ಮಕ್ಕಳ ಆಟದ ಹಿಂದೆ ಅಡಗಿರುವ ಅಪಾಯ ಗೊತ್ತಾ? ಬೇಸಿಗೆ ರಜೆಯಲ್ಲಿ ಮಕ್ಕಳ ಸುರಕ್ಷತೆ ಬಗ್ಗೆ ಇರಲಿ ಎಚ್ಚರಿಕೆ

April 3, 2026
9:24 PM
ಬೇಸಿಗೆ ರಜೆಯಲ್ಲಿ ಮಕ್ಕಳ ಸುರಕ್ಷತೆ ಬಗ್ಗೆ ಪೋಷಕರಿಗೆ ತುಮಕೂರು ಪೊಲೀಸ್ ಎಚ್ಚರಿಕೆ ನೀಡಿದೆ. ಕೆರೆ, ಕಟ್ಟೆ ಹಾಗೂ ಹೊಂಡಗಳ ಬಳಿ ಮಕ್ಕಳನ್ನು ಬಿಡಬಾರದು ಎಂದು ಸೂಚಿಸಲಾಗಿದೆ.

ಬೇಸಿಗೆ ರಜೆ ಆರಂಭವಾಗಿದೆ…  ಮಕ್ಕಳ ನಗುವು, ಆಟ, ಹರ್ಷ ಎಲ್ಲೆಡೆ ಕಾಣಿಸುತ್ತಿದೆ. ಶಾಲೆಯ ಒತ್ತಡದಿಂದ ಮುಕ್ತರಾದ ಮಕ್ಕಳು ಹೊರಾಂಗಣದಲ್ಲಿ ಹೆಚ್ಚು ಸಮಯ ಕಳೆಯಲು ಮುಂದಾಗುತ್ತಾರೆ. ಆದರೆ…  ಈ ಸಂತೋಷದ ಹಿಂದೆ ಮೌನವಾಗಿ ಅಡಗಿರುವ ಅಪಾಯಗಳನ್ನು ನಾವು ಗಮನಿಸುತ್ತಿದ್ದೇವೇ?

Advertisement

ಒಂದು ಕ್ಷಣ ಯೋಚಿಸಿ…
ಮನೆ ಮುಂದೆ ಆಟವಾಡುತ್ತಿದ್ದ ನಿಮ್ಮ ಮಗು ನಿಧಾನವಾಗಿ ಕೆರೆ ಕಡೆಗೆ ಸಾಗುತ್ತದೆ…
ಅಥವಾ ಸ್ನೇಹಿತರ ಜೊತೆ ಕೃಷಿ ಹೊಂಡದ ಬಳಿ ಆಟವಾಡಲು ಹೋಗುತ್ತದೆ…
ನೀವು ಮನೆಯೊಳಗೆ ಇರುವಾಗ… “ಅವರು ಅಲ್ಲಿ ಇದ್ದಾರೆ” ಎಂಬ ನಂಬಿಕೆಯಲ್ಲಿ ಇರುತ್ತೀರಿ…

 ಆ ಒಂದು ಕ್ಷಣದ ನಿರ್ಲಕ್ಷ್ಯ…  ಒಂದು ಕುಟುಂಬದ ಜೀವನವನ್ನೇ ಬದಲಾಯಿಸಬಹುದು.

ಇದನ್ನು ಮನಗಂಡು ತುಮಕೂರು ಜಿಲ್ಲಾ ಪೊಲೀಸ್‌ ಇಲಾಖೆಯು ಪೋಷಕರಿಗೆ ಎಚ್ಚರಿಕೆ ನೀಡಿದೆ. ಮಕ್ಕಳ ಚಲನವಲನಗಳ ಮೇಲೆ ನಿಗಾ ಇರಿಸಬೇಕು ಮತ್ತು ಕೆರೆ, ಕಟ್ಟೆ, ಕೃಷಿ ಹೊಂಡಗಳ ಬಳಿ ಅವರನ್ನು ಬಿಡಬಾರದು ಎಂದು ಸೂಚಿಸಿದೆ.

ಗ್ರಾಮೀಣ ಪ್ರದೇಶಗಳಲ್ಲಿ ನೀರಿನ ಮೂಲಗಳು ಸಾಮಾನ್ಯವಾಗಿ ಸುರಕ್ಷತಾ ವ್ಯವಸ್ಥೆಗಳಿಲ್ಲದೆ ಇರುತ್ತವೆ. ಕೆರೆಗಳು, ಕಟ್ಟೆಗಳು, ಕೃಷಿ ಹೊಂಡಗಳು ಹೊರಗೆ ನೋಡಲು ಸಾಮಾನ್ಯವಾದ ಸ್ಥಳಗಳಂತೆ ಕಂಡರೂ, ಅವುಗಳ ಆಳ ಮತ್ತು ಜಾರಿ ಸ್ವಭಾವದಿಂದ ಅಪಾಯಕಾರಿ. ಮಕ್ಕಳಿಗೆ ಈ ಅಪಾಯಗಳ ಅರಿವು ಕಡಿಮೆ ಇರುವುದರಿಂದ, ಅವರು ಆಟದ ವೇಳೆ ಇಂತಹ ಸ್ಥಳಗಳಿಗೆ ಹತ್ತಿರ ಹೋಗುವ ಸಾಧ್ಯತೆ ಹೆಚ್ಚು.

ಮಕ್ಕಳು ಅಪಾಯವನ್ನು ಅರ್ಥಮಾಡಿಕೊಳ್ಳುವುದಿಲ್ಲ.  ಅವರಿಗೆ ಅದು ಆಟ… ಸಾಹಸ… ಹೊಸ ಅನುಭವ ಆದರೆ ಪೋಷಕರಿಗೆ ಅದು ಜವಾಬ್ದಾರಿ. ಒಂದು ಚಿಕ್ಕ ನಿರ್ಲಕ್ಷ್ಯ…, ಒಂದು ಸಣ್ಣ ತಪ್ಪು… ಈಗ ಬರುತ್ತಾರೆ, ಆಟವಾಡಲಿ, ಏನೂ ಆಗದು ಎಂಬ ನಂಬಿಕೆ… ಇವೆಲ್ಲವೂ ದುರ್ಘಟನೆಗೆ ಕಾರಣವಾಗಬಹುದು.

ಆದ್ದರಿಂದ ಪೋಷಕರು ಮಕ್ಕಳನ್ನು ಒಬ್ಬರೇ ಹೊರಗೆ ಬಿಡುವುದನ್ನು ತಪ್ಪಿಸಬೇಕು. ಮಕ್ಕಳಿಗೆ ನೀರಿನ ಮೂಲಗಳ ಅಪಾಯಗಳ ಬಗ್ಗೆ ತಿಳಿಸಬೇಕು. ಮನೆ ಸುತ್ತಮುತ್ತಲಿನ ಅಪಾಯಕರ ಸ್ಥಳಗಳನ್ನು ಗುರುತಿಸಿ, ಅವುಗಳಿಂದ ದೂರ ಇರಲು ಮಕ್ಕಳಿಗೆ ತಿಳಿಸುವುದು ಬಹಳ ಮುಖ್ಯ. ಯಾವಾಗಲೂ ಹಿರಿಯರ ಮೇಲ್ವಿಚಾರಣೆಯಲ್ಲೇ ಮಕ್ಕಳು ಆಟವಾಡುವಂತೆ ನೋಡಿಕೊಳ್ಳುವುದು ಅತ್ಯುತ್ತಮ ಕ್ರಮ. ಇದಕ್ಕಾಗಿ ಹೀಗೆ ಮಾಡಬಹುದು,

  • ಮಕ್ಕಳನ್ನು ಒಬ್ಬರೇ ಹೊರಗೆ ಬಿಡಬೇಡಿ
  • ಕೆರೆ-ಕಟ್ಟೆ, ಹೊಂಡಗಳ ಬಳಿ ಹೋಗದಂತೆ ತಡೆಹಿಡಿಯಿರಿ
  • ಅಪಾಯಗಳ ಬಗ್ಗೆ ಅವರಿಗೆ ಅರಿವು ಮೂಡಿಸಿ
  • ಹಿರಿಯರ ನಿಗಾವಿಲ್ಲದೆ ಆಟವಾಡಲು ಅವಕಾಶ ಕೊಡಬೇಡಿ

ಬೇಸಿಗೆ ರಜೆ ಎಂದರೆ ಕೇವಲ ಅದು ಆಟದ ಸಮಯವಲ್ಲ, ಅದು ಪೋಷಕರಿಗೆ ಒಂದು ಪರೀಕ್ಷೆಯ ಸಮಯ, ಜವಾಬ್ದಾರಿಯಿಂದ ಇರುವ ಸಮಯವೂ ಹೌದು. ಮಕ್ಕಳಿಗೆ ಕಲಿಕೆಯ ಸಮಯವೂ ಹೌದು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

 

View this post on Instagram

 

A post shared by Rural Mirror (@theruralmirror)

With summer holidays beginning, Tumakuru District Police has warned parents to closely monitor children’s movements. Children should not be allowed near ponds, lakes, or farm pits, as these areas pose serious safety risks.

Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

ಇದನ್ನೂ ಓದಿ

SSLC ಪಾಸ್ ಮಾಡಿದವರಿಗೆ ಸುವರ್ಣಾವಕಾಶ..! ಮಂಗಳೂರಿನ ಜಿಟಿಟಿಸಿಯಲ್ಲಿ 100% ಉದ್ಯೋಗಾಧಾರಿತ ಡಿಪ್ಲೊಮಾ
April 24, 2026
7:30 AM
by: ಮಿರರ್‌ ಡೆಸ್ಕ್
13 ಟನ್ ಅಕ್ರಮ ಅಡಿಕೆ ವಶ : ಕರಾವಳಿ ರಕ್ಷಣಾ ಪಡೆಯ ದಾಳಿ
April 24, 2026
7:24 AM
by: ಮಿರರ್‌ ಡೆಸ್ಕ್
ರಾಜ್ಯದಲ್ಲಿ ಬಿಸಿಲು ಬಿಸಿ ತೀವ್ರ : ಮೈಸೂರಿನಲ್ಲಿ ಸನ್ ಸ್ಟ್ರೋಕ್ ವಾರ್ಡ್ ಆರಂಭಿಸಿದ ಆಸ್ಪತ್ರೆ
April 23, 2026
3:10 PM
by: ಮಿರರ್‌ ಡೆಸ್ಕ್
ರೈತರು ಇಂಧನದಾತರಾಗಬೇಕು – ಭೂಮಿ ಉಳಿಸಿ ಸಮ್ಮೇಳನದಲ್ಲಿ ಸಂದೇಶ
April 23, 2026
2:48 PM
by: ಮಿರರ್‌ ಡೆಸ್ಕ್

You cannot copy content of this page - Copyright -The Rural Mirror