ನಮ್ಮಂತೆ ಮನುಷ್ಯರಾದ್ರು ತಾವು ಮಾಡದ ತಪ್ಪಿಗಾಗಿ ಈ ಸಮಾಜದಲ್ಲಿ ಶಿಕ್ಷೆ ಅನುಭವಿಸಿ ಬದುಕುತ್ತಿರುವಾ ದೇವ ಮಾನವರಿವರು. ಸಮಾಜದಿಂದ ಧಿಕ್ಕರಿಸಲ್ಪಟ್ಟ ಇವರಿಗೆ ಎಲ್ಲರಂತಾ ಬದುಕು ದೂರದ ಮಾತು. ಆದರೆ ಇವರು ಸೂರು, ಕೆಲಸ, ತಮಗೆ ಬೇಕಾದ ಜೀವನ ಯಾವುದು ಇಲ್ಲಗಳ ನಡೆವೆ ಬದುಕು ಕಟ್ಟಿಕೊಂಡವರು ತೃತಿಯ ಲಿಂಗಿಗಳು. ಅದೆಷ್ಟೋ ಸರ್ಕಾರಗಳು ಇವರಿಗೆ ಬದುಕಿನ ಭರವಸೆ ಮಾತ್ರ ಕೊಟ್ಟಿವೆ. ಕೆಲವೊಂದು ದಕ್ಕಿದೆ. ಆದ್ರೂ ಅವರ ಬದುಕು ಸುಧಾರಿಸಲಿಲ್ಲ.
ಇದೀಗ ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ತೃತೀಯ ಲಿಂಗಿಗಳ ಸಮೀಕ್ಷೆ ನಡೆಯಲಿದೆ. ರಾಜ್ಯದ ಮೈಸೂರು ಮತ್ತು ವಿಜಯಪುರ ಜಿಲ್ಲೆಗಳು ಲಿಂಗತ್ವ ಅಲ್ಪಸಂಖ್ಯಾತರ ಸಮೀಕ್ಷೆಗೆ ಸಜ್ಜಾಗಿವೆ. ತೃತೀಯ ಲಿಂಗಿಗಳ ಜನಸಂಖ್ಯೆಯ ಕುರಿತು ಸ್ಪಷ್ಪ ಮಾಹಿತಿ ಪಡೆದುಕೊಳ್ಳಲು ಈ ಸಮೀಕ್ಷೆ ನಡೆಸಲಾಗುತ್ತಿದೆ. ಜೊತೆಗೆ, ತೃತೀಯ ಲಿಂಗಿಗಳ ಸಾಮಾಜಿಕ-ಆರ್ಥಿಕ ಸ್ಥಿತಿಯ ಬಗ್ಗೆ ಮಾಹಿತಿ ಪಡೆಯಲು ಈ ಸಮೀಕ್ಷೆಯನ್ನು ನಡೆಸಲಾಗುತ್ತಿದೆ.
ತೃತೀಯ ಲಿಂಗಿಗಳಿಂದಲೇ ತೃತೀಯ ಲಿಂಗಿಗಳ ಸಮೀಕ್ಷೆ
ಮಾರ್ಚ್ 10 ರಿಂದ 45 ದಿನಗಳ ಕಾಲ ಸಮೀಕ್ಷೆ ನಡೆಯಲಿದೆ. ಸ್ವತಃ ತೃತೀಯ ಲಿಂಗಿಗಳೇ ಸಮೀಕ್ಷೆ ನಡೆಸಲಿದ್ದಾರೆ. ಸರ್ಕಾರ ನಡೆಸುತ್ತಿರುವ ಈ ತೃತೀಯ ಲಿಂಗಿಗಳ ಸಮೀಕ್ಷೆಯಲ್ಲಿ ಮೈಸೂರು ಜಿಲ್ಲೆಯಿಂದ 9 ತೃತೀಯ ಲಿಂಗಿಗಳು ಸಮೀಕ್ಷೆ ನಡೆಸುವ ತರಬೇತಿ ಪಡೆದುಕೊಂಡಿದ್ದಾರೆ. ಮೈಸೂರು ಮತ್ತು ವಿಜಯಪುರ ಜಿಲ್ಲೆಗಳ ತಾಲೂಕು ಮಟ್ಟದಲ್ಲಿ ತೃತೀಯ ಲಿಂಗಿಗಳಿಂದಲೇ ತೃತೀಯ ಲಿಂಗಿಗಳ ಸಮೀಕ್ಷೆ ನಡೆಸಲಾಗುವುದು ಎಂದು ಮೈಸೂರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಬಸವರಾಜು. ಬಿ ಮಾಹಿತಿ ನೀಡಿದ್ದಾರೆ.
ಗುರುತಿನ ಚೀಟಿ ವಿತರಣೆಯಿಂದ ಸರ್ಕಾರಿ ಸೌಲಭ್ಯ
ಈ ಸಮೀಕ್ಷೆ ನಡೆದ ನಂತರ ಭಾಗವಹಿಸಿದ ಎಲ್ಲ ತೃತೀಯ ಲಿಂಗಿ ವ್ಯಕ್ತಿಗಳಿಗೆ ಗುರುತಿನ ಚೀಟಿಗಳನ್ನು ವಿತರಣೆ ಮಾಡಲಾಗುತ್ತದೆ. ಜೊತೆಗೆ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ತೃತೀಯ ಲಿಂಗಿಗಳಿಗೆ ಈ ಸಮೀಕ್ಷೆ ನೆರವಾಗಲಿದೆ ಎಂದು ಹೇಳಲಾಗಿದೆ.
ಮುಂಬೈ ಸೇರಿದಂತೆ ಇತರ ಮಹಾ ನಗರಗಳಿಗೆ ವಲಸೆ ಹೋದ ಮೈಸೂರು ಮತ್ತು ವಿಜಯಪುರ ಜಿಲ್ಲೆಗಳ ಮಂಗಳಮುಖಿಯರು ಸಮೀಕ್ಷೆ ನಡೆಯುವ ಸಮಯದಲ್ಲಿ ಜಿಲ್ಲೆಗೆ ಆಗಮಿಸುವಂತೆ ಮನವಿ ಮಾಡಲಾಗಿದೆ. ಈ ಸಮೀಕ್ಷೆಯಿಂದ ಮುಂದಿನ ದಿನಗಳಿಂದ ಮಂಗಳಮುಖಿಯರು ಸರ್ಕಾರಿ ಸೌಲಭ್ಯ ಪಡೆಯಲು ಸಾಧ್ಯವಾಗಲಿದೆ. ಹೀಗಾಗಿ ಯಾವುದೇ ಕಾರಣಕ್ಕೂ ಸಮೀಕ್ಷೆಯಲ್ಲಿ ತಪ್ಪಿಸದೇ ಪಾಲ್ಗೊಳ್ಳುವಂತೆ ಮೈಸೂರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಬಸವರಾಜು. ಬಿ ಮನವಿ ಮಾಡಿದ್ದಾರೆ.
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…
ಕ್ಯೂಆರ್ ಕೋಡ್ ಬಳಸಿಕೊಂಡು ಗೇರು ತಳಿಗಳ ಮಾಹಿತಿ ಪಡೆಯಲು ಪುತ್ತೂರಿನ ಗೇರು ಸಂಶೋಧನಾ…
ಅಡಿಕೆಗೆ ಹಳದಿ ಎಲೆರೋಗದಿಂದ ಅಡಿಕೆ ಮರಗಳು ನಾಶವಾಗುತ್ತಿವೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ…
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…