ಸುಳ್ಯ ಕಾಂಗ್ರೆಸ್‌ನಲ್ಲಿ ಸಂಚಲನ ಮೂಡಿಸಿದ ಅಕ್ರಮ ಸಕ್ರಮ ಸಮಿತಿ…!‌ | ಸುಳ್ಯದ ಕಾಂಗ್ರೆಸ್‌ ಸ್ಥಿತಿಯ ಕೈಗನ್ನಡಿ…? |

September 14, 2023
11:50 AM

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಆಡಳಿತದಲ್ಲಿದೆ. ಅದೂ ಬಹುಮತದ ಆಡಳಿತ. ಅಕ್ರಮ ಸಕ್ರಮ ಸಮಿತಿಗೆ ಸದಸ್ಯರ ನೇಮಕಾತಿಯೂ ನಡೆದಿದೆ. ಆದರೆ ಆಡಳಿತ ಪಕ್ಷದ ಕಾಂಗ್ರೆಸ್‌ ಅಲ್ಲ, ಬಿಜೆಪಿಯ ಕಾರ್ಯಕರ್ತರು…!  ಈ ನಡುವೆಯೇ ಸುಳ್ಯದಲ್ಲಿ ಕಾಂಗ್ರೆಸ್-ಬಿಜೆಪಿ ನಡುವೆ ಪತ್ರಿಕಾ ಹೇಳಿಕೆಯ ಸಮರವೂ ನಡೆಯುತ್ತಿದೆ…!. ಸುಳ್ಯದ ಕಾಂಗ್ರೆಸ್‌ ಸ್ಥಿತಿಗೆ ಇದೊಂದು ಕೈಗನ್ನಡಿಯೇ…? 

Advertisement

ಸುಳ್ಯ ವಿಧಾನಸಭಾ ಕ್ಷೇತ್ರದ ಬಗರ್‌ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಗೆ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಿಸಿ ಸರ್ಕಾರ ಆದೇಶ ಹೊರಡಿದ್ದು, ವಿಶೇಷವೆಂದರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರುವಾಗ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಇದರ ಸದಸ್ಯರಾದ್ದು ಬಿಜೆಪಿಗರು. ಬುಧವಾರ ಹೊರಡಿಸಲಾದ ಅಧಿಸೂಚನೆಯಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷರಾಗಿ, ಬಿಜೆಪಿ ಮಂಡಲ ಸಮಿತಿ ಪ್ರಧಾನ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ, ಅರಂತೋಡಿನ ಬಿಜೆಪಿ ನಾಯಕಿ ಭಾರತಿ ಪುರುಷೋತ್ತಮ, ನ್ಯಾಯವಾದಿ ಜಗದೀಶ್ ಡಿ.ಪಿ. ಅವರನ್ನು ನೇಮಿಸಲಾಗಿತ್ತು.ಈ ಆದೇಶ ತಿಳಿಯುತ್ತಿದ್ದಂತೆಯೇ  ಸುಳ್ಯ ಕಾಂಗ್ರೆಸ್‌ ನಲ್ಲಿ ಸಂಚಲನ ಸೃಷ್ಟಿಯಾಗಿದೆ.

ಯಾವ ಪಕ್ಷದ ಸರ್ಕಾರ ಆಡಳಿತದಲ್ಲಿರುತ್ತದೋ ಆ ಪಕ್ಷದ ಬೆಂಬಲಿತರು ಅಕ್ರಮ ಸಕ್ರಮ ಸಮಿತಿಗೆ ಸದಸ್ಯರಾಗುತ್ತಾರೆ. ಕ್ಷೇತ್ರದಲ್ಲಿ ಯಾವ ಪಕ್ಷದ ಶಾಸಕರಿದ್ದರೂ ಅವರು ಅಧ್ಯಕ್ಷರಾಗಿರುತ್ತಾರೆ. ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದಾಗ ಇಂತಹ ಎಡವಟ್ಟುಗಳು ನಡೆಯದಂತೆ ಎಚ್ಚರಿಕೆ ವಹಿಸುತ್ತಿತ್ತು.

ಈಗ  ಅಕ್ರಮ ಸಕ್ರಮ ಸಮಿತಿಯಲ್ಲಿ ಕಾಂಗ್ರೆಸ್ಸಿಗರ ಹೆಸರಿಲ್ಲದಿರುವುದರಿಂದ ಒಂದು ಬಣ ಇನ್ನೊಂದು ಬಣದ ಮುಖಂಡರ ಮೇಲೆ ಆರೋಪ ಹೊರಿಸಿದೆ.ಸುಳ್ಯದ ಕಾಂಗ್ರೆಸ್‌ ಸ್ಥಿತಿ ಇದು. ಅಕ್ರಮ ಸಕ್ರಮ ಸಮಿತಿಗೆ ಸದಸ್ಯರ ಹೆಸರು ಕಳುಹಿಸಿಕೊಡುವಂತೆ ಸರ್ಕಾರದಿಂದ ಎಲ್ಲ ತಹಸೀಲ್ದಾರರಿಗೆ ಸುತ್ತೋಲೆ ಬರುತ್ತದೆ.ಆದರೆ ಕಾಂಗ್ರೆಸ್ಸಿಗರು ಪಟ್ಟಿ ಕಳುಹಿಸುವಾಗ ತಡವಾಗಿತ್ತೆಂದು ಹೇಳಲಾಗಿದ್ದು, ಶಾಸಕಿಯವರು ನೀಡಿದ ಪಟ್ಟಿಯೇ ಅಂತಿಮವಾಗಿದೆ ಎಂದು ತಿಳಿದುಬಂದಿದೆ.

ಸುಳ್ಯದ ಅಭಿವೃದ್ಧಿ ಹಿನ್ನಡೆಗೂ ಇದೇ ಕಾರಣವಾಗಿತ್ತು. ಚುನಾವಣೆಯ ನಂತರ ಸುಳ್ಯದಲ್ಲಿ ಕಾಂಗ್ರೆಸ್‌ ಪಕ್ಷವು ಮುಂದಿನ ಐದು ವರ್ಷಗಳಿಗೂ ಮೌನವಾಗಿರುವುದು  ಅಭಿವೃದ್ಧಿಗೆ ಬಹುದೊಡ್ಡ ಹಿನ್ನಡೆಯಾಗಿದೆ. ಯಾವ ರಚನಾತ್ಮಕ ವಿರೋಧಗಳೂ ಸುಳ್ಯದಲ್ಲಿ ಕಾಣುತ್ತಿಲ್ಲ, ಈ ನಡುವೆ ಕಾಂಗ್ರೆಸ್‌ ಒಳಗಿನ ಬಣಗಳೂ ಬಿಜೆಪಿಗೆ ವರದಾನವಾಗಿದೆ.

Advertisement

ಈ ನಡುವೆ ಎರಡು ದಿನಗಳ ಹಿಂದೆ ಬಿಜೆಪಿ ವತಿಯಿಂದ ನಡೆದ ಪ್ರತಿಭಟನೆಗೆ ಕಾಂಗ್ರೆಸ್‌ ಟೀಕಿಸಿತ್ತು, ಇದಕ್ಕೆ ಬಿಜೆಪಿ ಖಾರವಾಗಿ ಪ್ರತಿಕ್ರಿಯೆ ಕೂಡಾ ನೀಡಿತ್ತು, ಅದರಲ್ಲಿ ಕಾಂಗ್ರೆಸ್ ನ ಬಡಾಯಿ ರಾಜ್ಯ ನಾಯಕರಿಗೆ ಬಡವರ ಕಾಳಜಿ, ಸಾಮಾಜಿಕ ಉದ್ದಾರದ ಪಾಠ ಮಾಡಿ , ಸುಳ್ಯ ಬಿಜೆಪಿಗೆ ನಿಮ್ಮಂತವರ ನೈತಿಕತೆ ಪಾಠ ಅಗತ್ಯವಿಲ್ಲ ಎಂದು ಹೇಳಿದೆ.

ಕಾಂಗ್ರೆಸ್ ನೇತೃತ್ವದ ದಿಕ್ಕು ದೆಸೆ ಇಲ್ಲದ ರಾಜ್ಯ ಸರ್ಕಾರದ ವ್ಯವಸ್ಥೆಯನ್ನು ಗಮನಿಸುವಾಗ ವಿರೋಧ ಪಕ್ಷದ ನಾಯಕನೇ ಬೇಕು ಅಂತ ಇಲ್ಲ ಬಿಜೆಪಿ ಶಾಸಕರಲ್ಲಿ ಒಬ್ಬೊಬ್ಬರೇ ಸಾಕು ಕಾಂಗ್ರೆಸಿಗರೇ ನಿಮ್ಮ ಹಳಿ ತಪ್ಪಿರುವ ಆಡಳಿತ ವ್ಯವಸ್ಥೆಯನ್ನು ತಿವಿಯಲು.  ಕಾಂಗ್ರೆಸ್ ನಲ್ಲೇ ವಿರೋಧಿ ನಾಯಕರಿದ್ದಾರಲ್ಲ ಅವರೇ ಸಾಕು ಎಂದು ಛೇಡಿಸಿತ್ತು. ಸುಳ್ಯದ ಕಾಂಗ್ರೆಸ್ಸಿನಿಂದ ಸುಳ್ಯ ಬಿಜೆಪಿಗೆ ನೈತಿಕ ಪಾಠ ಹೇಳಿಸಿಕೊಳ್ಳುವಂತಹ ಪರಿಸ್ಥಿತಿ ಬಂದಿಲ್ಲ ಎಂದು ಸುಳ್ಯ ಮಂಡಲ ಬಿಜೆಪಿ ನಾಯಕರು ಹೇಳಿದ್ದರು.

Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 14-07-2025 | 10 ದಿನಗಳವರೆಗೂ ಕರಾವಳಿ ಜಿಲ್ಲೆಗಳ ಬಹುತೇಕ ಭಾಗಗಳಲ್ಲಿ ಮಳೆ | ಜುಲೈ 16 ರಿಂದ ರಾಜ್ಯದೆಲ್ಲೆಡೆ ಉತ್ತಮ ಮಳೆ |
July 14, 2025
1:02 PM
by: ಸಾಯಿಶೇಖರ್ ಕರಿಕಳ
ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ಧಾತ್ರಿ ಕೆ ರಾವ್
July 14, 2025
7:47 AM
by: ದ ರೂರಲ್ ಮಿರರ್.ಕಾಂ
ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ಭವಿಷ್ಯ ಕೆ ಪಿ
July 14, 2025
7:40 AM
by: ದ ರೂರಲ್ ಮಿರರ್.ಕಾಂ
ಜು.16 ರಿಂದ ಕರಾವಳಿ-ಮಲೆನಾಡು ಭಾಗದಲ್ಲಿ ಭಾರೀ ಮಳೆ ಎನ್ನುತ್ತಿದೆ ಹವಾಮಾನ ವರದಿ
July 14, 2025
7:14 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group