ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಕಷ್ಟು ಬುದ್ದಿವಂತ ಜನಪ್ರತಿನಿಧಿಗಳು ಇದ್ದಾರೆ. ಜಿಲ್ಲೆಯಲ್ಲಿ ಉತ್ತಮ ಅಧಿಕಾರಿಗಳೂ ಇದ್ದಾರೆ. ಆದರೆ ಈಚೆಗೆ ಶಾಂತಿ ಸುವ್ಯವಸ್ಥೆ ಕಡೆಗೆ ಗಂಭೀರವಾಗಿ ಪರಿಗಣಿಸಬೇಕಾದ ಅವಶ್ಯಕತೆ ಇದೆ. ಈಗ ಅಧಿಕಾರಿಗಳು , ಪೊಲೀಸ್ ಇಲಾಖೆಯ ಅಧಿಕಾರಿಗಳು ಅಸಹಾಯಕತೆಯನ್ನು ವ್ಯಕ್ತಪಡಿಸುವುದು ಈಚೆಗೆ ಕೆಲವು ಪ್ರಕರಣಗಳಲ್ಲಿ ಕಂಡುಬಂದಿದೆ.
ಓಟಿನ ರಾಜಕಾರಣವನ್ನು ಎಲ್ಲಾ ಪಕ್ಷಗಳು ಈಗ ಬಿಟ್ಟು, ಶಾಂತಿ, ಕಾನೂನು ಸುವ್ಯವಸ್ಥೆ ಬಗ್ಗೆ ಗಂಭೀರವಾಗಿ ಯೋಚಿಸಬೇಕಾದ ಸ್ಥಿತಿ ಬಂದಿದೆ. ಸುಳ್ಯದಲ್ಲಿ ಮಂಗಳವಾರ ಕಾರ್ಯಕ್ರಮ ಆಯೋಜನೆಯಾಗಿತ್ತು. ಇದೇ ವೇಳೆ ಬ್ಯಾನರ್ ತೆರವು-ಅಳವಡಿಕೆ ವಿವಾದವೊಂದು ಇಡೀ ದಿನ ಸದ್ದು ಮಾಡಿತು. ನಗರ ಪಂಚಾಯತ್ ಅಧಿಕಾರಿಗಳು ಬ್ಯಾನರ್ ತೆರವು ಮಾಡಿಸಿದರು, ಶಾಂತಿ ಸುವ್ಯವಸ್ಥೆ ದೃಷ್ಟಿಯಿಂದ ಪೊಲೀಸ್ ಇಲಾಖೆ ಬ್ಯಾನರ್ ತೆರವು ಮಾಡಲು ಹೇಳಿತ್ತು. ನಗರ ಪಂಚಾಯತ್ ತೆರವು ಮಾಡಿತು..!. ಇಷ್ಟೇ ಘಟನೆ. ಆದರೆ ಇಲ್ಲಿ ಯಾವ ಇಲಾಖೆಗಳೂ ಅಧಿಕೃತವಾದ ಪತ್ರದ ವ್ಯವಹಾರ ಮಾಡಲಿಲ್ಲ. ಇಲ್ಲಿ ಇದ್ದ ಉದ್ದೇಶ, ಶಾಂತಿ ಸುವ್ಯವಸ್ಥೆ.
ಬೃಹತ್ ಸಭೆ-ಜಾಥಾದ ನಡುವೆ ಒಂದು ಬ್ಯಾನರ್ ಮೇಲೆ ಕಲ್ಲು ಬಿದ್ದರೂ, ಸಣ್ಣದಾದ ಸಮಸ್ಯೆ ಬ್ಯಾನರ್ ಮೇಲಾದರೂ ಶಾಂತಿ ಕದಡುತ್ತದೆ. ಈ ಹಿನ್ನೆಲೆಯಲ್ಲಿ ಇಲಾಖೆಗಳು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡರು, ಕೈಗೊಳ್ಳಲೇಬೇಕಾದ ಸಂಗತಿ ಕೂಡಾ. ವಾರಗಳ ಹಿಂದೆಯೂ ಸುಳ್ಯದಲ್ಲಿ ಅದೇ ಮಾದರಿಯಲ್ಲಿ ಬ್ಯಾನರ್ ಸಮಸ್ಯೆಯಾಗಿತ್ತು, ಆಗ ಜನಪ್ರತಿನಿಧಿಯೊಬ್ಬರು ಈ ಸಮಸ್ಯೆಯನ್ನು ಬಗೆಹರಿಸಿದ್ದರು, ಅಂತಹ ಮಾದರಿ ಜನಪ್ರತಿನಿಧಿಗಳ ಅವಶ್ಯಕತೆ ಇದೆ. ಎಲ್ಲರೂ ಅನುಮತಿ ಪಡೆದೇ ಬ್ಯಾನರ್ ಅಳವಡಿಕೆ ಮಾಡುತ್ತಾರೆ. ನಗರ ಪಂಚಾಯತ್ ವಿಧಿಸುವ ದರವನ್ನು ಪಾವತಿ ಮಾಡಿಯೇ ಬ್ಯಾನರ್ ಅಳವಡಿಕೆ ಮಾಡಲಾಗುತ್ತದೆ.
ಹೀಗಿರುವಾಗ ಕಾನೂನು ಸುವ್ಯವಸ್ಥೆ, ಶಾಂತಿ ಎಂದೆಲ್ಲಾ ಕಾರ್ಯಕ್ರಮದ ನಡುವೆ ಬ್ಯಾನರ್ ತೆಗೆಸುವ ಪ್ರಕ್ರಿಯೆಯೂ ಆಭಾಸವಾಗುತ್ತದೆ, ಸಮಸ್ಯೆಯಾಗುತ್ತದೆ.ಸುಳ್ಯದಲ್ಲಿ ಬುಧವಾರ ಸಮಸ್ಯೆ ಆಗಿರುವುದು ಕೂಡಾ ಅದೇ. ಒಂದೋ ಎರಡೂ ಕಾರ್ಯಕ್ರಮಗಳ ಬ್ಯಾನರ್‌ಗಳಿಗೆ ಅವಕಾಶ ನೀಡಬಾರದು, ಅಥವಾ ಅದಕ್ಕೆ ಬೇಕಾದ ಸೂಕ್ತ ಎಚ್ಚರಿಕೆಯನ್ನು ಇಲಾಖೆಯೇ ನೀಡಬೇಕು. ಒಂದು ವೇಳೆ ಸಮಸ್ಯೆಯಾಗುತ್ತದೆ ಎಂದಾದರೆ ಮೆರವಣಿಗೆ, ಜಾಥಾಗಳಿಗೆ , ಬ್ಯಾನರ್‌ಗಳಿಗೆ ಅವಕಾಶವನ್ನೇ ನೀಡಬಾರದು. ಇದೆಲ್ಲಾ ಅಗತ್ಯವಿದ್ದೂ, ಅನುಮತಿ ನೀಡಿ ಸಮಾಜದಲ್ಲಿ ಮತ್ತಷ್ಟು ವಿವಾದಗಳನ್ನು, ಸಮಸ್ಯೆಗಳನ್ನು ಸೃಷ್ಟಿಸುವುದು ಈಚೆಗೆ ಹೆಚ್ಚಾಗುತ್ತಿದೆ.
ಜನರ ಮತಗಳಿಂದ ಗೆದ್ದಿರುವ ಪ್ರತಿನಿಧಿಗಳು ಇಂತಹ ಸಮಸ್ಯೆಗಳು ಬಂದಾಗ ಅಧಿಕಾರಿಗಳ ಮೇಲೆಯೇ ಸಮಸ್ಯೆಯನ್ನು ವರ್ಗಾಯಿಸಿ ಸುಮ್ಮನಿರುವುದು ಕೂಡಾ ಕಂಡುಬಂದಿದೆ. ಸುಳ್ಯದಂತಹ ಪ್ರದೇಶದಲ್ಲಿ ಜನಪ್ರತಿನಿಧಿಗಳು ಸಾಮಾಜಿಕ ಹಿತದೃಷ್ಟಿಯಿಂದ ಮಧ್ಯಪ್ರವೇಶಿಸಿ ಇಂತಹ ಗೊಂದಲಗಳನ್ನು ನಿವಾರಣೆ ಮಾಡಬೇಕಿದೆ.ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿಸುವುದು ಸರಿಯಲ್ಲ. ಇಲಾಖೆಗಳಿಗೆ ಸಾಮಾಜಿಕವಾಗಿ ಶಾಂತಿ ಸುವ್ಯವಸ್ಥೆ, ಕಾನೂನು ಪಾಲನೆ ಮಾಡಲೇಬೇಕಾದ ಅನಿವಾರ್ಯತೆ ಇರುತ್ತದೆ. ಹೀಗಾಗಿ ಜನಪ್ರತಿನಿಧಿಗಳ ಪಾತ್ರವೂ ಇಲ್ಲಿ ಮುಖ್ಯವಾಗುತ್ತದೆ. ಎಲ್ಲದಕ್ಕೂ ಮೌನವಾಗಿರುವುದು ಜನಪ್ರತಿನಿಧಿಗಳಾದವರಿಗೂ ಅಗೌರವವೇ ಆಗಿದೆ.
ಈ ಬಾರಿ ಫೆಬ್ರವರಿ ತಿಂಗಳಲ್ಲಿ ವಾಡಿಕೆಗಿಂತ 2.5 ಡಿಗ್ರಿ ಸೆಲ್ಸಿಯಸ್ ನಷ್ಟು ಬಿಸಿಲು…
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಚಾಲಕ ಮತ್ತು ನಿರ್ವಾಹಕರ ಮೇಲೆ ಪ್ರಯಾಣಿಕರು…
ಕೃಷಿ ಹಾಗೂ ರೈತರ ಅಭ್ಯುದಯವೇ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯಗಳ ಮೂಲ ಆಶಯವಾಗಿದೆ…
ಏರುತ್ತಿರುವ ತಾಪಮಾನ ಮತ್ತು ಹವಾಮಾನ ಬದಲಾವಣೆಯು ಮುಂದಿನ ಐದು ವರ್ಷಗಳಲ್ಲಿ ಕೃಷಿ ಮೇಲೆ…
ದೇಶಾದ್ಯಂತ ಸ್ಥೂಲಕಾಯದ ವಿರುದ್ಧ ಹೋರಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಹತ್ತು ಮಂದಿಯನ್ನು…
ತೀರಾ ಸಣ್ಣ ಮಟ್ಟಿನ ಆದಾಯವನ್ನೂ ಬ್ಯಾಂಕ್ ಖಾತೆಗೆ ಏಕೆ ತುಂಬಬೇಕು..?