Advertisement
MIRROR FOCUS

ಸುಳ್ಯದ ರಸ್ತೆ ಗುಂಡಿಗಳಿಗೆ ತೇಪೆ | ರಸ್ತೆ ಗುಂಡಿ ಮುಚ್ಚಲು ಬರಬೇಕಾಯ್ತು ಡಾ.ಜ್ಞಾನೇಶ್…!‌ |

Share

ಮಳೆ ಕಡಿಮೆಯಾದ ತಕ್ಷಣವೇ ಸುಳ್ಯದ ಪ್ರಮುಖ ಗುಂಡಿಗಳಿಗೆ ಕೆವಿಜಿ ಇಂಜಿನಿಯರಿಂಗ್ ಕಾಲೇಜಿನ ಮಾಜಿ ಪ್ರಾಂಶುಪಾಲ ಡಾ.ಎನ್.ಎ.ಜ್ಞಾನೇಶ್ ಅವರ ನೇತೃತ್ವದಲ್ಲಿ ಕಾಂಕ್ರೀಟ್‌ ಮಿಕ್ಸ್‌ ಮೂಲಕ ತೇಪೆ ಹಾಕಲಾಯಿತು. ಇಚ್ಛಾ ಶಕ್ತಿ ಇದ್ದರೆ ಯಾವ ಕೆಲಸವನ್ನೂ ಮಾಡಬಹುದು  ಎನ್ನುವುದನ್ನು ತೋರಿಸಿದ ಡಾ.ಜ್ಞಾನೇಶ್‌ ಅವರನ್ನು ಸಾರ್ವಜನಿಕರು ಶ್ಲಾಘಿಸಿದ್ದಾರೆ. ಗ್ರಾಮೀಣ ಭಾರತ ಮಾತ್ರವಲ್ಲ ಈಗ ನಗರ ಭಾರತವನ್ನೂ ಜನರೇ ದುರಸ್ತಿ ಮಾಡಬೇಕಾದ ಸ್ಥಿತಿ ಬಂದಿದೆ…!.

ಕಳೆದ ವಾರವಷ್ಟೇ ಸುಳ್ಯದ ನಗರದ ರಸ್ತೆ ಹೊಂಡಗಳು, ಸುಳ್ಯದ ಕಸದ ಸಮಸ್ಯೆ ಸೇರಿದಂತೆ ಹಲವು ರಸ್ತೆಗಳು ವಿವಾದಕ್ಕೆ ಕಾರಣವಾಗಿತ್ತು. ಸುಳ್ಯದ ರಸ್ತೆಯ ಸಮಸ್ಯೆ ಬಗ್ಗೆ ಆರ್‌ ಜೆ ತ್ರಿಶೂಲ್‌ ಗೌಡ ಕಂಬಳ  ಅವರು ವಿಡಿಯೋ ಮೂಲಕ ಎಚ್ಚರಿಸಿದ್ದರು. ಇದಕ್ಕೆ ಕೀಬೋರ್ಡ್‌ ವಾರಿಯರ್‌ ಎಂದು ನಗರ ಪಂಚಾಯತ್ ಅಧ್ಯಕ್ಷರು ಟೀಕಿಸಿದ್ದರು. ಅದಕ್ಕೂ ಹಿಂದೆ ಸುಳ್ಯದ ಕಸದ ಸಮಸ್ಯೆಯ ಬಗ್ಗೆಯೂ ನಟ ಅನಿರುದ್ದ್‌ ಅವರು ಎಚ್ಚರಿಸಿದಾಗ ಲಾರಿ ಕಳುಹಿಸಿಕೊಡಿ ಎಂದು ನಗರ ಪಂಚಾಯತ್‌ ಅಧ್ಯಕ್ಷ ಛೇಡಿಸಿದ್ದರು. ಹೀಗಾಗಿ ಇದೆರಡೂ ವಿಷಯಗಳು ಸಾರ್ವಜನಿಕವಾಗಿ ಚರ್ಚೆಯಾಗಿತ್ತು. ಸುಳ್ಯ ನಗರದ ಹಲವು ಸಮಸ್ಯೆಗಳು ಗಮನ ಸೆಳೆದಿದ್ದವು.‌ಮುಂದುವರಿದು ಆರ್‌ ಜೆ ತ್ರಿಶೂಲ್‌ ವಿರುದ್ಧ ಪೊಲೀಸ್‌ ದೂರು ಕೂಡಾ ನೀಡಲಾಗಿತ್ತು. ಆದರೆ  ಆಡಳಿತದ ನಿರ್ಲಕ್ಷ್ಯದ ಬಗ್ಗೆ ಸಾರ್ವಜನಿಕರೂ ಅಸಮಾಧಾನ ವ್ಯಕ್ತಪಡಿಸಿದ್ದರು. ಒಬ್ಬ ನಗರ ಪಂಚಾಯತ್‌ ಅಧ್ಯಕ್ಷ ಜನರ ಸಮಸ್ಯೆಗಳಿಗೆ ಧ್ವನಿಯಾಗಬೇಕೇ ಹೊರತು ರಚನಾತ್ಮಕ ಟೀಕೆಗಳನ್ನು ಹತ್ತಿಕ್ಕುವ ಪ್ರಯತ್ನ ಸಲ್ಲದು ಎಂದು ಹೇಳಿದ್ದರು.

ಇಷ್ಟೆಲ್ಲಾ ಚರ್ಚೆಗಳ ನಡುವೆಯೂ ಸುಳ್ಯದ ರಸ್ತೆಗಳಿಗೆ ಮುಕ್ತಿ ಸಿಕ್ಕಿರಲಿಲ್ಲ. ರಸ್ತೆ ಹೊಂಡಗಳಿಂದ ಸುಳ್ಯ ನಗರದಲ್ಲಿ ರಸ್ತೆಯಲ್ಲಿ ಜನರಿಗೆ ಸಂಚಾರಕ್ಕೆ ತೀವ್ರ ತೊಂದರೆ ಆಗಿರುವ ಹೊಂಡಗಳನ್ನುಕೂಡಾ ಮುಚ್ಚುವ ಕೆಲಸವನ್ನು ಆಡಳಿತವು ಮಾಡಿರಲಿಲ್ಲ. ಮಳೆ ಸ್ವಲ್ಪ ಕಡಿಮೆಯಾದ ತಕ್ಷಣವೇ ತೇಪೆ ಕಾರ್ಯ ಮಾಡಲು ಸಾಧ್ಯವಿತ್ತು. ಇದೀಗ ಈ ಕೆಲಸವನ್ನು  ಕೆವಿಜಿ ಇಂಜಿನಿಯರಿಂಗ್ ಕಾಲೇಜಿನ ಮಾಜಿ ಪ್ರಾಂಶುಪಾಲ ಡಾ.ಎನ್.ಎ.ಜ್ಞಾನೇಶ್ ಅವರ ನೇತೃತ್ವದಲ್ಲಿ ತೇಪೆ ಹಾಕಲಾಗಿದೆ. ಸುಳ್ಯ ನಗರದ ಶ್ರೀರಾಂ ಪೇಟೆಯಲ್ಲಿ ಜ್ಯೂನಿಯರ್ ಕಾಲೇಜು ಕ್ರಾಸ್ ರಸ್ತೆಯಲ್ಲಿ ಮತ್ತು ರಥ ಬೀದಿಯಲ್ಲಿ ನಿರ್ಮಾಣವಾದ ಹೊಂಡಕ್ಕೆ ಸಿಮೆಂಟ್ ಜಲ್ಲಿ ಮಿಕ್ಸ್ ಹಾಕಿ ಹೊಂಡ‌ ತುಂಬಿ ತೇಪೆ ಹಾಕಲಾಗಿದೆ. ಈ ಕಾರ್ಯಕ್ಕೆ ಸಾರ್ವಜನಿಕರು ಶ್ಲಾಘಿಸಿದ್ದಾರೆ.

ಸುಳ್ಯ ನಗರದಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಹೊಂಡ ಸೃಷ್ಠಿಯಾಗಿ ಸುಮಾರು ಒಂದೂವರೆ ತಿಂಗಳಿನಿಂದ ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟಾಗಿದ್ದರೂ, ಭಾರೀ ಚರ್ಚೆ, ವಿವಾದ ಉಂಟಾದರೂ ರಾಷ್ಟ್ರೀಯ ಹೆದ್ದಾರಿ ಇಲಾಖೆಯಾಗಲೀ ನಗರ ಪಂಚಾಯತ್ ಆಗಲೀ ರಸ್ತೆಯ ಗುಂಡಿಯನ್ನು ಮುಚ್ಚಿಸುವ ಗೋಜಿಗೆ ಹೋಗಿರಲಿಲ್ಲ. ಡಾ.ಜ್ಞಾನೇಶ್ ಅವರು ತಮ್ಮ ಕೆಲಸದವರೊಂದಿಗೆ ವಿವಿಧ ಕಡೆಗಳಲ್ಲಿರುವ ಹೊಂಡಗಳನ್ನು ಸಿಮೆಂಟ್ ಜಲ್ಲಿ ಮಿಕ್ಸ್ ಹಾಕಿ‌ ಮುಚ್ಚಿಸಿದ್ದಾರೆ.‌ ಸ್ವಲ್ಪ ಮಳೆ ಕಡಿಮೆಯಾದರೂ ಇಂತಹ ಕೆಲಸ ಮಾಡಲು ಸಾಧ್ಯವಿದೆ, ಜನಪರವಾಗಿ ಕೆಲಸ ಮಾಡಬಹುದು ಎನ್ನುವುದನ್ನು ಡಾ.ಜ್ಞಾನೇಶ್‌ ಅವರು ಆಡಳಿತಕ್ಕೆ ತೋರಿಸಿದ್ದಾರೆ.

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹಿಮಾಲಯದಲ್ಲಿ ಹಿಮ ಕರಗಿದರೆ ಅದರ ಪರಿಣಾಮ ಎಲ್ಲಿಗೆ ತಲುಪುತ್ತದೆ? – ಹಿಮಾಲಯದ ದುರಂತದ ಬಳಿಕ ನೇಪಾಳದ ಪ್ರಧಾನಿ ಎಚ್ಚರಿಕೆ

ಹಿಮನದಿ ಕುಸಿತದಿಂದ ಸಂಭವಿಸಿದ ಭೀಕರ ಪ್ರವಾಹದ ಬಳಿಕ ನೇಪಾಳ ಪ್ರಧಾನಿ ಬಾಲೆಂದ್ರ ಶಾ…

6 hours ago

ನಾವು ತಿನ್ನುವ ಆಹಾರದಲ್ಲಿ ಕೀಟನಾಶಕ – ಕರ್ನಾಟಕದಲ್ಲಿ 9,176 ಮಾದರಿಗಳಲ್ಲಿ 334 ಮಿತಿ ಮೀರಿವೆ – ದೇಶದ ಅಂಕಿ ಏನು ಹೇಳುತ್ತದೆ?

2023ರಿಂದ 2026ರವರೆಗೆ ದೇಶದ 23 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪರೀಕ್ಷಿಸಿದ 70,652…

14 hours ago

ಒಂದೇ ತೆಂಗಿನ ಮರದಿಂದ ₹10,000 ಆದಾಯ? ಮೌಲ್ಯವರ್ಧನೆಗೆ ಹೊಸ ದಾರಿ ತೋರಿದ ವಿಶ್ವ ತೆಂಗು ದಿನ

ಕಾಸರಗೋಡಿನ ICAR-CPCRIನಲ್ಲಿ ವಿಶ್ವ ತೆಂಗು ದಿನ–2026 ಆಚರಿಸಿ, ಹವಾಮಾನ ಅನಿಶ್ಚಿತತೆಯ ನಡುವೆ ತೆಂಗು…

17 hours ago

ಹವಾಮಾನ ವರದಿ | 02-09-2026 | ಉತ್ತರ ಭಾರತದ ವಾಯುಭಾರ ಕುಸಿತ ದುರ್ಬಲವಾಗುವ ಸಾಧ್ಯತೆ

ಕರಾವಳಿಯಲ್ಲಿ ಮುಂದಿನ ಎರಡು ದಿನ ಅಲ್ಲಲ್ಲಿ ಸಾಮಾನ್ಯ ಮಳೆಯಾದರೂ ಜೋರು ಮಳೆಯ ಸಾಧ್ಯತೆ…

22 hours ago

ಕೃಷಿಗೆ ಸಾಲ ಹೆಚ್ಚಿಸಿ – ಅಲ್ಪಾವಧಿ ಮಾತ್ರವಲ್ಲ, ದೀರ್ಘಾವಧಿ ಸಾಲವೂ ಬೇಕು – ಬ್ಯಾಂಕ್‌ಗಳಿಗೆ ನಿರ್ಮಲಾ ಸೀತಾರಾಮನ್ ಸೂಚನೆ

ಕೃಷಿ ಉತ್ಪಾದನೆ ಹೆಚ್ಚಿಸಲು ಬ್ಯಾಂಕ್‌ಗಳು ರೈತರಿಗೆ ಹೆಚ್ಚಿನ ಸಾಂಸ್ಥಿಕ ಸಾಲ ನೀಡಬೇಕು ಎಂದು…

1 day ago

E20 ಎಫೆಕ್ಟ್‌ – ಪಶು ಆಹಾರದ ಬೆಲೆ ಏರಿಕೆ, ಹೈನುಗಾರರ ಲೆಕ್ಕಾಚಾರವೇ ಬದಲು..!

E20 ನೀತಿಯಡಿ ಎಥನಾಲ್ ಉತ್ಪಾದನೆಗೆ ಜೋಳ ಸೇರಿದಂತೆ ಧಾನ್ಯಗಳ ಬೇಡಿಕೆ ಹೆಚ್ಚುತ್ತಿರುವ ನಡುವೆ…

2 days ago