ಸುಳ್ಯ ತಾಲೂಕು ವಿಪ್ರ ಸಮಾವೇಶ | ಧಾರ್ಮಿಕ-ವೈಚಾರಿಕ ಚಿಂತನೆಗಳು ಆರಂಭ |

December 10, 2023
7:20 PM
ಸುಳ್ಯ ತಾಲೂಕು ಬ್ರಾಹ್ಮಣ ಸಂಘದ ವತಿಯಿಂದ ತಾಲೂಕು ವಿಪ್ರ ಸಮಾವೇಶ ನಡೆಯಿತು.

ಸುಳ್ಯ ತಾಲೂಕು ಬ್ರಾಹ್ಮಣ ಸಂಘದ ವತಿಯಿಂದ ತಾಲೂಕು ವಿಪ್ರ ಸಮಾವೇಶವು ಸುಳ್ಯ  ತಾಲೂಕಿನ ಕಲ್ಮಡ್ಕದ ಶ್ರೀರಾಮ ಭಜನಾ ಮಂದಿರದಲ್ಲಿ ಎರಡು ದಿನಗಳ ಕಾಲ ನಡೆಯಿತು. ಎರಡು ದಿನಗಳ ಸಮಾವೇಶದಲ್ಲಿ ಬ್ರಾಹ್ಮಣರ ಆಚರಣೆ ಹಾಗೂ ವೈಚಾರಿಕ ದೃಷ್ಟಿಕೋನದ ಚಿಂತನೆಗಳು ನಡೆದವು.

Advertisement

ಕಳೆದ ಕೆಲವು ಸಮಯಗಳಿಂದ ಸುಳ್ಯ ತಾಲೂಕು ವಿಪ್ರ ಸಮಾವೇಶ ನಡೆಯುತ್ತಿದೆ. ಈ ಬಾರಿಯ ಸಮಾವೇಶವು ಹೆಚ್ಚು ಗಮನ ಸೆಳೆಯಿತು. ವಿವಿಧ ಗೋಷ್ಠಿಗಳ ಮೂಲಕ ಚಿಂತನೆಗಳು ನಡೆದವು. ಬ್ರಾಹ್ಮಣರ ವಲಸೆ ಬಗ್ಗೆ ಡಾ.ಎಂ ಪ್ರಭಾಕರ ಜೋಷಿ ಮಾತನಾಡಿದರೆ, ಸಾಹಿತ್ಯದಲ್ಲಿ ಸುಳ್ಯ ಬ್ರಾಹ್ಮಣರ ಕೊಡುಗೆಗಳ ಬಗ್ಗೆ ದೀಪಾ ಫಡ್ಕೆ ಅವರು ಮಾತನಾಡಿದರು. ವೈದ್ಯಕೀಯ ಸೇವೆಯ ಬಗ್ಗೆ ಡಾ.ಕಿಶನ್‌ ರಾವ್‌ ಬಾಳಿಲ ಮಾತನಾಡಿದರು.

ಬ್ರಾಹ್ಮಣರಲ್ಲಿ ಆಚರಣೆಯ ಬಗ್ಗೆ ಮಾತನಾಡಿದ ಡಾ.ವೀಣಾ ಫಾಲಚಂದ್ರ, ಯಾವುದೇ ಕೆಲಸಗಳಲ್ಲಿ ಬ್ರಾಹ್ಮಣರು ತಮ್ಮ ತನವನ್ನು ಉಳಿಸಿಕೊಳ್ಳಬೇಕು. ಒಟ್ಟು 8 ಗುಣಗಳಲ್ಲಿ ಬ್ರಾಹ್ಮಣರ ಬದುಕು ಇರುತ್ತದೆ. ಬಾಹ್ಯ ಕೆಲಸಗಳಲ್ಲಿ ಇದು ಕೆಲಸ ಮಾಡುತ್ತದೆ.  ಬ್ರಾಹ್ಮಣರ ಮೂಲ ಸತ್ವವಾದ ಪರಿಗ್ರಹ ಸೇರಿದಂತೆ ಎಲ್ಲಾ ಅಗತ್ಯ ಇಲ್ಲದ ಯಾವುದನ್ನೂ ಸ್ವೀಕರಿಸಬಾರದು. ಈ ಎಲ್ಲಾ ಕಾರಣದಿಂದಲೇ ಬ್ರಾಹ್ಮಣರು ಎಲ್ಲಾ ಕ್ಷೇತ್ರದಲ್ಲೂ ತನ್ನದೇ ಆದ ಛಾಪನ್ನು ಮೂಡಿಸುತ್ತಾರೆ ಎಂದರು.

ಶಿಕ್ಷಕನಾಗಿ ಬ್ರಾಹ್ಮಣರ ಕೊಡುಗೆಯ ಬಗ್ಗೆ ಮಾತನಾಡಿದ ಪ್ರಕಾಶ್‌ ಮೂಡಿತ್ತಾಯ, ಸಮಾಜದಲ್ಲಿ ಶಿಕ್ಷಕರ ಪಾತ್ರ ಬಹುದೊಡ್ಡದು. ಅಂತಹ ಶಿಕ್ಷಕರಾಗಿ ಬ್ರಾಹ್ಮಣರು ಅತ್ಯಂತ ದೊಡ್ಡ ಕೊಡುಗೆಯನ್ನು ಸಮಾಜಕ್ಕೆ ನೀಡಿದ್ದಾರೆ. ಉತ್ತಮ ಶಿಕ್ಷಕರ ಪಟ್ಟಿ ಮಾಡಲು ಹೊರಟರೆ ಅಂತಹ ಪಟ್ಟಿಯೇ ದೊಡ್ಡದಾದೀತು ಎಂದರು.

ಸಮಾಜದಲ್ಲಿ ಯುವ ಬ್ರಾಹ್ಮಣರ ಕೊಡುಗೆಗಳ ಬಗ್ಗೆಯೂ ಗೋಷ್ಠಿ ನಡೆಯಿತು. ಈ ಗೋಷ್ಠಿಯ ಅಧ್ಯಕ್ಷತೆಯನ್ನು ಸುಬ್ರಾಯ ವಿ ವಹಿಸಿದ್ದರು. ಕೃಷ್ಣ ರಾವ್‌, ವಿ ಪಿ ಹೊಳ್ಳ, ಸುಧಾಕರ ನೆಟ್ಟಾರು ಭಾಗವಹಿಸಿದರು.  ಇದೇ ಸಂದರ್ಭ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮವನ್ನು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಗಿರೀಶ್‌ ಭಾರಧ್ವಾಜ್‌ ಉದ್ಘಾಟಿಸಿದರು. ಸಂಪುಟ ನರಸಿಂಹ ಸ್ವಾಮಿ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು.

ಅವನಿ ಕೋಡಿಬೈಲು ಅವರಿಂದ ನೃತ್ಯ

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

ಇದನ್ನೂ ಓದಿ

ಭಾರತದಲ್ಲಿ ಪ್ರಪ್ರಥಮವಾಗಿ ಮುಳಿಯದ ಮತ್ತೊಂದು ಹೊಸತನ | ವಜ್ರಗಳ LGD ಟೆಸ್ಟಿಂಗ್ ಮಿಷನ್
April 15, 2025
3:15 PM
by: The Rural Mirror ಸುದ್ದಿಜಾಲ
ಹವಾಮಾನ ಬದಲಾವಣೆಯ ಪರಿಣಾಮ | ಬಾಂಗ್ಲಾದಲ್ಲಿ ಹೆಚ್ಚಾಗಲಿರುವ ಚಂಡಮಾರುತ |
April 15, 2025
2:16 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 15-04-2025 | ಕೆಲವು ಕಡೆ ತುಂತುರು ಮಳೆ | ಎ.19 ರಿಂದ ಕೆಲವು ಕಡೆ ಉತ್ತಮ ಮಳೆ ಸಾಧ್ಯತೆ |
April 15, 2025
11:54 AM
by: ಸಾಯಿಶೇಖರ್ ಕರಿಕಳ
ಬುಧನ ಚಲನೆ | 3 ರಾಶಿಗೆ ಸಂಪತ್ತಿನ ಮಳೆ, ಯಶಸ್ಸು
April 15, 2025
7:43 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group