ತಾಲೂಕಿಗೊಂದು ಗೋಶಾಲೆ | ಸುಳ್ಯದಲ್ಲಿ ಗೋಶಾಲೆ ನಿರ್ಮಾಣಕ್ಕೆ 10 ವರ್ಷಗಳ ಹೋರಾಟ… ! | ಗೋಮಳವಿದ್ದರೂ ಏಕೆ ಮೌನವಾಗಿವೆ ಆಡಳಿತ.. ? |

August 26, 2022
11:09 AM

ಸುಳ್ಯದಲ್ಲಿ ಗೋಶಾಲೆ ನಿರ್ಮಾಣವಾಗಬೇಕು. ಹೀಗೊಂದು ಬೇಡಿಕೆ ಕಳೆದ 10 ವರ್ಷಗಳಿಂದ ಇದೆ. ಹಾಗಿದ್ದರೂ ಆಡಳಿತಗಳು ಏಕೆ ಮೌನ ವಹಿಸಿವೆ ? ಹೀಗೆ ಪ್ರಶ್ನೆ ಕೇಳಿರುವುದು ಕೊಡಿಯಾಲ ಬೈಲು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಸೀತಾರಾಮ ನಾಯಕ್…!.‌ ಕಳೆದ 10 ವರ್ಷಗಳ ಬೇಡಿಕೆ, ಹೋರಾಟಕ್ಕೆ ಬೆಲೆಯೇ ಸಿಕ್ಕಿಲ್ಲ…!. ಗೋಮಳ ಇದ್ದರೂ ಪಶುಸಂಗೋಪನಾ ಇಲಾಖೆಗಳು ಮೌನವಾಗಿವೆ…!

ಗೋಮಾತೆಯ ರಕ್ಷಣೆ ನಿತ್ಯವೂ ನಡೆಯುತ್ತಿದೆ. ಅಕ್ರಮವಾಗಿ ಗೋಸಾಗಾಟ ನಡೆಸುವ ಪ್ರಕರಣಗಳು ಆಗಾಗ ನಡೆಯುತ್ತಲೇ ಇರುತ್ತವೆ. ಗೋಪ್ರೇಮಿಗಳು ಗೋರಕ್ಷಣೆಯಲ್ಲಿ ತೊಡಗಿಸಿಕೊಳ್ಳುತ್ತಲೇ ಇರುತ್ತಾರೆ. ಹೀಗೆ ಗೋರಕ್ಷಣೆಯ ಬಳಿಕ ಗೋವುಗಳನ್ನು ಏನು ಮಾಡುವುದು  ಎನ್ನುವ ಪ್ರಶ್ನೆಯ ನಡುವೆಯೇ ಗೋಶಾಲೆಯ ಬೇಡಿಕೆ ಕಳೆದ ಹತ್ತಾರು ವರ್ಷಗಳಿಂದ ಇದೆ. ಕೃಷಿರಲ್ಲೂ ಹೋರಿ ಕರುಗಳು ಇದ್ದರೆ ಏನು ಮಾಡುವುದು  ಎನ್ನುವ ಪ್ರಶ್ನೆಗಳಿಗೂ ಉತ್ತರವಿಲ್ಲ. ಕೆಲವರು ದೂರದ ಗೋಶಾಲೆಗಳಿಗೆ ತಲುಪಿಸಿದರೆ ಇನ್ನೂ ಕೆಲವರು ಸಾಕುವ ಹೆಸರಿನಲ್ಲಿ ಯಾರ್ಯಾರಿಗೋ ಕೊಡಬೇಕಾದ್ದು ಅನಿವಾರ್ಯವೂ ಆಗಿದೆ. ಇಂತಹ ಸಂದರ್ಭದಲ್ಲಿ ಸುಳ್ಯದ ಕೊಡಿಯಾಲಬೈಲು ಹಾಲು ಉತ್ಪಾದರ ಸಹಕಾರಿ ಸಂಘವು ಕಳೆದ 10 ವರ್ಷಗಳಿಂದ ಗೋಶಾಲೆ ನಿರ್ಮಾಣದ ಕಡೆಗೆ ಬೇಡಿಕೆ, ಹೋರಾಟ ನಡೆಸುತ್ತಲೇ ಇದೆ. ಕಂದಾಯ ಇಲಾಖೆ ಸಹಿತ ಪಶುಸಂಗೋಪನಾ ಇಲಾಖೆಗೂ ಮನವಿ ಮಾಡಿದೆ. ಜಾಗ ಮಂಜೂರು ಕೂಡಾ ಆಗಿದೆ. ಗೋಮಳ ಇದೆ, ಅದರಲ್ಲಿ ಕನಿಷ್ಟ ಹತ್ತು ಎಕರೆ ಸಹಕಾರಿ ಸಂಘಕ್ಕೆ ನೀಡಿ, ಕೆಎಂಎಫ್‌ ಸಹಿತ ಗೋಪ್ರೇಮಿಗಳ ನೆರವಿನಿಂದ ಗೋಶಾಲೆ ಮಾಡುತ್ತೇವೆ ಎಂದೂ ಹೇಳಿತ್ತು. ಆದರೂ ಗೋಶಾಲೆ ತೆರೆಯಲು ಸಾಧ್ಯವಾಗಿಲ್ಲ.

2008 ರಲ್ಲಿ ಗೋಮಳ ಜಾಗದಲ್ಲಿ ಗೋಶಾಲೆಗೆ ಎಂದು 7ಎಕ್ರೆಯಷ್ಟು ಜಾಗವನ್ನು ಮೀಸಲಿಡಲಾಗಿತ್ತು. ಅದಾಗಿ ಹಲವು ಪ್ರಯತ್ನ ನಡೆದರೂ ಸಾಧ್ಯವಾಗಿಲ್ಲ. ಶಾಸಕ ಅಂಗಾರ ಅವರೂ ಈ ಹಿಂದೆ ಪತ್ರ ಬರೆದಿದ್ದರು. 2021 ರಲ್ಲಿ ಸಚಿವ ಎಸ್‌ ಅಂಗಾರ ಅವರು ಕೊಡಿಯಾಲಬೈಲು ಹಾಲು ಉತ್ಪಾದಕರ ಸಹಕಾರಿ ಸಂಘದ ಮನವಿಯ ಮೇರೆಗೆ ಮತ್ತೆ ಪಶುಸಂಗೋಪನಾ ಇಲಾಖೆಗೆ ಪತ್ರ ಬರೆದು ಜಮೀನು ಕಾಯ್ದಿರಿಸಿ ಸೂಕ್ತ ಕ್ರಮ ಕೈಗೊಳ್ಳಲು ಸೂಚನೆಯನ್ನೂ ನೀಡಿದ್ದಾರೆ.

ಸುಮಾರು 10 ವರ್ಷದ ಹಿಂದೆ ಪುತ್ತೂರು-ಸುಳ್ಯ ನಡುವೆ ಅಕ್ರಮ ಗೋಸಾಗಾಟ ತಡೆಯುವ ವೇಳೆ ಸುಳ್ಯದ ಯುವಕನೊಬ್ಬ ಮೃತಪಟ್ಟಿದ್ದ , ಈ ಸಂದರ್ಭ ಅವರದೇ ಊರಿನಲ್ಲಿ ಗೋಶಾಲೆ ತೆರೆಯುವ ಬಗ್ಗೆಯೂ ಭರವಸೆ ಕೇಳಿಬಂದಿತ್ತು. ಆದರೆ 10 ವರ್ಷಗಳ ನಂತರವೂ ಈ ಕನಸು ಈಡೇರಿಲ್ಲ. ಗೋಪ್ರೇಮಿಗಳೇ ಇರುವ ನಾಡಿನಲ್ಲಿ ಗೋಶಾಲೆಯನ್ನು ತೆರೆಯಲು ಆಗದೇ ಇರುವುದು  ಹಾಗೂ ಹಾಲು ಉತ್ಪಾದಕರ ಸಹಕಾರಿ ಸಂಘವೇ ಅದರ ನೇತೃತ್ವ ವಹಿಸಿಕೊಂಡರೂ ಸರ್ಕಾರ, ಆಡಳಿತ ಸ್ಪಂದಿಸದೇ ಇರುವುದು ವಿಪರ್ಯಾಸವೇ ಸರಿ.

 

ಕಳೆದ 10 ವರ್ಷಗಳಿಂದ ಸುಳ್ಯದಲ್ಲಿನ ಗೋಮಳ ಜಾಗದಲ್ಲಿ ಗೋಶಾಲೆಯ ತೆರೆಯುವ ಬಗ್ಗೆ ಮನವಿಗಳು, ಒತ್ತಾಯ, ಹೋರಾಟ ನಡೆಯುತ್ತಿದೆ. ಇದುವರೆಗೂ ಆಶಾದಾಯಕ ಬೆಳವಣಿಗೆ ಕಂಡಿಲ್ಲ.- ಸೀತಾರಾಮ ನಾಯಕ್‌, ಅಧ್ಯಕ್ಷರು, ಕೊಡಿಯಾಲಬೈಲು ಹಾಲು ಉತ್ಪಾದಕರ ಸಹಕಾರಿ ಸಂಘ

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

₹1.65 ಲಕ್ಷದ ಐಫೋನ್‌ಗಾಗಿ ಬೆಳಗ್ಗೆಯಿಂದಲೇ ಸರದಿ..! ಬೆಂಗಳೂರಿನಿಂದ ಮುಂಬೈವರೆಗೆ ಕಂಡ ‘ಐಫೋನ್‌ ಕ್ರೇಜ್’
September 22, 2026
8:02 AM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 21-09-2026 | ಕರಾವಳಿಯಲ್ಲಿ ಜೋರು ಮಳೆಯ ಸಾಧ್ಯತೆ ಕಡಿಮೆ
September 21, 2026
12:57 PM
by: ಸಾಯಿಶೇಖರ್ ಕರಿಕಳ
ಹವಾಮಾನ ವರದಿ | 20.09.2026 |ಕರ್ನಾಟಕದಲ್ಲಿ ಸೆ.25ರವರೆಗೆ ಮಳೆಯ ಲಕ್ಷಣ: ಬಂಗಾಳಕೊಲ್ಲಿಯಲ್ಲಿ ಚಂಡಮಾರುತದ ಸಾಧ್ಯತೆ
September 20, 2026
3:13 PM
by: ಸಾಯಿಶೇಖರ್ ಕರಿಕಳ
ಕರ್ನಾಟಕದಲ್ಲಿ ಮತ್ತೆ ಮಳೆ ಅಬ್ಬರ: ಸೆ.22ರಿಂದ ಇನ್ನಷ್ಟು ಚುರುಕು, 7 ದಿನಗಳ ಎಚ್ಚರಿಕೆ
September 20, 2026
10:43 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror