ಕೃಷಿಯಲ್ಲಿ ವಿಶೇಷ ಇದೆ ಅಂತಾ ಆಚೆಮನೆ ಶ್ರೀಶ ಹೇಳ್ಕೊಂಡು ಬಂದ್ರೆ….ಸೀದಾ ಕಾರು ಹತ್ತು…. ಅದನ್ನು ನೋಡಿ ಬರೊಣ ಅಂತಾ ಹೇಳೋದು ರೂಢಿ. ಹಾಗಂತ ಅವರೇನಾದ್ರೂ ಹೊಸತನ್ನ ಮಾಡಿದ್ರೆ ಅವರ ಸಾಹಸವನ್ನು ಮನಃ ಪೂರ್ತಿ ಹೊಗಳಿ, ಕೊಟ್ಟ ಕಾಫಿ ತಿಂಡಿ ಎಲ್ಲ ತಿಂದು ಬರೋದಕ್ಕಿಂತ ಆಚೆ ನನ್ನ ಚಟುವಟಿಕೆ ಏನೂ ಇಲ್ಲ. ನಾನು ಕೃಷಿ ತಜ್ಞನೂ ಅಲ್ಲ.. ಅಂತಹಾ ಆಸಕ್ತಿಯೂ ನನಗಿಲ್ಲ. ಕೊನೆಗೂ ನನಗೆ ಹೇಗೆ ಕೂಡುತ್ತೋ ಹಾಗೆ ಮಾತ್ರ ಕೃಷಿ ನಾನು ಮಾಡೋದು. ಹೊಸ ಜನರ ಸಂಪರ್ಕ ನನ್ನ ಅತೀ ಕುಶಿ ಕೊಡುವ ಒಂದು ವ್ಯಾಪ್ತಿ.……… ಮುಂದೆ ಓದಿ…….
ಆದ್ರೂ ಕೃಷಿ ಬಗ್ಗೆಯೇ ಯೋಚನೆ ಮಾಡಿದಾಗ ಕೆಲವು ಪ್ರಶ್ನೆಗಳು ಬಂದವು. ಅದನ್ನು ಅವರಿವರಲ್ಲಿ ಕೇಳಿದಾಗ ಆಶ್ಚರ್ಯ ಆಯ್ತು…
ಒಳ್ಳೆ ಅಡಿಕೆ ಇರುವ ಅಡಿಕೆ ಮರಕ್ಕೆ ಜೂನ್ ಶುರುವಿನಲ್ಲಿ ಒಳ್ಳೆ ಬಿಸಿಲಿನಲ್ಲಿ ಬೋರ್ಡೋ ಬಿಟ್ರೆ, ನಂತ್ರ ಎಷ್ಟೇ ಮಳೆ ಬಂದ್ರೂ 25 ದಿನಕ್ಕೆ ರೋಗ ಬರಲ್ಲ ಅಂತಾ ಗ್ಯಾರಂಟಿ ಕೊಡಬಹುದು. ಒಳ್ಳೆ ಮೆಣಸಿಗೆ ಇದೇ ತರ ಯಾವುದೇ ಮದ್ದು ಕೊಟ್ಟರೆ ಅದೇ ಗ್ಯಾರಂಟಿ ಸಾಧ್ಯವಾ ಅಂತಾ ಕೇಳಿದರೆ ಸ್ಪಷ್ಟ ಉತ್ತರ ಇಲ್ಲ.
ಆಚೆಮನೆ ಶ್ರೀಶನಲ್ಲಿ ನಿಮ್ಮಲ್ಲಿ ಮೆಣಸಿಗೆ ರೋಗ ಬಂದಿದಾ ಕೇಳಿದೆ. ಹೌದು ವಿಪರೀತ ಅಂದಾ. ವಿಪರೀತ ಅಂದರೆ ಎಷ್ಟು ಅಂತಾ ಕೇಳಿದೆ.. ಏನಿಲ್ಲಾಂದ್ರೂ 10% ಹೋಗಿರಬಹುದು ಅಂದಾ. ಸರಿಯಾಗಿ ಮದ್ದು ಬಿಡೋರತ್ರವೂ ಇದೇ ಪ್ರಶ್ನೆ ಕೇಳಿದೆ. ಅವರು ಇದೇ ಉತ್ತರ.. ಅಂದರೆ.. ಮದ್ದು ಬಿಟ್ರೆ ಪೂರ್ತಿ ಹತೋಟಿ ಆಗ್ತದೆ. ಬಹಳ ಕಡಿಮೆ ಸಾಯ್ತದೆ ಅಂದ್ರು ಎಷ್ಟು ಅಂತಾ ಕೇಳಿದೆ. ಸ್ವಲ್ಪ ಯೋಚನೆ ಮಾಡಿ ಬಹಳ ಹೆಚ್ಚೆಂದ್ರೆ ಒಂದು 10% ಸಾಯಬಹುದಷ್ಟೆ ಅಂದರು… ಈಗಾ ನೀವು ಹೇಳಿ.. ಮುದ್ದು ಬಿಟ್ರೆ ಉಪಯೋಗ ಇದೆಯಾ ಇಲ್ವಾ ಅಂತಾ.. ನಿಮ್ಮ ನೈಜ ಉತ್ತರ ಬಹಳ ಕೃಷಿಕರಿಗೆ ಉಪಯೋಗ ಆಗಬಹುದಲ್ವಾ..?
ಬಹಳ ಕೃಷಿಕರಲ್ಲಿ ಸೂಕ್ತವಾದ ಅಧ್ಯಯನ ಸಹಿತದ ಉತ್ತರ ಇರಲ್ಲ.. ಜನವರಿ 25 ರ ಅಂದಾಜಿಗೆ ಬಹಳ ಕೃಷಿಕರಿಗೆ ಇದೇ ರೀತಿಯ ಎರಡನೇ ಪ್ರಶ್ನೆ ಕೇಳಿದೆ. ಈವರೆಗೆ ನಿಮ್ಮಲ್ಲಿ ಸಿಂಗಾರ ಹೇಗೆ ಬಿಟ್ಟಿದೆ ಅಂತಾ.. ಈ ವರ್ಷ ಬಹಳ ಭರ್ಜರಿ ಬಿಟ್ಟಿದೆ ಅಂತಾ ಹೆಚ್ಚಿನವರ ಉತ್ತರ. ಈ ತಾರೀಕು ವರೇಗೆ ಎಷ್ಟನೇ ಸಿಂಗಾರ ಬಿಟ್ಟು ಅರಳಿದೆ ಅಂತಾ ಕೇಳಿದರೆ ಉತ್ತರ ತಬ್ಬಿಬ್ಬು.. ನಾನೇ.. ನಮ್ಮಲ್ಲಿ ಇಂದಿನ ವರೆಗೆ ಒಂದು ಅರಳಿದೆ. ಎರಡನೆಯದ್ದು ಸೋಗೆ ಬಿದ್ದು ಹೊರಗೆ ಬಂದಿದೆ.. ಅಂತಾ ಹೇಳಿದೆ. ಆವಾಗ ಕೆಲವರು.. ಹೌದಾ.. ಹಾಗಾದ್ರೆ ನಾನು ಒಮ್ಮೆ ನೋಡಿ ನಾಳೆ ಹೇಳ್ತೇನೆ ಅಂತಾ ಹೇಳಿದ್ದಾರೆ. ಅವರಲ್ಲಿ ಹಲವು ಜನ.. ಹೌದು.. ನೀನು ಹೇಳಿದ್ದು ಸರಿ. ನಮ್ಮಲ್ಲಿಯೂ ಅಷ್ಟೇ.. ನಿಧಾನ ಇದೆ. ನೋಡಿದ್ರೆ ಬರುವ ವರ್ಷವೂ ಅಡಿಕೆ ಆಗಲ್ವಾ ಅಂತಾ ಕಾಣ್ಸುತ್ತೆ. ಅಂದಿದ್ದಾರೆ. ಈಗ ನಾನು ಹಾಗಾದ್ರೆ ಪ್ರತೀ ವರ್ಷ ಜನವರಿ 30 ತಾರೀಕಿಗೆ ಎಷ್ಟು ಸಿಂಗಾರ ಬಿಡೋದು ಅಂತಾ ಕೇಳಿದ್ರೆ ಮತ್ತೆ ತಬ್ಬಿಬ್ಬು.
ಎಲ್ರೂ ಅಂತಾ ಹೇಳಲ್ಲ, ಆದರೆ ಸಾಕಷ್ಟು ಜನ ಅಡಿಕೆ ರೈತರು ಕೇವಲ ಹವ್ಯಾಸೀ ಕೃಷಿಕರು ಹೊರತು ವೃತ್ತಿಪರ ಅಲ್ಲವೇ ಅಲ್ಲ. ಅವರು ಬಹಳ ಶ್ರದ್ದೆಯಿಂದ ತೋಟದಲ್ಲಿ ಸುತ್ತೋರು ಅಲ್ಲ. ಕಾರಣ ಹೇಗೆ ಮಾಡಿದ್ರೂ ಅಡಿಕೆ ತೋಟ ಅವರನ್ನು ಬಹಳ ಗಟ್ಟಿಯಾಗಿ ಇದುವರೇಗೆ ಅವರನ್ನು ಆಧರಿಸಿದೆ.
ತೋಟದಲ್ಲಿ ಹೋಗ್ತಾ ಕೈಯಲ್ಲಿ ಕ್ರಿಕೇಟ್ ಸ್ಕೋರು ನೋಡ್ತಾ ಹೋಗ್ತೇವೆ. ಕೋಹ್ಲಿ ಔಟಾದಾಗ ಮೂಡ್ ಆಫ್. ಆವಾಗ ಸಿಂಗಾರ ಬಿಟ್ಟಿದೆಯಾ ಅನ್ನೋ ಗಮನ ತಪ್ಪಿ ಹೋಗ್ತದೆ. ಅಟೋ ಕಾರ್ ಇಂಡಿಯ ವೆಬ್ ಸೈಟಲ್ಲಿ ಅಂದು ಬಿಡುಗಡೆ ಆದ ಕಾರಿನ ಇಂಜಿನ್ ಯಾವ ಸೈಜು, ಅದರ ಗೇರ್ ಬಾಕ್ಸ್ AMT/CVT. ಈ ಮಾಹಿತಿ ಬಹಳ ನಿಖರವಾಗಿ ತರಕಾರಿ ಹಚ್ಚುವ ಸಭೆಯಲ್ಲಿ ಹೇಳ್ತೇವೆ.
ಆದರೆ, ನಿಮ್ಮ ಮನೆ ಎದುರಿನ ತೆಂಗಿನ ಮರದಲ್ಲಿ ಕಾಯಿ ಎಷ್ಟಿರಬಹುದು ಅನ್ನೋ ಅಂದಾಜೂ ನಮಗಿರಲ್ಲ. ನಿಮ್ಮ ತೋಟದಲ್ಲಿ ಕಳೆದ ವರ್ಷ ಹಾಕಿದ ಡ್ರಿಪ್ಪರ್ ನಲ್ಲಿ ಈ ವರ್ಷ ಎಷ್ಟು ಲೀಟರ್ ನೀರು ಬರುತ್ತೆ ಅಂತಾ ಗಮನ ಇರಲ್ಲ. ಬಹಳ ಜನರಿಗೆ ಅಡಿಕೆ ಫಸಲು ಕಡಿಮೆ ಆಗೋದು.. ಅವರ ಡ್ರಿಪ್ಪರ್ ಗಳಲ್ಲಿ ಎಂಟು ಲೀಟರ್ ನೀರಿನ ಬದಲು ಕೇವಲ ಎರಡೇ ಲೀಟರ್ ಬರುವುದಕ್ಕಾಗಿ ಇರಬಹುದು. ಬಹಳ ಅಡಿಕೆ ಆಗುವ ಕೃಷಿಕ ನ ಹತ್ರ ಒಂದು ಮರದಲ್ಲಿ ಅಂದಾಜು ಎಷ್ಟು ಕೆಜಿ ಅಡಿಕೆ ಅಂತಾ ಕೇಳಿ ನೋಡಿ. ಗೊತ್ತಿರಲ್ಲ.. ಹೆಣ್ಣಾಳುಗಳು ಪ್ಲಾಸ್ಟಿಕ್ ಬಟ್ಟಿಯಲ್ಲಿ ಚಾ ಕುಡಿಯುವ ಹೊತ್ತಲ್ಲಿ ಹೆಕ್ಕಡಿಕೆ ತರ್ತಾರೆ. “ಕೋಡೆ ಪಾಡುನೈಟ್ಟೇ ಪಾಡ್ಳಾ…” ಅಂತೀವಿ. ಒಂದು ಬಟ್ಟಿಯಲ್ಲಿ ಎಷ್ಟು ಅಡಿಕೆ ಇದೆ ಅಂತೇನಾದ್ರೂ ಸರಿಯಾದ ಮಾಹಿತಿ ಇದೆಯಾ..? ಇಲ್ಲ. ಯಾಕೆ ಹೀಗೆ…?
ರಾಜ್ಯದ ಹಲವು ಭಾಗಗಳಲ್ಲಿ ಸಂಜೆ ಗುಡುಗು ಸಹಿತ ಮಳೆಯ ಸಾಧ್ಯತೆ ಮುಂದುವರಿದಿದೆ. ಮಾರ್ಚ್…
ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಸರ್ಕಾರ ಕ್ರಮ ಕೈಗೊಂಡಿದೆ. ಮಾನವ–ಆನೆ…
ಅಜ್ಜಾವರ ಸರ್ಕಾರಿ ಪ್ರೌಢಶಾಲೆಯ ಇಬ್ಬರು ವಿದ್ಯಾರ್ಥಿಗಳು INSPIRE Award ಗೆ ಆಯ್ಕೆಯಾಗಿದ್ದಾರೆ. ವೈಜ್ಞಾನಿಕ…
ನೆಮ್ಮದಿಗಾಗಿ ಬದುಕಬೇಕು, ಹಣ-ಅಧಿಕಾರಕ್ಕಾಗಿ ಅಲ್ಲ ಎಂದು ರಾಮಚಂದ್ರಾಪುರ ಶ್ರೀಗಳು ಕರೆ ನೀಡಿದರು. ಸಂನ್ಯಾಸ…
ಅಡಿಕೆ ದರ ಇಳಿಕೆಗೆ ಆಮದುಗಿಂತ ಅಡಿಕೆ ಕೊಯ್ಲು ಕಾಲದ ಸರಬರಾಜು ಒತ್ತಡ ಮತ್ತು…
ಐದು ವರ್ಷದ ದತ್ತಾಂಶವು ಮಂಗಳೂರು ಅಡಿಕೆ ಮಾರುಕಟ್ಟೆ ಚಕ್ರಾಕಾರ ಸ್ವಭಾವ ಹೊಂದಿರುವುದನ್ನು ತೋರಿಸಿದೆ.…