ಗಾಂಧಿ ಜಯಂತಿ ಪ್ರಯುಕ್ತ ಗುತ್ತಿಗಾರು ಪೇಟೆಯಲ್ಲಿ ಸ್ವಚ್ಚತಾ ಬೃಹತ್ ಅಭಿಯಾನ ಹಾಗೂ ಸ್ವಚ್ಛತಾ ಆಂದೋಲನ ನಡೆಯಿತು. ಗುತ್ತಿಗಾರಿನ ಪ್ರತೀ ವಾರ್ಡ್ ನಲ್ಲಿಯೂ ಸ್ವಚ್ಛತಾ ಅಭಿಯಾನ ನಡೆಯಿತು. ಕಳೆದ 13 ವಾರಗಳಿಂದ ಗುತ್ತಿಗಾರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸ್ವಚ್ಛತಾ ಅಭಿಯಾನ ಹಾಗೂ ಪ್ಲಾಸ್ಟಿಕ್ ಮುಕ್ತ ಗ್ರಾಮದ ಅಭಿಯಾನ ನಡೆಯುತ್ತಿದೆ. ಗಾಂಧಿ ಜಯಂತಿ ಪ್ರಯುಕ್ತ ವಿಶೇಷವಾಗಿ ಬೃಹತ್ ಅಭಿಯಾನ ನಡೆಯಿತು.
ಸ್ವಚ್ಛತಾ ಹಿ ಸೇವಾ ಕಾರ್ಯಕ್ರಮ ಗುತ್ತಿಗಾರಿನಲ್ಲಿ ನಡೆಯಿತು.
Swachchta Hi Seva program was held at Guttigaru, sullia#SwachhBharat
#SwachhataHiSeva #SwachhtaHiSeva #SwachhBharatAbhiyan @SwachSurvekshan @SwachhBharatGov @rdwsd_gok @ZP_DaksnKannada pic.twitter.com/K77qnTBqPq— theruralmirror (@ruralmirror) October 2, 2023
ಗುತ್ತಿಗಾರು ಗ್ರಾಮ ಪಂಚಾಯತ್, ಸ್ವಚ್ಛತಾ ಟಾಸ್ಕ್ ಫೋರ್ಸ್, ಸ್ವಚ್ಛ ಭಾರತ್ ಮಿಶನ್, ಸೇರಿದಂತೆ ವಿವಿಧ ಸಂಘಸಂಸ್ಥೆಗಳ ಸಹಕಾರದೊಂದಿಗೆ ಕಮಿಲ -ಗುತ್ತಿಗಾರು, ಮುತ್ಲಾಜೆ – ಗುತ್ತಿಗಾರು, ಪೈಕ ವಳಲಂಬೆ – ಗುತ್ತಿಗಾರು, ಪಂಚಾಯತ್- ಗುತ್ತಿಗಾರು ಪೇಟೆಯ ಪ್ರದೇಶಗಳಲ್ಲಿ ಸ್ವಚ್ಛತಾ ಅಭಿಯಾನ ನಡೆಯಿತು.