ರಾಜ್ಯದಲ್ಲೇ ಮೊದಲ ಬಾರಿಗೆ ಮಂಗಳಮುಖಿಯರ ಸಮೀಕ್ಷೆ : ತೃತಿಯ ಲಿಂಗಿಗಳಿಗೆ ಸಿಗಲಿದೆ ಸರ್ಕಾರಿ ಸೌಲಭ್ಯ

March 7, 2023
10:04 AM

ನಮ್ಮಂತೆ ಮನುಷ್ಯರಾದ್ರು  ತಾವು ಮಾಡದ ತಪ್ಪಿಗಾಗಿ ಈ ಸಮಾಜದಲ್ಲಿ ಶಿಕ್ಷೆ ಅನುಭವಿಸಿ ಬದುಕುತ್ತಿರುವಾ ದೇವ ಮಾನವರಿವರು. ಸಮಾಜದಿಂದ ಧಿಕ್ಕರಿಸಲ್ಪಟ್ಟ ಇವರಿಗೆ ಎಲ್ಲರಂತಾ ಬದುಕು ದೂರದ ಮಾತು. ಆದರೆ ಇವರು ಸೂರು, ಕೆಲಸ, ತಮಗೆ ಬೇಕಾದ ಜೀವನ ಯಾವುದು ಇಲ್ಲಗಳ ನಡೆವೆ ಬದುಕು ಕಟ್ಟಿಕೊಂಡವರು ತೃತಿಯ ಲಿಂಗಿಗಳು.  ಅದೆಷ್ಟೋ ಸರ್ಕಾರಗಳು ಇವರಿಗೆ ಬದುಕಿನ ಭರವಸೆ ಮಾತ್ರ ಕೊಟ್ಟಿವೆ. ಕೆಲವೊಂದು ದಕ್ಕಿದೆ. ಆದ್ರೂ ಅವರ ಬದುಕು ಸುಧಾರಿಸಲಿಲ್ಲ.

Advertisement
Advertisement

ಇದೀಗ  ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ತೃತೀಯ ಲಿಂಗಿಗಳ ಸಮೀಕ್ಷೆ ನಡೆಯಲಿದೆ. ರಾಜ್ಯದ ಮೈಸೂರು ಮತ್ತು ವಿಜಯಪುರ ಜಿಲ್ಲೆಗಳು ಲಿಂಗತ್ವ ಅಲ್ಪಸಂಖ್ಯಾತರ ಸಮೀಕ್ಷೆಗೆ ಸಜ್ಜಾಗಿವೆ. ತೃತೀಯ ಲಿಂಗಿಗಳ ಜನಸಂಖ್ಯೆಯ ಕುರಿತು ಸ್ಪಷ್ಪ ಮಾಹಿತಿ ಪಡೆದುಕೊಳ್ಳಲು ಈ ಸಮೀಕ್ಷೆ ನಡೆಸಲಾಗುತ್ತಿದೆ. ಜೊತೆಗೆ, ತೃತೀಯ ಲಿಂಗಿಗಳ ಸಾಮಾಜಿಕ-ಆರ್ಥಿಕ ಸ್ಥಿತಿಯ ಬಗ್ಗೆ ಮಾಹಿತಿ ಪಡೆಯಲು ಈ ಸಮೀಕ್ಷೆಯನ್ನು ನಡೆಸಲಾಗುತ್ತಿದೆ.

ತೃತೀಯ ಲಿಂಗಿಗಳಿಂದಲೇ ತೃತೀಯ ಲಿಂಗಿಗಳ ಸಮೀಕ್ಷೆ
ಮಾರ್ಚ್ 10 ರಿಂದ 45 ದಿನಗಳ ಕಾಲ ಸಮೀಕ್ಷೆ ನಡೆಯಲಿದೆ. ಸ್ವತಃ ತೃತೀಯ ಲಿಂಗಿಗಳೇ ಸಮೀಕ್ಷೆ ನಡೆಸಲಿದ್ದಾರೆ. ಸರ್ಕಾರ ನಡೆಸುತ್ತಿರುವ ಈ ತೃತೀಯ ಲಿಂಗಿಗಳ ಸಮೀಕ್ಷೆಯಲ್ಲಿ ಮೈಸೂರು ಜಿಲ್ಲೆಯಿಂದ 9 ತೃತೀಯ ಲಿಂಗಿಗಳು ಸಮೀಕ್ಷೆ ನಡೆಸುವ ತರಬೇತಿ ಪಡೆದುಕೊಂಡಿದ್ದಾರೆ. ಮೈಸೂರು ಮತ್ತು ವಿಜಯಪುರ ಜಿಲ್ಲೆಗಳ ತಾಲೂಕು ಮಟ್ಟದಲ್ಲಿ ತೃತೀಯ ಲಿಂಗಿಗಳಿಂದಲೇ ತೃತೀಯ ಲಿಂಗಿಗಳ ಸಮೀಕ್ಷೆ ನಡೆಸಲಾಗುವುದು ಎಂದು ಮೈಸೂರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಬಸವರಾಜು. ಬಿ ಮಾಹಿತಿ ನೀಡಿದ್ದಾರೆ.

ಗುರುತಿನ ಚೀಟಿ ವಿತರಣೆಯಿಂದ ಸರ್ಕಾರಿ ಸೌಲಭ್ಯ
ಈ ಸಮೀಕ್ಷೆ ನಡೆದ ನಂತರ ಭಾಗವಹಿಸಿದ ಎಲ್ಲ ತೃತೀಯ ಲಿಂಗಿ ವ್ಯಕ್ತಿಗಳಿಗೆ ಗುರುತಿನ ಚೀಟಿಗಳನ್ನು ವಿತರಣೆ ಮಾಡಲಾಗುತ್ತದೆ. ಜೊತೆಗೆ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ತೃತೀಯ ಲಿಂಗಿಗಳಿಗೆ ಈ ಸಮೀಕ್ಷೆ ನೆರವಾಗಲಿದೆ ಎಂದು ಹೇಳಲಾಗಿದೆ.

ಮುಂಬೈ ಸೇರಿದಂತೆ ಇತರ ಮಹಾ ನಗರಗಳಿಗೆ ವಲಸೆ ಹೋದ ಮೈಸೂರು ಮತ್ತು ವಿಜಯಪುರ ಜಿಲ್ಲೆಗಳ ಮಂಗಳಮುಖಿಯರು ಸಮೀಕ್ಷೆ ನಡೆಯುವ ಸಮಯದಲ್ಲಿ ಜಿಲ್ಲೆಗೆ ಆಗಮಿಸುವಂತೆ ಮನವಿ ಮಾಡಲಾಗಿದೆ. ಈ ಸಮೀಕ್ಷೆಯಿಂದ ಮುಂದಿನ ದಿನಗಳಿಂದ ಮಂಗಳಮುಖಿಯರು ಸರ್ಕಾರಿ ಸೌಲಭ್ಯ ಪಡೆಯಲು ಸಾಧ್ಯವಾಗಲಿದೆ.  ಹೀಗಾಗಿ ಯಾವುದೇ ಕಾರಣಕ್ಕೂ ಸಮೀಕ್ಷೆಯಲ್ಲಿ ತಪ್ಪಿಸದೇ  ಪಾಲ್ಗೊಳ್ಳುವಂತೆ ಮೈಸೂರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಬಸವರಾಜು. ಬಿ ಮನವಿ ಮಾಡಿದ್ದಾರೆ.

Advertisement
Advertisement

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಬಾಗಲಕೋಟೆ ಜಿಲ್ಲೆಯ  ಶೂರ್ಪಾಲಿಯ ಶ್ರೀಲಕ್ಷ್ಮೀ ನರಸಿಂಹ ದೇವಾಲಯ
May 16, 2025
9:59 PM
by: The Rural Mirror ಸುದ್ದಿಜಾಲ
ಕಾಯಕ ಗ್ರಾಮ  ಯೋಜನೆ | ಹಿಂದುಳಿದ ಗ್ರಾಮಗಳನ್ನು ದತ್ತು ಸ್ವೀಕರಿಸುವಂತೆ ಸಲಹೆ
May 16, 2025
9:51 PM
by: The Rural Mirror ಸುದ್ದಿಜಾಲ
ಡೆಂಘೀ ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಅಗತ್ಯ ಕ್ರಮಕೈಗೊಳ್ಳಲು ಸರ್ಕಾರದ ಸೂಚನೆ
May 16, 2025
9:43 PM
by: The Rural Mirror ಸುದ್ದಿಜಾಲ
ಕನಿಷ್ಠ ಬೆಂಬಲ ಬೆಲೆಯಲ್ಲಿ ಸೂರ್ಯಕಾಂತಿ ಖರೀದಿ ಪ್ರಕ್ರಿಯೆ ಶೀಘ್ರ ಆರಂಭ
May 16, 2025
9:38 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group