ಇಲ್ಲಿ ತಯಾರಾಗುತ್ತೆ ರಾಸಾಯನಿಕ ಬಳಸದ ಸಿಹಿಯಾದ ಸಾವಯವ ಬೆಲ್ಲ | ಈ ಬೆಲ್ಲಕ್ಕೆ ಇದೆ ಸಾಕಷ್ಟು ಡಿಮ್ಯಾಂಡ್

February 3, 2024
3:05 PM

ಇತ್ತೀಚೆಗೆ ಯಾವ ಡಾಕ್ಟರ್‌(Doctor) ಹತ್ರ ಹೋದ್ರು ಸಕ್ಕರೆ(Sugar) ತಿನ್ನೋದು ಬಿಡಿ, ಅದರ ಬದಲು ಬೆಲ್ಲ(Jaggery) ಉಪಯೋಗಿಸಿ ಅಂತಾರೆ. ಆದರೆ ಇತ್ತೀವೆಗೆ ಬೆಲ್ಲನೂ ರಾಸಾಯನಿಕಯುಕ್ತವಾಗಿಯೇ(Chemical) ದೊರೆಯುವುದು. ಸಾವಯವ ಬೆಲ್ಲ ಯಾವುದು..? ರಾಸಾಯನಿಕ ಬೆಲ್ಲ ಯಾವುದು ಅನ್ನೋದನ್ನು ಕಂಡುಹಿಡಿಯಲು ಸಾಧ್ಯವಾಗದಷ್ಟು ಅಕ್ರಮ ಆವರಿಸಿಕೊಂಡಿದೆ. ಸ್ವಚ್ಚ, ಅಚ್ಚ ಆಲೆಮನೆಯ ಸಾವಯವ ಬೆಲ್ಲ ತಯಾರಿಸುವ ಘಟಕವೊಂದು ಬೀದರ್ ಜಿಲ್ಲೆ(Bidar) ಚಟ್ನಳ್ಳಿ ಗ್ರಾಮದಲ್ಲಿದೆ.

Advertisement
Advertisement
Advertisement

ಇಲ್ಲಿ ತಯಾರಿಸುವ ವಿಷಮುಕ್ತ ಸಾವಯವ ಬೆಲ್ಲ ಕರ್ನಾಟಕ, ಆಂದ್ರ, ಮಹರಾಷ್ಟ್ರದಲ್ಲಿ ಮಾರಾಟವಾಗುತ್ತಿದೆ. 22 ವರ್ಷದಿಂದ ಇವರು ತಯಾರು ಮಾಡುವ ಸಾವಯವ ಬೆಲ್ಲಕ್ಕೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯಿದೆ. ಇವತ್ತಿನ ಯುಗದಲ್ಲಿ ಪ್ರತಿಯೊಂದು ವಸ್ತು ತಯಾರಿಸಿದರೂ ಅದಕ್ಕೆ ಕೆಮಿಕಲ್ ಮಿಶ್ರಣ ಮಾಡಿದರೆ ಮಾತ್ರ ಅದು ಅಂದಚಂದವಾಗಿ ಕಾಣುತ್ತದೆ ಎನ್ನುವಂತಾಗಿದೆ.

Advertisement

ಹೀಗಾಗಿಯೇ ಪ್ರತಿಯೊಂದು ವಸ್ತು ತಯಾರಿಸಲು ಕೆಮಿಕಲ್ ಮಿಶ್ರಣ ಮಾಡುತ್ತಿದ್ದಾರೆ, ಆದರೆ ಬೀದರ್ ತಾಲೂಕಿನ ಚಟ್ನಳ್ಳಿ ಗ್ರಾಮದ ರೈತರ ಮಹದೇವ ನಾಗೂರೇ ಅನ್ನೋ ರೈತರ ಸಾವಯವ ಬೆಲ್ಲ ತಯಾರಿಸುವ ಮೂಲಕ ಸೈ ಎನಿಸಿಕೊಂಡಿದ್ದಾರೆ. ಯಾವುದೇ ರಾಸಾಯನಿಕ ಗೊಬ್ಬರ ಬಳಸದೇ, ಕ್ರಿಮಿನಾಶಕಗಳನ್ನ ಬಳಸಿ ಬೆಳೆದ ಕಬ್ಬು ಇಲ್ಲಿ ತೆಗೆದುಕೊಳ್ಳುವುದಿಲ್ಲ, ಬದಲಾಗಿ ಸಾವಯವ ಗೊಬ್ಬರವನ್ನ ಹಾಕಿ, ನೈಸರ್ಗಿಕ ವಿಧಾನ ಬಳಸಿಕೊಂಡು ಬೆಳೆದ ಕಬ್ಬನ್ನ ಮಾತ್ರ ತೆಗೆದುಕೊಂಡು, ಶುದ್ಧವಾದ ಬೆಲ್ಲವನ್ನ ತಯಾರಿಸುತ್ತಿದ್ದಾರೆ.

ನಶಿಸಿ ಹೋಗುತ್ತಿರುವ ಸಾವಯವ ಪದ್ಧತಿಯನ್ನ ಮತ್ತೆ ಜಾರಿಗೆ ತಂದು, ಭೂಮಿಯ ಫಲವತ್ತತೆಯನ್ನ ಕಾಪಾಡುವುದು ಈ ರೈತನ ಉದ್ದೇಶವಾಗಿದೆ. ಗದ್ದೆಯಿಂದ ಬರುವ ಕಬ್ಬನ್ನ ನುರಿಸಿ, ಅದನ್ನ ಹದವಾಗಿ ಕುದಿಸಿ ಕಲ್ಮಷವನ್ನ ತೆಗೆಯಲು ಕಾಡು ಬೆಂಡೆ ಗಿಡದ ಲೋಳೆಯನ್ನ ಬಳಸಲಾಗುತ್ತಿದೆ. ಇದರಿಂದ ಹೊರ ತೆಗೆಯಲು ಅಡುಗೆ ಎಣ್ಣೆಯನ್ನ ಬಳಸಿ ಅಚ್ಚುಗಳನ್ನ ತಯಾರಿಸಲಾಗುತ್ತದೆ. ದಿನಕ್ಕೆ ಒಟ್ಟು 1 ಟನ್ ಕಬ್ಬನ್ನ ನುರಿಯುವ ಸಾಮರ್ಥ್ಯ ಈ ಘಟಕದ್ದಾಗಿದ್ದು, ಮುಂದಿನ ದಿನಗಳಲ್ಲಿ ಇದನ್ನ ಅಗತ್ಯಕ್ಕನುಗುಣವಾಗಿ ಸಾಮರ್ಥ್ಯವನ್ನ ಹೆಚ್ಚಿಸಲು ಕೂಡ ಚಿಂತಿಸಲಾಗುತ್ತಿದ್ದು ಸಾವಯವ ಪದ್ದತಿಯಲ್ಲಿ ತಯಾರಿಸಿದ ಬೆಲ್ಲಕ್ಕೆ ಭಾರಿ ಬೇಡಿಕೆ ಇದೇ ಎನ್ನುತ್ತಾರೆ ಇಲ್ಲಿನ ರೈತ ಮಹದೇವ್ ನಾಗೂರೆ.

Advertisement

ಸಾಮಾನ್ಯವಾಗಿ ಈಗ ತಯಾರಿಸುತ್ತಿರುವ ಬೆಲ್ಲದಲ್ಲಿ ಸಾಕಷ್ಟು ರಾಸಾಯನಿಕಗಳನ್ನ ಬೆರೆಸಿ ಬೆಲ್ಲವನ್ನ ತಯಾರಿಸಲಾಗುತ್ತಿದೆ. ರಸಗೊಬ್ಬರವನ್ನ ಬಳಸಿ, ಕ್ರಿಮಿನಾಶಕ-ಔಷಧಿಗಳನ್ನ ಬಳಸಿ ಬೆಳೆಯುವ ಕಬ್ಬನ್ನ ನುರಿಸಿ ತೆಗೆದ ಹಾಲನ್ನ ಕುದಿಸಲಾಗುತ್ತಿತ್ತು. ಹೀಗೆ ಕುದಿಯುತ್ತಿರುವ ಹಾಲಿನಲ್ಲಿ ಕಲ್ಮಷಗಳನ್ನ ತೆಗೆಯಲು ಸೋಡಿಯಂ ಸಾಕ್ಸಲೈಟ್, ಸೋಡಿಯಂ ಕಾರ್ಬೋನೇಟ್, ಸೋಡಿಯಂ ಬೈಕಾರ್ಬೋನೇಟ್, ನೈಟ್ರೋಸಲ್ಫೈಡ್, ಗಂಧಕ ಹಾಗೂ ಕೋ ಪಾಲಿಮರ್ ಗಳನ್ನ ಬಳಸಲಾಗುತ್ತದೆ.

ಇಂತಹ ವಿಷಕಾರಿ ರಾಸಾಯನಿಕಗಳನ್ನ ಬಳಸುವುದರಿಂದ ಬೆಲ್ಲಕ್ಕೆ ಕೃತಕ ಬಣ್ಣವನ್ನ ನೀಡಲಾಗುತ್ತಿತ್ತು. ಇದರಿಂದ ಬೆಲ್ಲ ತಿನ್ನುವ ವ್ಯಕ್ತಿಗಳಿಗೆ ಸಿಹಿ ರುಚಿ ಪಡೆಯೋ ಜೊತೆಜೊತೆಗೆ ಖಾಯಿಲೆಗಳನ್ನೂ ಉಚಿತವಾಗಿ ಪಡೆಯಬೇಕಾಗಿತ್ತು. ಹೀಗೆ ಯತೇಚ್ಛವಾಗಿ ಸೋಡಿಯಂ ಅನ್ನು ಬಳಸುವ ಕಾರಣ, ಕರುಳಿನಲ್ಲಿ ಅಲ್ಸರ್ ನಂತಹ ರೋಗಗಳು ಕಾಣಿಸಿಕೊಳ್ಳುತ್ತವೆ.

Advertisement

ನಗರ ಪ್ರದೇಶಗಳಲ್ಲೂ ಸಾವಯವ ಪದಾರ್ಥಗಳನ್ನ ಬಳಸುವ ಬಗ್ಗೆ ಈಗಾಗಲೇ ಸಾಕಷ್ಟು ಅರಿವು ಮೂಡಿರುವಾಗಲೇ, ಸಂಪೂರ್ಣವಾಗಿ ಸಾವಯವ ಬೆಲ್ಲ ತಯಾರಿಸುತ್ತಿರುವುದು ಅಂತ ಸಾವಯವ ಪ್ರಿಯರಿಗೆ ಸಾಕಷ್ಟು ಖುಷಿ ತಂದಿದೆ. ಈಗಾಗಲೇ ಸಾವಯವ ಬೆಲ್ಲಕ್ಕೆ ಸಾಕಷ್ಟು ಡಿಮ್ಯಾಂಡ್ ಬಂದಿದ್ದು, ಬೆಂಗಳೂರಿನ ಮಾಲ್ ಗಳು ಸೇರಿದಂತೆ ವಿದೇಶದಿಂದಲೂ ನೂರಕ್ಕೂ ಹೆಚ್ಚು ಟನ್ ಬೆಲ್ಲಕ್ಕೆ ಆರ್ಡರ್ ಬಂದಿರುವುದು ಮತ್ತಷ್ಟು ಪುಷ್ಠಿ ನೀಡಿದಂತಾಗಿದೆ ಎನುತ್ತಾರೆ ಬೆಲ್ಲ ತಯಾರು ಮಡುತ್ತಿರುವ ರೈತ ಸಚಿನ್ ನಾಗೂರೆ.

– ಅಂತರ್ಜಾಲ ಮಾಹಿತಿ

Advertisement

Toxic free organic jaggery is sold in Karnataka, Andhra, Maharashtra. Since 22 years, organic jaggery, which he has been preparing, is in good demand in the market. In today’s age, it seems that every thing that is made looks beautiful only if chemicals are added to it.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಕೋಲಾರದಲ್ಲಿ ಅತೀ ಹೆಚ್ಚು ನಕಲಿ ವೈದ್ಯರು…! | ನಕಲಿ ವೈದ್ಯರ ಕಡಿವಾಣಕ್ಕೆ ಕಟ್ಟುನಿಟ್ಟಿನ ಕ್ರಮ
November 21, 2024
7:36 PM
by: The Rural Mirror ಸುದ್ದಿಜಾಲ
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ  ಮನವಿ
November 21, 2024
7:32 PM
by: The Rural Mirror ಸುದ್ದಿಜಾಲ
ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ದೆಹಲಿಯಲ್ಲಿ ಲಭ್ಯ | 2.5 ಲಕ್ಷ ಲೀಟರ್ ಹಾಲು ದೆಹಲಿಗೆ ಪೂರೈಸಲು ತೀರ್ಮಾನ |
November 21, 2024
7:25 PM
by: ದ ರೂರಲ್ ಮಿರರ್.ಕಾಂ
ಹುಣಸೆ ಹಣ್ಣು ಸಂರಕ್ಷಣೆ, ಮಾರಾಟದ ತರಬೇತಿ ಕಾರ್ಯಾಗಾರ
November 21, 2024
7:09 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror