#HealthTips | ಬೆಲೆಯಲ್ಲಿ ಅಲ್ಲ ಪೋಷಕಾಂಶಗಳ ದುಬಾರಿ ಹಣ್ಣು| ಪ್ರಕೃತಿಯ ವಿಶೇಷ ಕೊಡುಗೆ ಸೀತಾಫಲ |

July 19, 2023
11:05 AM
ತೋಟಗಾರಿಕಾ ಬೆಳೆಯಾಗಿ ಹೆಚ್ಚು ಪ್ರಸಿದ್ದಿ ಪಡೆದದ್ದು ಸೀತಾಫಲ. ಕ್ಯಾನ್ಸರ್ ದೂರಮಾಡುಲು ಬಹಳ ಉಪಯುಕ್ತ ಹಣ್ಣು. ಹಾಗೆ ರೈತರ ಲಾಭದಾಯಕ ಬೆಳೆ ಕೂಡ ಹೌದು.

ಕೃಷಿತೋ ನಾಸ್ತಿ ದುರ್ಭಿಕ್ಷಂ ಅನ್ನುವ ಮಾತಿದೆ. ಇದು ನಿಜ ಕೂಡ. ಲಾಭ ಬರದೇ ಇರಬಹುದು.. ಆದರೆ ನಿಶ್ಚಿಂತೆಯಿಂದ ಬದುಕುವ ದಾರಿ ತೋರಿಸುತ್ತದೆ. ಹಾಗಾಗಿ ಯಾವ ಬೆಳೆ ಬೆಳೆದರು ಮೋಸ ಇಲ್ಲ. ಅಂತಹದ್ದರಲ್ಲಿ ಸೀತಾಫಲ ಹಣ್ಣು ಕೂಡ ಒಂದು ಲಾಭದಾಯಕ ಬೆಳೆ. ಸತ್ವಭರಿತ ಹಣ್ಣು ಕೂಡಾ ಹೌದು.

Advertisement
Advertisement
Advertisement

ರುಚಿಕರವಾಗಿರುವ ರಾಮಫಲ, ಸೀತಾಫಲ, ಹನುಮಫಲ, ಲಕ್ಷ್ಮಣ ಫಲ ಹಣ್ಣುಗಳ ಬಗ್ಗೆ ಕೇಳಿಯೇ ಇರುತ್ತೀರಿ. ಬಹಳ ಜನ ಸೀತಫಲ ಅಂತು ತಿಂದಿರುತ್ತೀರಿ. ಇನ್ನು ರಾಮಫಲ ನಮ್ಮ ಕರಾವಳಿ ಕಡೆ ಸರ್ವೆ ಸಾಮಾನ್ಯ ಹಿತ್ತಲ ಗಿಡವಾಗಿ ಬೆಳೆದಿರುತ್ತದೆ.

Advertisement

ಈ ಎಲ್ಲಾ ಫಲಗಳು ಕ್ಯಾನ್ಸರ್ ಗೆ ಬಹಳ ಉಪಯುಕ್ತ ಹಣ್ಣುಗಳು. ಹಾಗಾಗಿ ಹೆಚ್ಚಿನ ಮನೆಯಲ್ಲಿ ಇತ್ತೀಚೆಗೆ ಬೆಳೆಯುತ್ತಿದ್ದಾರೆ. ಆದರೆ ತೋಟಗಾರಿಕಾ ಬೆಳೆಯಾಗಿ ಹೆಚ್ಚು ಪ್ರಸಿದ್ದಿ ಪಡೆದದ್ದು ಸೀತಾಫಲ. ಈ ಹಣ್ಣು  ಸೇವನೆಯಿಂದ ಉಂಟಾಗುವ ಅನುಕೂಲಗಳು ಅನೇಕ. ಹಾಗಾಗಿ ಈ ಹಣ್ಣಿನ ಕಾಲ ಬಂತೆಂದರೆ ಹಣ್ಣಿನ ಅಂಗಡಿಗಳಲ್ಲಿ ಇದರದ್ದೇ ಕಾರುಬಾರು. ತಿನ್ನಲು ರುಚಿಯೂ ಹಾಗೆ ಇದೆ.. ಈ ಹಣ್ಣು ತಿನ್ನೋದ್ರಿಂದ ಏನೆಲ್ಲಾ ಲಾಭ ಇದೆ ಅನ್ನೋದನ್ನ ಓದಿ ನೋಡಿ

# ಸೀತಾಫಲದಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಸಿ ಹಾಗೂ ಆ್ಯಂಟಿ ಆಕ್ಸಿಡೆಂಟುಗಳಿದ್ದು ದೇಹಕ್ಕೆ ಎರಗುವ ಫ್ರೀ ರ್‍ಯಾಡಿಕಲ್ ಎಂಬ ಕ್ಯಾನ್ಸರ್ ಕಾರಕ ಕಣಗಳಿಂದ ರಕ್ಷಿಸುತ್ತದೆ. ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ.

Advertisement

# ಇದರಲ್ಲಿ ಪೊಟ್ಯಾಶಿಯಂ ಮತ್ತು ಮೆಗ್ನೀಶಿಯಂ ಸಹಾ ಉತ್ತಮ ಪ್ರಮಾಣದಲ್ಲಿದ್ದು ಹೃದಯದ ಕ್ಷಮತೆ ಹೆಚ್ಚಿಸಿ ಹೃದಯಸಂಬಂಧಿ ತೊಂದರೆಗಳಿಂದ ರಕ್ಷಿಸುತ್ತದೆ.

# ದೇಹದ ಆರೋಗ್ಯ ಕಾಪಾಡುವ ಹಣ್ಣುಗಳಲ್ಲಿ ಒಂದಾಗಿರುವ ಸೀತಾಫಲದಲ್ಲಿ ಹಲವಾರು ಪೋಷಕಾಂಶಗಳಿವೆ. ವಿಶೇಷವಾಗಿ ವಿಟಮಿನ್ ಸಿ ಮತ್ತು ಆ್ಯಂಟಿ ಆಕ್ಸಿಡೆಂಟುಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ.

Advertisement

# ಇದರಲ್ಲಿರುವ ಉತ್ತಮ ಪ್ರಮಾಣದ ಕಾರ್ಬೋಹೈಡ್ರೇಟುಗಳು, ಪೊಟ್ಯಾಶಿಯಂ, ಕರಗುವ ನಾರು ಹಾಗೂ ಇತರ ಅವಶ್ಯಕ ವೈಟಮಿನ್ನುಗಳು ಮತ್ತು ಖನಿಜಗಳು ಇದನ್ನೊಂದು ಪರಿಪೂರ್ಣ ಆಹಾರವಾಗಿಸಿವೆ.

# ಇದರಲ್ಲಿ ಯಾವುದೇ ಬಗೆಯ ಕೊಲೆಸ್ಟ್ರಾಲ್ ಅಥವಾ ಕೊಬ್ಬು ಇರುವುದಿಲ್ಲ. ಅಪಾಯಕಾರಿ ಸೋಡಿಯಂ ಸಹಾ ಅತಿ ಕಡಿಮೆ ಇದೆ.

Advertisement

# ಸೀತಾಫಲದಲ್ಲಿ ವಿಶೇಷವಾಗಿ ‘ವಿಟಮಿನ್ B6’ ಇದೆ. ಇತರ ಆಹಾರದ ಮೂಲಕ ಅತಿ ಅಪರೂಪದಲ್ಲಿ ಸಿಗುವ ಈ ವಿಟಮಿನ್ ಮೆದುಳಿಗೆ ಅಗತ್ಯವಾದ ನ್ಯೂರೋಟ್ರಾನ್ಸ್ ಮಿಟರ್ ಅಥವಾ ನರಸಂಕೇತಗಳನ್ನು ಕೊಂಡೊಯ್ಯುವ ಡೋಪಮೈನ್ ಮತ್ತು ಸೆರೆಟೋನಿನ್ ಉತ್ಪಾದನೆಗೆ ಅಗತ್ಯವಾಗಿದೆ.

# ಇದರಲ್ಲಿರುವ ಅತಿಸೂಕ್ಷ್ಮ ಪೋಷಕಾಂಶಗಳು ವಿಶೇಷವಾಗಿ ತ್ವಚೆಗೆ ಹೆಚ್ಚಿನ ಆರೈಕೆ ನೀಡುತ್ತದೆ.

Advertisement

# ಕಣ್ಣು ಮತ್ತು ಮೆದುಳಿನ ಆರೋಗ್ಯಕ್ಕೆ ಒಳ್ಳೆಯದು.

# ರಕ್ತದಲ್ಲಿ ಹೀಮೋಗ್ಲೋಬಿನ್ ಮಟ್ಟಗಳನ್ನು ಹೆಚ್ಚಿಸುತ್ತದೆ.

Advertisement

# ಕ್ಯಾನ್ಸರ್ ಮತ್ತು ಹೃದ್ರೋಗಳನ್ನು ನಿಯಂತ್ರಿಸುತ್ತದೆ.

# ಸೀತಾಫಲದಲ್ಲಿ ಪ್ರಬಲ ಉರಿಯೂತ ನಿವಾರಕ ಗುಣವಿದೆ. ಇದು ದೇಹವನ್ನು ಹಲವಾರು ಸೋಂಕುಗಳಿಂದ ರಕ್ಷಿಸುತ್ತದೆ.

Advertisement

# ಚರ್ಮವನ್ನು ಕಾಂತಿಯುಕ್ತಗೊಳಿಸುವ ಜೊತೆಗೆ ಚರ್ಮದ ಸೌಂದರ್ಯ ಹೆಚ್ಚಿಸುತ್ತದೆ.

# ಸೀತಾಫಲದ ಸೇವನೆಯಿಂದ ಚರ್ಮದಲ್ಲಿ ನೆರಿಗೆ ಮೂಡುವ ಮತ್ತು ಕಲೆಗಳು ಬೀಳುವ ಸಾಧ್ಯತೆ ಇಲ್ಲವಾಗುತ್ತದೆ.
ಇದಕ್ಕೆಲ್ಲಾ ಇದರಲ್ಲಿರುವ ವಿಟಮಿನ್ ಸಿ ಕಾರಣ. ಇದು ಕ್ಯಾನ್ಸರ್ ಕಾರಕ ಫ್ರೀ ರ್‍ಯಾಡಿಕಲ್ ಎಂಬ ಕಣಗಳ ವಿರುದ್ದ ಹೋರಾಡುತ್ತದೆ.

Advertisement

# ಸೀತಾಫಲ ಹಣ್ಣಿನ ತಿರುಳನ್ನು ಫೇಸ್ ಪ್ಯಾಕ್ ಆಗಿಯೂ ಉಪಯೋಗಿಸುತ್ತಾರೆ. ಸೀತಾಫಲ ಹಣ್ಣಿನ ಫೇಸ್ ಪ್ಯಾಕ್ ಮಾರುಕಟ್ಟೆಯಲ್ಲಿ ದೊರೆಯುತ್ತವೆ.

(ವಾಟ್ಸ್ ಆಪ್ ಕೃಪೆ)

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ವರದಿ | 23-11-2024 | ರಾಜ್ಯದಲ್ಲಿ ಒಣಹವೆ ಮುಂದುವರಿಕೆ | ನ.28 ರಿಂದ ಕೆಲವು ಕಡೆ ಮಳೆ ಸಾಧ್ಯತೆ |
November 23, 2024
12:23 PM
by: ಸಾಯಿಶೇಖರ್ ಕರಿಕಳ
ಇಂಧನ ಉಳಿತಾಯ | ಪರಿಸರ ಜಾಗೃತಿ | ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆ
November 23, 2024
6:21 AM
by: The Rural Mirror ಸುದ್ದಿಜಾಲ
ಕೃಷಿ ಭೂಮಿ ಉಳಿಸಿಕೊಳ್ಳಲು- ಆರೋಗ್ಯ ಕಾಪಾಡಲು ಸಾವಯವ ಕೃಷಿಯತ್ತ ಒಲವು ಬೆಳೆಸಿ | ಐಐಟಿ ನಿರ್ದೇಶಕ ಡಾ.ವೆಂಕಪ್ಪಯ್ಯ ಆರ್. ದೇಸಾಯಿ
November 23, 2024
6:12 AM
by: The Rural Mirror ಸುದ್ದಿಜಾಲ
ಗೇರು ಸಂಶೋಧನಾ ನಿರ್ದೇಶನಾಲಯದಲ್ಲಿ ಕ್ಯೂಆರ್ ಕೋಡ್ ಅಳವಡಿಕೆ
November 23, 2024
6:06 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror