Advertisement
ಸುದ್ದಿಗಳು

ಸುಳ್ಯ ನಗರ ಪಂಚಾಯತ್ | ಸುಳ್ಯ ನಗರದ ಮೂಲಭೂತ ಸಮಸ್ಯೆಗಳ ನಿವಾರಣೆಗೆ ಬದ್ಧ | ಕೆಲವರು ಪ್ರತಿಭಟನೆಯ ನಾಟಕವಾಡುತ್ತಿದ್ದಾರೆ | ನಗರ ಪಂಚಾಯತ್‌ ಅಧ್ಯಕ್ಷರ ಹೇಳಿಕೆ |

Share
ಸುಳ್ಯ ನಗರ ಪಂಚಾಯತ್ ನ ಅವರಣದಲ್ಲಿರುವ ಕಸದ ವಿಲೇವಾರಿಗೆ ಸಂಬಂಧಿಸಿದಂತೆ  ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿದ್ದು ಈ ಬಗ್ಗೆ ನಗರ ಪಂಚಾಯತ್‌ ಅಧ್ಯಕ್ಷ ವಿನಯ ಕುಮಾರ್‌ ಕಂದಡ್ಕ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಸುಳ್ಯ ನಗರ ಪಂಚಾಯತ್ ಆವರಣದಲ್ಲಿ 2016 ರಿಂದಲೂ ಕಸ ಸಂಗ್ರಹವಾಗುತ್ತಿದ್ದು ಪಂಚಾಯತ್ ಗೆ ಕಸ ವಿಲೇವಾರಿಗೆ ನಿಗದಿಗೊಳಿಸಿದ ಕಲ್ಚರ್ಪೆ ಯಲ್ಲಿ ಅರಣ್ಯ ಇಲಾಖೆಯ ತಕರಾರಿನ ಕಾರಣದಿಂದಾಗಿ ಹಾಗೂ ಹಿಂದೆ ಅವೈಜ್ಞಾನಿಕವಾಗಿ ಕಸವನ್ನು ರಾಶಿ ಹಾಕಿದ ಕಾರಣದಿಂದ ಸ್ಥಳೀಯರ ಪ್ರತಿಭಟನೆ ಯಿಂದಾಗಿ ಕಸ ವಿಲೇವಾರಿಗೆ ಸ್ಥಳವಿಲ್ಲದೆ ನ ಪಂ ಆವರಣದಲ್ಲಿ ಕಸವನ್ನು ಶೇಖರಿಸಲಾಗಿತ್ತು.

ಪ್ರಸ್ತುತ ಆಡಳಿತವು ಅಧಿಕಾರಕ್ಕೆ ಬಂದ ಬಳಿಕ ಕಸ ವಿಲೇವಾರಿಗೆ ಅನೇಕ ವೈಜ್ಞಾನಿಕ ಪ್ರಯೋಗಗಳನ್ನು ಮಾಡಿರುತ್ತದೆ.
ಅಲ್ಲದೆ ಪಂಚಾಯತ್ ಆವರಣದಲ್ಲಿನ ಕಸವನ್ನು ವಿಲೇ ಮಾಡುವರೇ ಸತತ ಪ್ರಯತ್ನ ಮಾಡಿದ್ದು ಕಸವನ್ನು ವೈಜ್ಞಾನಿಕ ವಿಲೇ ಮಾಡುವ ಏಜನ್ಸಿ ಗಳು ಮುಂದೆ ಬಂದಿದ್ದು ಜಿಲ್ಲಾಧಿಕಾರಿಗಳ ಅನುಮೋದನೆ ಬಳಿಕ ಮೇ 5 ರಂದು ಟೆಂಡರ್ ಕರೆಯಲಾಗಿದ್ದು ಮೇ 12 ಟೆಂಡರ್ ಗೆ ಕೊನೆಯ ದಿನಾಂಕವಾಗಿರುತ್ತದೆ. ಅತ್ಯಂತ ಕಡಿಮೆ ಬಿಡ್ ಕರೆದವರ ಟೆಂಡರ್ ಖಾಯಂ ಗೊಳಿಸಿ ಕಸವನ್ನು ವೈಜ್ಞಾನಿಕವಾಗಿ ವಿಲೇ ಮಾಡುವವರಿಗೆ ಕೊಂಡೊಯ್ಯಲು ನೀಡಲಾಗುವುದು. ಮೇ ತಿಂಗಳ ಅಂತ್ಯದೊಳಗಾಗಿ ಈ ಎಲ್ಲಾ ಪ್ರಕ್ರಿಯೆಗಳು ಮುಗಿಯುವ ನಿರೀಕ್ಷೆ ಇದ್ದು ಈ ಮಧ್ಯೆ ಕಸ ಖಾಲಿಯಾಗುವ ಸುಳಿವು ದೊರೆತ ಕೆಲವರು ಈ ಕ್ರೆಡಿಟ್ ನ್ನು ತಮ್ಮದಾಗಿಸಿಕೊಳ್ಳಲು ಸಾಮಾಜಿಕ ಜಾಲತಾಣಗಳಲ್ಲಿ, ವಾಟ್ಸಾಪ್ ಗುಂಪುಗಳಲ್ಲಿ ಸಮಾಜ ಸುಧಾರಕರಂತೆ ತಮ್ಮನ್ನು ಬಿಂಬಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಇನ್ನು ಕೆಲವರು ಪ್ರತಿಭಟನೆಯ ನಾಟಕವಾಡುತ್ತಿದ್ದಾರೆ. ಇನ್ನೂ ಕೆಲವರು ಕಸ ಸಾಗಾಟವಾಗದಂತೆ ತಡೆಯಲು ಹಿಂಬಾಗಿಲ ಪ್ರಯತ್ನವನ್ನು ಮಾಡುತ್ತಿದ್ದಾರೆ. ಎಂದು ವಿನಯ ಕುಮಾರ್‌ ಕಂದಡ್ಕ ಹೇಳಿದ್ದಾರೆ.

ಕಸ ವಿಲೇವಾರಿ ಎಂಬುದು ಅತ್ಯಂತ ಸೂಕ್ಶ್ಮ ವಿಷಯವಾಗಿದ್ದು ಎಲ್ಲಾ ನಿಯಮಗಳನ್ನು ಪಾಲಿಸಿಯೇ ಈ ಪ್ರಕ್ರಿಯೆಗಳು ನಡೆದಿರುವುದರಿಂದ ತಡವಾಗಿದೆಯೇ ವಿನಃ ಬೇರ್ಯಾವುದೇ ಕಾರಣದಿಂದಲ್ಲ. ಈಗಾಗಲೇ ತಿಳಿಸಿದಂತೆ ನಗರದ ಮೂಲಭೂತ ಸಮಸ್ಯೆಗಳ ನಿವಾರಣೆ ನಮ್ಮ ಬದ್ಧತೆಯಾಗಿದ್ದು ಇದನ್ನು ಪೂರೈಸಲು ಆಡಳಿತವು ಬದ್ದವಾಗಿರುತ್ತದೆ ಎಂದು ವಿನಯ ಕುಮಾರ್ ಹೇಳಿದ್ದಾರೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

25 ಸಾವಿರ ವರ್ಷಗಳ ಹಿಂದೆಯೇ ಅಡಿಕೆ ಬಳಕೆ ? ಪುರಾತನ ಹಲ್ಲುಗಳಲ್ಲಿ ಸಿಕ್ಕಿದ ಸುಳಿವು

ಇಂಡೋನೇಷ್ಯಾದ ಸುಲವೆಸಿಯಲ್ಲಿ ಪತ್ತೆಯಾದ ಸುಮಾರು 25,000 ವರ್ಷಗಳ ಹಿಂದಿನ ಮಾನವ ಹಲ್ಲುಗಳಲ್ಲಿ ಅಡಿಕೆ…

4 hours ago

“ಹನುಮಾನ್ ಅಂಶ್‌” ಬಾಕ್ಸ್ ಆಫೀಸ್ ದಾಖಲೆ – 40ನೇ ದಿನವೂ ₹8.25 ಕೋಟಿ – ಪಠಾಣ್‌, ಛಾವಾ, ಉರಿ ದಾಖಲೆ ಮೀರಿಸಿದ ಸಿನಿಮಾ

‘ಹನುಮಾನ್ ಅಂಶ್’ ಸಿನಿಮಾ 40ನೇ ದಿನವೂ ₹8.25 ಕೋಟಿ ಗಳಿಸಿ ಬಾಕ್ಸ್ ಆಫೀಸ್‌ನಲ್ಲಿ…

6 hours ago

ಮುಂಗಾರು ಹಿಂದೆ ಸರಿಯಲು ಸಜ್ಜು – ಸೆ.17ರಿಂದ ಪಶ್ಚಿಮ ರಾಜಸ್ಥಾನದಲ್ಲಿ ಆರಂಭವಾಗುವ ಸಾಧ್ಯತೆ

ನೈಋತ್ಯ ಮುಂಗಾರು ಹಿಂದೆ ಸರಿಯಲು ಪೂರಕ ಪರಿಸ್ಥಿತಿಗಳು ನಿರ್ಮಾಣವಾಗುತ್ತಿದ್ದು, ಸೆ.17ರ ವೇಳೆಗೆ ಪಶ್ಚಿಮ…

12 hours ago

ಹವಾಮಾನ ವರದಿ | 16-09-2026 | ಕರಾವಳಿಯಲ್ಲಿ ಸೆಖೆ, ಸಂಜೆ ಅಲ್ಲಲ್ಲಿ ಮಳೆ ನಿರೀಕ್ಷೆ

ಕರ್ನಾಟಕದ ಹಲವು ಭಾಗಗಳಲ್ಲಿ ಸೆ.17ರಂದು ಸಂಜೆ ಹಾಗೂ ರಾತ್ರಿ ಅಲ್ಲಲ್ಲಿ ಸಾಮಾನ್ಯ ಮಳೆಯ…

13 hours ago

ಕೋಲಾರ ಸಮೀಪ 10 ಟನ್ ಸಿಂಥೆಟಿಕ್‌ ಅಡಿಕೆ ವಶ…!?

ಕೋಲಾರದಿಂದ ಬೆಂಗಳೂರಿಗೆ ಸಾಗಿಸಲಾಗುತ್ತಿದ್ದ ಸುಮಾರು 10 ಟನ್ ಸಿಂಥೆಟಿಕ್‌ ಅಡಿಕೆಯನ್ನು ಅಧಿಕಾರಿಗಳು ವಶಪಡಿಸಿಕೊಂಡಿರುವುದಾಗಿ…

20 hours ago

ಮಂಗಳೂರಿನ ಸಚಿವ ಸಂಪುಟ ಸಭೆ | ‘ಅಡಿಕೆ ಜೈವಿಕ ಆರ್ಥಿಕತೆ ಮಿಷನ್’ ಘೋಷಣೆಗೆ ಆಗ್ರಹ

ಮಂಗಳೂರಿನಲ್ಲಿ ಸೆ.18ರಂದು ನಡೆಯಲಿರುವ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಅಡಿಕೆ ಬೆಳೆಗಾರರ ಸಮಸ್ಯೆಗಳಿಗೆ…

1 day ago