ವಂದೇ ಭಾರತ್ ರೈಲು ಓಡಿಸಿದ ಏಷ್ಯಾದ ಮೊದಲ ಮಹಿಳಾ ಲೋಕೋ ಪೈಲಟ್ : ಸುರೇಖಾ ಯಾದವ್ ದೇಶದ ಹೆಮ್ಮೆ

March 15, 2023
1:39 PM

ಮಹಿಳೆಯರು ಯಾವುದೇ ಕ್ಷೇತ್ರವಾದರೂ ಸೈ. ತಮ್ಮ ಸಾಮರ್ಥ್ಯವನ್ನು ತೋರಿಸಲು ಸಿದ್ಧ. ಏಷ್ಯಾದ ಮೊದಲ ಮಹಿಳಾ ಲೋಕೋ ಪೈಲಟ್ ಸುರೇಖಾ ಯಾದವ್ ಅವರು ಹೊಸದಾಗಿ ಪರಿಚಯಿಸಲಾದ ಸೆಮಿ-ಹೈ ಸ್ಪೀಡ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ನಿರ್ವಹಿಸಿದ ಮೊದಲ ಮಹಿಳಾ ಲೋಕೋ ಪೈಲಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

Advertisement
Advertisement
Advertisement

ಈ ಕುರಿತು ಕೇಂದ್ರ ರೈಲ್ವೆ ಸಚಿವಾಲಯ ಮಾಹಿತಿ ನೀಡಿದ್ದು, ಮುಂಬೈನ ಸೊಲ್ಲಾಪುರ ನಿಲ್ದಾಣ ಮತ್ತು ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ (CSMT) ನಡುವೆ ಸೆಮಿ ಹೈಸ್ಪೀಡ್ ರೈಲನ್ನು ಸುರೇಖಾ ಯಾದವ್ ಅವರು ಪೈಲಟ್ ಮಾಡಿದರು. ರೈಲು ಮಾರ್ಚ್ 13 ರಂದು ಸರಿಯಾದ ಸಮಯಕ್ಕೆ ಸೊಲ್ಲಾಪುರ ನಿಲ್ದಾಣದಿಂದ ಹೊರಟಿತು ಮತ್ತು ನಿಗದಿತ ಸಮಯಕ್ಕೆ ಆಗಮನಕ್ಕೆ ಐದು ನಿಮಿಷಗಳ ಮೊದಲು CSMT ತಲುಪಿತು ಎಂದು ಕೇಂದ್ರ ರೈಲ್ವೆ ಇಲಾಖೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

Advertisement

450-ಕಿಮೀ ದೂರದ ಪ್ರಯಾಣವನ್ನು ಪೂರ್ಣಗೊಳಿಸಿದ ನಂತರ, ಸುರೇಖಾ ಯಾದವ್ ಅವರನ್ನು CSMT ನಲ್ಲಿ ಪ್ಲಾಟ್‌ಫಾರ್ಮ್ ಸಂಖ್ಯೆ 8 ರಲ್ಲಿ ಸನ್ಮಾನಿಸಲಾಯಿತು. ಇದೇ ವಿಚಾರವಾಗಿ ಟ್ವೀಟ್ ಮಾಡಿರುವ  ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು, ‘ವಂದೇ ಭಾರತ್ – ನಾರಿ ಶಕ್ತಿಯಿಂದ ನಡೆಸಲ್ಪಡುತ್ತಿದೆ. ಶ್ರೀಮತಿ ಸುರೇಖಾ ಯಾದವ್, ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಮೊದಲ ಮಹಿಳಾ ಲೋಕೋ ಪೈಲಟ್” ಎಂದು ಟ್ವೀಟ್ ಮಾಡಿದ್ದಾರೆ.

ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಮೊದಲ ಮಹಿಳಾ ಲೋಕೋ ಪೈಲಟ್ ಆಗುವ ಮೂಲಕ ಸುರೇಖಾ ಯಾದವ್ ತಮ್ಮ ಕೇಂದ್ರ ರೈಲ್ವೆಯ ಹಿರಿಮೆಗೆ ಮತ್ತೊಂದು ಗರಿಯನ್ನು ಮೂಡಿಸಿಕೊಂಡಿದ್ದಾರೆ ಎಂದು ಕೇಂದ್ರ ರೈಲ್ವೆ ಹೇಳಿದೆ.

Advertisement

ವೇಗದ ರೈಲು, ಸುಧಾರಿತ ತಂತ್ರಜ್ಞಾನ: ಸುರೇಖಾ ಯಾದವ್
ಅತ್ಯಾಧುನಿಕ ವಂದೇ ಭಾರತ್ ರೈಲು ಚಾಲನೆಯ ಮೊದಲ ಅನುಭವದ ಬಗ್ಗೆ ಸುರೇಖಾ ಯಾದವ್ ಅವರನ್ನು ಕೇಳಿದಾಗ, “ವಂದೇ ಭಾರತ್ ವೇಗದ ರೈಲು, ಸುಧಾರಿತ ತಂತ್ರಜ್ಞಾನವನ್ನು ಹೊಂದಿದೆ. ಆದ್ದರಿಂದ ಸಾಂಪ್ರದಾಯಿಕ ರೈಲುಗಳಿಗೆ ಹೋಲಿಸಿದರೆ ಹೆಚ್ಚು ಜಾಗರೂಕತೆಯ ಅಗತ್ಯವಿದೆ. ವಂದೇ ಭಾರತ್ ರೈಲನ್ನು ಚಲಾಯಿಸಲು ನೀಡಿದ ಅವಕಾಶಕ್ಕಾಗಿ ಅವರು ಕೃತಜ್ಞತೆ” ಎಂದು ಹೇಳಿದ್ದಾರೆ.

ಯಾರು ಈ ಸುರೇಖಾ ಯಾದವ್?: 
ಪಶ್ಚಿಮ ಮಹಾರಾಷ್ಟ್ರದ ಸತಾರಾ ಮೂಲದವರಾಗಿರುವ ಸುರೇಖಾ ಯಾದವ್ ಅವರು 1988 ರಲ್ಲಿ ಭಾರತದ ಮೊದಲ ಮಹಿಳಾ ರೈಲು ಚಾಲಕರಾದರು. ಇಲಾಖೆಯಲ್ಲಿ ಅವರು ಸಲ್ಲಿಸಿರುವ ಸೇವೆ ಮತ್ತು ಸಾಧನೆಗಾಗಿ ಈವರೆಗೆ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಅವರು ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಸುರೇಖಾ ಅವರು ಸೆಂಟ್ರಲ್ ರೈಲ್ವೆಗೆ ಸೇರುವ ಮೊದಲು ಎಲೆಕ್ನಿಕಲ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾವನ್ನು ಪಡೆದಿದ್ದರು. ವಂದೇ ಭಾರತ್ ರೈಲಿನಲ್ಲಿ ಚಾಲಕರಾಗಿ ನಿಯೋಜನೆಗೊಳ್ಳುವ ಮೊದಲು, ಅವರು ಫೆಬ್ರವರಿ 2023 ರಲ್ಲಿ ರೈಲ್ವೇ ಇನ್ಸಿಟ್ಯೂಟ್ ವಡೋದರಾದಲ್ಲಿ ತರಬೇತಿ ಪೂರ್ಣಗೊಳಿಸಿದ್ದಾರೆ.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ವರದಿ | 19.01.2025 | ಇಂದು ಕೆಲವು ಕಡೆ ತುಂತುರು ಮಳೆ ಸಾಧ್ಯತೆ | ಕೃಷಿಕರೇ ಇರಲಿ ಎಚ್ಚರ |
January 19, 2025
11:01 AM
by: ಸಾಯಿಶೇಖರ್ ಕರಿಕಳ
ಸರ್ಕಾರದ ಯೋಜನೆಗಳನ್ನು ರೈತರು ಸದುಪಯೋಗಪಡಿಸಿಕೊಳ್ಳುವಂತೆ ಸಚಿವ ಈಶ್ವರ್ ಖಂಡ್ರೆ ಕರೆ
January 19, 2025
7:22 AM
by: The Rural Mirror ಸುದ್ದಿಜಾಲ
ಅಡಿಕೆ ಬೆಳೆಗಾರರಿಗೆ ಆತಂಕ ಬೇಡ | ಅಡಿಕೆ ಬೆಳೆಗಾರರ ಸಮಸ್ಯೆ ಬಗಹೆರಿಸಲು ಸಿದ್ದ | ಕೇಂದ್ರ ಸಚಿವ ಶಿವರಾಜ್ ಸಿಂಗ್  ಚಾವ್ಙಾಣ್ ಭರವಸೆ |
January 19, 2025
7:03 AM
by: The Rural Mirror ಸುದ್ದಿಜಾಲ
ಕ್ಯಾಂಪ್ಕೋ ತಯಾರಿಕೆಯ ಕೊಬ್ಬರಿ ಎಣ್ಣೆ “ಕಲ್ಪ” 5 ಲೀಟರ್ ಕ್ಯಾನ್ ಬಿಡುಗಡೆ
January 16, 2025
3:11 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror