Advertisement
ಅಂಕಣ

ಮಾನವೀಯತೆ ಎಂಬ ಪದದ ನೈಜ‌ ಸಾಕಾರಕ್ಕಾಗಿ…… ನಿಸರ್ಗಕ್ಕಾಗಿ… ಕೃಷಿಗಾಗಿ… ಗೋವು ಉಳಿಯಲಿ….

Share

ಗೋವಿನ ಬಗ್ಗೆ ಚೆರ್ಚೆ ಬಂದಾಗಲೆಲ್ಲ ಒಂದೆರಡು ಪ್ರಶ್ನೆ ಗಳು ಖಾಯಂ ಆಗಿ‌ ಎದುರಾಗುತ್ತದೆ….
ಗೋವುಗಳು ಕರು ಹಾಕುತ್ತಿದ್ದಂತೆಲ್ಲಾ ಎಲ್ಲಾ ಕರುಗಳನ್ನ ಸಾಕಲು ಅಸಾಧ್ಯ. ಅದರಲ್ಲೂ ಗಂಡು ಕರುಗಳನ್ನ ಸಾಕು ವವರು ಕೊಳ್ಳುವುದಿಲ್ಲ. ಹಾಗಂತ ನಾವು ಸಾಕಲೂ ಹೊರೆ..!! ಇವುಗಳನ್ನು ಕಸಾಯಿಗಲ್ಲದೇ ಯಾರಿಗೆ ಕೊಡುವುದು…?
ಪೈಸ ಪೈಸವೂ ಲೆಕ್ಕಾಚಾರ ಹಾಕುವ ಕಾಲದಲ್ಲಿ ಮನೆಯಲ್ಲಿ ಸಾಕಿದ ಹಾಲು ಕೊಡದ ಅಥವಾ ಇನ್ನು ಗರ್ಭಧರಿಸದ ಹಸುಗಳ ಸಾಕಲು ಕಷ್ಟ…!! ಇಂತಹ ಮುದಿ ಹಸುಗಳನ್ನು ಇಟ್ಟುಕೊಂಡು ನೋಡಿಕೊಳ್ಳಲು ಯಾರಿಗೂ ಪುರುಸೋತ್ತು ಮತ್ತು ವ್ಯವದಾನ ಇಲ್ಲ..!!ಇಂತಹ ಹಸುಗಳನ್ನು ಏನು ಮಾಡುವುದು…? ಇದನ್ನು ಸಾಮಾನ್ಯ ರೈತ ರಲ್ಲದೇ ನಮ್ಮ “ದೊಡ್ಡವರು ” ಕೂಡ ಪ್ರಶ್ನೆ ಮಾಡುತ್ತಾರೆ…!!!
….
ಈ ಎಲ್ಲಾ ಪ್ರಶ್ನೆ ಕೇಳುವ ಮೊದಲು ಈ ಮೊದಲು ನಮ್ಮಲ್ಲಿ ಗೋವುಗಳು ಹೇಗೆ ನಿರ್ವಹಣೆ ಆಗುತ್ತಿದ್ದವು ಈಗ ಯಾಕೆ ಮೊದಲಿನಂತೆ ಗೋವುಗಳು ಸಾಕಲಾಗುತ್ತಿಲ್ಲ ಎಂಬ ಬಗ್ಗೆ ವಿಶ್ಲೇಷಣೆ ಮಾಡಬೇಕಿದೆ.

Advertisement
Advertisement

ಕೇವಲ ಮೂವತ್ತು ವರ್ಷಗಳ ಹಿಂದೆ ವಿಶೇಷವಾಗಿ ದೇಸಿ ಹಸುಗಳು ಯಥೇಚ್ಛವಾಗಿ ನಮ್ಮ ರೈತರ ಕೊಟ್ಟಿಗೆ ಯಲ್ಲಿ ಜಾಗ ಪಡೆದು ಇದ್ದವು.ಈಗ ಮಲೆನಾಡು ಕರಾವಳಿ ಜಿಲ್ಲೆಯ ಬಹುತೇಕ ರೈತರ ಮನೆಯ ಕೊಟ್ಟಿಗೆ ಖಾಲಿ ಖಾಲಿ…!!

Advertisement

ನಮ್ಮ ಊರಿನ ಒಂದು ಇಪ್ಪತ್ತೈದು ಮನೆಗಳಿರುವ ಒಂದು ಚಿಕ್ಕ ಹಳ್ಳಿಯಲ್ಲಿ ಒಂದು ಇಪ್ಪತ್ತೈದು ವರ್ಷಗಳ ಹಿಂದೆ ಪ್ರತಿ ಮನೆಯಲ್ಲೂ ಆರು ಎಂಟು ಹತ್ತು ದೇಸಿ ಹಸುಗಳಂತೆ ಸುಮಾರು ಇನ್ನೂರಕ್ಕೂ ಹೆಚ್ಚು ಹಸುಗಳೂ ಇದ್ದವು. ಅವನ್ನು ಮೇಯಿಸಲು ದನಗಾವಲಿನ ವ್ಯವಸ್ಥೆ ಇತ್ತು.ಮುಖ್ಯವಾಗಿ ಆಗ ಮೇಯಲು ಯಥೇಚ್ಛವಾದ ಹುಲ್ಲು ಗಾವಲು ಅಥವಾ ಕಾಲಿ ಜಾಗಗಳಿತ್ತು.‌ ಆಗ ಗದ್ದೆಗಳು ಈ ಪರಿ ಅಡಿಕೆ ತೋಟಗಳಾಗಿರಲಿಲ್ಲ.

ಆಗ ಹೇಗಿತ್ತು ಎಂದರೆ ದೇಸಿ ತಳಿ ಹಸುಗಳು “ಸ್ವಾವಲಂಬಿ ಆತ್ಮನಿರ್ಭರ” ವಾಗಿದ್ದವು.‌ಎಲ್ಲೋ ಘೋರ ಮಳೆಗಾಲದ ಸಮಯದಲ್ಲಿ ಮಾತ್ರ ಕೆಲವು ದಿನಗಳ ಕಾಲ ಗೋಪಾಲಕರು ಒಣ ಹುಲ್ಲು ಹಾಕುತ್ತಿದ್ದರು. ಜಾನುವಾರುಗಳಿಗೆ ಒಣ ಹುಲ್ಲು ಹಾಕುವಷ್ಟು ಎಲ್ಲಾ ಗೋಪಾಲಕರು/ ಜಮೀನ್ದಾರರೂ ಗದ್ದೆ ಬೇಸಾಯ ಮಾಡು ತ್ತಿದ್ದರು. ಇದರ ಜೊತೆಯಲ್ಲಿ ಎಲ್ಲರ ಮನೆಯಲ್ಲೂ ಕೊಟ್ಟಿಗೆ ನಿರ್ವಹಣೆಗೆ ಬೇಕಾದಷ್ಟು ಜನರು ಇರುತ್ತಿದ್ದರು.ದುರಂತ ಎಂದರೆ ಈ ಮೂವತ್ತು ವರ್ಷಗಳ ಈಚೆ ಈ ಇಪ್ಪತ್ತೈದು ಮನೆಗಳಲ್ಲಿ ಈಗ ಬಹುತೇಕ ಯಾರ ಮನೆಯಲ್ಲೂ ಹಸುಗಳಿಲ್ಲ . ಒಂದೆರಡು ಮನೆಯಲ್ಲಿ ಒಂದೆರಡು ಹಸುಗಳಿದ್ದರೂ ಅವು ದೇಸಿ ಹಸುಗಳಲ್ಲ…!!

Advertisement

ಮೂವತ್ತು ವರ್ಷಗಳ ಹಿಂದೆ ಜಾಗತಿಕರಣದ ನಂತರ ಅವಿಭಕ್ತ ಕುಟುಂಬ ಗಳು ಒಡೆಯತೊಡಗಿದವು. ಜನಸಂಖ್ಯೆ ಜಾಸ್ತಿ ಯಾದರೂ ನಂತರದ ಪೀಳಿಗೆ ಪಟ್ಟಣ ಸೇರತೊಡಗಿದವು. ಗದ್ದೆ ಗಳು ಹಂತ ಹಂತವಾಗಿ ಅಡಿಕೆ ತೋಟ ಗಳಾಗತೊಡಗಿದವು. ತೋಟಗಾರಿಕೆ ಜಾನುವಾರುಗಳ ಆಹಾರ ತಾಣವಾದ ಹುಲ್ಲು ಬ್ಯಾಣ (ಬಯಲು) ವ್ಯಾಪ್ತಿಸತೊಡ ಗಿತು. ಇದೇ ಸಂಧರ್ಭದಲ್ಲಿ ಕುರಿಯನ್ ಕ್ಷೀರ ಕ್ರಾಂತಿ ಯಾಗಿ ಪಾವು ಚಾಟಾಕು ಹಾಲು ಕೊಡುತ್ತಿದ್ದ ಮಲೆನಾಡು ಗಿಡ್ಡ ಗಳು ಮಲೆನಾಡು ಕರಾವಳಿಯ ಜನರಿಗೆ ಅನುತ್ಪಾದಕ ಎನಿಸಿ ಹೊತ್ತಿಗೆ ಐದು ಹತ್ತು ಲೀಟರ್ ಹಾಲು ಕೊಡುವ ಹೆಚ್ ಎಫ್ ಜೆರ್ಸಿ ಹಸುಗಳು ಆಪ್ಯಾಯಮಾನವಾಗಿ ನಿಧಾನವಾಗಿ ಮಲೆನಾಡು ಗಿಡ್ಡ ದೇಸಿ ಹಸುಗಳು ಕಟುಕರ ಪಾಲಾಗುತ್ತಾ ಹೋಯಿತು.

ಈ ಮಲೆನಾಡು – ಕರಾವಳಿ, ಗದ್ದೆ ಬೇಸಾಯ… , ಕೂಡು ಕುಟುಂಬ… ಆತ್ಮ ನಿರ್ಭರ ಸ್ವಾವಲಂಬಿ ಮಲೆನಾಡು ಗಿಡ್ಡ ಹಸುಗಳು ..‌
ಸರಿಯಿದ್ದ ಋತುಮಾನ… ಎಲ್ಲ ಬದಲಾಗತೊಡಗಿತು. ಲೆಕ್ಕಾಚಾರ ಹಾಕಿ ಜೀವನ ಮಾಡಬೇಕಾದ ಕಾಲ ಬಂದಾಗ ಗೋಪಾಲಕ ದುಬಾರಿ ಬೆಲೆಯ ಒಣಹುಲ್ಲು “ಕೊಂಡು ತಂದು” ಕಡಿಮೆ ಹಾಲಿನಿಳುವರಿಯ ಮಲೆನಾಡು ಗಿಡ್ಡ ದಂತಹ ದೇಸಿ ಹಸುಗಳ ಸಾಕಾಣಿಕೆ ಮಾಡುವುದು ಹೊರೆ ಎನಿಸತೊಡಗಿತು.

Advertisement

ಈಗ ಕೃಷಿಯೇ ಅನಿವಾರ್ಯವಲ್ಲ…!?, ಭತ್ತ ನಮ್ಮ ದೇಶದಲ್ಲಿ ಬೆಳಿಲಿಲ್ಲ ಅಂದರೆ ಕೀನ್ಯಾದಿಂದ ಆಮದು ಮಾಡಿಕೊಳ್ಳಲಾಗುತ್ತದೆ.‌ ಹಾಲು ಇಂಗ್ಲೆಂಡ್ ನಿಂದ ಭಾರತಕ್ಕೆ ಆಮದಾಗಲು ತಯಾರಾಗಿದೆ.. ಧಾನ್ಯ ಇನ್ಯಾವುದೋ ದೇಶದಿಂದ ಬರುತ್ತದೆ..!! ಟೊಮ್ಯಾಟೊ ತರಕಾರಿ ನ ಅದೆಷ್ಟೇ ನಷ್ಟ ಆದರೂ ರೈತ ಜೀವ ಒತ್ತೆ ಇಟ್ಟಾದರೂ ಬೆಳಿತಾನೆ…
ಟೋಟಲ್ಲಾಗಿ ಜಾಗತಿಕರಣದ ನಂತರ ಬಹುರಾಷ್ಟ್ರೀಯ ಕಂಪನಿಗಳಿಗೆ ಈ ದೇಶದ ಕೃಷಿ ಅವಲಂಬಿತರ ಸಂಖ್ಯೆ ಕಡಿಮೆ ಯಾಗಬೇಕಿದೆ.‌ ಅದನ್ನು “ಸರ್ಕಾರದ ಅವಜ್ಞೆಯ” ಮೂಲಕ ಕೃಷಿಕ ರ ಕೃಷಿ ಬದುಕಿನ ಮೇಲೆ ಪರೋಕ್ಷವಾಗಿ ದುಷ್ಪರಿಣಾಮ ಬೀರುವಂತೆ ಮಾಡುತ್ತಿದೆ.

ಆಹಾರ ಧಾನ್ಯ ಗಳ ಬೆಳೆಯನ್ನು ರೈತ ಬೆಳೆದು ಲಾಭ ಮಾಡಿಕೊಳ್ಳುವ ಪರಿಸ್ಥಿತಿ ಈಗಿಲ್ಲ. ಜೊತೆಯಲ್ಲಿ ಹವಾಮಾನ ಕೂಡ ವೈಪರೀತ್ಯ ವಾಗಿದೆ. ಬಹಳಷ್ಟು ಆಹಾರ ಧಾನ್ಯ ಬೆಳೆವ ಕೃಷಿ ಜಮೀನು ತೋಟಗಾರಿಕೆ ಬೆಳೆಗೆ ಪರಿವರ್ತನೆ ಯಾಗು ತ್ತಿದೆ. ರೈತರಿಗೆ “ಆಹಾರ ಬೆಳೆ ಬೆಳೆಯಲೇ ಬೇಕೆಂಬ ಭಾವನಾತ್ಮಕತೆ ಇಲ್ಲ “… !! ಇದೇ ಸಮಯದಲ್ಲಿ ಆಹಾರ ಧಾನ್ಯ ಬೆಳೆಗಳ ಪೂರಕವಾಗಿದ್ದ ಹಸುಗಳ ಸಾಕಣೆಯೂ ಅನಾಸಕ್ತಿ ಮೂಡಲು ಶುರು ವಾಗಿದೆ.

Advertisement

ಆಹಾರ ಧಾನ್ಯ ಬೆಳೆ ಕೃಷಿ ಕಡಿಮೆ ಯಾಗಿ ತೋಟಗಾರಿಕೆ ಬೆಳೆ ವಿಸ್ತರಣೆ ಹೆಚ್ಚಾದ ಕಾರಣದಿಂದ ಈಗ ರಾಜ್ಯದೆಲ್ಲೆಡೆ ಜಾನುವಾರುಗಳಿಗೆ ಮೇವಿನ ಕೊರತೆಯಿದೆ. ಕೆಲವೊಮ್ಮೆ ದುಡ್ಡು ಕೊಟ್ಟರೂ ಜಾನುವಾರುಗಳ ಮೇವು ಸಿಗೋಲ್ಲ. ‌ ಹಿಂಡಿ ದುಬಾರಿ ಯಾಗಿದೆ. ಜಾನುವಾರುಗಳ ನಿರ್ವಹಣೆ ಗೆ ಆಳು ಸಂಬಳ ದುಪ್ಪಟ್ಟು ಆಗಿದೆ. ಮತ್ತೆ ಮೇಲಿನಿಂದ ಕೆಳಗೆ ಚಿಂತನೆ ಮಾಡಿದರೆ ದೇಸಿ ಹಸುಗಳ ಇರಲಿ ಈಗ ಜೆರ್ಸಿ ಹಸುಗಳನ್ನೂ ಸಾಕುವುದು ಕಷ್ಟ ವಾಗಿದೆ. ..!!!

ಮೇಯ್ದು ಬರುವ ದೇಸಿ ಹಸುಗಳು ಈ ಪರಿಸರದ ಅತ್ಯಂತ ಅವಶ್ಯಕ ಜೀವಿ. ನಿಜಕ್ಕೂ ದೇಸಿ ಹಸುಗಳು ಕಾಡು ಜೀವಿಗಳೇ ಸರಿ. ಇವು ನಿಸರ್ಗ ಕ್ಕೂ ಕೃಷಿ ಗೂ ಕೊಂಡಿಯಾಗಿವೆ. ನಾನು ಗೋವು ಉಳಿಯಲೇ ಬೇಕೆಂದು ಹೇಳುವುದು ಬರೀ ಆಸ್ತಿಕ ಹಿಂದೂ ವಾಗಿ ಅಲ್ಲ…. ಈ ದೇಶದ ಕೃಷಿ ಬದುಕು ಸಾವಿರಾರು ವರ್ಷಗಳಿಂದ ಗೋ ಆಧಾರಿತ ವಾಗಿತ್ತು. ‌ ಯಾವುದೇ ಕೃಷಿ ಗೂ ಗೋವಿನ‌ ಗೊಬ್ಬರ ಅನಿವಾರ್ಯ. ಈಗ ಮತ್ತು ಮುಂದಿನ ದಿನಗಳಲ್ಲಿ ಕೃಷಿ ಭೂಮಿಗೆ ಕೊಟ್ಟಿಗೆ ಗೊಬ್ಬರ ಇಲ್ಲವಾಗುತ್ತಾ ಹೋಗಿ ಭೂಮಿ ಸೂಕ್ಷ್ಮಾಣು ಜೀವಿಗಳ ಲಭ್ಯತೆ ಕೊರತೆಯಾಗುತ್ತಾ ಹೋಗುತ್ತಾ ಸಾವಯವ ಇಂಗಾಲದ ಕೊರತೆಯಾಗುತ್ತಾ ಕೃಷಿ ರೋಗಿಷ್ಟ ವಾಗುವುದರ ಜೊತೆಗೆ ಭೂಮಿ ಬರುಡಾಗುತ್ತಾ ಹೋಗುತ್ತದೆ. ಈ ಡೂಪ್ಲಿಕೇಟು ಸಾವಯವ ಗೊಬ್ಬರ ಡಿಎಪಿ ಪೊಟ್ಯಾಷ್ ಯೂರಿಯಾಗಳು ಸದ್ಯದಲ್ಲೇ ರೈತರಿಗೆ ಅವುಗಳ ದುಷ್ಪರಿಣಾಮ ದರ್ಶನ ಮಾಡಲಿದ್ದಾವೆ.

Advertisement

“ಕೊಟ್ಟಿಗೆ ಗೊಬ್ಬರ ” ಕ್ಕಿಂತ ಶ್ರೇಷ್ಠ ವಾದ ಸಾವಯವ ಗೊಬ್ಬರ ಇನ್ಯಾವುದೂ ಇಲ್ಲ. ತಜ್ಞರ ಪ್ರಕಾರ ದೇಸಿ ಹಸುಗಳ “ಸಾಂಪ್ರದಾಯಿಕ ಕೊಟ್ಟಿಗೆ ಗೊಬ್ಬರ” ದಲ್ಲಿ ಕೃಷಿ ಗೆ ಬೇಕಾದ ಎಲ್ಲಾ “ಹದಿನೆಂಟು ಬಗೆಯ ಪೋಷಕಾಂಶಗಳು” ಇರುತ್ತಿತ್ತಂತೆ. ಆದರೆ ಮೇಲಿನ ಎಲ್ಲಾ ಕಾರಣಕ್ಕಾಗಿ ಈಗ ಯಾರೂ ಜಾನುವಾರುಗಳ ಸಾಕೋಲ್ಲ…. !! ಆದರೆ ಕೃಷಿ ಭೂಮಿ ಬಯಸುವ ಪೋಷಕಾಂಶಗಳನ್ನು ರೈತ ಕೊಡದೇ ಮಾರುಕಟ್ಟೆ ಲಾಭಿ ಗೊಬ್ಬರ ರೈತ ಬಳಸಿದರೆ “ಬೇವು ಬಿತ್ತಿ ಮಾವ ಬಯಸಿ ದಂತೆ‌….!!”
ಹಸುಗಳೇ ಇಲ್ಲದೇ ಕೊಟ್ಟಿಗೆ ಗೊಬ್ಬರ ಎಲ್ಲಿಂದ ಬರುತ್ತದೆ…?

ಇದೆಲ್ಲಾ ತಕ್ಷಣ ಕ್ಕೆ ವ್ಯವಸ್ಥೆ ಗೆ ಅರಿವಿಗೆ ಬರೋಲ್ಲ.. ಈ ಬರ ಕೃಷಿ ಭೂಮಿ ಬರಡು ಪೋಷಕಾಂಶಗಳ ಕೊರತೆ ನಿಯಂತ್ರಣ ಕ್ಕೆ ಬರದ ರೋಗಗಳ ದುಷ್ಪರಿಣಾಮ ಮುಂದಿನ ದಿನಗಳಲ್ಲಿ ರೈತರಿಗೇ ಇದು ಯಾವ ಕಾರಣಕ್ಕೆ ಆಗಿದೆ ಎಂದು ತಿಳಿಯಲಿದೆ. ಈಗಾಗಲೇ ಅಡಿಕೆ ಕೃಷಿ ಯಲ್ಲಿ ರೈತರು ಈ ಕೊಟ್ಟಿಗೆ ಗೊಬ್ಬರ ಕೊಡದ ದುಷ್ಪರಿಣಾಮ ಅನುಭವಿಸಲು ಆರಂಭಿಸಿದ್ದಾರೆ.
ಆದರೆ ಏನೇ ಆದರೂ ರೈತರ ಈಗ ಗೋವು ಸಾಕೋಲ್ಲ….!? ಈ ಮನಸ್ಥಿತಿ ನಮ್ಮ ರಾಜ್ಯದಲ್ಲಂತೂ ವ್ಯಾಪಕವಾಗಿದೆ ಎಂದೆನ್ನಿಸುತ್ತಿದೆ…!!

Advertisement

ಮೊನ್ನೆ ಹಬ್ಬದ ಒಂದೇ ದಿನ ಜಿಲ್ಲೆಯೊಂದರಲ್ಲಿ ಒಂಬತ್ತು ಸಾವಿರ ಹಸುಗಳನ್ನು ಕಡಿಯಲಾಗಿದೆಯಂತೆ…!!, ಇದು ಒಂದು ಜಿಲ್ಲೆಯದ್ದಾದರೆ ಉಳಿದ ಜಿಲ್ಲೆಯ ಕಥೆ…?  ಹಿಂದೆ ಕೋಟಿಯ ಲೆಕ್ಕಾಚಾರದಲ್ಲಿದ್ದ ದೇಸಿ ತಳಿ ಹಸುಗಳು ಈಗ ಕೆಲವು ಲಕ್ಷ ಕ್ಕಿಳಿದಿದೆ. ಹೀಗೆ ಹಬ್ಬ ಹಬ್ಬಕ್ಕೂ ಸಹಸ್ರ ಸಹಸ್ರ ಸಂಖ್ಯೆ ಯಲ್ಲಿ ಕಡಿದು ತಿನ್ನುತ್ತಾ ಹೋದರೆ ದೇಸಿ ತಳಿ ಹಸುಗಳು ಉಳಿಯುವುದೆಂತು…? ಲಕ್ಷ ಲಕ್ಷ ಸಂಖ್ಯೆಯಲ್ಲಿ ಗೋವುಗಳ ಹನನ ವಾದರೆ ಆ ಲಕ್ಷಾಂತರ ಹಸುಗಳ ಸಗಣಿ ಗೊಬ್ಬರದ ಕೊರತೆ ನೀಗುವುದೆಂತು…? ಲಕ್ಷಾಂತರ ಹಸುಗಳ ನಾಶ ಲಕ್ಷಾಂತರ ಕೃಷಿ ಜಮೀನು ಮರುಭೂಮಿಯತ್ತ ಸಾಗುವ ಸಂಕೇತ.

ಗೋಶಾಲೆ ಗಳು ಮನುಷ್ಯರ ವೃದ್ದಾಶ್ರಮ ದಂತೆ ಹಸುಗಳಿಗೂ ಕೊನೇ ನಿಲ್ದಾಣ..!! ಗೋವುಗಳು ರೈತರ ಮನೆಯ ಆಸರೆಯಲ್ಲಿ ಬಾಳಿ ತಮ್ಮ ಸಂತಾನೋತ್ಪತ್ತಿ ಮಾಡಿ ಸಂತತಿ ವೃದ್ದಿ ಮಾಡಿಕೊಳ್ಳಬೇಕು. ಹಾಗಾದರೆ ಮಾತ್ರ ಗೋ ವೃದ್ದಿಯಾಗುತ್ತದೆ. ಆದರೆ ರೈತ ಕುಟುಂಬ ಗಳು ಜಾನುವಾರುಗಳ ಸಾಕಲೇ ಹಿಂದೇಟು ಹಾಕುತ್ತಾ ಹೋದರೆ ಮುಂದೇನು…?

Advertisement

ಬಹಳಷ್ಟು ಮಂದಿ ಹಿಂದೂಗಳೇ ಹಸು ಗಳನ್ನು ತಿನ್ನಲು ಕೊಟ್ಟರೆ ಏನು ತಪ್ಪು ಎನ್ನುವ ಪ್ರಶ್ನೆ ಕೇಳುತ್ತಾರೆ…
ಆದರೆ ಜಾನುವಾರುಗಳು ದೊಡ್ಡ ದೇಹ.. ಅವುಗಳನ್ನು ಲಾರಿ ಇತರ ಗೂಡ್ಸ್ ವಾಹನದಲ್ಲಿ ಕೈ ಕಾಲು ಮುರಿದು ತುಂಡು ಮಾಡಿ ಕಡಿದು ರಕ್ತ ಹಿಂಡಿ ಅತ್ಯಂತ ಕ್ರೂರ ವಾಗಿ ಹಿಂಸಿಸಿ ಸಾಗಾಣಿಕೆ ಮಾಡಿ ಕಸಾಯಖಾನೆಯಲ್ಲಿ ಕೊಲ್ಲುತ್ತಾರೆ…!?
ಇದನ್ನು ಯಾವುದಾದರೂ ಧರ್ಮ ಸಮರ್ಥಿಸಿಕೊಳ್ಳುತ್ತದ…?!! ಮನುಷ್ಯ ಹೀಗೆ ಸೌತೆಕಾಯಿ ಹೆಚ್ಚಿದಂತೆ ಹಸು ಕರುಗಳನ್ನ ಕಡಿದು ನಾಗರೀಕ ನಾಗುವುದರ ಬದಲು ಅನಾಗರೀಕ ರಾಕ್ಷಸ ನಾಗುತ್ತಿದ್ದಾನೆ‌….!! ಈ ಕಾರಣಕ್ಕಾಗಿ ಗೋ ಹತ್ಯೆ ಬೇಡ. ಈ ಅಮಾನುಷ ಪಾಶವೀ ಕೃತ್ಯಗಳು ಆಹಾರದ ಹಕ್ಕೇ…!?

ಆದರೆ ಹಸುಗಳನ್ನು ಮನುಷ್ಯ ಭಾರತದ ದಲ್ಲಂತೂ ತಿನ್ನಲೋಸುಗ ಸಾಕುತ್ತಿಲ್ಲ..!! ಹಿಂದೂಗಳಿಗೆ ಪೂಜನೀಯ ಎನ್ನುವ ವಿಷಯ ಬದಿಗಿಡೋಣ.. ಆದರೆ ಕೃಷಿ ಬೇಸಾಯಕ್ಕೆ, ಪ್ರಕೃತಿ ಗಾಗಿ ಮತ್ತು ಮನುಷ್ಯರ ಬಳಕೆಯ ಹಾಲು ತುಪ್ಪ ಕ್ಕಾಗಿ ಹಸುಗಳು ಉಳಿಯಬೇಕಲ್ವ…? ಹೀಗೆ ಹಬ್ಬ ಅದು ಇದು ಎಂದು ಸಹಸ್ರ ಲಕ್ಷ ಸಂಖ್ಯೆಯಲ್ಲಿ ಹಸುಗಳನ್ನು ತಿಂದು ಕಾಲಿ ಮಾಡ್ತಾ ಹೋದರೆ ಇನ್ನ ಕೇವಲ ಇಪ್ಪತ್ತು ಇಪ್ಪತ್ತೈದು ವರ್ಷಗಳಲ್ಲಿ ನಮ್ಮ ದೇಶದಲ್ಲಿ ಹಸುಗಳೇ ಇಲ್ಲ ವಾಗುವುದು ಖಚಿತ…!!!
ಆಗ ಲೀಟರ್ ಹಾಲಿಗೆ ಐನೂರು ರೂಪಾಯಿ ಆಗುತ್ತದೆ.. ಕೃಷಿ ಭೂಮಿಯೂ ಸಂಪೂರ್ಣ ಬರುಡಾಗುತ್ತದೆ…!!

Advertisement

ಗೋವು ಹೇಗೆ ಉಳಿಸಬಹುದು…? : ನಮ್ಮ ಹಳ್ಳಿಗಳಲ್ಲಿ ಅಲ್ಲಲ್ಲಿ ಹತ್ತಾರು ಗೋವುಗಳನ್ನು ಆರ್ಥಿಕ ವಾಗಿ ಹೊರೆಯಾದರೂ ಪ್ರೀತಿಯಿಂದ ಸಾಕಿ ಸಲಹುವ ರೈತರಿರುತ್ತಾರೆ. ಸಮಾಜ ಗೋಶಾಲೆಗೆ ದಾನ ಕೊಡುವವರು ಈ “ಗೋ ಸಂವರ್ಧಕ” ರಿಗೆ ಹುಲ್ಲು ಹಿಂಡಿ ಕೊಳ್ಳಲು ಸಹಾಯ ಮಾಡಿ ಜೊತೆಯಲ್ಲಿ ನಿಂತರೆ ಗೋವು ಉಳಿದು ಸಂವರ್ಧನೆ ಯಾಗುತ್ತದೆ. ಹಾಗಂತ ಗೋ ಶಾಲೆಗೆ ದಾನ ಧರ್ಮ ಮಾಡಬೇಡಿ ಎಂದಲ್ಲ. ಆದರೆ ನಮ್ಮ ರೈತ ಕುಟುಂಬದ ಹೆಚ್ಚು ಹೆಚ್ಚು ದೇಸಿ ತಳಿ ಹಸುಗಳನ್ನು ಸಾಕುವವ ರಿಗೆ ಸರ್ಕಾರ ಮತ್ತು ಸಮಾಜ ದಿಂದ ಯಾವುದೇ ಪ್ರೋತ್ಸಾಹ ಸಿಗುತ್ತಿಲ್ಲ.

ವಿಶೇಷವಾಗಿ “ಗೀರ್” ತಳಿ ಗೋವುಗಳ ಹೊರತುಪಡಿಸಿ ಬೇರೆ ಯಾವುದೇ ದೇಸಿ ತಳಿ ಹಸುಗಳು ಹಾಲಿನ ಇಳುವರಿ ಹೊಂದಿರದ ಕಾರಣ ಬಹುತೇಕ ದೇಸಿ ತಳಿಗಳನ್ನು ” ಕೊಂಡು ತಂದ ಹುಲ್ಲು ಹಾಕಿ” ಸಾಕುವುದು ಯಾರಿಗೂ ಭಾರವೇ ಸರಿ. ನಾನು ಮೇಲೆ ಹೇಳಿದಂತೆ ಹಿಂದೊಮ್ಮೆ ಬಹುತೇಕ ಸ್ವಾವಲಂಬಿ ಯಾಗಿದ್ದ ದೇಸಿ ತಳಿ ಹಸುಗಳು ಇಂದು ಬಹುತೇಕ ಸಾಕುವವನು ಹೊಟ್ಟೆಗೆ ಹಾಕಿ ದರೆ ಮಾತ್ರ ಬಾಳುತ್ತವೆ.. ಎನ್ನುವ ಮಟ್ಟಿಗೆ ಗೋಪಲಾಕಲವಲಂಬಿ ….ಇಂತಹ ಗೋಪಾಲಕರಿಗೆ ಸಮಾಜ ಸಹಾಯ ಹಸ್ತ ಚಾಚಲೇಬೇಕಿದೆ.

Advertisement

ನಾನೂ ಒಬ್ಬ ಚಿಕ್ಕ ಮಟ್ಟದ ಗೋ ಸಂವರ್ಧಕ – ಗೋಪಾಲಕ – ಗವ್ಯೋತ್ಪನ್ನ ತಯಾರಕ… ‌

ನನ್ನ ಅನುಭವದಲ್ಲಿ ಗೋ ಸಂವರ್ಧನೆ ಸಂಬಂಧಿಸಿದಂತೆ ಕೆಲವು ಅನಿಸಿಕೆಗಳು, ಹೀಗಿದೆ…. ಎಲ್ಲಾ ರೈತ ಗೋಪಾಲಕರಂತೆ ನನಗೂ ಈ ಕಾಲದಲ್ಲಿ ಗೋ ಪಾಲನೆ ಕಷ್ಟ ವೇ.‌ ನಾನು ನನ್ನ ಗೋಪಾಲನೆಗಾಗಿ ಗೋವುಗಳ ಸಗಣಿ ಗೊಬ್ಬರವನ್ನು ಸೂಕ್ಷ್ಮಾಣು ಜೀವಿಗಳ ಜೊತೆಯಲ್ಲಿ ಸಂಯೋಜನೆ ಮಾಡಿ ಒಂದು ಬಗೆಯ ಸಾವಯವ ಗೊಬ್ಬರ ತಯಾರಿಸಿ ಮಾರಾಟ ಮಾಡಿ ನನ್ನ ಗೋ ಸಂವರ್ಧನೆಗೆ ಸಂಪನ್ಮೂಲಗಳ ಕ್ರೂಢೀಕರಣ ಮಾಡುವ ಪ್ರಯತ್ನ ಮಾಡು ತ್ತಿದ್ದೇನೆ. ಇದೇನು ಬೃಹತ್ ಪ್ರಮಾಣ ವೇನೆಲ್ಲ. ದೊಡ್ಡ ಕಟ್ಟಡ, ದೊಡ್ಡ ಯಂತ್ರ, ಬಣ್ಣ ಬಣ್ಣದ ಪ್ಯಾಕಿಂಗ್ ಊರೂರಿನಲ್ಲಿ ದೊಡ್ಡ ಬೋರ್ಡು , ಒಂದು ಚೀಲ ಕೊಂಡರೆ ಒಂದು ಚೀಲ ಉಚಿತ ಆಫರ್ರು ಗಳಿಲ್ಲದ ಸರಳ ಪಾರದರ್ಶಕ ರೈತರಿಗೆ ಅನುಕೂಲ ವಾಗುವಂತಹ ಪ್ರಯತ್ನ ನನ್ನದು. ನನ್ನ ಈ ಪ್ರಯತ್ನ ಯಶಸ್ವಿಯಾ ದಲ್ಲಿ ನನ್ನ ಹಾಗೆ ಗೋ ಪಾಲನೆ ಮಾಡುವ ಇತರ ರೈತರ ಗವ್ಯೋತ್ಪನ್ನಗಳನ್ನೂ ಉತ್ತಮ ಬೆಲೆ ಗೆ ಕೊಂಡು ಅವರ ಗೋ ಸೇವೆಗೆ ನನ್ನ ಕಡೆ ಯಿಂದಲೂ ಪ್ರೋತ್ಸಾಹ ಮಾಡುವ , ಗೋ ವುಗಳ ಉಳಿಸಿ ಗೋವುಗಳ ಆತ್ಮ ನಿರ್ಭರ ಮಾಡುವ ಪ್ರಯತ್ನ ಗುರಿ ನನ್ನದು…

Advertisement

ಆದರೆ ರೈತ ಸಮಾಜ ಈ ನನ್ನ ಪಾರದರ್ಶಕ ಪ್ರಾಮಾಣಿಕ ಪ್ರಯತ್ನ ಕ್ಕೆ ನೀರಸ ಪ್ರತಿಕ್ರಿಯೆ ನೀಡುತ್ತಿದೆ ಎನಿಸುತ್ತದೆ.
ಒಂದಷ್ಟು ಸಹೃದಯಿಗಳ ಪ್ರೋತ್ಸಾಹ ದಿಂದ ನಮ್ಮ ಗೋಪಾಲನೆಗೆ ಶಕ್ತಿ ಬಂದಿದೆ. ಆ ಎಲ್ಲಾ ನಮ್ಮ ಗೋ ಪ್ರೋತ್ಸಾಹಾಕರಿಗೆ ಈ ಸಂಧರ್ಭದಲ್ಲಿ ಅನಂತಾನಂತ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಇವರಾರು ನನ್ನ ಊರಿನ ಹತ್ತಿರ ದವರಲ್ಲ.‌ ದೂರದ ಊರಿನವರಾಗಿಯೂ ನನ್ನ ಈ ಗವ್ಯೋತ್ಪನ್ನದ ಗೊಬ್ಬರ ತಯಾರಿಕೆಯ ಪ್ರಯತ್ನ ವನ್ನು ಕೊಂಡು ಪ್ರೋತ್ಸಾಹಿಸುತ್ತಿದ್ದಾರೆ.

ಆದರೆ, ನನ್ನ ಊರಿನಲ್ಲಿ ಇವನು ಗೋಪಾಲನೆ ಮಾಡುತ್ತಿದ್ದಾನೆ ಮತ್ತು ಕೊಟ್ಟಿಗೆ ಗೊಬ್ಬರ ವನ್ನು ಮೌಲ್ಯವರ್ಧನೆ ಮಾಡಿ ಗೊಬ್ಬರ ತಯಾರಿಸಿ ಮಾರಾಟ ಮಾಡುತ್ತಿದ್ದಾನೆ ಎಂದು ಗೊತ್ತಿದ್ದೂ ಒಬ್ಬೇ ಒಬ್ಬ ರೈತರು ಕೂಡ ನನ್ನ ತಯಾರಿಕೆಯ ಗೊಬ್ಬರ ಖರೀದಿಸಿಲ್ಲ….!! ನಮ್ಮೂರ ಗೊಬ್ಬರ ಮಾರಾಟ ಕೇಂದ್ರ ದಲ್ಲಿ ವರ್ಷಕ್ಕೆ ಸಾವಿರ ಟನ್ “ಪ್ರೆಸ್ ಮಡ್ ” ಬ್ಯಾಗು ಗೊಬ್ಬರ ವ್ಯಾಪಾರವಾಗುತ್ತದೆ‌ . ಆದರೆ ರೈತ ಬಂಧು ಗಳು ಗೊಬ್ಬರವೇ ಅಲ್ಲದ ಅದನ್ನು ಕೊಂಡು ತಮ್ಮ ಕೃಷಿ ಗೆ ಬಳಸುತ್ತಾರೆಯೇ ವಿನಃ ಊರು ಮನೆಯವನ ಸಾವಯವ ಗೊಬ್ಬರ ತಯಾರಿಕೆಯ ಪ್ರಯತ್ನ ಕ್ಕೆ ಚಿಕ್ಕ ಮಟ್ಟದ ಪ್ರೋತ್ಸಾಹಾವನ್ನೂ ನೀಡಲು ಮನಸು ಮಾಡರು…!!!. ಅದೇಕೋ ಕಾಣೆ…!!!

Advertisement

ಈ ತರಹ ನನ್ನೊಬ್ಬನ ಅನುಭವವಲ್ಲ.. ನನ್ನ ಅನೇಕ ಗೋಪಾಲಕ ಬಂಧುಗಳ ಗವ್ಯೋತ್ಪನ್ನದ ಮಾರುಕಟ್ಟೆ ಗೆ ಇದೇ ಬಗೆಯ ಸ್ಥಳೀಯ ನೀರಸ ಪ್ರತಿಕ್ರಿಯೆ ಇದೆ…!! ರೈತರು ಕಳಪೆ ಬೋಗಸ್ ಪ್ರೆಸ್ ಮಡ್ ಗೊಬ್ಬರ ವನ್ನು ಖರೀದಿಸಿ ಕೃಷಿ ಗೆ ಬಳಸು ವಾಗ ಸ್ವಲ್ಪಮಟ್ಟಿಗಾದರೂ ನಮ್ಮಂಥ ನವ್ಯೋದ್ಯಮಿಗಳ ಗೊಬ್ಬರ ತಯಾರಿಕೆಯ ಪ್ರಯತ್ನ ಗಳಿಗೆ ಪ್ರೋತ್ಸಾಹ ನೀಡಿದರೆ ಪರೋಕ್ಷವಾಗಿ ಗೋವು ಉಳಿಯುತ್ತದೆ… ಗೋವು ರೈತರ ಮನೆಯಲ್ಲಿ ಉಳಿಯ ಬೇಕು ಎಂತಾದರೆ ಸಗಣಿ ಗೊಬ್ಬರ, ಗೋ ಮೂತ್ರ, ಹಾಲು , ತುಪ್ಪ ಎಲ್ಲಾ ಉತ್ಪನ್ನಗಳಿಗೂ ಗೌರವಯುತ ಬೆಲೆ ಲಭ್ಯ ವಾದರೆ ಮಾತ್ರ .ದಿನ ದಿನಕ್ಕೂ ಜಾನುವಾರುಗಳಿಲ್ಲದ ಕೊಟ್ಟಿಗೆಯಿಲ್ಲದ ಸ್ಮಾರ್ಟ್ ಹೋಮು ಗಳು ದೇಶದ ಕೃಷಿ ಬದುಕಿನ ಅವನತಿಯ ಸಂಕೇತ.

ಗೋವುಗಳು ರೈತ ಗೋಪಾಲಕರ ಮನೆಯಲ್ಲಿ ಉಳಿಯಲು ರೈತರು ಮತ್ತು ಸಮಾಜ ಗೋಪಾಲಕರ ಗವ್ಯೋತ್ಪನ್ನ ಗಳ ತಯಾರಿಕೆಯನ್ನು ಉತ್ತಮ ಬೆಲೆ ಕೊಟ್ಟು ಖರೀದಿಸಿ ಪ್ರೋತ್ಸಾಹಿಸಿ… ‌ಗೋವುಗಳು ಖಂಡಿತವಾಗಿಯೂ ಸಂವರ್ಧನೆಯಾಗು ತ್ತವೆ….ಗೋವು ಉಳಿಯಲಿ ಕೃಷಿ ಭೂಮಿ ಸಂಪನ್ನವಾಗಲಿ…

Advertisement
ಬರಹ :
ಪ್ರಬಂಧ ಅಂಬುತೀರ್ಥ

Organic farming plays a crucial role in maintaining a sustainable environment for future generations. By eliminating the use of harmful chemicals and pesticides, organic farming helps preserve the natural ecosystems and biodiversity of our planet. The practice promotes soil health, reduces pollution, and conserves water resources, ultimately leading to a healthier and more balanced ecosystem. Embracing organic farming not only benefits the environment but also promotes the health and well-being of consumers by providing them with nutrient-rich and chemical-free food. Let us continue to support and advocate for organic farming to create a more sustainable and harmonious world for all living beings.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಪ್ರಬಂಧ ಅಂಬುತೀರ್ಥ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಅಂಬುತೀರ್ಥದ ನಿವಾಸಿ ಪ್ರಬಂಧ. ಬಿ ಎ. ವಿಧ್ಯಾಭ್ಯಾಸ ಮುಗಿಸಿದ ಮೇಲೆ ಕೃಷಿ ಕೆಲಸ. ಕಥೆ , ಪರಿಸರ, ಕೃಷಿ , ವಿಜ್ಞಾನ , ಸಾಮಾಜಿಕ ಮತ್ತು ರಾಜಕೀಯ ವಿಚಾರಗಳ ಲೇಖನ ಬರೆಯುವ ಹವ್ಯಾಸ. ಮಲೆನಾಡು ಗಿಡ್ಡ ಗೋ ತಳಿ ಸಂವರ್ಧನೆ, ಜೀರಿಗೆ ಮೆಣಸಿನಕಾಯಿ ಬೆಳೆಯ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಣೆ. ಮಲೆನಾಡು ಗಿಡ್ಡ ತಳಿ ಹಸುಗಳ ಸೆಗಣಿಯನ್ನು ಮೌಲ್ಯ ವರ್ಧನೆ ಮಾಡಿ ಕೃಷಿ ಸ್ನೇಹಿ ಸೂಕ್ಷ್ಮಾಣು ಜೀವಿಯುಕ್ತ ಸಾವಯವ ಗೊಬ್ಬರ ತಯಾರಿಸಿ ಮಾರಾಟ ಮಾಡುವ ಕೆಲಸವನ್ನೂ ಮಾಡುತ್ತಿದ್ದಾರೆ.

Published by
ಪ್ರಬಂಧ ಅಂಬುತೀರ್ಥ

Recent Posts

ಮುಂದುವರಿದ ಮಳೆ | ದ ಕ ಜಿಲ್ಲೆಗೆ ರೆಡ್‌ ಎಲರ್ಟ್ | ಶಾಲೆ-ಕಾಲೇಜಿಗೆ ಜೂ.28 ರಂದು ರಜೆ ಘೋಷಣೆ |

ದ ಕ ಜಿಲ್ಲೆಯಲ್ಲಿ  ಜೂ.28ರಂದು ಜಿಲ್ಲೆಯ ಎಲ್ಲ ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢ…

2 mins ago

ಸರ್ಕಾರದ ಹತ್ತಾರು ಕೆಲಸಗಳ ಜೊತೆಗೆ ಮಕ್ಕಳ ಲಾಲನೆ ಪಾಲನೆ : ಕೇಳುವವರಿಲ್ಲ ಈ ಅಂಗನವಾಡಿ ಮಾತೆಯರ ಬದುಕು ಬವಣೆ

“ಬಾ ಬಾ ಗೊಂಬೆ , ಬಣ್ಣದ ಗೊಂಬೆ ಬೆಣ್ಣೆ ಬಿಸ್ಕೆಟ್ ತಿನ್ನೋಣ, ಕುದುರೆ…

6 hours ago

ಬಾಹ್ಯಾಕಾಶದಲ್ಲೇ ಸಿಲುಕಿಕೊಂಡ ಗಗನಯಾತ್ರಿಗಳು : ನಮ್ಮ ದೇಶದ ಸುನೀತಾ ವಿಲಿಯಮ್ಸ್​​​​ ಬಾಹ್ಯಾಕಾಶದಲ್ಲಿ : ಏನು ಈ ತಾಂತ್ರಿಕ ಸಮಸ್ಯೆ, ಸಂಕಷ್ಟ?

ಬಾಹ್ಯಾಕಾಶಕ್ಕೆ(Space) ಗಗನಯಾತ್ರಿಗಳು(Astonauts) ಹೋಗೋದು ಅಂದ್ರೆ ಹೆಮ್ಮೆಯ ವಿಷಯ. ಆದರೆ ಕಲ್ಪನಾ ಚಾವ್ಲೆ(Kalpana Chawla)…

6 hours ago

ರಾಜ್ಯದಲ್ಲಿ ಡೆಂಗ್ಯೂ ಪ್ರಕರಣ ಶೇ. 60 ರಷ್ಟು ಹೆಚ್ಚಳ : ಸೊಳ್ಳೆಗಳ ನಿಯಂತ್ರಣಕ್ಕೆ ಗಪ್ಪಿ ಮೀನು ಪ್ರಯೋಗ : ಇದು ಲಾರ್ವಾ ತಿಂದು ಬದುಕುವ ಜಲಚರ

ರಾಜ್ಯಾದ್ಯಂತ ಮಳೆಗಾಲ(Rain) ಆರಂಭವಾಗುತ್ತಿದ್ದಂತೆ ಡೆಂಘೀ ಪ್ರಕರಣಗಳು(Dengue case) ಹೆಚ್ಚಾಗುತ್ತಲೇ ಇದೆ. 2023 ಕ್ಕೆ…

7 hours ago

ಕಾಲಿಟ್ಟಲ್ಲೆಲ್ಲಾ ಕಸ ಕಸ ಕಸ… ಇದಕ್ಕೆ ನಾವೇನು ಮಾಡಬಹುದು? ನಮ್ಮ ಜವಾಬ್ದಾರಿ ಏನು..?

ಕಸ,ಕಸ, ಕಸ(Garbage). ಕಂಡಲ್ಲೆಲ್ಲ ಕಸ. ಕಾಲಿಟ್ಟಲ್ಲೆಲ್ಲ ಕಸ, ಕಸ, ಕಸ, ನಾವು ಮಾಡುವ…

7 hours ago