ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಳ್ಯ ತಾಲೂಕು ಅತೀ ಹೆಚ್ಚಿನ ಮಳೆ ಬೀಳುವ ಪ್ರದೇಶ. ಮಲೆನಾಡು ತಪ್ಪಲು ಪ್ರದೇಶವಾದ್ದರಿಂದ ಈ ಭಾಗದಲ್ಲಿ ಮಳೆ ಹೆಚ್ಚು. ಅದರಲ್ಲೂ ಕಲ್ಲಾಜೆ, ಸಂಪಾಜೆ, ಕೊಲ್ಲಮೊಗ್ರ ಪ್ರದೇಶದಲ್ಲಿ ಹೆಚ್ಚಿನ ಮಳೆ ಬೀಳುತ್ತದೆ. ಸುಳ್ಯ ಸೇರಿದಂತೆ ದ ಕ ಜಿಲ್ಲೆಯ ವಿವಿಧ ತಾಲೂಕುಗಳ ಸುಮಾರು 40 ಮಂದಿ ಕೃಷಿಕರು ಪ್ರತೀ ದಿನದ ಮಳೆ ಲೆಕ್ಕ ಹಾಗೂ ವಾತಾವರಣದ ಉಷ್ಣತೆಯನ್ನೂ ದಾಖಲಿಸುತ್ತಾರೆ. ಇದರ ಪ್ರಕಾರ ಸುಳ್ಯ ತಾಲೂಕು ಹೆಚ್ಚಿನ ಮಳೆ ಬೀಳುವ ಪ್ರದೇಶವೂ ಆಗಿದೆ. ಸರಕಾರಿ ಲೆಕ್ಕದಲ್ಲಿ ಯಾಕೆ ಸುಳ್ಯ ಅತಿವೃಷ್ಟಿ ಪಟ್ಟಿಯಿಂದ ಕೈತಪ್ಪಿದೆ?.
ಅತಿವೃಷ್ಟಿ ಪೀಡಿತ ತಾಲೂಕು ಪಟ್ಟಿಯಿಂದ ಬಿಟ್ಟು ಹೋದರೆ ಏನು ಸಮಸ್ಯೆ ಎಂಬುದು ಸಾಮಾನ್ಯ ಪ್ರಶ್ನೆಯಾಗಿದೆ. ಪ್ರತೀ ಬಾರಿ ಅತಿವೃಷ್ಟಿ ಪೀಡಿತ ಪ್ರದೇಶಗಳಿಗೆ ಸರಕಾರವು ಮಳೆಹಾನಿ ಎಂದು ಒಂದಷ್ಟು ಅನುದಾನ ಬಿಡುಗಡೆ ಮಾಡುತ್ತದೆ. ಭಾರೀ ಮಳೆಯ ಕಾರಣದಿಂದ ಜನರ ಮೂಲಭೂತ ಅವಶ್ಯಕತೆಯಾದ ರಸ್ತೆ ಸೇರಿದಂತೆ ತಡೆಗೋಡೆಗಳ ಕುಸಿತವಾಗಿರುತ್ತದೆ. ಇದರ ದುರಸ್ತಿಗೆ ಅನುದಾನಗಳು ಲಭ್ಯವಾಗುತ್ತದೆ. ಈ ಅನುದಾನದಲ್ಲಿ ಕೆಲವು ರಸ್ತೆಗಳ ದುರಸ್ತಿಯೂ ಸಾಧ್ಯವಿದೆ. ಆದರೆ ಅತಿವೃಷ್ಟಿ ತಾಲೂಕು ಪಟ್ಟಿಯಿಂದ ಹೊರಬಂದರೆ ಈ ಅನುದಾನದಲ್ಲಿ ಕೊರತೆಯಾಗಬಹುದು ಎಂಬ ಕಾರಣಕ್ಕೆ ಸುಳ್ಯದ ಜನರು ವಾಸ್ತವದ ನೆಲೆಯಲ್ಲಿ ಒತ್ತಾಯ ಮಾಡಿದ್ದರು.
ಮಲೆನಾಡು ಹಿತರಕ್ಷಣಾ ವೇದಿಕೆ ಒತ್ತಾಯ:
