ಸುಳ್ಯ ನಗರ ಪಂಚಾಯತ್ ಆವರಣದಲ್ಲಿ 2016 ರಿಂದಲೂ ಕಸ ಸಂಗ್ರಹವಾಗುತ್ತಿದ್ದು ಪಂಚಾಯತ್ ಗೆ ಕಸ ವಿಲೇವಾರಿಗೆ ನಿಗದಿಗೊಳಿಸಿದ ಕಲ್ಚರ್ಪೆ ಯಲ್ಲಿ ಅರಣ್ಯ ಇಲಾಖೆಯ ತಕರಾರಿನ ಕಾರಣದಿಂದಾಗಿ ಹಾಗೂ ಹಿಂದೆ ಅವೈಜ್ಞಾನಿಕವಾಗಿ ಕಸವನ್ನು ರಾಶಿ ಹಾಕಿದ ಕಾರಣದಿಂದ ಸ್ಥಳೀಯರ ಪ್ರತಿಭಟನೆ ಯಿಂದಾಗಿ ಕಸ ವಿಲೇವಾರಿಗೆ ಸ್ಥಳವಿಲ್ಲದೆ ನ ಪಂ ಆವರಣದಲ್ಲಿ ಕಸವನ್ನು ಶೇಖರಿಸಲಾಗಿತ್ತು.
ಪ್ರಸ್ತುತ ಆಡಳಿತವು ಅಧಿಕಾರಕ್ಕೆ ಬಂದ ಬಳಿಕ ಕಸ ವಿಲೇವಾರಿಗೆ ಅನೇಕ ವೈಜ್ಞಾನಿಕ ಪ್ರಯೋಗಗಳನ್ನು ಮಾಡಿರುತ್ತದೆ.
ಅಲ್ಲದೆ ಪಂಚಾಯತ್ ಆವರಣದಲ್ಲಿನ ಕಸವನ್ನು ವಿಲೇ ಮಾಡುವರೇ ಸತತ ಪ್ರಯತ್ನ ಮಾಡಿದ್ದು ಕಸವನ್ನು ವೈಜ್ಞಾನಿಕ ವಿಲೇ ಮಾಡುವ ಏಜನ್ಸಿ ಗಳು ಮುಂದೆ ಬಂದಿದ್ದು ಜಿಲ್ಲಾಧಿಕಾರಿಗಳ ಅನುಮೋದನೆ ಬಳಿಕ ಮೇ 5 ರಂದು ಟೆಂಡರ್ ಕರೆಯಲಾಗಿದ್ದು ಮೇ 12 ಟೆಂಡರ್ ಗೆ ಕೊನೆಯ ದಿನಾಂಕವಾಗಿರುತ್ತದೆ. ಅತ್ಯಂತ ಕಡಿಮೆ ಬಿಡ್ ಕರೆದವರ ಟೆಂಡರ್ ಖಾಯಂ ಗೊಳಿಸಿ ಕಸವನ್ನು ವೈಜ್ಞಾನಿಕವಾಗಿ ವಿಲೇ ಮಾಡುವವರಿಗೆ ಕೊಂಡೊಯ್ಯಲು ನೀಡಲಾಗುವುದು. ಮೇ ತಿಂಗಳ ಅಂತ್ಯದೊಳಗಾಗಿ ಈ ಎಲ್ಲಾ ಪ್ರಕ್ರಿಯೆಗಳು ಮುಗಿಯುವ ನಿರೀಕ್ಷೆ ಇದ್ದು ಈ ಮಧ್ಯೆ ಕಸ ಖಾಲಿಯಾಗುವ ಸುಳಿವು ದೊರೆತ ಕೆಲವರು ಈ ಕ್ರೆಡಿಟ್ ನ್ನು ತಮ್ಮದಾಗಿಸಿಕೊಳ್ಳಲು ಸಾಮಾಜಿಕ ಜಾಲತಾಣಗಳಲ್ಲಿ, ವಾಟ್ಸಾಪ್ ಗುಂಪುಗಳಲ್ಲಿ ಸಮಾಜ ಸುಧಾರಕರಂತೆ ತಮ್ಮನ್ನು ಬಿಂಬಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಇನ್ನು ಕೆಲವರು ಪ್ರತಿಭಟನೆಯ ನಾಟಕವಾಡುತ್ತಿದ್ದಾರೆ. ಇನ್ನೂ ಕೆಲವರು ಕಸ ಸಾಗಾಟವಾಗದಂತೆ ತಡೆಯಲು ಹಿಂಬಾಗಿಲ ಪ್ರಯತ್ನವನ್ನು ಮಾಡುತ್ತಿದ್ದಾರೆ. ಎಂದು ವಿನಯ ಕುಮಾರ್ ಕಂದಡ್ಕ ಹೇಳಿದ್ದಾರೆ.
ಕಸ ವಿಲೇವಾರಿ ಎಂಬುದು ಅತ್ಯಂತ ಸೂಕ್ಶ್ಮ ವಿಷಯವಾಗಿದ್ದು ಎಲ್ಲಾ ನಿಯಮಗಳನ್ನು ಪಾಲಿಸಿಯೇ ಈ ಪ್ರಕ್ರಿಯೆಗಳು ನಡೆದಿರುವುದರಿಂದ ತಡವಾಗಿದೆಯೇ ವಿನಃ ಬೇರ್ಯಾವುದೇ ಕಾರಣದಿಂದಲ್ಲ. ಈಗಾಗಲೇ ತಿಳಿಸಿದಂತೆ ನಗರದ ಮೂಲಭೂತ ಸಮಸ್ಯೆಗಳ ನಿವಾರಣೆ ನಮ್ಮ ಬದ್ಧತೆಯಾಗಿದ್ದು ಇದನ್ನು ಪೂರೈಸಲು ಆಡಳಿತವು ಬದ್ದವಾಗಿರುತ್ತದೆ ಎಂದು ವಿನಯ ಕುಮಾರ್ ಹೇಳಿದ್ದಾರೆ.