ಆಮ್ ಆದ್ಮಿ ಪಾರ್ಟಿ ಸುಳ್ಯ ವಿಧಾನಸಭಾ ಕ್ಷೇತ್ರದ ಚುನಾವಣಾ ಸಿದ್ದತಾ ಸಭೆಯು ದೇವಮ್ಮ ಕಾನತ್ತಿಲ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಚುನಾವಣಾ ಪೂರ್ವ ತಯಾರಿಗಳ ಬಗ್ಗೆ ಚರ್ಚಿಸಲಾಯಿತು. ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳ ಪಟ್ಟಿ ತಯಾರಿಸಿ ಧನಾತ್ಮಕ ರಾಜಕೀಯದ ಕಡೆಗೆ ಹೆಜ್ಜೆ ಇರಿಸಲು ಚರ್ಚೆ ನಡೆಯಿತು. ಈ ಸಂದರ್ಭದಲ್ಲಿ ಗುರುಪ್ರಸಾದ್ ನೇತೃತ್ವದಲ್ಲಿ ಸುರೇಶ್ ಮುಂಡಕಜೆ, ಕಿರಣ್, ರಮೇಶ್, ರಂಜಿತ್ ಅಲ್ಲದೇ ಜಯರಾಜ್ ಕೇರ್ಪಳ ಅವರು ಅಧಿಕೃತವಾಗಿ ಪಕ್ಷ ಸೇರ್ಪಡೆಯಾದರು.
ರಾಷ್ಟ್ರೀಯ ಸಮಿತಿ ಸದಸ್ಯ ಅಶೋಕ ಎಡಮಲೆ, ಜಿಲ್ಲಾ ನಾಯಕ ರಶೀದ್ ಜಟ್ಟಿಪಳ್ಳ, ವಿಧಾನಸಭಾ ಕ್ಷೇತ್ರ ಅಭ್ಯರ್ಥಿ ಆಕಾಂಕ್ಷಿ ಸುಮನಾ ಬೆಳ್ಳಾರ್ಕರ್, ನಾಯಕರಾದ ರಾಮಕೃಷ್ಣ ಬೀರಮಂಗಲ, ಕಲಂದರ್ ಎಲಿಮಲೆ, ನಳಿನ್ ಕುಮಾರ್ ರೈ, ಗುರುಪ್ರಸಾದ್ ಮೇರ್ಕಜೆ, ಯಶವಂತ್ ಕುಡೆಕಲ್ಲು, ದೀಕ್ಷಿತ್ ಕುಮಾರ್ ಜಯನಗರ, ಹಾಗೂ ಶಾರೀಖ್ ಡಿಎಂ, ಉಪಸ್ಥಿತರಿದ್ದರು.

ರೂರಲ್ ಮಿರರ್ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್ ಮಾಧ್ಯಮ ಇದಾಗಿದೆ. ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು “ದಿ ರೂರಲ್ ಮಿರರ್.ಕಾಂ” ನಲ್ಲಿ ನೀವು ಓದಬಹುದು.
ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.
Be the first to comment on "ಸುಳ್ಯ ಎಎಪಿ | ಚುನಾವಣಾ ಸಿದ್ಧತಾ ಸಭೆ | ಅಭಿವೃದ್ಧಿ ಅಜೆಂಡಾ | ಹಲವು ಮಂದಿ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆ |"