ಗಿರಿಜನ ರೈತರಿಗೆ ರಫ್ತು ಅವಕಾಶಗಳ ಬಾಗಿಲು | ಸುಳ್ಯ ಆಲೆಟ್ಟಿಯಲ್ಲಿ APEDA ಜಾಗೃತಿ ಕಾರ್ಯಕ್ರಮ

January 15, 2026
6:00 AM

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದಲ್ಲಿ ಗಿರಿಜನ ರೈತರು, ರೈತ ಉತ್ಪಾದಕ ಸಂಘಗಳು (FPOಗಳು) ಮತ್ತು ಕೃಷಿ ಸ್ಟಾರ್ಟ್‌ಅಪ್‌ಗಳಿಗಾಗಿ ಕೃಷಿ ರಫ್ತು ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಕೃಷಿ ಮತ್ತು ಸಂಸ್ಕೃತ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರವಾದ APEDA ಈ ಕಾರ್ಯಕ್ರಮವನ್ನು ICAR–KVK Mangalore, ಭಾರತ ಕೃಷಿ ಅಭಿವೃದ್ಧಿ ಸಂಸ್ಥೆ ನಿ. ಕೇಂದ್ರ ವಿಟ್ಲ, ಸಂಜೀವಿನಿ NRLM ಸುಳ್ಯ ತಾಲೂಕು ಪಂಚಾಯತ್, ಆಲೆಟ್ಟಿ ಗ್ರಾಮ ಪಂಚಾಯತ್ ಹಾಗೂ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ಸಹಯೋಗದಲ್ಲಿ ಆಯೋಜಿಸಿತು.

Advertisement

ಕಾರ್ಯಕ್ರಮವನ್ನು APEDA ಬೆಂಗಳೂರು ವಿಭಾಗದ AGM ಹಾಗೂ ಪ್ರಾದೇಶಿಕ ಮುಖ್ಯಸ್ಥರಾದ ಧರ್ಮರಾವ್ ಮತ್ತು ICAR–KVK ಮಂಗಳೂರು ಮುಖ್ಯಸ್ಥರಾದ  ಟಿ. ಜೆ. ರಮೇಶ್ ಅವರು ಉದ್ಘಾಟಿಸಿದರು. ಈ ವೇಳೆ ದಕ್ಷಿಣ ಕನ್ನಡ ಜಿಲ್ಲೆಯ ಪ್ರಾದೇಶಿಕ ಕೃಷಿ ಹಾಗೂ ತೋಟಗಾರಿಕಾ ಉತ್ಪನ್ನಗಳಿಗೆ ಲಭ್ಯವಿರುವ ದೇಶೀಯ ಹಾಗೂ ಅಂತಾರಾಷ್ಟ್ರೀಯ ರಫ್ತು ಅವಕಾಶಗಳ ಕುರಿತು ವಿಶೇಷ ಚರ್ಚೆ ನಡೆಯಿತು.

ರಫ್ತು ಸಾಧ್ಯತೆಗಳ ಕುರಿತು ತಾಂತ್ರಿಕ ಮಾಹಿತಿ : ತಾಂತ್ರಿಕ ಅಧಿವೇಶನಗಳಲ್ಲಿ APEDA ಸಹಾಯಕ ವ್ಯವಸ್ಥಾಪಕಿ ಡಾ. ಪೂಜಾ ಬಿ.ಕೆ. ಅವರು ಪ್ರಮುಖ ಪ್ರಾದೇಶಿಕ ಬೆಳೆಗಳಿಗೆ ಇರುವ ರಫ್ತು ಅವಕಾಶಗಳು, ವಿವಿಧ ದೇಶಗಳ ಮಾರುಕಟ್ಟೆ ಬೇಡಿಕೆ ಮತ್ತು ರಫ್ತು ಪ್ರಕ್ರಿಯೆಗಳ ಕುರಿತು ವಿವರವಾದ ಮಾಹಿತಿ ನೀಡಿದರು. ರೈತರನ್ನು ರಫ್ತುದಾರರೊಂದಿಗೆ ಸಂಪರ್ಕಿಸುವಲ್ಲಿ APEDA ಸಂಪೂರ್ಣ ಬೆಂಬಲ ನೀಡುವುದಾಗಿ ಭರವಸೆ ನೀಡಲಾಯಿತು.

ಮುಂದಿನ ದಿನಗಳಲ್ಲಿ ರೈತರು ಹಾಗೂ FPOಗಳು ನೇರ ರಫ್ತುದಾರರಾಗಿ ರೂಪುಗೊಳ್ಳಲು ಅಗತ್ಯವಾದ ಹ್ಯಾಂಡ್‌ಹೋಲ್ಡಿಂಗ್, ಮಾರ್ಗದರ್ಶನ ಮತ್ತು ಸಂಸ್ಥಾತ್ಮಕ ಸಹಕಾರ ಒದಗಿಸಲಾಗುವುದು ಎಂದು ಪ್ರಾಧಿಕಾರ ತಿಳಿಸಿತು.

ಕಾಡು ಜೇನು–ಕೊಡಂಪುಳಿಗೆ ಜಾಗತಿಕ ಮಾರುಕಟ್ಟೆ ಗುರಿ :  ಈ ಪ್ರದೇಶಕ್ಕೆ ವಿಶೇಷವಾದ ಕಾಡು ಜೇನು ಹಾಗೂ ಕೊಡಂಪುಳಿ (ಕೊಕುಂ) ಮೊದಲಾದ ಉತ್ಪನ್ನಗಳನ್ನು ಪ್ರಾದೇಶಿಕ ವಿಶಿಷ್ಟ ಉತ್ಪನ್ನಗಳಾಗಿ ಗುರುತಿಸಲಾಗಿದ್ದು, ಅವುಗಳನ್ನು ಜಾಗತಿಕ ಮಾರುಕಟ್ಟೆಯಲ್ಲಿ ಪ್ರಚಾರ ಮಾಡುವುದಕ್ಕೆ ಅಗತ್ಯ ಸಹಕಾರ ನೀಡಲಾಗುವುದೆಂದು ರೈತರಿಗೆ ಭರವಸೆ ನೀಡಲಾಯಿತು.

Advertisement

KVK ವಿಜ್ಞಾನಿಗಳು ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ರಫ್ತು ಗುಣಮಟ್ಟಕ್ಕೆ ತಕ್ಕ ಉತ್ಪಾದನೆ, ಸಮಗ್ರ ಕೀಟ ನಿರ್ವಹಣೆ ಹಾಗೂ ಗುಣಮಟ್ಟ ನಿಯಂತ್ರಣ ಕ್ರಮಗಳ ಕುರಿತು ಉಪಯುಕ್ತ ಮಾಹಿತಿ ಹಂಚಿಕೊಂಡರು. ತೋಟಗಾರಿಕಾ ಹಿರಿಯ ಸಹಾಯಕ ನಿರ್ದೇಶಕ ಪ್ರಮೋದ್ ಸಿ.ಎಂ. ಹಾಗೂ ಅರ್ಭನ್ ಪೂಜಾರಿ ಉಪಸ್ಥಿತರಿದ್ದರು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

ಕಾರ್ಯಕ್ರಮದಲ್ಲಿ ರೈತರು, FPO ಪ್ರತಿನಿಧಿಗಳು ಹಾಗೂ ಕೃಷಿ ಸ್ಟಾರ್ಟ್‌ಅಪ್‌ಗಳು ಉತ್ಸಾಹದಿಂದ ಭಾಗವಹಿಸಿದ್ದು, ಗಿರಿಜನ ಹಾಗೂ ಗ್ರಾಮೀಣ ಪ್ರದೇಶಗಳಿಂದ ಕೃಷಿ ರಫ್ತು ಉತ್ತೇಜಿಸುವಲ್ಲಿ APEDA ಕೈಗೊಂಡಿರುವ ನಿರಂತರ ಪ್ರಯತ್ನಗಳನ್ನು ಈ ಕಾರ್ಯಕ್ರಮ ಮತ್ತೊಮ್ಮೆ ದೃಢಪಡಿಸಿತು. ಭಾರತ ಕೃಷಿ ಅಭಿವೃದ್ಧಿ ಸಂಸ್ಥೆ ನಿ. ವಿಟ್ಲ ರೈತರನ್ನು ಒಗ್ಗೂಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ.

ಕಾರ್ಯಕ್ರಮವನ್ನು ಕೃಷಿ ಸಖಿ ಮೋಹಿನಿ ವಿಶ್ವನಾಥ್ (ನಿಶಾ) ಅವರು ಸ್ವಾಗತಿಸಿ ನಿರೂಪಿಸಿದರು. ಸಂಜೀವಿನಿ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕಿ ಶ್ರೀಮತಿ ಶ್ವೇತಾ ಅವರು ಸಂಜೀವಿನಿ ಯೋಜನೆಯ ಮಾಹಿತಿ ನೀಡಿದ್ದು, ವಂದನಾರ್ಪಣೆ ಮಾಡಿದರು.

Advertisement
Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಶಿವಮೊಗ್ಗ ಜಿಲ್ಲೆಯ ಸುಜನಾ ಸ್ತ್ರೀಶಕ್ತಿ ಸ್ವಸಹಾಯ ಸಂಘ | ಸ್ವಾವಲಂಬನೆಯ ಸಂಕಲ್ಪದಿಂದ ಜಾಗತಿಕ ಮಾರುಕಟ್ಟೆಯವರೆಗೆ
January 17, 2026
7:40 AM
by: ದ ರೂರಲ್ ಮಿರರ್.ಕಾಂ
ನಕಲಿ ಬೀಜಗಳ ಮಾರಾಟ ತಡೆಗೆ ಕ್ರಮ – ಬಜೆಟ್ ಅಧಿವೇಶನದಲ್ಲಿ ಬೀಜ ಕಾಯ್ದೆ–2026 ಮಂಡನೆ
January 17, 2026
7:25 AM
by: ದ ರೂರಲ್ ಮಿರರ್.ಕಾಂ
ಉತ್ತರ ಕನ್ನಡದ ದಾಂಡೇಲಿಯಲ್ಲಿ ಹಾರ್ನ್ಬಿಲ್ ಹಬ್ಬ | ಮಕ್ಕಳಿಗೆ ಹಾರ್ನ್ಬಿಲ್ ಜೀವನ ಕ್ರಮ ಕುರಿತು ಜಾಗೃತಿ
January 17, 2026
7:21 AM
by: ಮಿರರ್‌ ಡೆಸ್ಕ್
ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವಿಳಂಬವಾದರೆ ಕ್ರಮ ಅನಿವಾರ್ಯ | ಅಧಿಕಾರಿಗಳಿಗೆ ಸಚಿವ ಕೃಷ್ಣಭೈರೇಗೌಡ ಎಚ್ಚರಿಕೆ
January 17, 2026
7:17 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror