ಸ್ವಚ್ಛ ಊರು, ಸ್ವಚ್ಛ ಗ್ರಾಮ ನಮ್ಮೆಲ್ಲರಿಗೂ ಹೆಮ್ಮೆ. ಆಡಳಿತವು ಸದಾ ಸ್ವಚ್ಛತೆಯ ಕಡೆಗೆ ಗಮನ ಹರಿಸುತ್ತದೆ. ಆದರೆ ವಿದ್ಯಾವಂತ ಜನರೇ ಎಲ್ಲೆಂದರಲ್ಲಿ ಕಸ , ತ್ಯಾಜ್ಯ ಎಸೆಯುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಇದೀಗ ಕ್ಯಾಮಾರ ಕಣ್ಣಿನ ಜೊತೆಗೆ ಸ್ವಚ್ಛ ನಗರ ಬಯಸುವ ಪ್ರತೀ ವ್ಯಕ್ತಿಯ ಕಣ್ಣು ಎಚ್ಚರವಾಗಿರಲಿ. ಕಸ ಎಸೆಯುವವರನ್ನು ಜಾಗೃತಗೊಳಿಸೋಣ. ಆಡಳಿತದ ಜೊತೆಗೆ ಕೈಜೋಡಿಸುತ್ತಾ ಸ್ವಚ್ಛತೆಯ ಕಡೆಗೆ ಒಂದು ಹೆಜ್ಜೆ ಇಡೋಣ.
ಸುಳ್ಯ ನಗರ ಸ್ವಚ್ಛವಾಗಬೇಕು ಎಂದು ಜನರು ಒತ್ತಾಯ ಮಾಡುತ್ತಾರೆ. ಆಗಾಗ ಸಾಮಾಜಿಕ ಜಾಲತಾಣಗಳಲ್ಲೂ ಕಸದ ರಾಶಿ ಕಾಣುತ್ತದೆ. ಕಸ ಎಸೆಯುವವರ ವಿರುದ್ಧ ದಂಡ ವಿಧಿಸುವ ಪ್ರಯೋಗವೂ ಅಲ್ಲಲ್ಲಿ ನಡೆಯಿತು. ಆದರೂ ಕಸ ಎಸೆಯುವ ಮಂದಿಗೆ ಕಡಿಮೆ ಇಲ್ಲ. ನಗರದ ಮಧ್ಯದಲ್ಲಿಯೇ ಕಸದ ತೊಟ್ಟಿ ಇದ್ದರೂ ಎಲ್ಲೆಂದರಲ್ಲಿ ಕಸ ಎಸೆಯುವುದು ಕಾಣುತ್ತದೆ. ಹೀಗಾಗಿ ಸ್ವಚ್ಛ ಸುಳ್ಯದ , ಸ್ವಚ್ಛ ನಗರದ ಕನಸು ನನಸಾಗಲೇ ಇಲ್ಲ. ಇದೀಗ ಸುಳ್ಯ ನಗರ ಪಂಚಾಯತ್ ಜಾಗೃತವಾಗಿದೆ. ಕ್ಯಾಮಾರಾ ಅಲ್ಲಲ್ಲಿ ಇರಿಸಿದೆ ಜೊತೆಗೆ ಕಸ ಎಸೆಯುವವರ ಫೋಟೊ ತೆಗೆಯುತ್ತಿದೆ.
ಸುಳ್ಯ ನಗರದಿಂದ ತೊಡಗಿ ಜಾಲ್ಸೂರುವರೆಗೂ ಹಾಗೂ ಸುಳ್ಯ ನಗರದಿಂದ ಅರಂಬೂರ್ ನ ವರೆಗೆ ರಾಜ್ಯ ಹೆದ್ದಾರಿ ಎರಡು ಬದಿಯಲ್ಲಿ ಕಸ ಎಸೆಯಲಾಗಿದೆ. ಹೀಗೆ ಕಸ ಎಸೆಯುವವರ ಫೋಟೊ ಸಹಿತ ಆಡಳಿತಕ್ಕೆ ನೀಡಲಾಗಿದೆ. ಆಡಳಿತವು ಕೆಲವು ಕಡೆ ಅಂತಹವರಿಗೆ ದಂಡವೂ ವಿಧಿಸಿದೆ. ಹಾಗಿದ್ದರೂ ಯಾವುದೇ ಪ್ರಯೋಜನ ಕಾಣಲಿಲ್ಲ. ಈಗ ಕಸ ಎಸೆಯುವ ವೇಳೆಯೇ ಫೋಟೊ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಎಚ್ಚರಿಕೆಯನ್ನು ತಿಳಿಸಲಾಗುತ್ತಿದೆ. ಆದರೂ ವಿದ್ಯಾವಂತ ಜನರಿಗೇ ಅರ್ಥವಾಗುತ್ತಿಲ್ಲ ಎನ್ನುವುದು ವಿಷಾದ.
#ಸ್ವಚ್ಛಸುಳ್ಯ ರಸ್ತೆಯಲ್ಲಿ ಕಸ ಎಸೆಯುವುದು ನಿಲ್ಲಿಸೋಣ. pic.twitter.com/US0XMXAoTP
— theruralmirror (@ruralmirror) March 14, 2022
Advertisement
ನಾವೆಲ್ಲರೂ ಆಡಳಿತ ಜೊತೆ ನಮಗಾಗಿಯೇ, ಸ್ವಚ್ಛ ಗ್ರಾಮಕ್ಕಾಗಿ ಕಸ, ತ್ಯಾಜ್ಯ ಎಲ್ಲೆಂದರಲ್ಲಿ ಎಸೆಯದೇ ಇರೋಣ. ಗ್ರಾಮೀಣ ಭಾರತವೂ ಸ್ವಚ್ಛತೆಯಿಂದ ಕೂಡಿರಲಿ ಇದಕ್ಕಾಗಿ ಪ್ರಯತ್ನಿಸೋಣ. ಇನ್ನೂ ಎಲ್ಲೆಂದರಲ್ಲಿ ತ್ಯಾಜ್ಯ ಎಸೆದರೆ, ಎಸೆಯುವವರ ಫೋಟೊ ಹಾಗೂ ವಿಡಿಯೋ ನಮಗೂ ವ್ಯಾಟ್ಸಪ್ ಮೂಲಕ ಕಳುಹಿಸಿ, ನಾವೂ ಸುಳ್ಯದ ಯಾವ ಸ್ಥಳದಲ್ಲಿ ತ್ಯಾಜ್ಯ ಎಸೆಯಬಾರದು ತಿಳಿಸುತ್ತೇವೆ. ಆಡಳಿತದ ಜೊತೆ ನಾವೂ ಇದ್ದೇವೆ. ನಮ್ಮ ವ್ಯಾಟ್ಸಪ್ ಸಂಖ್ಯೆ 9449125447 .