ಸುಳ್ಯ – ಕೊಡಿಯಾಲಬೈಲು – ದುಗಲಡ್ಕ ರಸ್ತೆ ಅಭಿವೃದ್ಧಿಗೆ ಆಗ್ರಹಿಸಿ ಸಾರ್ವಜನಿಕರು ದುರಸ್ತಿಗೆ ಬೇಡಿಕೆಯ ಭಿಕ್ಷೆಯನ್ನು ಆಡಳಿತದ ಮುಂದೆ ಇರಿಸಿದರು. ಕಳೆದ 25 ವರ್ಷಗಳಿಂದಲೂ ಈ ರಸ್ತೆ ದುರಸ್ತಿಗೆ ಮನವಿ ಸಲ್ಲಿಸುತ್ತಲೇ ಬಂದ ಜನರು ಇದೀಗ ನಿಧಿ ಸಂಗ್ರಹಣಾ ಅಭಿಯಾನದ ಅಣಕು ಅಭಿಯಾನದ ಮೂಲಕ ಸುಳ್ಯ ನಗರ ಪಂಚಾಯತ್ ಮುಂದೆ ಪ್ರತಿಭಟನಾ ಸಭೆಯನ್ನು ನಡೆಸಿದರು.
ನೂರಾರು ಸಂಖ್ಯೆಯಲ್ಲಿ ರಸ್ತೆ ಫಲಾನುಭವಿಗಳು ಮೆರವಣಿಗೆಯಲ್ಲಿ ಆಗಮಿಸಿದರು. ಸಭೆಯಲ್ಲಿ ಮಾತನಾಡಿದ ಗಣೇಶ್ ಭಟ್ “ಸುಳ್ಯ – ಕೊಡಿಯಾಲಬೈಲು – ದುಗಲಡ್ಕ ರಸ್ತೆ ಅಭಿವೃದ್ಧಿಗೆ ಕಳೆದ ಅನೇಕ ಸಮಯಗಳಿಂದ ಮನವಿ ಸಲ್ಲಿಸುತ್ತಲೇ ಬಂದಿದ್ದರೂ ಕೂಡಾ ಸಂಪೂರ್ಣ ದುರಸ್ತಿ ಕಾರ್ಯ ನಡೆಯಲಿಲ್ಲ. ಹಲವು ಭರವಸೆಗಳು ಸಿಕ್ಕಿದರೂ ಇದುವರೆಗೂ ಆಗಿಲ್ಲ. ಶಾಸಕರು ಈ ರಸ್ತೆ ಅಭಿವೃದ್ಧಿ ಮಾಡಬಹುದೆಂದು ನಿರೀಕ್ಷಿಸಿದ್ದೆವು, ಮಂತ್ರಿಯಾದರೂ ನಿರೀಕ್ಷಿತ ಮಟ್ಟದ ಕೆಲಸ ಮಾಡಿಲ್ಲ ಎಂದು ಹೇಳಿದರು.
ಉದ್ಯಮಿ ಸುರೇಶ್ ಕಮಿಲ ಮಾತನಾಡಿ “ಸುಳ್ಯದಲ್ಲಿ ರಸ್ತೆಗಳ ಅಭಿವೃದ್ಧಿ ಆಗುತ್ತಿಲ್ಲ. ಮೂಲಭೂತ ಬೇಡಿಕೆ, ವ್ಯವಸ್ಥೆ ಅದು. ಈಗ ನಮ್ಮ ರಸ್ತೆ ದುರಸ್ತಿಯಾಗದೆ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದರು.
ಸುಳ್ಯದ ಕೊಡಿಯಾಲಬೈಲು-ದುಗಲಡ್ಕ ರಸ್ತೆ ದುರಸ್ತಿಗೆ ಆಗ್ರಹಿಸಿ ಸಾರ್ವಜನಿಕರಿಂದ ನಗರ ಪಂಚಾಯತ್ ಮುಂದೆ ಧರಣಿ ನಡೆಯಿತು. #ಸುಳ್ಯ #ರಸ್ತೆ #sullia @CMofKarnataka @nalinkateel @AngaraSBJP pic.twitter.com/fDCvNnwacW
— theruralmirror (@ruralmirror) March 14, 2023
Advertisement
ಸೀತಾನಂದ ಮಾತನಾಡಿ ಹೋರಾಟ ಆರಂಭವಾದಾಗ ಗುದ್ದಲಿ ಪೂಜೆ ನಡೆಯುತ್ತದೆ, 9 ಕಿಮೀ ರಸ್ತೆಯಲ್ಲಿ 2 ಕಿಮೀ ಮಾತ್ರಾ ಅಭಿವೃದ್ಧಿ ಆದರೆ ಸಾಕೇ ಎಂದು ಪ್ರಶ್ನಿಸಿದರು.
ನ್ಯಾಯವಾದಿ ದಿನೇಶ್ ಮಡಪ್ಪಾಡಿ , ಕೃಷಿಕ ಸುರೇಶ್ ಅಮೈ , ದುಗಲಡ್ಕದ ಬಾಲಕೃಷ್ಣ ನಾಯರ್ ಮೊದಲಾದವರು ಮಾತನಾಡಿದರು.
ಸಭೆಯ ಬಳಿಕ ನ.ಪಂ. ಎದುರು ಇಡಲಾಗಿದ್ದ ನಿಧಿ ಸಂಗ್ರಹಣಾ ಡಬ್ಬಿಗೆ ಸೇರಿದವರು ಹಣ ಹಾಕಿದರು.