Exclusive - Mirror Hunt

ಸುಳ್ಯದ ಕಡೆಗಣನೆ ಏಕೆ ? |ಬೆಂಗಳೂರಿನಲ್ಲಿ ಜಿಲ್ಲೆಯ ಅಭಿವೃದ್ಧಿ ಬಗ್ಗೆ ದ ಕ ಜಿಲ್ಲೆಯ ಶಾಸಕರ ಸಭೆ | ಮೂಲಭೂತ ಸಮಸ್ಯೆಗಳು ಇರುವ ಸುಳ್ಯವನ್ನೇಕೆ ಕಡೆಗಣಿಸುತ್ತೀರಿ ? |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಸುಮಾರು 76 ಗ್ರಾಮಗಳನ್ನು  ಹೊಂದಿರುವ ಬಹಳ ವಿಸ್ತಾರವಾದ ಸುಳ್ಯ ಪ್ರದೇಶದಲ್ಲಿ ಸಾಕಷ್ಟು ಹೊಳೆಗಳು, ನದಿಗಳು ಹರಿಯುತ್ತಿವೆ,  ನೆಟ್ವರ್ಕ್, ರಸ್ತೆ, ಸೇತುವೆ ಸೇರಿದಂತೆ ಮೂಲಭೂತ ಸಮಸ್ಯೆಗಳು ಸುಳ್ಯವನ್ನು  ಬೆಂಬಿಡದ ಭೂತದಂತೆ ಕಾಡುತ್ತಿದೆ. ಹಾಗಿದ್ದರೂ ಬೆಂಗಳೂರಿನಲ್ಲಿ ನಡೆದ ಜಿಲ್ಲೆಯ ಅಭಿವೃದ್ಧಿ ಬಗ್ಗೆ ದ ಕ ಜಿಲ್ಲೆಯ ಶಾಸಕರ ಸಭೆಯಲ್ಲಿ  ಸುಳ್ಯದ ಶಾಸಕರು, ಸಚಿವರು  ಗೈರಾಗಿದ್ದಾರೆ. ಸುಳ್ಯವನ್ನೇಕೆ ಕಡೆಗಣಿಸುತ್ತೀರಿ ಎಂಬ ಪ್ರಶ್ನೆ ಈಗ ಎದ್ದಿದೆ. ಚರ್ಚೆಯ ವಿಷಯವಾಗಿದೆ.

Advertisement

ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಶಾಸಕರು ಹಾಗೂ ವಿಧಾನಪರಿಷತ್ ಸದಸ್ಯರ ಸಭೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ  ಉಪಸ್ಥಿತಿಯಲ್ಲಿ  ನಡೆದಿದೆ. ಇದರಲ್ಲಿ  ಜಿಲ್ಲೆಯ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚೆ ನಡೆದಿದೆ. ಸುಳ್ಯ ಕ್ಷೇತ್ರವನ್ನು ಪ್ರತಿನಿಧಿಸುವ ಶಾಸಕ, ಸಚಿವ ಅಂಗಾರ ಅವರು ಗೈರಾಗಿರುವುದು  ಫೋಟೋದಲ್ಲಿ  ಕಂಡುಬಂದಿದೆ.

ಆದರೆ ಭಾನುವಾರ ಎಸ್ ಅಂಗಾರ ಅವರು ಸವಣೂರು ಬಳಿ ಕಾರ್ಯಕ್ರಮವೊಂದರಲ್ಲಿ ಗದ್ದೆಯಲ್ಲಿ ನೇಜಿ ನಾಟಿ ಮಾಡುವ ಫೋಟೊ ವೈರಲ್ ಆಗಿತ್ತು. ವಿಡಿಯೋ ಕೂಡಾ ಕಂಡುಬಂದಿತ್ತು. ಉತ್ತಮ ಶ್ಲಾಘನೆ ಕೂಡಾ ವ್ಯಕ್ತವಾಗಿತ್ತು.

ಅಭಿವೃದ್ಧಿ ವಿಚಾರಕ್ಕೆ ಸಂಬಂಧಿಸಿದ ಸಭೆಯಲ್ಲಿ ಗೈರಾಗಿರುವ ಸಂಗತಿ ಈಗ ಚರ್ಚೆಗೆ ಕಾರಣವಾಗಿದೆ ಮಾತ್ರವಲ್ಲ ಸುಳ್ಯವನ್ನು ಕಡೆಗಣಿಸುತ್ತಿರುವುದು ಸ್ಪಷ್ಟವಾಗುತ್ತಿದೆ ಎಂಬುದು ಚರ್ಚೆಯ ವಿಷಯವಾಗಿದೆ.

 

This is box title
ಕಳೆದ ಬಾರಿ ಕೂಡಾ ಜಿಲ್ಲೆಯ ವಿಮಾನ ನಿಲ್ದಾಣದ ಹೆಸರಿನ ಬಗ್ಗೆ ಚರ್ಚೆಯ ಬಂದಾಗ ಕೋಟಿಚೆನ್ನಯ ಎಂಬ ಹೆಸರಿಡಬೇಕು ಎಂದು ದ ಕ ಜಿಲ್ಲೆಯ ಎಲ್ಲಾ ಶಾಸಕರುಗಳು ಸಹಿ ಹಾಕಿದ ಪತ್ರವನ್ನು ಮುಖ್ಯಮಂತ್ರಿಗಳಿಗೆ ನೀಡುವಾಗಲೂ ಪತ್ರದಲ್ಲಿ ಸುಳ್ಯ ಶಾಸಕರ ಸಹಿಯೂ ಇರಲಿಲ್ಲ ಹಾಗೂ ಪತ್ರ ನೀಡುವಾಗ ಸುಳ್ಯದ ಶಾಸಕರೂ ಇದ್ದಿರಲಿಲ್ಲ ಎಂದೂ ಚರ್ಚೆ ಆಗಿತ್ತು. ಕೋಟಿಚೆನ್ನಯ ಹೆಸರು ಬಂದಾಗ ಸುಳ್ಯವೇ ಪ್ರಮುಖವಾಗಿ ಕಾಣುತ್ತದೆ. ತುಳುನಾಡಿನ ಇತಿಹಾಸದಲ್ಲಿ  ಎಣ್ಮೂರು ಗರಡಿಯು ಅತ್ಯಂತ  ಪ್ರಸಿದ್ಧಿವಾಗಿದೆ, ಪಂಜ, ಎಣ್ಮೂರು ಪ್ರದೇಶವೂ ಕೋಟಿಚೆನ್ನಯರು ಓಡಾಡಿದ ಪ್ರದೇಶ ಎಂದೂ ಇತಿಹಾಸಗಳಿಂದ ತಿಳಿಯುತ್ತದೆ,  ಹಾಗಾಗಿ ತುಳುನಾಡಿನ ವಿಮಾನ ನಿಲ್ದಾಣಕ್ಕೆ ಕೋಟಿಚೆನ್ನಯ ಹೆಸರು ಇರಿಸಬೇಕೆಂದು ಒತ್ತಾಯಿಸುವ  ಸಂದರ್ಭದಲ್ಲೂ ಸುಳ್ಯವನ್ನು ಕಡೆಗಣಿಸಲಾಗಿತ್ತು ಎಂದು ಅಂದೂ ಚರ್ಚೆ ಆಗಿತ್ತು.
ಮುಖ್ಯಮಂತ್ರಿಗಳಿಗೆ ಮನವಿ ನೀಡುವ ಸಂದರ್ಭ

.

ಸುಳ್ಯ ತಾಲೂಕಿನಲ್ಲಿ ಈಗಾಗಲೇ ಸಾಕಷ್ಟು ಅಭಿವೃದ್ಧಿ ಕಾರ್ಯಗಳ ಬೇಡಿಕೆ ವ್ಯಕ್ತವಾಗಿದೆ. ಸುಳ್ಯದಲ್ಲಿ ನೆಟ್ವರ್ಕ್ ಸಮಸ್ಯೆ, 110 ಕೆವಿ ವಿದ್ಯತ್ ಸಬ್ ಸ್ಟೇಶನ್, ಹಲವಾರು ಕಡೆ ಕಿರು ಕಾಲುಸಂಕ, ಸೇತುವೆಗಳು, ರಸ್ತೆ ಅಗಲೀಕರಣ, ಡಾಮರೀಕರಣ, ರಸ್ತೆ ದುರಸ್ತಿ ಹೀಗೆ ಹತ್ತು ಹಲವು ಬೇಡಿಕೆಗಳ ಪಟ್ಟಿಯೇ ಬರುತ್ತಿದೆ, ಈಗಲೂ ಹಲವು ಕಡೆ ಹೋರಾಟ, ಪ್ರತಿಭಟನೆಗಳು ನಡೆಯುತ್ತಿದೆ. ನೆಟ್ವರ್ಕ್ ಗಾಗಿ ವಿದ್ಯಾರ್ಥಿಗಳು ಗುಡ್ಡ ಹತ್ತಿ ಕುಳಿತುಕೊಳ್ಳಬೇಕಾದ ಸ್ಥಿತಿ ಇದೆ. ಅನಾರೋಗ್ಯ ಪೀಡಿತರನ್ನು ಹೊಳೆ ದಾಟಿಸಲು ಆಗದೆ ಚಯರ್ ನಲ್ಲಿ, ಮಂಚದಲ್ಲಿ  ಹೊತ್ತು ಸಾಗಬೇಕಾದ ಅನಿವಾರ್ಯತೆ ಇದೆ. ಇಷ್ಟೆಲ್ಲಾ ಮೂಲಭೂತ ಸಮಸ್ಯೆಗಳ ಬಗ್ಗೆ ಬೇಡಿಕೆ ಇದ್ದರೂ  ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ನಡೆದ ಜಿಲ್ಲೆಯ ಬಿಜೆಪಿ ಶಾಸಕರ ಸಭೆಯಲ್ಲಿ ಅದರಲ್ಲೂ ಅಭಿವೃದ್ಧಿ ಕಾರ್ಯಗಳ ಬಗ್ಗೆ ನಡೆದ ಸಭೆಯಲ್ಲಿ ಜಿಲ್ಲೆಯ ಎಲ್ಲಾ ಬಿಜೆಪಿ ಶಾಸಕರು ಭಾಗವಹಿಸಿದ್ದು ಚಿತ್ರದಲ್ಲಿ ಕಾಣುತ್ತಿದೆ, ಆದರೆ  ಜಿಲ್ಲೆಯ ಹಿರಿಯ ಶಾಸಕ, ಅದರಲ್ಲೂ ಅನೇಕ ವರ್ಷಗಳಿಂದ ಸುಳ್ಯವನ್ನು ಪ್ರತಿನಿಧಿಸುವ ಶಾಸಕರನ್ನು ಸಭೆಗೆ ಆಹ್ವಾನಿಸಲಿಲ್ಲವೇ ಅಥವಾ ಸಭೆಗೆ ಗೈರಾಗಿದ್ದರೇ ಎನ್ನುವುದು  ಈಗ ಚರ್ಚೆಯಾಗುತ್ತಿದೆ. ಈ ಹಿಂದೆಯೂ ಮಂಗಳೂರಿನಲ್ಲಿ ನಡೆದ ಇಲಾಖೆಗಳ ಸಭೆ, ರಿವ್ಯೂ ಸಭೆಗಳಿಗೂ ಸುಳ್ಯದ ಶಾಸಕರು ಗೈರಾಗುತ್ತಿದ್ದ ಬಗ್ಗೆ ಮಾಧ್ಯಮಗಳಲ್ಲಿ ವರದಿ ಬಂದಿತ್ತು. ಇದೀಗ ಇಡೀ ಜಿಲ್ಲೆಯಲ್ಲಿ  ಸುಳ್ಯ ಬಿಜೆಪಿಯ ಶಕ್ತಿಕೇಂದ್ರ ಮಾತ್ರವಲ್ಲ ಎಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿ ಸೋತಿದ್ದರೂ ಸುಳ್ಯ ಮಾತ್ರಾ ಉಳಿಸಿಕೊಂಡ ಸ್ಥಾನವಾಗಿತ್ತು, ಅದಾದ ಬಳಿಕ ಸರಕಾರ ಬಂದಾಗಲೂ ಸುಳ್ಯದ ಶಾಸಕರಿಗೆ ಸಚಿವ ಸ್ಥಾನ ನೀಡಬೇಕು ಎಂದು ಸುಳ್ಯದಿಂದ ಒತ್ತಾಯ ನಡೆದಿತ್ತು, ಕೆಲವು ಸಮಯ ಪಕ್ಷದ ಚಟುವಟಿಕೆಯಿಂದಲೂ ದೂರ ಇರಲು ಇಲ್ಲಿನ ಮುಖಂಡರು ನಿರ್ಧಾರ ಮಾಡಿದ್ದು ಎಲ್ಲವೂ ಅಂದು ದಾಖಲಾಗಿತ್ತು. ಮೀಸಲು ಕ್ಷೇತ್ರವನ್ನು ಇಷ್ಟೊಂದು ಕಡೆಗಣೆನೆಯೇ ? ಈಗ ಮತ್ತೆ ಬಿಜೆಪಿಯು ಸುಳ್ಯವನ್ನು ಕಡೆಗಣಿಸುತ್ತಿದೆಯೇ ಎಂಬುದು  ಇನ್ನೊಂದು ಚರ್ಚೆಯ ವಿಷಯ.

 

ಸುಳ್ಯದಲ್ಲಿ  ಈಚೆಗೆ ಹಲವು ಮೂಲಭೂತ ವ್ಯವಸ್ಥೆಗಳ ಕೊರತೆ ಇದೆ. ಹಾಗೆಂದು ಅಭಿವೃದ್ಧಿಯೇ ಆಗಿಲ್ಲ ಎಂದಲ್ಲ, ಸುಳ್ಯದ ಮಂಡಲ ಬಿಜೆಪಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಅವರ ಹೇಳಿಕೆಯಂತೆ,  ಕಳೆದ ವರ್ಷದವರೆಗೆ ಕ್ಷೇತ್ರದಲ್ಲಿ ಒಟ್ಟು 157 ರಷ್ಟು ಸಣ್ಣ ಮತ್ತು ದೊಡ್ಡ ಸೇತುವೆಗಳು  ಕ್ಷೇತ್ರದಲ್ಲಿ ಆಗಿದೆ. ಉತ್ತರಕನ್ನಡದ ನಂತರ ಅತಿ ಹೆಚ್ಚು ತೊರೆ, ಕೊಳ್ಳ, ಹಳ್ಳ ನದಿಗಳಿರುವ ಕ್ಷೇತ್ರ ಸುಳ್ಯ . ಗುಡ್ಡ, ಅರಣ್ಯ ,ಕಾಡುಗಳ ಮಧ್ಯೆ  ಕಚ್ಚಾ ರಸ್ತೆ ಸೇರಿದಂತೆ ಇರುವ 76 ಗ್ರಾಮಗಳ ಬಹಳ ವಿಸ್ತಾರವಾದ ಕ್ಷೇತ್ರವಾಗಿ ಸುಳ್ಯ ಇತರ ಕ್ಷೇತ್ರಗಳಿಗಿಂತ ಎರಡರಷ್ಟಿದೆ. ಅದೆಷ್ಟೋ ಗ್ರಾಮೀಣ ಪ್ರದೇಶದ ಕಚ್ಚಾ ರಸ್ತೆಗಳು ಇಂದು ವ್ಯವಸ್ಥಿತ ರಸ್ತೆ ಗಳಾಗಿವೆ . ಇನ್ನಷ್ಟು ರಸ್ತೆಗಳ ಬೇಡಿಕೆ ಪ್ರತಿವರ್ಷ ಹೆಚ್ಚುತ್ತಿದೆ ಜೊತೆಗೆ ಸೇತುವೆಗಳ ಬೇಡಿಕೆ ಕೂಡ ಹೆಚ್ಚುತ್ತಿದೆ. ಕ್ಷೇತ್ರದಲ್ಲಿ ರಾಜ್ಯದಲ್ಲಿಯೇ ಅತಿ ಹೆಚ್ಚು ಸೇತುವೆಗಳನ್ನು ಮಾಡಿಸಿರುವಂತಹ ಕೀರ್ತಿ ಇದೆ, ಎಲ್ಲಿಯೂ ಪ್ರಚಾರವನ್ನು ನೀಡದೆ ತನ್ನ ಕ್ಷೇತ್ರದ ಅಭಿವೃದ್ಧಿಯಲ್ಲಿ ತೊಡಗಿಕೊಂಡಿದ್ದಾರೆ ಎನ್ನುತ್ತಾರೆ.

 

 

 

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಮಿರರ್‌ ವಿಶ್ಲೇಷಣೆ

ಸಮಾಜದ ಚರ್ಚೆಯ ಪ್ರತಿಬಿಂಬ

Published by
ಮಿರರ್‌ ವಿಶ್ಲೇಷಣೆ

Recent Posts

ಹವಾಮಾನ ವರದಿ | 01-05-2025 | ಕೆಲವು ಕಡೆ ಸಂಜೆ ಮಳೆ ನಿರೀಕ್ಷೆ | ಮೇ.6 ರಿಂದ ಮತ್ತೆ ಮಳೆ ಆರಂಭ |

ದಕ್ಷಿಣ ಕನ್ನಡದ ಸುಳ್ಯ, ಸುಬ್ರಹ್ಮಣ್ಯ, ಧರ್ಮಸ್ಥಳ ಸುತ್ತಮುತ್ತ ಭಾಗಗಳಲ್ಲಿ ಒಂದೆರಡು ಕಡೆ ಹಾಗೂ…

6 hours ago

ಅಪ್ಪ ಅಮ್ಮ ಇಲ್ಲದ ಪರೀಕ್ಷಾ ನಿಯಮಗಳು

ಉದ್ಯೋಗದ ಪರೀಕ್ಷೆಗಳಿಗೂ ಧಾರ್ಮಿಕ ಸಂಕೇತಗಳಿಗೂ ಯಾಕೆ ಹೊಂದಿ ಬರುವುದಿಲ್ಲ? ಇದೊಂದು ಮಿಲಿಯನ್ ಡಾಲರ್…

9 hours ago

ಮೇ 2- 6 | ಮಂಗಳೂರಿನಲ್ಲಿ ರಾಷ್ಟ್ರೀಯ ಓಪನ್ ಕ್ಲಾಸಿಕಲ್ ರೇಟೆಡ್ ಚೆಸ್ ಪಂದ್ಯಾವಳಿ

ರಾಷ್ಟ್ರೀಯ ಓಪನ್ ಕ್ಲಾಸಿಕಲ್ ರೇಟೆಡ್ ಚೆಸ್ ಪಂದ್ಯಾವಳಿ ಮೇ ತಿಂಗಳ 2 ರಿಂದ…

12 hours ago

ಜೋಗ ಜಲಪಾತದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಮುಕ್ತಾಯ | ಪ್ರವಾಸಿಗರಿಗೆ ಪ್ರವೇಶಕ್ಕೆ ಅವಕಾಶ | ಜೋಗ ಇನ್ನು ಮತ್ತಷ್ಟು ಆಕರ್ಷಕ |

ವಿಶ್ವವಿಖ್ಯಾತ ಜೋಗ ಜಲಪಾತದಲ್ಲಿ  ಪ್ರವಾಸಿಗರನ್ನು ಮತ್ತಷ್ಟು ಆಕರ್ಷಿಸುವ ಹಿನ್ನೆಲೆಯಲ್ಲಿ  ರಾಜ್ಯ ಸರ್ಕಾರ  ವಿವಿಧ…

12 hours ago

ಹವಾಮಾನ ವರದಿ | 30-04-2025 | ಸಂಜೆ ಗುಡುಗು ಸಹಿತ ಮಳೆಯ ಮುನ್ಸೂಚನೆ |

ಈಗಿನಂತೆ ಮೇ 1ರಿಂದ ದಕ್ಷಿಣ ಒಳನಾಡಿನ ಅಲ್ಲಲ್ಲಿ ಹಾಗೂ ಮೇ 5ರಿಂದ ಉತ್ತರ…

1 day ago

ಮೇ 4 ರಂದು ದೇಶಾದ್ಯಂತ ನೀಟ್ ಯುಜಿ ಪರೀಕ್ಷೆ

ಮೇ 4 ರಂದು ದೇಶಾದ್ಯಂತ ನೀಟ್ ಯುಜಿ ಪರೀಕ್ಷೆ ನಡೆಯಲಿದೆ. ಮೈಸೂರು ಜಿಲ್ಲೆಯ…

1 day ago