ಸುಳ್ಯದ ತ್ಯಾಜ್ಯದ ಸಮಸ್ಯೆ | ಚಿತ್ರನಟ ಅನಿರುದ್ಧ ಅವರ ಕಾಳಜಿ | ಮಾಹಿತಿ ನೀಡಿದವರು ಅಪರಾಧಿಯೇ ? |

(ಕಡತ ಚಿತ್ರ )
Advertisement

ಸುಳ್ಯದ ಕಸದ ಸಮಸ್ಯೆ ಅನೇಕ ವರ್ಷಗಳಿಂದ ಇದೆ. ಇದುವರೆಗೂ ತ್ಯಾಜ್ಯ ವಿಲೇವಾರಿಯೇ ತಲೆನೋವಾಗಿತ್ತು. ಈ ಬಗ್ಗೆ ಸಾಮಾಜಿಕ ಕಾರ್ಯಕರ್ತ , ಸಂಸದರ ಮಾಜಿ ಆಪ್ತ ಕಾರ್ಯದರ್ಶಿ ಸುಪ್ರೀತ್‌ ಮೋಂಟಡ್ಕ ಅವರು ಚಿತ್ರನಟ ಅನಿರುದ್ಧ ಅವರಿಗೆ ವಿಡಿಯೋ ಕಳಿಸಿದ್ದರು. ಸುಳ್ಯದ ಕಸದ ವಿಡಿಯೋ ಹಾಗೂ ಫೋಟೊ ನೋಡಿದ ಚಿತ್ರನಟ ಅನಿರುದ್ಧ ಅವರು “ಸುಳ್ಯದ ಕಸದ ಸಮಸ್ಯೆಗೆ ಮುಕ್ತಿ ನೀಡಿ” ಎಂದು ಅಧಿಕಾರಿಗಳಿಗೆ ಮನವಿ ಮಾಡಿದ್ದರು.

Advertisement

Advertisement
Advertisement

ಆದರೆ ಇದೀಗ ಆ ವಿಡಿಯೋ ಕಳಿಸಿದ ವ್ಯಕ್ತಿಯ ಬಗ್ಗೆ ಪಕ್ಷದ ಪ್ರಮುಖರು ಮುನಿಸಿಕೊಂಡಿದ್ದಾರೆ ಎಂಬುದು ಚರ್ಚೆಯಾಗುತ್ತಿದೆ. ಕಸದ ವಿಲೇವಾರಿ ಬಗ್ಗೆ, ಸಾರ್ವಜನಿಕರು ಕೈಗೊಳ್ಳಬೇಕಾದ ಕ್ರಮಗಳು ಬಗ್ಗೆ , ಇದುವರೆಗೂ ತ್ಯಾಜ್ಯ ವಿಲೇವಾರಿಗೆ ಕ್ರಮವಾಗದ ಬಗ್ಗೆ ಯಾವುದೇ ಪ್ರತಿಕ್ರಿಯೆಗಳು ಕಾಣಲಿಲ್ಲ, ಬದಲಾಗಿ ಅನಿರುದ್ಧ ಅವರಿಗೆ ಮಾಹಿತಿ ನೀಡಿದ ಸುಪ್ರೀತ್‌ ಬಗ್ಗೆ ಅಸಮಾಧಾನಗಳನ್ನು ಪಕ್ಷದ ಪ್ರಮುಖರು ವ್ಯಕ್ತಪಡಿಸಿದರೆ ಸಾರ್ವಜನಿಕ ವಲಯದಲ್ಲಿ ಅನಿರುದ್ಧ ಅವರ ಕರೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

 

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement

Be the first to comment on "ಸುಳ್ಯದ ತ್ಯಾಜ್ಯದ ಸಮಸ್ಯೆ | ಚಿತ್ರನಟ ಅನಿರುದ್ಧ ಅವರ ಕಾಳಜಿ | ಮಾಹಿತಿ ನೀಡಿದವರು ಅಪರಾಧಿಯೇ ? |"

Leave a comment

Your email address will not be published.


*