ಸುಳ್ಯ ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಸನದುದಾನ ಮಹಾ ಸಮ್ಮೇಳನ ಹಾಗೂ ನುಸ್ರತ್ 42ನೇ ವಾರ್ಷಿಕ ಸಮಾರಂಭ

January 28, 2026
3:48 PM

ಸುಳ್ಯದ ಎಲಿಮಲೆ ಇಕ್ರಾಮುಸ್ಸುನ್ನ ಸನದುದಾನ ಮಹಾಸಮ್ಮೇಳನ ಹಾಗೂ ನುಸ್ರತುಲ್ ಇಸ್ಲಾಂ ಎಸೋಸಿಯೇಷನ್ ಇದರ 42 ನೇ ವಾರ್ಷಿಕ ಸಮಾರಂಭವು ನಾಳೆ ಜನವರಿ 29 ಮತ್ತು 30 ರಂದು ಎಲಿಮಲೆ ಮಸೀದಿ ವಠಾರದಲ್ಲಿ ನಡೆಯಲಿದೆ.

Advertisement
Advertisement

ಸೈಯಿದ್ ಮುಹ್ಸಿನ್ ಸೈದಲವಿಕೋಯ ಅಲ್ ಬಖಾರಿ ಕುಂಜಿಲಂ ತಂಙಳ್ ಮುದರ್ರಿಸ್ ಎಲಿಮಲೆ ಯವರ ನೇತೃತ್ವದಲ್ಲಿ ನಡೆಸುತ್ತಿರುವ ಇಕ್ರಾಮುಸ್ಸುನ್ನ ದರ್ಸ್ ಎಲಿಮಲೆ ಇದರ ಎರಡನೇ ಸನದುದಾನ ಮಹಾಸಮ್ಮೇಳನ ಹಾಗೂ ಎಲಿಮಲೆ ಯುವಕರ ಸಂಘಟನೆಯಾದ ನುಸ್ರತುಲ್ ಇಸ್ಲಾಂ ಎಸೋಸಿಯೇಷನ್ ಇದರ 42 ನೇ ವಾರ್ಷಿಕ ಸಮಾರಂಭ ಕಾರ್ಯಕ್ರಮವು  ಗುರುವಾರ ಮತ್ತು ಶುಕ್ರವಾರ ಇಕ್ರಾಮುಸ್ಸುನ್ನ ಕ್ಯಾಂಪಸ್ ಎಲಿಮಲೆಯಲ್ಲಿ ಜರುಗಲಿದೆ.

ಜನವರಿ 29 ಗುರುವಾರ ಬೆಳಿಗ್ಗೆ ಧ್ವಜಾರೋಹಣದೊಂದಿಗೆ ಪ್ರಾರಂಭವಾಗುವ ಕಾರ್ಯಕ್ರಮ ಮಹಿಳೆಯರಿಗಾಗಿ ವಿಶೇಷ ತರಬೇತಿ ಶಿಬಿರ, ಎಲಿಮಲೆ ತಂಗಳ್ ರವರ ಪಿತಾಮಹರ ಆಂಡ್ ನೇರ್ಚೆ, ಬೃಹತ್ ಬುರ್ಧಾ ಮಜ್ಲಿಸ್, ಸಾರ್ವಜನಿಕರಿಗೆ ಉಚಿತ ಆರೋಗ್ಯ ಶಿಬಿರ, ಜಿಸಿಸಿ ಎಲಿಮಲೆ ಗಲ್ಫ್ ಮೀಟ್, ಹಳೆ ವಿಧ್ಯಾರ್ಥಿಗಳ ಅಲುಮ್ನಿ ಮೀಟ್ ಧಾರ್ಮಿಕ ಉಪನ್ಯಾಸ ಮುಂತಾದ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

ಬಹು: ನೂರುಸ್ಸಾದಾತ್ ಬಾಯಾರ್ ತಂಙಳ್, ಝೈನುಲ್ ಆಬಿದೀನ್ ತಂಙಳ್ ದುಗಲಡ್ಕ, ಸೈದಲವಿಕೋಯ ಅಲ್ ಬಖಾರಿ ಕುಂಜಿಲಂ ತಂಙಳ್, ಮಾಣಿ ಉಸ್ತಾದ್, ಕರ್ನಾಟಕ ವಿಧಾನಸಬಾಧ್ಯಕ್ಷರಾದ ಜನಾಬ್ ಯುಟಿ ಖಾದರ್ ಫರೀದ್, ಟಿಎಂ ಶಹೀದ್, ಪ್ರಖ್ಯಾತ ಬುರ್ದಾ ಗಾಯಕರಾದ ಕಾಸಿಮ್ ಕಾಮಿಲ್ ಸಖಾಫಿ, ಸಮದ್ ಸಖಾಫಿ, ಅಝರ್ ಕಲ್ಲೂರು, ಆಸಿಫ್, ಮಿಕ್ದಾದ್ ಹಾಗೂ ಕರ್ನಾಟಕದ ಪ್ರಖ್ಯಾತ ನಅತ್ ಗಾಯಕರಾದ ನಬೀಲ್ ಬರಕಾತಿ ಬೆಂಗಳೂರು ಹಾಗೂ ಸಾಮಾಜಿಕ ರಾಜಕೀಯ ಧಾರ್ಮಿಕ ನೇತಾರರು ಭಾಗವಹಸದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.

Advertisement
Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಿರರ್‌ ಡೆಸ್ಕ್

the rural mirror news

ಇದನ್ನೂ ಓದಿ

ಸರ್ಕಾರಿ ಶಾಲೆ ಮಕ್ಕಳಿಗೆ ಚೆಸ್ ಪಾಠ | ದ.ಕ ದಲ್ಲಿ “ಚೆಸ್ ಇನ್ ಸ್ಕೂಲ್” ಆರಂಭ | ಗ್ರಾಮೀಣ ಮಕ್ಕಳಿಗೆ ಬೌದ್ಧಿಕ ಅವಕಾಶ
January 29, 2026
2:18 PM
by: ದ ರೂರಲ್ ಮಿರರ್.ಕಾಂ
ಕೊಳೆ ರೋಗ ನಿಯಂತ್ರಣಕ್ಕೂ ತೆರಿಗೆ…? ಮೈಲುತುತ್ತಿಗೆ ಸುಂಕ – ಅಡಿಕೆ ರೈತನಿಗೆ ಮತ್ತೊಂದು ಹೊರೆ..!
January 29, 2026
7:39 AM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ದೇಶದಲ್ಲಿ ರಬಿ ಋತು ಬಿತ್ತನೆ ದಾಖಲೆ ಹೆಚ್ಚಳ | 660.48 ಲಕ್ಷ ಹೆಕ್ಟೇರ್‌ಗೆ ಏರಿದ ಒಟ್ಟು ವಿಸ್ತೀರ್ಣ
January 29, 2026
7:18 AM
by: ದ ರೂರಲ್ ಮಿರರ್.ಕಾಂ
ಯೂರಿಯಾ ಮಾರಾಟ 3.8% ಏರಿಕೆ | ದೇಶೀಯ ಉತ್ಪಾದನೆ ಕುಸಿತ, ಆಮದು 85% ಹೆಚ್ಚಳ
January 29, 2026
7:08 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror