ಸ್ವರಸಾಮ್ರಾಟ ಪಂಡಿತ್ ಬಸವರಾಜ ರಾಜಗುರು ಬದುಕಿನ ವೃತ್ತಾಂತ ‘ನಾ ರಾಜಗುರು’ ಸಂಗೀತ ನಾಟಕ | ಅಜ್ಜನ ಹಾದಿಯಲ್ಲಿ ಮೊಮ್ಮಗ ವಿಶ್ವರಾಜನ ನಾಟಕ ಪಯಣ‌ |

November 25, 2023
11:20 AM
‘ನಾ ರಾಜಗುರು’ ಸಂಗೀತ ನಾಟಕ ಮತ್ತು ತಬಲಾ ಸೋಲೋ ವಾದನ ಕಾರ್ಯಕ್ರಮ ಧಾರವಾಡದಲ್ಲಿ ನಡೆಯಿತು.

ಸ್ವರಸಾಮ್ರಾಟ ಪಂ. ಬಸವರಾಜ ರಾಜಗುರು(Pt.Basavaraja Rajaguru) ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ವತಿಯಿಂದ ಕರ್ನಾಟಕ ಸಂಭ್ರಮ- 50 ವಿಶೇಷ ಕಾರ್ಯಕ್ರಮದ ಅಂಗವಾಗಿ ಪಂ. ಬಸವರಾಜ ರಾಜಗುರು ಬದುಕಿನ ವೃತ್ತಾಂತ ಕುರಿತ ‘ನಾ ರಾಜಗುರು’ ಸಂಗೀತ ನಾಟಕ(Musical Drama) ಮತ್ತು ತಬಲಾ ಸೋಲೋ ವಾದನ(Tabla Solo Vadana) ಕಾರ್ಯಕ್ರಮವನ್ನು ಶುಕ್ರವಾರ ಧಾರವಾಡ ನಗರದ ಡಾ. ಅಣ್ಣಾಜಿರಾವ ಶಿರೂರ ಸೃಜನಾ ರಂಗಮಂದಿರದಲ್ಲಿ ಆಯೋಜಿಸಲಾಯಿತು.

Advertisement
Advertisement
Advertisement

‘ನಾ ರಾಜಗುರು’ ಎಂಬ ಏಕವ್ಯಕ್ತಿ ನಾಟಕ  ಪ್ರಯೋಗಗೊಂಡಿತು. ‘ಎನ್ನ ಕಾಯವ ದಂಡಿಗೆಯ ಮಾಡಯ್ಯ’ ‘ನುಡಿದರೆ ಮುತ್ತಿನ ಹಾರದಂತಿರಬೇಕು, ‘ಎನಗಿಂತ ಕಿರಿಯರಿಲ್ಲ’ ‘ಮಡಕೆಯ ಮಾಡುವರೆ, ‘ವಚನದಲ್ಲಿ ನಾಮಾಮೃತವ ತುಂಬಿ’ ‘ನಂಬರು ನೆಚ್ಚರು’ ಮೊದಲಾದ ವಚನಗಳನ್ನು ಕರ್ಣಾನಂದಗೊಳಿಸಿದವರು ಬಸವರಾಜ ರಾಜಗುರು. ಸಹ ಕಲಾವಿದರರಾಗಿ ಜಯತೀರ್ಥ ಪಂಚಮುಖಿ ತಬಲಾ, ರಾಘವ ಕಮ್ಮಾರ ಹಾರ್ಮೋನಿಯಂ ನುಡಿಸಿದರು. ಇಂತಹ ರಾಜಗುರು ಅವರ ಸಂಗೀತ ಬದುಕನ್ನು ಹಿಡಿದಿಟ್ಟ ನಾಟಕವಿದು. ಅದರಲ್ಲೂ ರಾಜಗುರು ಅವರ ಮೊಮ್ಮಗ ವಿಶ್ವರಾಜ ಅವರೇ ಬಸವರಾಜರ ಪಾತ್ರಧಾರಿಯಾಗಿ ಬಿಚ್ಚಿಟ್ಟಿದ್ದು ಗಮನಾರ್ಹ. ಹಾಡುತ್ತ, ಅಭಿನಯಿಸುತ್ತ ಪ್ರೇಕ್ಷಕರಿಗೆ ಬೋರಾಗದ ಹಾಗೆ ನೋಡಿಕೊಂಡರು. ನಾಟಕ ಶುರುವಾಗುವುದು ರಾಜಗುರು ಅವರ ಹುಟ್ಟಿನ ವಿವರಗಳಿಂದ. ಅವರು ಹುಟ್ಟಿದ್ದು ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಯಲಿವಾಳದಲ್ಲಿ.

Advertisement

ಬಸವರಾಜರ ತಂದೆ ಮಹಾಂತಸ್ವಾಮಿ. ಕರ್ನಾಟಕ ಸಂಗೀತ ಕಲಿತಿದ್ದ ಪಿಟೀಲು ನುಡಿಸುತ್ತಿದ್ದ ಮಹಾಂತಸ್ವಾಮಿಗಳು ತಮ್ಮ ಮಗನಿಗೆ ಮೊದಲ ಗುರುವಾದರು. ನಂತರ ವಾಮನರಾವ್ ಮಾಸ್ತರ ನಾಟಕ ಕಂಪೆನಿ, ಶಿವಯೋಗ ಮಂದಿರ, ಪಂಚಾಕ್ಷರಿ ಗವಾಯಿಗಳು, ಸವಾಯಿ ಗಂಧರ್ವರು, ಪಂ.ನೀಲಕಂಠ ಮಿರಜಕರ ಬುವಾ, ಉಸ್ತಾದ್ ವಹೀದಾಖಾನ್. ಗದುಗಿನ ಪಂಚಾಕ್ಷರಿ ಗವಾಯಿಗಳ ಸಂಚಾರಿ ಸಂಗೀತ ಪಾಠಶಾಲೆಯೊಳಗೆ ಕಲಿತ ಅವರು ನಂತರ ಮುಂಬೈಗೆ ತೆರಳುತ್ತಾರೆ. ಅಲ್ಲಿಂದ ಅವರ ಸಂಗೀತ ಪಯಣ ಮುಂದುವರಿಯುತ್ತದೆ. ಇದರೊಂದಿಗೆ ರಾಜಗುರು ಅವರು ಹಾಡುತ್ತಿದ್ದ ಚೀಜ್, ವಚನಗಳನ್ನು ವಿಶ್ವರಾಜ ಹಾಡುತ್ತ ರಂಗದ ಮೇಲೆ ಮಿಂಚುತ್ತಾರೆ. ವಿಶ್ವರಾಜ ಅವರು ಬಸವರಾಜ ರಾಜಗುರು ಅವರ ಮೊಮ್ಮಗ ಎನ್ನುವುದು ಗೊತ್ತಾಗುತ್ತದೆ. ಸರಳ ರಂಗಸಜ್ಜಿಕೆಯಲ್ಲಿ ತಂಬೂರಕ್ಕೆ ತೂಗು ಹಾಕಿದ ಟೋಪಿ, ಕೋಟು, ಸ್ಕಾರ್ಫ್ ಅನ್ನು ತಮ್ಮ ಅಜ್ಜನ ಹಾಗೆ ಹಾಕಿಕೊಂಡು ವಿಶ್ವರಾಜ ಮಾತನಾಡುತ್ತಾರೆ.

Advertisement

ವಿಶ್ವರಾಜ ಅವರು ಹಿಂದೂಸ್ತಾನಿ ಸಂಗೀತ ಕಲಿಯುತ್ತಿದ್ದಾರೆ ಜೊತೆಗೆ, ಹೆಗ್ಗೋಡಿನ ನೀನಾಸಂ ರಂಗಶಿಕ್ಷಣ ಕೇಂದ್ರದಲ್ಲಿ ಪದವಿ ಪಡೆದಿದ್ದಾರೆ. ಹೀಗಾಗಿ ರಾಜಗುರು ಅವರ ಸಂಗೀತ ಬದುಕಿನ ಕುರಿತು ನಾಟಕವಾಗಿಸುವ ಪ್ರಯತ್ನ ಚೆನ್ನಾಗಿದೆ. ಇನ್ನು ಆಟಮಾಟ ತಂಡದ ಮೂಲಕ ಗಮನಾರ್ಹ ನಾಟಕಗಳನ್ನು ಕೊಟ್ಟವರು ಮಹಾದೇವ ಹಜೆಪದ, ಈ ನಾಟಕವೂ ಪ್ರಮುಖವಾದುದು. ಸಂಗೀತ ಮತ್ತು ನಟನೆಯನ್ನು ಒಟ್ಟಿಗೇ ಕೊಟ್ಟ ನಾಟಕವಿದು. ತಮ್ಮ ಅಜ್ಜವರ ಬದುಕಿನ ವೃತ್ತಾಂತವನ್ನು ಇನ್ನಷ್ಟು ಅಂದಗೊಳಿಸಿ ಸಾರ್ಥಕಗೊಳಿಸಬೇಕಾದುದು ವಿಶ್ವರಾಜರ ಹೆಗಲ ಮೇಲಿದೆ. ಇದರೊಂದಿಗೆ ಪುಣೆಯ ಸುಪ್ರಸಿದ್ಧ ತಬಲಾ ಕಲಾವಿದ ಪಂ. ರಾಮದಾಸ್ ಪಳಸುಲೆ ಅವರಿಂದ ತಬಲಾ ಸೋಲೋ ವಾದನ ಕಾರ್ಯಕ್ರಮ ನಡೆಯಿತು. ಸಹ ಕಲಾವಿದರರಾಗಿ ಪುಣೆಯ ಅಭಿಷೇಕ ಸೀನಕರ ಹಾರ್ಮೋನಿಯಂ ಸಾಥ್ ನೀಡಿದರು.

Swarasamrata Pt. Basavaraja Rajaguru (Pt.Basavaraja Rajaguru) National Memorial Trustee as part of Karnataka Celebration-50 Special Program Pt. 'Na Rajaguru' Musical Drama and Tabla Solo Vadana program on the life story of Basavaraja Rajaguru.It was organized at Annajirava Shirura Creative Theatre.

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ವರದಿ | 19.01.2025 | ಇಂದು ಕೆಲವು ಕಡೆ ತುಂತುರು ಮಳೆ ಸಾಧ್ಯತೆ | ಕೃಷಿಕರೇ ಇರಲಿ ಎಚ್ಚರ |
January 19, 2025
11:01 AM
by: ಸಾಯಿಶೇಖರ್ ಕರಿಕಳ
ಸರ್ಕಾರದ ಯೋಜನೆಗಳನ್ನು ರೈತರು ಸದುಪಯೋಗಪಡಿಸಿಕೊಳ್ಳುವಂತೆ ಸಚಿವ ಈಶ್ವರ್ ಖಂಡ್ರೆ ಕರೆ
January 19, 2025
7:22 AM
by: The Rural Mirror ಸುದ್ದಿಜಾಲ
ಅಡಿಕೆ ಬೆಳೆಗಾರರಿಗೆ ಆತಂಕ ಬೇಡ | ಅಡಿಕೆ ಬೆಳೆಗಾರರ ಸಮಸ್ಯೆ ಬಗಹೆರಿಸಲು ಸಿದ್ದ | ಕೇಂದ್ರ ಸಚಿವ ಶಿವರಾಜ್ ಸಿಂಗ್  ಚಾವ್ಙಾಣ್ ಭರವಸೆ |
January 19, 2025
7:03 AM
by: The Rural Mirror ಸುದ್ದಿಜಾಲ
ಕ್ಯಾಂಪ್ಕೋ ತಯಾರಿಕೆಯ ಕೊಬ್ಬರಿ ಎಣ್ಣೆ “ಕಲ್ಪ” 5 ಲೀಟರ್ ಕ್ಯಾನ್ ಬಿಡುಗಡೆ
January 16, 2025
3:11 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror