ್ ಸ್ಟೇಶನ್ ಸಂಬಂಧಿಸಿದ ಹೇಳಿಕೆಗಳು ಇಲ್ಲಿದೆ. ಮಾಧ್ಯಮಗಳು ಹೇಳುವುದು, ಬರೆಯುವುದು ಸುಳ್ಳೋ ಅಥವಾ ಈ ಹೇಳಿಕೆಗಳು ಸುಳ್ಳೋ ಎಂದು ಜನರು ಪ್ರಶ್ನಿಸುವಂತಾಗಿದೆ.
2019 ಮೇ 27….
14 ಜನವರಿ 2020….
23 ಜನವರಿ 2020….
110 ಕೆವಿ ಸಬ್ ಸ್ಟೇಶನ್ : ಫೆ.10 ರೊಳಗೆ ಸಭೆ : ಸಚಿವ ಕೋಟ ಶ್ರೀನಿವಾಸ ಪೂಜಾರಿ
2020 ಮೇ 17…..
ಕೊರೊನಾ ಮುಗಿದ ಬಳಿಕ ಸುಳ್ಯ 110 ಕೆವಿ ವಿದ್ಯುತ್ ಸಬ್ ಸ್ಟೇಶನ್ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಮಾತುಕತೆ – ಶಾಸಕ ಅಂಗಾರ
2022 ಮೇ 12….
ಸುಳ್ಯ 110 ಕೆವಿ ವಿದ್ಯುತ್ ಸಬ್ ಸ್ಟೇಶನ್ | ಸಚಿವರಿಂದ ಸಭೆ | ಅರಣ್ಯ ಇಲಾಖೆಯಿಂದ ಕ್ಲಿಯರೆನ್ಸ್ ಬಗ್ಗೆ ಚರ್ಚೆ |