Advertisement
MIRROR FOCUS

ದ ಕ ಜಿಲ್ಲೆಯಲ್ಲಿ ಯಶಸ್ವಿಯಾದ ಸ್ವಚ್ಛತಾ ಹಿ ಸೇವಾ ಕಾರ್ಯಕ್ರಮ | 15 ದಿನ, 56 ಲಕ್ಷ ಜನ ಅಭಿಯಾನ |

Share

ದ ಕ ಜಿಲ್ಲೆಯ 352 ಗ್ರಾಮ, 1779 ಪ್ರೌಢ, ಪ್ರಾಥಮಿಕ, 102 ಪಿ.ಯು ಕಾಲೇಜು, 73 ಪದವಿ ಕಾಲೇಜುಗಳಲ್ಲಿ ಸ್ವಚ್ಛತೆಯೆ ಸೇವೆ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು.

ದಕ ಜಿಲ್ಲೆಯಾದ್ಯಂತ ನಡೆದ ‘ಸ್ವಚ್ಛತಾ ಹಿ ಸೇವಾ ಅಭಿಯಾನ’ ಸ್ವಚ್ಛತೆಯೇ ಸೇವೆ ಅಭಿಯಾನ ಸೆಪ್ಟಂಬರ್ 15 ರಿಂದ ಅಕ್ಟೋಬರ್ 2 ರವರೆಗೆ ನಡೆದಿದ್ದು ಈ ಅವಧಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 43 ಲಕ್ಷ ವ್ಯಕ್ತಿಗಳು ಕೈ ಜೋಡಿಸಿದ್ದಾರೆ. 9 ತಾಲೂಕಿನ ಒಂದು ಕೇಂದ್ರ ಗ್ರಾಮ ಪಂಚಾಯತ್ ಆಯ್ದುಕೊಂಡು ಸ್ವಚ್ಛತಾ ಹಿ ಸೇವಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಈ ಅವಧಿಯಲ್ಲಿ ರೈಲ್ವೆ ನಿಲ್ದಾಣ, ರಸ್ತೆಯ ಇಕ್ಕೆಲಗಳು, ಶಾಲಾ ಸುತ್ತ –ಮುತ್ತ, ಇತಿಹಾಸಿಕ ದೇವಾಲಯ, ಪ್ರವಾಸೋದ್ಯಮ ತಾಣ, ಬೀಚ್ ಸ್ವಚ್ಛತೆ, ಪ್ರತಿಜ್ಞಾ ವಿಧಿ ಬೋಧನೆ ನಡೆದವು.

ಬದಲಾವಣೆಗಾಗಿ ಅಭಿಯಾನ : ಜನರ ಮನೋಭಾವ ಬದಲಾವಣೆ ಮಾಡುವ ನಿಟ್ಟಿನಲ್ಲಿ ಈ ಕಾರ್ಯಕ್ರಮವು ಯಶಸ್ವಿಯಾಗಿದ್ದು, ರೈಲು ಹಳಿಗಳ ಸ್ವಚ್ಛತೆ, ಪ್ರಮುಖ ನಿಲ್ದಾಣಗಳಿಗೆ ತೆರಳುವ ಮಾರ್ಗಗಳು, ಮನೆ ಮನೆಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ನಿರ್ಮೂಲನೆಗೆ ವಿಶೇಷ ಒತ್ತು ನೀಡಲಾಗಿದೆ. ಈ ಅಭಿಯಾನವು ಸ್ವಚ್ಛ ಸಂವಾದ, ಸ್ವಚ್ಛ ಪರಿಸರ, ಸ್ವಚ್ಛ ಗ್ರಾಮ, ಸ್ವಚ್ಛ ಪರಿಸರ, ಸ್ವಚ್ಛ ಆಹಾರ್ ಮತ್ತು ಸ್ವಚ್ಛ ಪ್ರವಾಸಿ ತಾಣ ಈ ರೀತಿಯಾಗಿ ನಡೆದಿದೆ.

15 ದಿನ, 56 ಲಕ್ಷ ಜನ ಅಭಿಯಾನ: ಸ್ವಚ್ಛತಾ ಹಿ ಸೇವಾ ಅಭಿಯಾನದ ಮೊದಲ ದಿನಗಳಲ್ಲಿ ಸಾರ್ವಜನಿಕ ಭಾಗೀಧಾರಿಕೆ ಕಡಿಮೆ ಇತ್ತು. ಕ್ರಮೇಣ ಜನರ ಪಾಲ್ಗೊಳ್ಳುವಿಕೆ ಜಾಸ್ತಿಯಾಯಿತು. ಬರೋಬ್ಬರಿ 53 ಲಕ್ಷಕ್ಕೂ ಹೆಚ್ಚು ಜನರು/ವ್ಯಕ್ತಿಗಳು ಉತ್ಸಾಹದಿಂದ ಭಾಗವಹಿಸಿದರು. ಸಾಮೂಹಿಕ 1,11,55,879 ಮಾನವ-ಗಂಟೆಗಳನ್ನು ಅಭಿಯಾನಕ್ಕೆ ಮೀಸಲಿಟ್ಟರು.

ಗ್ರಾಮ ಪಂಚಾಯತ್ ನ ಒಟ್ಟು 352 ಗ್ರಾಮಗಳು ಸೇರಿದಂತೆ ವೈಯುಕ್ತಿಕ ಮನೆಗಳು, ಬಸ್ಸು, ರೈಲು ನಿಲ್ದಾಣಗಳಲ್ಲಿ ತ್ಯಾಜ್ಯ ವಿಲೇವಾರಿ ಕುರಿತು ಮಾಹಿತಿ ನೀಡಲಾಯಿತು. ಪಂಚಾಯತ್ ವ್ಯಾಪ್ತಿ, ಶಾಲೆ , ಕಾಲೇಜು ಹಾಗೂ ವಿವಿಧ ಸಂಘಟನೆಗಳು ಸೇರಿ ಪ್ರತಿಜ್ಞಾ ವಿಧಿ ಸ್ವೀಕಾರ, ಜಾಥಗಳನ್ನು ಕೈಗೊಂಡವು.

ಬಯಲು ಮುಕ್ತ ಶೌಚಾಲಯ : ಗ್ರಾಮಾಂತರ ಪ್ರದೇಶಗಳಲ್ಲಿ ನಿರ್ಮಾಣ ಆಗಿರುವ ಸಾರ್ವಜನಿಕ ಶೌಚಾಲಯ, ಶಾಲಾ ಕಾಲೇಜುಗಳಲ್ಲಿ ಮತ್ತು ವೈಯುಕ್ತಿಕ ಶೌಚಾಲಯ ಬಳಸುವಿಕೆ ಅಭಿಯಾನದ ಪ್ರಮುಖ ಉದ್ದೇಶಗಳಲ್ಲಿ ಒಂದಾಗಿತ್ತು. ಮಾಹಿತಿ, ಶಿಕ್ಷಣ ಮತ್ತು ಸಂವಹನ ಅಭಿಯಾನಗಳು ಮತ್ತು ಸಂದೇಶವನ್ನು ಪರಿಣಾಮಕಾರಿಯಾಗಿ ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಹರಡುವ ಮೂಲಕ ಜನರಿಕೆ ಮಹತ್ವವನ್ನು ಮನವರಿಕೆ ಮಾಡಲಾಯಿತು.

ಗ್ರಾಮಗಳ ಸ್ವಚ್ಛತೆಗೆ ಆದ್ಯತೆ  : ಗ್ರಾಮ ಪಂಚಾಯತ್ ವ್ಯಾಪ್ತಿಯ ಸ್ವಚ್ಛ ಸಂಕೀರ್ಣಗಳ ಕುರಿತಾಗಿ ಜನರಿಗೆ ಮನವರಿಕೆ ಮಾಡುವ ಕಾರ್ಯಕ್ರಮ ಈ ಅವಧಿಯಲ್ಲಿ ಮಾಡಲಾಯಿತು. ಪಂಚಾಯತ್ ನ ಸ್ವಚ್ಛ ವಾಹಿನಿಗಳ ಮೂಲಕ ಮನೆ ಮನೆಗಳಿಂದ ತ್ಯಾಜ್ಯ ಸಂಗ್ರಹಣೆ – ವಿಂಗಡಣೆ ಕುರಿತಾಗಿ ಜಾಗೃತಿ ಮೂಡಿಸಲಾಯಿತು.

ಸಮಗ್ರ ಘನತ್ಯಾಜ್ಯ ನಿರ್ವಹಣೆ – ಜಾಗೃತಿ :ಈ ಅವಧಿಯಲ್ಲಿ ಸುಳ್ಯ, ಬಂಟ್ವಾಳ, ಕಡಬ, ಪುತ್ತೂರು ಮತ್ತು ಉಳ್ಳಾಲ ತಾಲೂಕಿನ ಗ್ರಾಮ ಪಂಚಾಯತ್ ಅಧ್ಯಕ್ಷರು, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರಿಗೆ ಅಧ್ಯಯನ ಪ್ರವಾಸವನ್ನು ಮಂಗಳೂರು ತಾಲೂಕು ತೆಂಕ ಎಡಪದವು ಗ್ರಾಮ ಪಂಚಾಯತ್ ನಲ್ಲಿ ಕಾರ್ಯಾಚರಣೆಯಲ್ಲಿರುವ ಎಂ.ಆರ್.ಎಫ್ ಘಟಕ (ಸಮಗ್ರ ಘನತ್ಯಾಜ್ಯ ನಿರ್ವಹಣಾ ಘಟಕ) ಕ್ಕೆ ಏರ್ಪಡಿಸಲಾಯಿತು. ಈ ಮೂಲಕ ಗ್ರಾಮ ಪಂಚಾಯತ್ನಲ್ಲಿ ಸುಸ್ಥಿರ ತ್ಯಾಜ್ಯ ನಿರ್ವಹಣೆಗೆ ಆದ್ಯತೆ ನೀಡಲಾಗಿದೆ.

ಏಕ ಬಳಕೆ ಪ್ಲಾಸ್ಟಿಕ್ ನಿಷೇಧ – ಜಾಗೃತಿ : ಈ ಅವಧಿಯಲ್ಲಿ ತಾಲೂಕು ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ಏಕ ಬಳಕೆ ಪ್ಲಾಸ್ಟಿಕ್ ನಿಷೇಧದ ಕುರಿತು ಜಾಗೃತಿ ಮೂಡಿಸಲಾಯಿತು. ವಿವಿಧ ಗ್ರಾಮ ಪಂಚಾಯತ್ ಗಳು ಕರಪತ್ರ ಸೇರಿದಂತೆ ಮಾಹಿತಿ ಫಲಕಗಳನ್ನು ಅಳವಡಿಸಿದವು. ಸ್ವಚ್ಛ ವಾಹಿನಿಯಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವ ಅಡಿಯೋಗಳನ್ನು ಪ್ರಚಾರ ಮಾಡಲಾಯಿತು.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಕೃಷಿ ಮಾರುಕಟ್ಟೆ ವರದಿ | ಅಡಿಕೆ ಮಾರುಕಟ್ಟೆಯಲ್ಲಿ ಮಿಶ್ರ ಫಲ…!

ಕರ್ನಾಟಕದ ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ ಏರಿಳಿತ ಕಂಡುಬಂದಿದೆ. ಮಲೆನಾಡು ಮಾರುಕಟ್ಟೆಗಳಲ್ಲಿ ಸ್ವಲ್ಪ ಏರಿಕೆ…

21 minutes ago

ನೈಸರ್ಗಿಕ ಕೃಷಿಯಿಂದ ರೈತರ ಆದಾಯ ಹೆಚ್ಚಳ

ಅಸ್ಸಾಂನಲ್ಲಿ ಐಸಿಎಆರ್–ಐಎಆರ್‌ಐ ಸಂಸ್ಥೆ “ನೈಸರ್ಗಿಕ ಕೃಷಿ” ವಿಷಯದಡಿ ಕಿಸಾನ್ ಮೇಳ 2026 ಆಯೋಜಿಸಿತು.…

1 hour ago

ಭಾರತದಲ್ಲಿ ಮಳೆಗಾಲದ ತೀವ್ರತೆ ಹೆಚ್ಚಳ | ತಾಪಮಾನ ಏರಿಕೆಯಿಂದ ‘ಸೂಪರ್ ಚಾರ್ಜ್’ ಆಗುತ್ತಿರುವ ಮಾರುತ

ಜಾಗತಿಕ ತಾಪಮಾನ ಏರಿಕೆಯಿಂದ ಭಾರತದಲ್ಲಿ ಮಾರುತ ಮಳೆಯ ತೀವ್ರತೆ ಹೆಚ್ಚುತ್ತಿರುವುದು ಹೊಸ ಅಧ್ಯಯನದಲ್ಲಿ…

5 hours ago

ಮ್ಯಾನ್ಮಾರ್ ಅಡಿಕೆ ಕಳ್ಳಸಾಗಣೆ ವಿರುದ್ಧ ಮಿಜೋರಾಂ ಸರ್ಕಾರದ ಕಠಿಣ ಕ್ರಮ : 468 ಪ್ರಕರಣ ದಾಖಲು

ಮ್ಯಾನ್ಮಾರ್‌ನಿಂದ ಅಕ್ರಮ ಅಡಿಕೆ ಕಳ್ಳಸಾಗಣೆ ವಿರುದ್ಧ ಮಿಜೋರಾಂ ಸರ್ಕಾರ ಜಾರಿ ಕ್ರಮವನ್ನು ಬಿಗುಗೊಳಿಸಿದೆ.…

14 hours ago

ಸುಸ್ಥಿರ ಕೃಷಿ ಮತ್ತು ‘ತ್ಯಾಜ್ಯದಿಂದ ಸಂಪತ್ತು’ ಮಾದರಿಗೆ ಐಸಿಎಆರ್ ಸಭೆಯಲ್ಲಿ ಒತ್ತು

ಕೊಲ್ಕತ್ತಾದಲ್ಲಿ ನಡೆದ ಸಭೆಯಲ್ಲಿ ಸೆಣಬು ವಲಯ ಸುಧಾರಣೆ, ಸುಸ್ಥಿರ ಕೃಷಿ ಹಾಗೂ ಮೀನುಗಾರಿಕೆ…

15 hours ago

ಹೋಳಿ ಹಬ್ಬ: ಪ್ರಾಣಿ-ಪಕ್ಷಿಗಳಿಗೆ ಹಾನಿಯಾಗದಂತೆ ಆಚರಿಸಿ – ಮಂಡಳಿ ಮನವಿ

ಹೋಳಿ ಹಬ್ಬದ ಸಂದರ್ಭದಲ್ಲಿ ಪ್ರಾಣಿ ಮತ್ತು ಪಕ್ಷಿಗಳಿಗೆ ಹಾನಿಯಾಗದಂತೆ ಆಚರಿಸಲು ಭಾರತೀಯ ಪ್ರಾಣಿ…

15 hours ago