ಸುರತ್ಕಲ್ ನಲ್ಲಿ ಗುರುವಾರ ರಾತ್ರಿ ಯುವಕನೊಬ್ಬನಿಗೆ ಮಾರಕಾಯುಧಗಳಿಂದ ದುಷ್ಕರ್ಮಿಗಳು ಇರಿದಿದ್ದಾರೆ. ಗಂಭೀರ ಗಾಯಗೊಂಡ ಯುವಕನನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಮಹಮ್ಮದ್ ಪಾಝಿಲ್ ಎಂಬ ಯುವಕ ಗಾಯಗೊಂಡವರು.
ಸುರತ್ಕಲ್ ನಲ್ಲಿ ಮಹಮ್ಮದ್ ಪಾಝಿಲ್ ತಲವಾರು ದಾಳಿಯ ಸಿಸಿ ಟಿವಿ ದೃಶ್ಯ.#DakshinaKannada #suratkal pic.twitter.com/xhXOcjaxT5
— theruralmirror (@ruralmirror) July 28, 2022
ಖರೀದಿಗೆಂದು ಸುರತ್ಕಲ್ ಗೆ ಬಂದಿದ್ದ ವೇಳೆ ಕಾರಿನಲ್ಲಿ ಬಂದ ದುಷ್ಕರ್ಮಿಗಳ ತಂಡ ಮುಹಮ್ಮದ್ ಫಾಝಿಲ್ ಮೇಲೆ ತಲವಾರಿನಿಂದ ದಾಳಿ ನಡೆಸಿ ಪರಾರಿಯಾಗಿದೆ. ಸುರತ್ಕಲ್ ಮಂಗಳಪೇಟೆ ನಿವಾಸಿ ಮುಹಮ್ಮದ್ ಫಾಝಿಲ್ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳದಲ್ಲಿ ಪೊಲೀಸರು ಬಿಗು ಬಂದೋಬಸ್ತ್ ಕೈಗೊಂಡಿದ್ದಾರೆ. ತಲವಾರು ದಾಳಿಗೆ ಕಾರಣ ತಿಳಿದುಬಂದಿಲ್ಲ.
ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್ನಲ್ಲಿ ಯುವಕನ ಮೇಲೆ ಮಾರಕಾಸ್ತ್ರಗಳಿಂದ ದಾಳಿ | ಯುವಕನಿಗೆ ಗಂಭೀರ ಗಾಯ| ಬಿಗಿ ಬಂದೋಬಸ್ತ್ | #DakshinaKannada #suratkal pic.twitter.com/a79NBIOcbN
— theruralmirror (@ruralmirror) July 28, 2022