ಕೃಷಿಯ ಮೇಲಿನ ಅವಲಂಬನೆ ದಿನೇ ದಿನೇ ಹೆಚ್ಚುತ್ತಿದೆ. ಕಾಡು, ನದಿ, ಜಲ ಮೂಲಗಳ ಮೇಲಿನ ಒತ್ತಡ ಹೆಚ್ಚಾಗುತ್ತಿದೆ. ಪರ್ಯಾಯ ಕೃಷಿ ಮಾದರಿಗಳಿಂದ ಇವುಗಳಿಗೆ ಪರಿಹಾರ ಕಂಡುಕೊಳ್ಳಬೇಕು, ಇದಕ್ಕಾಗಿ ಮಲೆನಾಡಿಗೆ ಸುಸ್ಥಿರ ಅಭಿವೃದ್ಧಿ ನೀತಿಯ ಅಗತ್ಯ ಇದೆ ಎಂದು ಪರಿಸರ ವಿಜ್ಞಾನಿ ಡಾ.ಕೇಶವ ಕೋರ್ಸೆ ಹೇಳಿದರು.…..ಮುಂದೆ ಓದಿ….
ಮಲೆನಾಡಿನ ಸುಸ್ಥಿರ ಅಭಿವೃದ್ಧಿ ಕುರಿತ ರಾಜ್ಯ ಮಟ್ಟದ ಕಾರ್ಯಾಗಾರ ಶಿವಮೊಗ್ಗದ ಸಾಗರದಲ್ಲಿ ಆಯೋಜಿಸಲಾಗಿತ್ತು. ಕಾರ್ಯಾಗಾರಕ್ಕೆ ಶಿವಪ್ಪ ನಾಯಕ ಕೃಷಿ ತೋಟಗಾರಿಕಾ ವಿಶ್ವವಿದ್ಯಾಲಯದ ಕುಲಪತಿ ಡಾ.ಸಿ.ಆರ್. ಜಗದೀಶ್ ಚಾಲನೆ ನೀಡಿದರು.
ವೃಕ್ಷ ಲಕ್ಷ ಆಂದೋಲನ ಸಂಸ್ಥೆಯ ಮುಖ್ಯಸ್ಥ ಅನಂತ್ ಹೆಗಡೆ ಅಶೀಸರ ಮಾತನಾಡಿ, ಮಲೆನಾಡು, ಕಾಡು, ನದಿ ಇತ್ಯಾದಿ ಜೀವ ವೈವಿದ್ಯಗಳಿಂದ ಆವೃತ್ತವಾಗಿದೆ. ಸುಸ್ಥಿರ ಅಭಿವೃದ್ಧಿ ನೀತಿಯು ಮಲೆನಾಡಿಗೆ ಅಗತ್ಯ ಹೆಚ್ಚಾಗಿದೆ ಎಂದು ಅಭಿಪ್ರಾಯಪಟ್ಟರು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel