ಸುಸ್ಥಿರ ಕೃಷಿ ತರಬೇತಿ ಕಾರ್ಯಗಾರ | ಯುವ ಕೃಷಿಕರಿಗೆ ಕೃಷಿ ಬಗ್ಗೆ ಮಾಹಿತಿ

May 16, 2024
5:58 PM

ಮೂರು ದಿನಗಳ ‘ಸುಸ್ಥಿರ ಕೃಷಿ ತರಬೇತಿ'(Sustainable Agriculture Training) ಕಾರ್ಯಾಗಾರ ಮೇ.28 ರಿಂದ 30 ರವರೆಗೆ  ಜೆ ಎಸ್ ಬಿ ಪ್ರತಿಷ್ಠಾನ, ಕೊಳ್ಳೇಗಾಲ ಇವರ ವತಿಯಿಂದ ಚಾಮರಾಜನಗರ ಜಿಲ್ಲೆಯಲ್ಲಿ ನಡೆಯಲಿದೆ.

Advertisement
Advertisement
Advertisement

ಸಹಜ ಕೃಷಿ ವಿಜ್ಞಾನಿ ಡಾ| ಮಂಜುನಾಥ ಹೆಚ್ ನೇತೃತ್ವದಲ್ಲಿ ನಡೆಯುವ ಈ ಶಿಬಿರದಲ್ಲಿ  ವಿವಿಧ ಕ್ಷೇತ್ರಗಳ ಸಂಪನ್ಮೂಲ ವ್ಯಕ್ತಿಗಳು, ವಿಷಯ ತಜ್ಞರು, ಪರಿಣಿತರು, ಕೃಷಿ ವಿಜ್ಞಾನಿಗಳು ಮತ್ತು ಅನುಭವಿ ಕೃಷಿಕರೊಂದಿಗೆ, ಸುಸ್ಥಿರ ಕೃಷಿಯಲ್ಲಿ ಆಸಕ್ತಿಯುಳ್ಳವರು, ಉತ್ತಮ ಆರೋಗ್ಯ ಮತ್ತು ಜೀವನಕ್ಕಾಗಿ, ಪೌಷ್ಟಿಕ ಆಹಾರ ಮತ್ತು ಒತ್ತಡ ಮುಕ್ತ ಜೀವನ ಬಯಸುವ, ಹೊಸ ತೋಟವನ್ನು ನಿರ್ಮಿಸುವ ಕನಸು ಹೊಂದಿರುವವರು, ಈಗಾಗಲೇ ಕೃಷಿಯಲ್ಲಿ ತೊಡಗಿರುವವರನ್ನು ಮೂರು ದಿನಗಳ ಸಮಗ್ರ, ಸುಸ್ಥಿರ ಕೃಷಿ ತರಬೇತಿ ಕಾರ್ಯಗಾರಕ್ಕೆ ಆಹ್ವಾನಿಸಲಾಗಿದೆ.

Advertisement

ಕಾರ್ಯಗಾರದಲ್ಲಿ : ಮಣ್ಣಿನ ಅಧ್ಯಯನ, ಬೆಳೆ ಸಂಯೋಜನೆ, ಗಿಡಗಳಲ್ಲಿ ಪೋಷಕಾಂಶಗಳ ಕೊರತೆಯ ಲಕ್ಷಣಗಳು, ಸೂಕ್ಷ್ಮ ಜೀವಾಣುಗಳ ತಯಾರಿಕೆ, ಉತ್ತಮ ಗೊಬ್ಬರ ತಯಾರಿಕೆ, ತೋಟಗಳ ಅಧ್ಯಯನ ಮತ್ತು ಪ್ರಾತ್ಯಕ್ಷಿಕೆ ಜೊತೆಗೆ ಸಾಕಷ್ಟು ಉಪಯುಕ್ತ ಮಾಹಿತಿಯನ್ನು ಹಂಚಿಕೊಳ್ಳಲಾಗುತ್ತದೆ.

  • ಕೃಷಿ ಭೂಮಿ ವಿನ್ಯಾಸ.
  • ಮಣ್ಣಿನ ಪ್ರಾಮುಖ್ಯತೆ ಮತ್ತು ಕೃಷಿಗೆ ಬೇಕಾದ ಮಣ್ಣು ಸಿದ್ದಪಡಿಸಿಕೊಳ್ಳುವುದು.
  • ಗೊಬ್ಬರ ಮತ್ತು ಜೀವಾಣುಗಳ ತಯಾರಿಕೆ.
  • ಬೀಜ ಮತ್ತು ಗಿಡಗಳ ಆಯ್ಕೆ.
  • ಬೆಳೆ ಆಯೋಜನೆ.
  • ರೋಗ ಮತ್ತು ಕೀಟಗಳ ನೈಸರ್ಗಿಕ ನಿಯಂತ್ರಣ.
  • ನೀರಾವರಿ ನಿರ್ವಹಣೆ.
  • ಬೆಳೆ ಉಳಿಕೆಗಳ ಸದ್ಭಳಕೆ.
  • ಕೃಷಿಯ ಇತಿಮಿತಿ ಮತ್ತು ಅದರ ಪ್ರಾಮುಖ್ಯತೆ.
  • ಮಾರುಕಟ್ಟೆ ಮತ್ತು ಮೌಲ್ಯವರ್ಧನೆಯ ಅವಕಾಶಗಳು ಮತ್ತು ಸವಾಲುಗಳು,
  • ಆಹಾರ ಮೈಲುಗಳನ್ನು ಕಡಿಮೆ ಮಾಡುವುದು.
  • ಹವಾಮಾನ ವೈಪರೀತ್ಯದಿಂದ ಕೃಷಿ ವಲಯದ ಮೇಲೆ ಬೀಳುತ್ತಿರುವ ಹೊರೆ.
  • ಹವಾಮಾನ ಬದಲಾವಣೆ ನಿಟ್ಟಿನಲ್ಲಿ ನಮ್ಮ ಕೃಷಿಯಲ್ಲಿ ಆಗಬೇಕಾದ ಬದಲಾವಣೆ.
  • ಕೃಷಿ ಮಾರುಕಟ್ಟೆ ಬಿಕ್ಕಟ್ಟು ಮತ್ತು ಸವಾಲುಗಳು.. …ಹಾಗು ಇನ್ನಷ್ಟು ವಿಚಾರಗಳು…

ಬಿಡುವಿನ ವೇಳೆಯಲ್ಲಿ ಗುಂಪು ಚರ್ಚೆಗಳು, ಪ್ರಾತ್ಯಕ್ಷಿಕೆ, ವಿಚಾರ ವಿನಿಮಯ ಮತ್ತು ಶ್ರಮದಾನ ಇರುತ್ತದೆ.  ಮುಂಚಿತವಾಗಿ ಹೆಸರು ನೋಂದಾಯಿಸಿದವರಿಗೆ ಮಾತ್ರ ಕಾರ್ಯಾಗಾರದಲ್ಲಿ ಭಾಗವಹಿಸಲು ಅವಕಾಶವಿದೆ. ನೇರ ಭೇಟಿಗೆ ಅವಕಾಶವಿಲ್ಲ. ತರಬೇತಿ ಶುಲ್ಕ : ₹1000/- ಒಬ್ಬರಿಗೆ  ವಸತಿ ಸಹಿತ ಕಾರ್ಯಕ್ರಮವಾಗಿದ್ದು, ಸರಳ ಊಟ ಮತ್ತು ವಸತಿ ವ್ಯವಸ್ಥೆ ಇರುತ್ತದೆ.

Advertisement

ಸ್ಥಳ : ಕೃಷಿಕ ರಾಜೇಶ್ ಅವರ ತೋಟ, ದುಗ್ಗಹಟ್ಟಿ, ಯಳಂದೂರು ತಾಲೂಕು, ಚಾಮರಾಜನಗರ ಜಿಲ್ಲೆ, ಕರ್ನಾಟಕ. ನೋಂದಣಿಗಾಗಿ:  ಶಶಿಕುಮಾರ್, ಕೃಷಿಕರು, ಮೊಬೈಲ್ : 9880949689

ಮಾಹಿತಿ: ಪ್ರಶಾಂತ್ ಜಯರಾಮ್,  ಕೃಷಿಕರು-ಕೃಷಿ ಸಲಹೆಗಾರರು 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ವರದಿ| 21-11-2024 | ಮಳೆಯ ಸಾಧ್ಯತೆ ಕಡಿಮೆ | ನ.26 ಸುಮಾರಿಗೆ ಚಂಡಮಾರುತ ಸಾಧ್ಯತೆ |
November 21, 2024
2:52 PM
by: ಸಾಯಿಶೇಖರ್ ಕರಿಕಳ
ದ ಕ ಜಿಲ್ಲಾ ಮಟ್ಟದ ಸಿರಿಧಾನ್ಯ ಪಾಕ ಸ್ಪರ್ಧೆ
November 20, 2024
8:06 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 20-11-2024 | ರಾಜ್ಯದಲ್ಲಿ ಒಣಹವೆ | ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಲಕ್ಷಣ |
November 20, 2024
5:38 PM
by: ಸಾಯಿಶೇಖರ್ ಕರಿಕಳ
ರಾಜ್ಯದ ಕೈಗಾರಿಕೆಗಳಲ್ಲಿ ಹಸಿರು ತಂತ್ರಜ್ಞಾನ ಅಳವಡಿಸಲು ಆದ್ಯತೆ | ಮುಖ್ಯಮಂತ್ರಿ ಸಿದ್ದರಾಮಯ್ಯ
November 20, 2024
5:05 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror