Advertisement
ಸುದ್ದಿಗಳು

ದಕ್ಷಿಣ ಕನ್ನಡದಲ್ಲಿ ಎಎಪಿ ಸದ್ದು | ಸುಳ್ಯದಲ್ಲಿ ಪ್ರಚಾರಕ್ಕಿಳಿದ ಆಮ್‌ ಆದ್ಮಿ ಪಕ್ಷ | ಅಭಿವೃದ್ಧಿಯೇ ನಮ್ಮ ಗುರಿ ಎಂದು ಎಎಪಿ ರಾಜ್ಯ ಉಪಾಧ್ಯಕ್ಷ ವಿವೇಕಾನಂದ ಸಾಲಿನ್ಸ್‌ |

Share

ವಿಧಾನಸಭಾ ಚುನಾವಣೆ ಸಮೀಪಿಸುವ ಹೊತ್ತಿನಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಚುರುಕಾಗಿವೆ. ಇದೀಗ ದಕ್ಷಿಣ ಕನ್ನಡದಲ್ಲಿ ಆಮ್‌ ಆದ್ಮಿ ಪಕ್ಷ ಮೊದಲ ಬಾರಿಗೆ ಸದ್ದು ಮಾಡಲು ಆರಂಭಿಸಿದೆ. ಸುಳ್ಯದಲ್ಲಿ ಪ್ರಚಾರ ಕಾರ್ಯ ಆರಂಭಿಸಿದ್ದು ಗ್ರಾಮೀಣ ಭಾಗದಲ್ಲೂ ಪ್ರಚಾರ ಕಾರ್ಯಕ್ಕೆ ವೇಗ ನೀಡಿದೆ. ಇದೇ ವೇಳೆ ಸಮಗ್ರ ಅಭಿವೃದ್ಧಿಯೇ ನಮ್ಮ ಗುರಿ ಎಂದು ಎಎಪಿ ರಾಜ್ಯ ಉಪಾಧ್ಯಕ್ಷ ವಿವೇಕಾನಂದ ಸಾಲಿನ್ಸ್‌ ಹೇಳಿದ್ದಾರೆ.

Advertisement
Advertisement
Advertisement
Advertisement

ದೆಹಲಿ ಬಳಿಕ ವಿವಿಧ ರಾಜ್ಯಗಳಲ್ಲೂ ಹರಡಿಕೊಂಡ ಆಮ್‌ ಆದ್ಮಿ ಪಕ್ಷವು  ರಾಷ್ಟ್ರೀಯ ಪಕ್ಷವಾಗಿ ಸ್ಥಾನ ಪಡೆದುಕೊಂಡಿತ್ತು. ಇದೀಗ ರಾಜ್ಯದಲ್ಲೂ ಸ್ಫರ್ಧೆಗೆ ಇಳಿಯುತ್ತಿದೆ. ರಾಜ್ಯದ ಎಲ್ಲಾ ವಿಧಾನಸಭಾಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲು ಸಿದ್ಧತೆ ನಡೆಸಿದೆ. ದಕ್ಷಿಣ ಕನ್ನಡದಲ್ಲೂ ಈಗ ಎಎಪಿ ಸದ್ದು ಮಾಡುತ್ತಿದೆ. ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಆಮ್‌ ಆದ್ಮಿ ಪಕ್ಷ ಕೆಲಸ ಆರಂಭಿಸಿದೆ ಎಂದು ಎಎಪಿ ಜಿಲ್ಲಾಧ್ಯಕ್ಷ ಅಶೋಕ್‌ ಎಡಮಲೆ ಹೇಳಿದ್ದಾರೆ.

Advertisement

ದೇಶದ ರಾಜಕೀಯ ಶುದ್ದೀಕರಣವಾಗಬೇಕು, ವಿದ್ಯಾವಂತರು ಹೆಚ್ಚು ರಾಜಕೀಯ ಕ್ಷೇತ್ರದಲ್ಲಿ  ತೊಡಗಿಸಿಕೊಂಡು, ಭ್ರಷ್ಟಾಚಾರ ರಹಿತ ಆಡಳಿತ ನೀಡುವಂತಾಗಬೇಕು, ಗ್ರಾಮೀಣ ಅಭಿವೃದ್ಧಿ ಹಾಗೂ ಮೂಲಭೂಸ ಸೌಲಭ್ಯಗಳನ್ನು ಜನರಿಗೆ ಒದಗಿಸುವುದು ಎಎಪಿ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿತ್ತಾರೆ ಎಎಪಿ ರಾಜ್ಯ ಉಪಾಧ್ಯಕ್ಷ ವಿವೇಕಾನಂದ ಸಾಲಿನ್ಸ್.‌

Advertisement

ಸುಳ್ಯ ವಿಧಾನಸಭಾ ಕ್ಷೇತ್ರದಲ್ಲೂ ಎಎಪಿ ಕೆಲಸ ಆರಂಭಿಸಿದ್ದು, ವಿವಿದೆಡೆ ಪ್ರಚಾರ ಕಾರ್ಯ ಮನೆ ಮನೆ ಭೇಟಿ ಸೇರಿದಂತೆ ಸಂಘಟನೆಯನ್ನು ಬಲಗೊಳಿಸಿದೆ. ಸುಳ್ಯದಲ್ಲಿ ಸಾಕಷ್ಟು ಅಭಿವೃದ್ಧಿಯ ಕೊರತೆ, ಹಿನ್ನಡೆ ಇರುವುದು  ಕಂಡುಬರುತ್ತಿದೆ. ಹೀಗಾಗಿ ಜನರಿಗೆ ಈಗ ಅಭಿವೃದ್ಧಿಯ ರಾಜಕಾರಣ ಬೇಕಾಗಿದೆ, ಇದನ್ನು ನಾವು ಮಾಡಿ ತೋರಿಸುತ್ತೇವೆ ಎಂದು  ಎಎಪಿ ಅಭ್ಯರ್ಥಿ ಆಕಾಂಕ್ಷಿ, ಎಂಬಿಎ ಪದವೀಧರೆ ಸುಮನಾ ಬೆಳ್ಳಾರ್ಕರ್‌ ಹೇಳುತ್ತಾರೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಅಲ್ಪಾವಧಿ ಬೆಳೆ ಸಾಲ – ಹಾಗೆಂದರೇನು..? | ರೈತರಿಗೆ ಪ್ರಯೋಜನ ಏನು..?

ಯಾವುದೇ ಬ್ಯಾಂಕು ಅಥವಾ ಸಹಕಾರಿ ಸಂಸ್ಥೆ ರೈತನಿಗೆ ಬೇಕಾಬಿಟ್ಟಿಯಾಗಿ ಅಲ್ಪಾವಧಿ ಬೆಳೆ ಸಾಲ…

2 days ago

ವಿಶ್ವೇಶ್ವರ ಭಟ್‌ ಬಂಗಾರಡ್ಕ ಅವರಿಂದ ಬಜೆಟ್‌ ವಿಶ್ಲೇಷಣೆ |

‌ಆರ್ಥಿಕತೆಯ ಬಗ್ಗೆ ಸಮರ್ಥವಾಗಿ ವಿಷಯ ಮಂಡಿಸಬಲ್ಲ ಕೃಷಿಕ, ಸಾಮಾಜಿಕ ಮುಖಂಡ ವಿಶ್ವೇಶ್ವರ ಭಟ್‌…

2 days ago

ಗ್ರಾಮೀಣ, ನಗರ ಪ್ರದೇಶದ ಕಟ್ಟೆಗಳ ಅಭಿವೃದ್ಧಿ – ಧಾರ್ಮಿಕ ಪರಂಪರೆ ಸಂರಕ್ಷಣೆ

ದೇಶಾದ್ಯಂತ ನಗರೀಕರಣ ಬೆಳವಣಿಗೆಯಾದಂತೆ ಸಮುದಾಯದ ಸ್ಥಳಗಳು ಕಣ್ಮರೆಯಾಗಿವೆ. ಕರಾವಳಿ ನಗರದಾದ್ಯಂತ  ಸುಮಾರು 250…

3 days ago

ಮಾನವ-ವನ್ಯಜೀವಿ ಸಂಘರ್ಷ ತಗ್ಗಿಸಲು ಸಕಲ ಕ್ರಮ | ಮುಖ್ಯಮಂತ್ರಿ  ಸಿದ್ದರಾಮಯ್ಯ

ರಾಜ್ಯದ ಕಾಡಂಚಿನ ಪ್ರದೇಶದಲ್ಲಿ  ಮಾನವ ಮತ್ತು  ವನ್ಯಜೀವಿ ಸಂಘರ್ಷ ತಡೆಯುವ ನಿಟ್ಟಿನಲ್ಲಿ ಸರ್ಕಾರ…

3 days ago