ದಕ್ಷಿಣ ಕನ್ನಡದಲ್ಲಿ ಶಾಂತಿ ಸುವ್ಯವಸ್ಥೆ ಹೇಗೆ ? | ಜನಪ್ರತಿನಿಧಿಗಳೇ ಮೌನವಾದರೆ ಹೇಗೆ..? | ಬ್ಯಾನರ್‌ ಜಗಳ ಹೆಚ್ಚಾಗುವ ಮೊದಲು ಇಲಾಖೆಗಳು-ಜನಪ್ರತಿನಿಧಿಗಳು ಎಚ್ಚೆತ್ತುಕೊಳ್ಳಬೇಕು |

October 4, 2023
10:47 PM
ಒಂದು ಕ್ಷೇತ್ರದಲ್ಲಿ ಸಾಮಾಜಿಕವಾದ, ಕಾನೂನು ಸುವ್ಯವಸ್ಥೆ, ಶಾಂತಿ ಸುವ್ಯವಸ್ಥೆಯ ಸಮಸ್ಯೆಗಳು ಉಂಟಾದಾಗ ಬಗೆಹರಿಸಲು ಅಧಿಕಾರಿಗಳು ಮಾತ್ರವಲ್ಲ, ಆ ಕ್ಷೇತ್ರದ ಜನಪ್ರತಿನಿಧಿಗಳು ಅದಕ್ಕೆ ಜವಾಬ್ದಾರರಾಗಿದ್ದಾರೆ. ಸುಳ್ಯದಲ್ಲಿ ಎದ್ದಿರುವ ಬ್ಯಾನರ್‌ ವಿವಾದಕ್ಕೆ ಜನಪ್ರತಿನಿಧಿಗಳು ಏಕೆ ಮೌನವಾಗಿದ್ದಾರೆ...?

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಕಷ್ಟು ಬುದ್ದಿವಂತ ಜನಪ್ರತಿನಿಧಿಗಳು ಇದ್ದಾರೆ. ಜಿಲ್ಲೆಯಲ್ಲಿ ಉತ್ತಮ ಅಧಿಕಾರಿಗಳೂ ಇದ್ದಾರೆ. ಆದರೆ ಈಚೆಗೆ ಶಾಂತಿ ಸುವ್ಯವಸ್ಥೆ ಕಡೆಗೆ ಗಂಭೀರವಾಗಿ ಪರಿಗಣಿಸಬೇಕಾದ ಅವಶ್ಯಕತೆ ಇದೆ. ಈಗ ಅಧಿಕಾರಿಗಳು , ಪೊಲೀಸ್‌ ಇಲಾಖೆಯ ಅಧಿಕಾರಿಗಳು ಅಸಹಾಯಕತೆಯನ್ನು ವ್ಯಕ್ತಪಡಿಸುವುದು ಈಚೆಗೆ ಕೆಲವು ಪ್ರಕರಣಗಳಲ್ಲಿ ಕಂಡುಬಂದಿದೆ.

Advertisement
Advertisement

ಓಟಿನ ರಾಜಕಾರಣವನ್ನು ಎಲ್ಲಾ ಪಕ್ಷಗಳು ಈಗ ಬಿಟ್ಟು, ಶಾಂತಿ, ಕಾನೂನು ಸುವ್ಯವಸ್ಥೆ ಬಗ್ಗೆ ಗಂಭೀರವಾಗಿ ಯೋಚಿಸಬೇಕಾದ ಸ್ಥಿತಿ ಬಂದಿದೆ. ಸುಳ್ಯದಲ್ಲಿ ಮಂಗಳವಾರ ಕಾರ್ಯಕ್ರಮ ಆಯೋಜನೆಯಾಗಿತ್ತು. ಇದೇ ವೇಳೆ ಬ್ಯಾನರ್‌ ತೆರವು-ಅಳವಡಿಕೆ ವಿವಾದವೊಂದು ಇಡೀ ದಿನ ಸದ್ದು ಮಾಡಿತು. ನಗರ ಪಂಚಾಯತ್‌ ಅಧಿಕಾರಿಗಳು ಬ್ಯಾನರ್‌ ತೆರವು ಮಾಡಿಸಿದರು, ಶಾಂತಿ ಸುವ್ಯವಸ್ಥೆ ದೃಷ್ಟಿಯಿಂದ ಪೊಲೀಸ್‌ ಇಲಾಖೆ ಬ್ಯಾನರ್‌ ತೆರವು ಮಾಡಲು ಹೇಳಿತ್ತು. ನಗರ ಪಂಚಾಯತ್‌ ತೆರವು ಮಾಡಿತು..!. ಇಷ್ಟೇ ಘಟನೆ. ಆದರೆ ಇಲ್ಲಿ ಯಾವ ಇಲಾಖೆಗಳೂ ಅಧಿಕೃತವಾದ ಪತ್ರದ ವ್ಯವಹಾರ ಮಾಡಲಿಲ್ಲ. ಇಲ್ಲಿ ಇದ್ದ ಉದ್ದೇಶ, ಶಾಂತಿ ಸುವ್ಯವಸ್ಥೆ.

ಬೃಹತ್‌ ಸಭೆ-ಜಾಥಾದ ನಡುವೆ ಒಂದು ಬ್ಯಾನರ್‌ ಮೇಲೆ ಕಲ್ಲು ಬಿದ್ದರೂ, ಸಣ್ಣದಾದ ಸಮಸ್ಯೆ ಬ್ಯಾನರ್‌ ಮೇಲಾದರೂ ಶಾಂತಿ ಕದಡುತ್ತದೆ.  ಈ ಹಿನ್ನೆಲೆಯಲ್ಲಿ ಇಲಾಖೆಗಳು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡರು, ಕೈಗೊಳ್ಳಲೇಬೇಕಾದ ಸಂಗತಿ ಕೂಡಾ. ವಾರಗಳ ಹಿಂದೆಯೂ ಸುಳ್ಯದಲ್ಲಿ ಅದೇ ಮಾದರಿಯಲ್ಲಿ ಬ್ಯಾನರ್‌ ಸಮಸ್ಯೆಯಾಗಿತ್ತು, ಆಗ ಜನಪ್ರತಿನಿಧಿಯೊಬ್ಬರು ಈ ಸಮಸ್ಯೆಯನ್ನು ಬಗೆಹರಿಸಿದ್ದರು, ಅಂತಹ ಮಾದರಿ ಜನಪ್ರತಿನಿಧಿಗಳ ಅವಶ್ಯಕತೆ ಇದೆ. ಎಲ್ಲರೂ ಅನುಮತಿ ಪಡೆದೇ ಬ್ಯಾನರ್‌ ಅಳವಡಿಕೆ ಮಾಡುತ್ತಾರೆ. ನಗರ ಪಂಚಾಯತ್‌ ವಿಧಿಸುವ ದರವನ್ನು ಪಾವತಿ ಮಾಡಿಯೇ ಬ್ಯಾನರ್‌ ಅಳವಡಿಕೆ ಮಾಡಲಾಗುತ್ತದೆ.

ಹೀಗಿರುವಾಗ ಕಾನೂನು ಸುವ್ಯವಸ್ಥೆ, ಶಾಂತಿ ಎಂದೆಲ್ಲಾ ಕಾರ್ಯಕ್ರಮದ ನಡುವೆ ಬ್ಯಾನರ್‌ ತೆಗೆಸುವ ಪ್ರಕ್ರಿಯೆಯೂ ಆಭಾಸವಾಗುತ್ತದೆ, ಸಮಸ್ಯೆಯಾಗುತ್ತದೆ.ಸುಳ್ಯದಲ್ಲಿ ಬುಧವಾರ ಸಮಸ್ಯೆ ಆಗಿರುವುದು ಕೂಡಾ ಅದೇ.  ಒಂದೋ ಎರಡೂ ಕಾರ್ಯಕ್ರಮಗಳ ಬ್ಯಾನರ್‌ಗಳಿಗೆ ಅವಕಾಶ ನೀಡಬಾರದು, ಅಥವಾ ಅದಕ್ಕೆ ಬೇಕಾದ ಸೂಕ್ತ ಎಚ್ಚರಿಕೆಯನ್ನು ಇಲಾಖೆಯೇ ನೀಡಬೇಕು. ಒಂದು ವೇಳೆ ಸಮಸ್ಯೆಯಾಗುತ್ತದೆ ಎಂದಾದರೆ ಮೆರವಣಿಗೆ, ಜಾಥಾಗಳಿಗೆ , ಬ್ಯಾನರ್‌ಗಳಿಗೆ ಅವಕಾಶವನ್ನೇ ನೀಡಬಾರದು. ಇದೆಲ್ಲಾ ಅಗತ್ಯವಿದ್ದೂ, ಅನುಮತಿ ನೀಡಿ ಸಮಾಜದಲ್ಲಿ ಮತ್ತಷ್ಟು ವಿವಾದಗಳನ್ನು, ಸಮಸ್ಯೆಗಳನ್ನು ಸೃಷ್ಟಿಸುವುದು ಈಚೆಗೆ ಹೆಚ್ಚಾಗುತ್ತಿದೆ.

ಜನರ ಮತಗಳಿಂದ ಗೆದ್ದಿರುವ ಪ್ರತಿನಿಧಿಗಳು ಇಂತಹ ಸಮಸ್ಯೆಗಳು ಬಂದಾಗ ಅಧಿಕಾರಿಗಳ ಮೇಲೆಯೇ ಸಮಸ್ಯೆಯನ್ನು ವರ್ಗಾಯಿಸಿ ಸುಮ್ಮನಿರುವುದು ಕೂಡಾ ಕಂಡುಬಂದಿದೆ. ಸುಳ್ಯದಂತಹ ಪ್ರದೇಶದಲ್ಲಿ ಜನಪ್ರತಿನಿಧಿಗಳು ಸಾಮಾಜಿಕ ಹಿತದೃಷ್ಟಿಯಿಂದ ಮಧ್ಯಪ್ರವೇಶಿಸಿ ಇಂತಹ ಗೊಂದಲಗಳನ್ನು ನಿವಾರಣೆ ಮಾಡಬೇಕಿದೆ.ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿಸುವುದು ಸರಿಯಲ್ಲ. ಇಲಾಖೆಗಳಿಗೆ ಸಾಮಾಜಿಕವಾಗಿ ಶಾಂತಿ ಸುವ್ಯವಸ್ಥೆ, ಕಾನೂನು ಪಾಲನೆ ಮಾಡಲೇಬೇಕಾದ ಅನಿವಾರ್ಯತೆ ಇರುತ್ತದೆ. ಹೀಗಾಗಿ ಜನಪ್ರತಿನಿಧಿಗಳ ಪಾತ್ರವೂ ಇಲ್ಲಿ ಮುಖ್ಯವಾಗುತ್ತದೆ. ಎಲ್ಲದಕ್ಕೂ ಮೌನವಾಗಿರುವುದು ಜನಪ್ರತಿನಿಧಿಗಳಾದವರಿಗೂ ಅಗೌರವವೇ ಆಗಿದೆ.

Advertisement
Advertisement

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಭತ್ತಕ್ಕೆ ಕನಿಷ್ಟ ಬೆಂಬಲ ಬೆಲೆ ಕಾಯಿದೆ ಜಾರಿಗೆ ತರಲು ಆಗ್ರಹ | ದಾವಣಗೆರೆಯಲ್ಲಿ ರೈತರ ಪ್ರತಿಭಟನೆ
May 19, 2025
9:05 PM
by: The Rural Mirror ಸುದ್ದಿಜಾಲ
ಅತೀ ಹೆಚ್ಚು ಪ್ರಮಾಣದ ತೊಗರಿ ಖರೀದಿಸಿದ ವಿಜಯಪುರ ಜಿಲ್ಲೆ
May 19, 2025
8:59 PM
by: The Rural Mirror ಸುದ್ದಿಜಾಲ
ಮಳೆಗೆ ರಾಜಧಾನಿ ಬೆಂಗಳೂರು ಅಸ್ತವ್ಯಸ್ತ | ಉತ್ತರ ಕನ್ನಡ ಜಿಲ್ಲೆಯಲ್ಲಿ ರೆಡ್ ಅಲರ್ಟ್ | ಕೋಲಾರದಲ್ಲಿ ಬೆಳೆ ನಷ್ಟ | ಚಿಕ್ಕಮಗಳೂರಿನಲ್ಲಿ ನಿರಂತರ ಮಳೆ
May 19, 2025
8:46 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 19-05-2025 | ಮೇ 24 ರಿಂದ ಮುಂಗಾರು ಮಳೆ ಉತ್ತಮವಾಗಿ ಆರಂಭವಾಗುವ ಲಕ್ಷಣ
May 19, 2025
11:35 AM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror

Join Our Group