ದಕ್ಷಿಣ ಭಾರತದಲ್ಲಿ ಬಿಜೆಪಿ ಸಂಘಟನೆಗೆ ಹೆಸರಾದ ನೆಲದಲ್ಲಿ ಅಸಮಾಧಾನ .! | ಸುಳ್ಯ ಬಿಜೆಪಿಯೊಳಗೆ ಏನಿದು..? |

October 25, 2020
10:43 AM

ಒಂದು ಕಾಲದಲ್ಲಿ ಬಿಜೆಪಿ ಸಂಘಟನೆ ಹಾಗೂ ಸಂಘಪರಿವಾರದ ಎಲ್ಲಾ ಸಂಘಟನೆಗಳಿಗೂ ಮಾದರಿಯಾಗಿದ್ದುದು  ಸುಳ್ಯ. ಬಿಜೆಪಿ ಹಿರಿಯ ನಾಯಕ ಎಲ್‌ ಕೆ ಅಡ್ವಾನಿ ಅವರು ಸುಳ್ಯವು ಬಿಜೆಪಿಯ ದಕ್ಷಿಣ ಭಾರತದ ಹೆಬ್ಬಾಗಿಲು ಎಂದೇ ಬಣ್ಣಿಸಿದ್ದರು. ಆದರೆ ಈಚಗೆ ಸುಳ್ಯದಲ್ಲೇ ಬಂಡಾಯ, ಅಸಮಾಧಾನ ಹೆಚ್ಚಾಗಿದೆ. ಈಗ ಸಭೆ ನಡೆಯುವಷ್ಟರ ಮಟ್ಟಿಗೆ ಈ ಅಸಮಾಧಾನಗಳು ಹೆಚ್ಚಾಗಿವೆ ಎಂಬುದು ಗುಟ್ಟಾಗಿ ಉಳಿದಿಲ್ಲ.

Advertisement

ಸುಳ್ಯದಲ್ಲಿ ಕಳೆದ ಒಂದೆರಡು ವರ್ಷಗಳಿಂದ ಬಿಜೆಪಿಯೊಳಗೆ ಅಸಮಾಧಾನಗಳು ಹೆಚ್ಚಾಗಿದೆ. ಇದರ ಶಮನ ಮಾಡಲು ಬಿಜೆಪಿ ಸೇರಿದಂತೆ ಸಂಘಪರಿವಾರದ ಯಾವುದೇ ಸಂಘಟನೆಗಳೂ ಏಕೆ ಮುಂದಾಗಿಲ್ಲ ಎಂಬುದೂ ಬಹುಡೊದ್ದ ಪ್ರಶ್ನೆಯಾಗಿದೆ. ಹಿಂದುತ್ವದ ಆಧಾರದಲ್ಲೇ ಬೆಳೆದಿರುವ ಪಕ್ಷಕ್ಕೆ ಈಗ ಅದೇ ಕಾರಣದಿಂದಲೇ ಮುಂದುವರಿಯುತ್ತಿದ್ದರೂ ಒಳಗೊಳಗೇ ಇರುವ ಗೊಂದಲಗಳೇ ಮುಳುವಾಗುವ ಸಾಧ್ಯತೆಗಳೇ ಹೆಚ್ಚಾಗಿವೆ. ಅದೂ ಸುಳ್ಯದಂತಹ ಪ್ರದೇಶದಲ್ಲಿ  ಒಳಗೊಳಗೇ ಅಸಮಾಧಾನಗಳು ಹೆಚ್ಚಾಗಿವೆ.

ಕಳೆದ ಬಾರಿಯ ಡಿಸಿಸಿ ಬ್ಯಾಂಕ್‌ ಚುನಾವಣೆಯ ನಂತರ ಸುಳ್ಯದ ಬಿಜೆಪಿ ಒಡೆದ ಮನೆಯಾಗಿದೆ. ಅದಕ್ಕೂ ಮೊದಲು ಸ್ವಲ್ಪ ಪ್ರಮಾಣದಲ್ಲಿ  ಗೊಂದಲ ಇದ್ದರೆ ನಂತರ ಈ ಗೊಂದಲಗಳೇ ಹೆಚ್ಚಾಗಿವೆ. ಡಿಸಿಸಿ ಬ್ಯಾಂಕ್‌ ಚುನಾವಣೆ ಸಂಘಪರಿವಾರದ ಸಹಕಾರಿ ವಿಭಾಗವಾದ ಸಹಕಾರ ಭಾರತಿ ಹಾಗೂ ಬಿಜೆಪಿ ಜೊತೆಯಾಗಿಯೇ ಇಲ್ಲಿ ಪ್ರಮುಖ ಪಾತ್ರ ವಹಿಸಿದ್ದವು. ಆದರೆ ಆಂತರಿಕ  ಗೊಂದಲಗಳಿಂದಾಗಿ ಡಿಸಿಸಿ ಬ್ಯಾಂಕ್‌ ಚುನಾವಣೆಯಲ್ಲಿ ಸಹಕಾರ ಭಾರತಿ-ಬಿಜೆಪಿ ಅಭ್ಯರ್ಥಿ ಸೋಲು ಕಂಡರು. ಇಲ್ಲಿಂದ ನಂತರ ಸುಳ್ಯದಲ್ಲಿ ಬಿಜೆಪಿ ತಿರುವು ಪಡೆದುಕೊಂಡಿದೆ. ಪ್ರಜಾಪ್ರಭುತ್ವ , ಪಕ್ಷದ ನೆಲೆಯಲ್ಲಿ ಇಲ್ಲದೇ ಇದ್ದರೂ ಹಿಂದುತ್ವದ ಪಕ್ಷ ದೈವದ ಮುಂದೆ ಇದೇ ಕಾರಣಕ್ಕೆ ಮತದಾನ ಮಾಡಿದ ಎಲ್ಲರನ್ನೂ ಕರೆದುಕೊಂಡು ಹೋಗಿ ಪ್ರಮಾಣ ಮಾಡಿಸಿತ್ತು. ಅಲ್ಲಿಂದ ನಂತರ ಪಕ್ಷದಲ್ಲಿ  ಇನ್ನಷ್ಟು ಗೊಂದಲಗಳು ಹೆಚ್ಚಾದವು. ಹೀಗೇ ಗೊಂದಲಗಳ ಮೇಲೆ ಗೊಂದಲಗಳು ಹೆಚ್ಚಾಗುತ್ತಲೇ ಹೋದರೆ ಸಾಮಾಜಿಕ ಜಾಲತಾಣಗಳಲ್ಲೂ ಟೀಕೆ, ಚರ್ಚೆ ಹೆಚ್ಚಾದವು. ಈಗ ಈ ಎಲ್ಲಾ ಗೊಂದಲಗಳೂ ಪ್ರತ್ಯೇಕ ಸಭೆ ಮಾಡುವ ಹಂತಕ್ಕೆ ತಲಪಿದೆ. ಸಂಘಟನೆಗೆ ಹೆಸರಾದ ಸುಳ್ಯದಲ್ಲಿ ಬಲಕಳೆದುಕೊಳ್ಳುತ್ತಿದೆ, ಹಿಂದುತ್ವದ ಟ್ರಂಪ್‌ ಕಾರ್ಡ್‌ , ನರೇಂದ್ರ ಮೋದಿ ಟ್ರಂಪ್‌ ಕಾರ್ಡ್‌ ಮಾತ್ರವೇ ಉಳಿದುಕೊಂಡಿದೆ. ಅಭಿವೃದ್ಧಿಯ ಕಡೆಗಿನ ಮುಖ ಕಡಿಮೆಯಾಗಿದೆಯೇ ಎನ್ನುವ ಮಾತುಗಳು ಹೆಚ್ಚಾಗಿದೆ.

ಪ್ರತ್ಯೇಕವಾಗಿ ನಡೆಸಿದ ಸಭೆಯಲ್ಲಿ ಬಿಜೆಪಿ ಪ್ರಮುಖರಾದ ಎಸ್‌ ಎನ್‌ ಮನ್ಮಥ, ಎನ್‌ ಎ ರಾಮಚಂದ್ರ, ಸಂತೋಷ್‌ ಕುತ್ತಮೊಟ್ಟೆ, ವಿಷ್ಣು ಭಟ್‌ ಮೂಲೆತೋಟ, ಕೃಪಾಶಂಕರ ತುದಿಯಡ್ಕ, ಸೇರಿದಂತೆ ಸುಮಾರು 25 ಮಂದಿ ಭಾಗವಹಿಸಿದ್ದರು ಎಂದು ಮೂಲಗಳು ತಿಳಿಸಿವೆ. ಆದರೆ ಬಿಜೆಪಿ ಈ ಬಗ್ಗೆ ಯಾವುದೇ ಅಧಿಕೃತವಾಗಿ ಹೇಳಿಕೆ ನೀಡಿಲ್ಲ. ಪ್ರತ್ಯೇಕವಾಗಿ ಸಭೆ ನಡೆಸಿದ  ಪ್ರಮುಖರು ಕೆಲವು ನಾಯಕರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ. ಸಂಘಟನೆ ಉಳಿಯಲು ಹಾಗೂ ಬೆಳೆಯಲು ಕೆಲವು ಬೇಡಿಕೆಗಳನ್ನು ಜಿಲ್ಲಾ ಬಿಜೆಪಿ ಹಾಗೂ ಸಂಘಪರಿವಾರದ ಪ್ರಮುಖರಲ್ಲಿ  ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ. ಒಂದು ವೇಳೆ ಸಂಧಾನ ಮಾಡದೇ ಇದ್ದರೆ ಗ್ರಾಮಗಳಿಗೆ ಪ್ರವಾಸ ಮಾಡುವ ಯೋಜನೆಯನ್ನು  ಹಾಕಿಕೊಳ್ಳಲಾಗಿದ್ದು ಈಗಾಗಲೇ ಹಲವು ಗ್ರಾಮಗಳಲ್ಲಿ  ಬಿಜೆಪಿ ಹಾಗೂ ಸಂಘಪರಿವಾರ ಅನೇಕರು ಅಸಮಾಧಾನ ಹೊಂದಿದ್ದು ಯಾರೂ ಬಹಿರಂಗವಾಗಿ ಕಾಣಿಸಿಕೊಳ್ಳುತ್ತಿಲ್ಲ ಎನ್ನಲಾಗಿದೆ. ಅಭಿವೃದ್ಧಿ ಸೇರಿದಂತೆ ವಿವಿಧ ಉಡಾಫೆಗಳ ಉತ್ತರ , ನಾಯಕರುಳಿಗೆ ಮಾತ್ರವೇ ಸೌಲಭ್ಯಗಳು ಸಿಗುವುದು, ಕಾರ್ಯಕರ್ತರು ಪ್ರತೀ ಬಾರಿ ಮತ ಕೇಳಲು ಹೋದಾಗ ನೀಡಿರುವ ಭರವಸೆ ಈಡೇರದೇ ಇರುವುದು, ಹಿಂದುತ್ವದ ರಕ್ಷಣೆ ಎನ್ನುತ್ತಾ ವಿವಿಧ ಕೇಸು ಹಾಕಿಸಿಕೊಂಡವರ ಕಡೆಗೆ ಯಾವುದೇ ಸಹಾಯವೂ ಇಲ್ಲದೆ ಇರುವುದು  ಕೂಡಾ ಅಸಮಾಧಾನಗಳಿಗೆ ಕಾರಣವಾಗಿದೆ. ಕೆಲವೇ ಕೆಲವು ನಾಯಕರಿಂದ ಸುಳ್ಯದ ಬಿಜೆಪಿ ಒಡೆದ ಮನೆಯಾಗುತ್ತಿದೆ ಎನ್ನುವುದು ಗ್ರಾಮೀಣ ಭಾಗದ ಬಿಜೆಪಿ ಕಾರ್ಯಕರ್ತರ  ಆರೋಪ. ಇದಕ್ಕಿಂತಲೂ ಮುಖ್ಯವಾಗಿ ಬಿಜೆಪಿಯಲ್ಲಿ ಅನೇಕ ವರ್ಷಗಳಿಂದ ದುಡಿಯುತ್ತಿದ್ದ ಮಂದಿ ನೋವು ಹಂಚಿಕೊಳ್ಳುತ್ತಾರೆ.  ಅನೇಕ ವರ್ಷಗಳಿಂದ ದೀನ್‌ ದಯಾಳ್‌ ಅವರ ಸಿದ್ದಾಂತಗಳಿಂದ, ಸಂಘಪರಿವಾರದ ಅನೇಕ ಹಿರಿಯರ ಆದರ್ಶಗಳಿಂದ ಪ್ರೇರಣೆಗೊಂಡು ಹೊಟ್ಟೆ-ಬಟ್ಟೆ ಕಟ್ಟಿ, ಸ್ವಂತ ದುಡಿಮೆಯ ಹಣ ಹಾಕಿ ಬೆಳೆಸಿದ ಪಕ್ಷ, ಸಂಘಟನೆ ಇಂದು ಮಾದರಿಯಾಗಿರಬೇಕಾಗಿತ್ತು, ಆದರೆ ಈ ಸ್ಥಿತಿಗೆ ಬರಬಾರದಿತ್ತು ,ಎಂದೂ ನೋವು ತೋಡಿಕೊಳ್ಳುತ್ತಿರುವುದು  ಕಂಡುಬರುತ್ತಿದೆ.

ಇದೆಲ್ಲಾ ಕಾರಣಗಳಿಂದ ಸುಳ್ಯದಲ್ಲಿ ಬಿಜೆಪಿಯೊಳಗೆ ಈಗ ಅಸಮಾಧಾನಗಳೂ ಬಹಿರಂಗವಾಗಿ ಕಾಣದೇ ಇದ್ದರೂ ಅಲ್ಲಲ್ಲಿ ಚರ್ಚೆಗಳು ಆರಂಭವಾಗಿದೆ., ಈಗ ಪ್ರತ್ಯೇಕ ಸಭೆ ನಡೆಯುವ ಮೂಲಕ ಬಹಿರಂಗವಾಗಿದೆ. ಸಂಘಟನೆಯ ನೆಲದಲ್ಲಿ ವಿಘಟನೆ ಆರಂಭವಾಯಿತೇ ಅಥವಾ ಶಮನವಾದೀತೇ ? ಗ್ರಾಪಂ ಚುನಾವಣೆ ಹತ್ತಿರ ಬರುವುದರಿಂದ ಶಮನ ಹೇಗಾದೀತು ಎನ್ನುವುದು  ಈಗಿನ ರಾಜಕೀಯ ಚರ್ಚೆ.

 

 

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಿರರ್‌ ವಿಶ್ಲೇಷಣೆ

ಸಮಾಜದ ಚರ್ಚೆಯ ಪ್ರತಿಬಿಂಬ

ಇದನ್ನೂ ಓದಿ

ಹರಿಯಾಣ | 800 ಮೆ.ವ್ಯಾ.ವಿದ್ಯುತ್ ಉತ್ಪಾದನಾ ಘಟಕಕ್ಕೆ ಪ್ರಧಾನಿ ಮೋದಿ ಚಾಲನೆ
April 14, 2025
7:40 PM
by: The Rural Mirror ಸುದ್ದಿಜಾಲ
ಧಾರವಾಡ | ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ  ಕ್ರಮವಹಿಸಬೇಕು – ಸಚಿವ ಸಂತೋಷ ಲಾಡ್
April 8, 2025
9:55 AM
by: The Rural Mirror ಸುದ್ದಿಜಾಲ
ರಾಜ್ಯದಲ್ಲಿ 100 ಹೊಸ ವಿದ್ಯುತ್ ಉಪ ಕೇಂದ್ರ ಸ್ಥಾಪಿಸಲು ನಿರ್ಧಾರ | ಇಂಧನ ಸಚಿವ ಕೆ.ಜೆ.ಜಾರ್ಜ್
April 7, 2025
6:34 AM
by: The Rural Mirror ಸುದ್ದಿಜಾಲ
ದೇಶದ ಜಿಡಿಪಿ 4.5ಲಕ್ಷ ಕೋಟಿ ರೂಪಾಯಿ ಏರಿಕೆ ಸಾಧ್ಯತೆ | ನಿರ್ಮಲಾ ಸೀತಾರಾಮನ್‌ ಅಭಿಪ್ರಾಯ
April 7, 2025
6:28 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group