Advertisement
The Rural Mirror ಕಾಳಜಿ

#ಸ್ವಚ್ಛಸುಳ್ಯ | ಕ್ಯಾಮರಾ ಕಣ್ಣು ಮಾತ್ರವಲ್ಲ ಎಲ್ಲರ ಕಣ್ಣು ಎಚ್ಚರ ಇರಲಿ | ನಮ್ಮೆಲ್ಲರ ಸ್ವಚ್ಛ ಸುಳ್ಯಕ್ಕಾಗಿ ಒಂದು ಹೆಜ್ಜೆ |

Share

ಸ್ವಚ್ಛ ಊರು, ಸ್ವಚ್ಛ ಗ್ರಾಮ ನಮ್ಮೆಲ್ಲರಿಗೂ ಹೆಮ್ಮೆ. ಆಡಳಿತವು ಸದಾ ಸ್ವಚ್ಛತೆಯ ಕಡೆಗೆ ಗಮನ ಹರಿಸುತ್ತದೆ. ಆದರೆ ವಿದ್ಯಾವಂತ ಜನರೇ ಎಲ್ಲೆಂದರಲ್ಲಿ ಕಸ , ತ್ಯಾಜ್ಯ ಎಸೆಯುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಇದೀಗ ಕ್ಯಾಮಾರ ಕಣ್ಣಿನ ಜೊತೆಗೆ ಸ್ವಚ್ಛ ನಗರ ಬಯಸುವ ಪ್ರತೀ ವ್ಯಕ್ತಿಯ ಕಣ್ಣು ಎಚ್ಚರವಾಗಿರಲಿ. ಕಸ ಎಸೆಯುವವರನ್ನು ಜಾಗೃತಗೊಳಿಸೋಣ. ಆಡಳಿತದ ಜೊತೆಗೆ ಕೈಜೋಡಿಸುತ್ತಾ ಸ್ವಚ್ಛತೆಯ ಕಡೆಗೆ ಒಂದು ಹೆಜ್ಜೆ ಇಡೋಣ.

ಸುಳ್ಯ ನಗರ ಸ್ವಚ್ಛವಾಗಬೇಕು ಎಂದು ಜನರು ಒತ್ತಾಯ ಮಾಡುತ್ತಾರೆ. ಆಗಾಗ ಸಾಮಾಜಿಕ ಜಾಲತಾಣಗಳಲ್ಲೂ ಕಸದ ರಾಶಿ ಕಾಣುತ್ತದೆ. ಕಸ ಎಸೆಯುವವರ ವಿರುದ್ಧ ದಂಡ ವಿಧಿಸುವ ಪ್ರಯೋಗವೂ ಅಲ್ಲಲ್ಲಿ ನಡೆಯಿತು. ಆದರೂ ಕಸ ಎಸೆಯುವ ಮಂದಿಗೆ ಕಡಿಮೆ ಇಲ್ಲ. ನಗರದ ಮಧ್ಯದಲ್ಲಿಯೇ ಕಸದ ತೊಟ್ಟಿ ಇದ್ದರೂ ಎಲ್ಲೆಂದರಲ್ಲಿ ಕಸ ಎಸೆಯುವುದು  ಕಾಣುತ್ತದೆ. ಹೀಗಾಗಿ ಸ್ವಚ್ಛ ಸುಳ್ಯದ , ಸ್ವಚ್ಛ ನಗರದ ಕನಸು ನನಸಾಗಲೇ ಇಲ್ಲ. ಇದೀಗ ಸುಳ್ಯ ನಗರ ಪಂಚಾಯತ್‌ ಜಾಗೃತವಾಗಿದೆ. ಕ್ಯಾಮಾರಾ ಅಲ್ಲಲ್ಲಿ ಇರಿಸಿದೆ ಜೊತೆಗೆ ಕಸ ಎಸೆಯುವವರ ಫೋಟೊ ತೆಗೆಯುತ್ತಿದೆ.

ಸುಳ್ಯ ನಗರದಿಂದ ತೊಡಗಿ ಜಾಲ್ಸೂರುವರೆಗೂ ಹಾಗೂ ಸುಳ್ಯ ನಗರದಿಂದ  ಅರಂಬೂರ್ ನ ವರೆಗೆ ರಾಜ್ಯ ಹೆದ್ದಾರಿ ಎರಡು ಬದಿಯಲ್ಲಿ ಕಸ ಎಸೆಯಲಾಗಿದೆ. ಹೀಗೆ ಕಸ ಎಸೆಯುವವರ ಫೋಟೊ ಸಹಿತ ಆಡಳಿತಕ್ಕೆ ನೀಡಲಾಗಿದೆ. ಆಡಳಿತವು ಕೆಲವು ಕಡೆ ಅಂತಹವರಿಗೆ ದಂಡವೂ ವಿಧಿಸಿದೆ. ಹಾಗಿದ್ದರೂ ಯಾವುದೇ ಪ್ರಯೋಜನ ಕಾಣಲಿಲ್ಲ. ಈಗ ಕಸ ಎಸೆಯುವ ವೇಳೆಯೇ ಫೋಟೊ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಎಚ್ಚರಿಕೆಯನ್ನು ತಿಳಿಸಲಾಗುತ್ತಿದೆ. ಆದರೂ ವಿದ್ಯಾವಂತ ಜನರಿಗೇ ಅರ್ಥವಾಗುತ್ತಿಲ್ಲ ಎನ್ನುವುದು  ವಿಷಾದ.

ನಾವೆಲ್ಲರೂ ಆಡಳಿತ ಜೊತೆ ನಮಗಾಗಿಯೇ, ಸ್ವಚ್ಛ ಗ್ರಾಮಕ್ಕಾಗಿ ಕಸ, ತ್ಯಾಜ್ಯ ಎಲ್ಲೆಂದರಲ್ಲಿ ಎಸೆಯದೇ ಇರೋಣ. ಗ್ರಾಮೀಣ ಭಾರತವೂ ಸ್ವಚ್ಛತೆಯಿಂದ ಕೂಡಿರಲಿ ಇದಕ್ಕಾಗಿ ಪ್ರಯತ್ನಿಸೋಣ. ಇನ್ನೂ ಎಲ್ಲೆಂದರಲ್ಲಿ ತ್ಯಾಜ್ಯ ಎಸೆದರೆ, ಎಸೆಯುವವರ ಫೋಟೊ ಹಾಗೂ ವಿಡಿಯೋ ನಮಗೂ ವ್ಯಾಟ್ಸಪ್‌ ಮೂಲಕ ಕಳುಹಿಸಿ, ನಾವೂ  ಸುಳ್ಯದ ಯಾವ ಸ್ಥಳದಲ್ಲಿ ತ್ಯಾಜ್ಯ ಎಸೆಯಬಾರದು ತಿಳಿಸುತ್ತೇವೆ. ಆಡಳಿತದ ಜೊತೆ ನಾವೂ ಇದ್ದೇವೆ. ನಮ್ಮ ವ್ಯಾಟ್ಸಪ್‌ ಸಂಖ್ಯೆ 9449125447 .

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ವಿಶೇಷ ಪ್ರತಿನಿಧಿ

ರೂರಲ್‌ ಮಿರರ್‌ ವಿಶೇಷ ಪ್ರತಿನಿಧಿ.

Published by
ವಿಶೇಷ ಪ್ರತಿನಿಧಿ

Recent Posts

1973 ರ ಅಡಿಕೆ ಬಿಕ್ಕಟ್ಟು 2026ಕ್ಕೆ ನೀಡುವ ಎಚ್ಚರಿಕೆ ಏನು..?

1973ರ ಅಡಿಕೆ ಮಾರುಕಟ್ಟೆ ಬಿಕ್ಕಟ್ಟು ಉತ್ಪಾದನೆ ಹೆಚ್ಚಳಕ್ಕೆ ತಕ್ಕಂತೆ ಮಾರುಕಟ್ಟೆ ಹೀರಿಕೊಳ್ಳುವ ಸಾಮರ್ಥ್ಯವೂ…

1 hour ago

ಹವಾಮಾನ ವರದಿ | 05-10-2026 | ಅರಬ್ಬಿ ಸಮುದ್ರದ ಮೇಲ್ಮೈ ಸುಳಿಗಾಳಿಯಿಂದ ಮಳೆ – ಅ.6 ರ ಬಳಿಕ ಏನಾಗಲಿದೆ?

ಅರಬ್ಬಿ ಸಮುದ್ರದ ಉಡುಪಿ–ದಕ್ಷಿಣ ಕನ್ನಡ ಕರಾವಳಿ ಸಮೀಪ ರೂಪುಗೊಂಡಿರುವ ಮೇಲ್ಮೈ ಸುಳಿಗಾಳಿಯಿಂದ ಕರಾವಳಿ,…

10 hours ago

ಅಡಿಕೆ ದರ ಇಳಿಯುತ್ತದೆ, ಕೂಲಿ ಏರುತ್ತದೆ ; ಬೆಳೆಗಾರನಿಗೆ ಉಳಿಯುವುದೇನು?

ಅಡಿಕೆ ದರ ಕುಸಿಯುತ್ತಿರುವ ಸಂದರ್ಭದಲ್ಲಿ ಕೃಷಿ ಕೂಲಿ ದರ ನಿರಂತರವಾಗಿ ಏರುತ್ತಿರುವುದು ಮಲೆನಾಡಿನ…

2 days ago

ಕಸೂತಿ ಕಲಿತು ಸ್ವಾವಲಂಬನೆಯತ್ತ ಗ್ರಾಮೀಣ ಮಹಿಳೆಯರು

ಕೊಪ್ಪಳ ಜಿಲ್ಲೆಯ ಕಿನ್ನಾಳ ಗ್ರಾಮದಲ್ಲಿ ಗ್ರಾಮೀಣ ಮಹಿಳೆಯರಿಗೆ ಒಂದು ತಿಂಗಳ ಉಚಿತ ಮಗ್ಗಂ…

2 days ago

ಕರ್ನಾಟಕದಲ್ಲಿ ಬರದ ಹೊಡೆತ – ಬೆಳೆ ನಷ್ಟ ₹60 ಸಾವಿರ ಕೋಟಿವರೆಗೆ ಸಾಧ್ಯತೆ

ಕರ್ನಾಟಕದ ಬರ ಪರಿಸ್ಥಿತಿಯಿಂದ ಉಂಟಾಗಿರುವ ಬೆಳೆ ನಷ್ಟ ₹50 ಸಾವಿರ ಕೋಟಿಯಿಂದ ₹60…

2 days ago

ದಾಖಲೆಗಳಿಲ್ಲದೆ ಜಾನುವಾರು ಸಾಗಿಸಿದ ಮಾತ್ರಕ್ಕೆ ವಧೆಗಾಗಿ ಸಾಗಿಸಲಾಗುತ್ತಿದೆ ಎಂದು ಊಹಿಸಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್

ದಾಖಲೆಗಳಿಲ್ಲದೆ ಜಾನುವಾರು ಸಾಗಿಸಿರುವುದನ್ನು ಮಾತ್ರ ಆಧಾರವಾಗಿಟ್ಟುಕೊಂಡು ವಧೆಗಾಗಿ ಸಾಗಿಸಲಾಗುತ್ತಿದೆ ಎಂದು ಊಹಿಸಲು ಸಾಧ್ಯವಿಲ್ಲ…

2 days ago