ಪ್ರಸಿದ್ಧ ಚಿನ್ನಾಭರಣ ಮಳಿಗೆ ಮುಳಿಯ ಜ್ಯುವೆಲರ್ಸ್ ಪುತ್ತೂರು ಇದರ ದಿಗ್ದರ್ಶಕರು ಸುಲೋಚನಾ ಶ್ಯಾಮ ಭಟ್(71) ಅವರು ಗುರುವಾರ ಸಂಜೆ ನಿಧನರಾಗಿದ್ದಾರೆ.
ಮುಳಿಯ ಜ್ಯುವೆಲರ್ಸ್ ಪುತ್ತೂರು ಮುಖ್ಯಸ್ಥರಾದ ಮುಳಿಯ ಶ್ಯಾಮ ಭಟ್ ಅವರ ಪತ್ನಿ ಸುಲೋಚನಾ ಶ್ಯಾಮ್ ಭಟ್ ಅವರು ಅಲ್ಪ ಕಾಲದ ಅಸೌಖ್ಯದಿಂದ ಗುರುವಾರ ಸಂಜೆ ನಿಧನರಾದರು. ಮೃತರು ಪತಿ ಮುಳಿಯ ಶ್ಯಾಮ ಭಟ್, ಪುತ್ರರು ಹಾಗೂ ಪುತ್ರಿ ಮತ್ತು ಬಂಧುಗಳನ್ನು ಅಗಲಿದ್ದಾರೆ.
ಸುಲೋಚನಾ ಶ್ಯಾಮ ಭಟ್ ಅವರ ನಿಧನದ ಕಾರಣದಿಂದ ಮುಳಿಯ ಗೋಲ್ಡ್ & ಡೈಮಂಡ್ ಎಲ್ಲಾ ಶಾಖೆಗಳು ನಾಳೆ ಅಂದರೆ ಆ.29 ರಂದು ಕಾರ್ಯನಿರ್ವಹಿಸುತ್ತಿಲ್ಲ ಎಂದು ಸಂಸ್ಥೆಯ ಮುಖ್ಯಸ್ಥರುಗಳಾದ ಕೇಶವಪ್ರಸಾದ್ ಮುಳಿಯ ಹಾಗೂ ಕೃಷ್ಣ ನಾರಾಯಣ ಮುಳಿಯ ತಿಳಿಸಿದ್ದಾರೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement

