ಚುನಾವಣಾ ಕಣ | Sullia | ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಕಣದಲ್ಲಿ | ಏನಾದೀತು ಸುಳ್ಯದಲ್ಲಿ | ಇದುವರೆಗಿನ Updates … |

April 20, 2023
11:17 AM

ಸುಳ್ಯ ವಿಧಾನ ಸಭಾ ಕ್ಷೇತ್ರವು ಈ ಬಾರಿ ಕುತೂಹಲದ ಕ್ಷೇತ್ರಗಳಲ್ಲಿ  ಒಂದು. 30 ವರ್ಷಗಳಿಂದ ಶಾಸಕರಾಗಿ, ಕಳೆದ ಬಾರಿ ಸಚಿವರಾಗಿದ್ದ ಅಂಗಾರ ಅವರ ಬದಲಾವಣೆ ಬಳಿಕದ ಕ್ಷೇತ್ರ. ಕಳೆದ ಕೆಲವು ಸಮಯಗಳಿಂದ ಜನರಿಂದ ಮತದಾನ ಬಹಿಷ್ಕಾರ ಕೇಳಿರುವ ಕ್ಷೇತ್ರ. ಕಾಂಗ್ರೆಸ್‌ ಈ ಬಾರಿಯಾದರೂ ಗೆಲ್ಲಲೇಬೇಕೆಂದು ಹಠ ಹಿಡಿದಿರುವ ಕ್ಷೇತ್ರ. ಮೊದಲ ಬಾರಿಗೆ ಆಮ್‌ ಆದ್ಮಿ ಪಕ್ಷವು ಪೈಪೋಟಿಗೆ ಇಳಿದಿರುವ ಕ್ಷೇತ್ರ… ಹೀಗೇ ಈ ಎಲ್ಲಾ ಬೆಳವಣಿಗೆಗಳ ಕಾರಣದಿಂದ ಸುಳ್ಯ ಈ ಬಾರಿ ಕುತೂಹಲ ಮೂಡಿಸಿದೆ. ಇದುವರೆಗಿನ ಬೆಳವಣಿಗೆ ಹೇಗಿದೆ , ಹಾಗಿದ್ದರೆ?

Advertisement
Advertisement
Advertisement

ಸುಳ್ಯದಲ್ಲಿ ಕಳೆದ 30 ವರ್ಷಗಳಿಂದ ಬಿಜೆಪಿ ಗೆಲುವು ಸಾಧಿಸುತ್ತಿದೆ. ಕಳೆದ 5 ವರ್ಷಗಳಿಂದ ಇಲ್ಲಿ ಅಭಿವೃದ್ಧಿಯ ಬಗ್ಗೆ ಚರ್ಚೆ ಆರಂಭವಾಯಿತು. ಈಚೆಗೆ ಎರಡು ವರ್ಷಗಳಿಂದ ಅಭಿವೃದ್ಧಿಯ ಬಗ್ಗೆಯೇ ಹೋರಾಟ ನಡೆಯಿತು. ಅಭಿವೃದ್ಧಿ ಆಗದೇ ಇರಲು ಶಾಸಕರೇ ಕಾರಣ ಎಂದೂ ವಿರೋಧ ಆರಂಭವಾಯಿತು, ಈಚೆಗೆ ಸುಮಾರು 18 ಕಡೆಗಳಲ್ಲಿ ಮತದಾನ ಬಹಿಷ್ಕಾರ ಸೇರಿದಂತೆ ಪ್ರತಿಭಟನೆಗಳು ಕಂಡುಬಂದವು. ಕೊನೆಗೆ ಅಭ್ಯರ್ಥಿ ಬದಲಾವಣೆ ನಡೆಯಿತು. ಅದಾದ ಬಳಿಕ ಇನ್ನೊಂದು ಬೆಳವಣಿಗೆ ನಡೆಯಿತು. ಅಂಗಾರ ಅವರೇ ಅಸಮಾಧಾನ ಹೊರಹಾಕಿ, ಆ ಬಳಿಕ ಮತ್ತೆ ಸಕ್ರಿಯವಾಗುತ್ತೇನೆ ಎನ್ನುವ ಮೂಲಕ ಪ್ರಕರಣ ತಣ್ಣಗಾದರೂ, ಒಳಗಿನ ಲೆಕ್ಕಾಚಾರಗಳು ಬೇರೆಯೇ ನಡೆಯುತ್ತಿದೆ. ಈಗಾಗಲೇ ಸಮುದಾಯದ ಆಧಾರದಲ್ಲಿ ಚರ್ಚೆ ನಡೆಯಲು ಆರಂಭವಾಗಿದೆ. ಪಕ್ಷೇತರವಾಗಿಯೂ ಅಭ್ಯರ್ಥಿಗಳು ಕಣಕ್ಕೆ ಇಳಿಯುವ ಸೂಚನೆ ಲಭ್ಯವಾಗಿದೆ.

Advertisement

ಕ್ಷೇತ್ರದಲ್ಲಿ ಹಾಲಿ ಶಾಸಕರ ವಿರುದ್ಧವಾಗಿ ಬಲವಾದ ವಿರೋಧ ಕಂಡುಬಂದರೂ ಕಾಂಗ್ರೆಸ್‌ ಮತ ಸೆಳೆಯುವಲ್ಲಿ, ಜನರ ಪರವಾಗಿ ಧ್ವನಿ ಎತ್ತುವಲ್ಲಿ ವಿಫಲವಾಗಿತ್ತು. ಹಾಗಿದ್ದರೂ ಈ ಬಾರಿ ಕಾಂಗ್ರೆಸ್‌ ಪರವಾದ ಒಲವು ಹಲವು ಕಡೆ ಇತ್ತು. ಆದರೆ  ಕಾಂಗ್ರೆಸ್‌ ಒಳಗಿನ ಭಿನ್ನಾಭಿಪ್ರಾಯವು ಈ ಅವಕಾಶ ಪಡೆಯುವಲ್ಲಿ ಹಿನ್ನಡೆ ಅನುಭವಿಸಿದೆ. ಈಗ ಒಂದಾಗಿ ಪ್ರಚಾರ ಕಾರ್ಯ ನಡೆಸುತ್ತಿದ್ದರೂ ಒಳಗಿನ ಬೇಗುದಿ ಕಂಡುಬರುತ್ತಿದೆ. ಹೀಗಾಗಿ ಈಗ ಕಾಂಗ್ರೆಸ್‌ ವ್ಯವಸ್ಥಿತ ರೀತಿಯಲ್ಲಿ ಒಂದಾಗಿ ಪ್ರಚಾರ ಕಾರ್ಯ ನಡೆಸಿದರೆ ಈ ಬಾರಿ ಸುಳ್ಯದಲ್ಲಿ ಬದಲಾವಣೆಯ ವಾತಾವರಣ ಇದೆ.

ಇನ್ನು ಆಮ್‌ ಆದ್ಮಿ ಪಕ್ಷವು ಹೊಸ ರಾಜಕೀಯ ಅಲೆಯನ್ನು ಸೃಷ್ಟಿ ಮಾಡುತ್ತಿದೆ. ತನ್ನದೇ ಆದ ಮತದಾರರನ್ನು ಹೊಂದಿದೆ. ಎರಡೂ ಪಕ್ಷಗಳಿಂದ ಬೇಸತ್ತ ಮತದಾರರು ಎಎಪಿಯ ಕಡೆಗೆ ಒಲವು ಹೊಂದಿದ್ದಾರೆ. ಈ ಮತಗಳೂ ಎಎಪಿ ಬೆಳವಣಿಗೆಗೆ ಕಾರಣವಾಗಲಿದೆ. ಮೊದಲ ಚುನಾವಣೆಯಲ್ಲಿಯೇ ಉತ್ತಮ ಸ್ಪಂದನೆಯನ್ನು ಎಎಪಿ ಹೊಂದಿದೆ.

Advertisement

ಜೆಡಿಎಸ್‌ , ಪ್ರಜಾಕೀಯ ಪಕ್ಷಗಳು ಕೂಡಾ ಸುಳ್ಯದಲ್ಲಿ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದೆ. ಈ ನಡುವೆ ಪಕ್ಷೇತರ ಅಭ್ಯರ್ಥಿ ಕಣಕ್ಕೆ ಇಳಿಯುವ ಸೂಚನೆ ಇದೆ. ಸೋಮವಾರದಿಂದ ಚುನಾವಣಾ ಕಣದಲ್ಲಿನ ಸ್ಪಷ್ಟ ಚಿತ್ರಣಗಳು ಗೋಚರವಾಗಲಿದೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 15-01-2025 | ಕೆಲವು ಕಡೆ ಇಂದೂ ತುಂತುರು ಮಳೆ ಸಾಧ್ಯತೆ |
January 15, 2025
1:00 PM
by: ಸಾಯಿಶೇಖರ್ ಕರಿಕಳ
ರಾಜ್ಯದಿಂದ 3.5 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಖರೀದಿಗೆ ಕೇಂದ್ರ ಸರ್ಕಾರ ಸಮ್ಮತಿ
January 15, 2025
6:47 AM
by: The Rural Mirror ಸುದ್ದಿಜಾಲ
ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮಕ್ಕೆ  ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಚಾಲನೆ
January 15, 2025
6:42 AM
by: The Rural Mirror ಸುದ್ದಿಜಾಲ
ಪ್ರಶ್ನೆಗಳಿಗೆ ಉತ್ತರ ಕೊಡಬೇಕಾದವರು ಕೊಡದಿದ್ದರೆ ಏನು ಮಾಡುವುದು..?
January 15, 2025
6:35 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror