ಮಧುಮೇಹಕ್ಕೆ ಕೇವಲ ಸಿಹಿ ತಿಂಡಿಗಳೇ ಕಾರಣವಲ್ಲ… | ಹಾಗಾದರೆ ಸಕ್ಕರೆ ಕಾಯಿಲೆ ಬರಲು ಕಾರಣವೇನು..? |

December 8, 2023
3:01 PM

ಬಿಡುವಿಲ್ಲದ ಜೀವನಶೈಲಿ(Lifestyle) ಮತ್ತು ಅನಿಯಮಿತ ಆಹಾರ ಪದ್ಧತಿಗಳು(Diet) ಅನೇಕ ರೋಗಗಳಿಗೆ(decease) ಕಾರಣವಾಗುತ್ತವೆ, ಅವುಗಳಲ್ಲಿ ಒಂದು ಮಧುಮೇಹ(Diabetes). ನಿಮಗೆ ಹಲವೆಡೆ ಡಯಾಬಿಟೀಸ್ ರೋಗಿಗಳು ಖಂಡಿತಾ ಸಿಗುತ್ತಾರೆ, ಹೆಚ್ಚು ಸಕ್ಕರೆ(Sugar) ಸೇವನೆಯಿಂದ ಮಧುಮೇಹ ಬರುತ್ತದೆ ಎಂಬ ಸಮಾಜದಲ್ಲಿ ಹೆಚ್ಚಿನ ಜನರಿದ್ದಾರೆ, ಅದಕ್ಕಾಗಿಯೇ ಹೆಚ್ಚು ಸಿಹಿ ತಿನ್ನಬೇಡಿ ಎಂದು ಜನರು ಹೇಳುವುದನ್ನು ನೀವು ಕೇಳಿರಬಹುದು, ಆದರೆ ಇದು ಸಂಪೂರ್ಣ ಸತ್ಯವಲ್ಲ.

Advertisement
Advertisement

ಸಿಹಿ ತಿಂಡಿಗಳ ಸೇವನೆಯಿಂದ ರಕ್ತದಲ್ಲಿ ಸಕ್ಕರೆ ವೇಗವಾಗಿ ವೃದ್ಧಿಯಾಗುತ್ತದೆ ಹಾಗೂ ಇದು ಆರೋಗ್ಯವಂತ ವ್ಯಕ್ತಿಗಳಲ್ಲಿ ಹೆಚ್ಚು ಪ್ರಮಾಣದ ಇನ್ಸುಲಿನ್‌ ಅನ್ನು ತಕ್ಷಣ ಸ್ರವಿಸಲು ಪ್ರೇರೇಪಿಸುತ್ತದೆ. ಇದರಿಂದ ಮೇದೋಜೀರಕ ಗ್ರಂಥಿ ಹಾಗೂ ಚಯಾಪಚಯ ವ್ಯವಸ್ಥೆಯ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ. ಅಲ್ಲದೇ, ಸಿಹಿ ತಿಂಡಿಗಳಲ್ಲಿ ಸಾಮಾನ್ಯವಾಗಿ ಇತರ ಪೋಷಕಾಂಶಗಳು ಹಾಗೂ ನಾರಿನಂಶದ ಅಭಾವವಿರುತ್ತದೆ. ಇಂತಹ ಆಹಾರ ಪದ್ಧತಿ ಮಧುಮೇಹ ಉಂಟಾಗಲು ಪೂರಕವಾಗುತ್ತದೆ. ಆದರೆ, ಮಧುಮೇಹ ಉಂಟಾಗಲು ಇದೊಂದೇ ಕಾರಣವಲ್ಲ. ಸಾಮಾನ್ಯ ರಕ್ತದ ಸಕ್ಕರೆ ಹೊಂದಿರುವ ಜನರು ಸಿಹಿ ತಿನ್ನಬಹುದು. ಆದರೆ ಹಿತಮಿತವಾಗಿಯೇ ತಿನ್ನಬೇಕು. ಸಿಹಿತಿಂಡಿಗಳನ್ನು ತಿನ್ನದ ಅನೇಕ ಮಧುಮೇಹಿಗಳಿದ್ದಾರೆ ಮತ್ತು ಸಿಹಿತಿಂಡಿಗಳನ್ನು ಇಷ್ಟಪಡದವರೂ ಇದ್ದಾರೆ, ಆದರೂ ಅವರು ಮಧುಮೇಹದ ಸಮಸ್ಯೆಯಿಂದ ಬಳಲುತ್ತಿದ್ದಾರೆ.

Advertisement

ಹಾಗಾದರೆ ಮಧುಮೇಹಕ್ಕೆ ನಿಜವಾದ ಕಾರಣವೇನು?: ಮಧುಮೇಹ ಇನ್ಸುಲಿನ್ ನ ಕೊರತೆ ಅಥವಾ ಇನ್ಸುಲಿನ್ ಪ್ರತಿರೋಧದಿಂದ ಉಂಟಾಗುತ್ತದೆ ಎಂದು ಈಗ ಅನೇಕರಿಗೆ ತಿಳಿದಿದೆ. ಈ ಇನ್ಸುಲಿನ್ ಕೊರತೆ ಅಥವಾ ಪ್ರತಿರೋಧ ಸಂಭವಿಸಲು ಅನೇಕ ಅಂಶಗಳು ಪೂರಕವಾಗಿರುತ್ತವೆ. ಆಹಾರದ ಗುಣಮಟ್ಟ, ಅನಿಯಮಿತತೆ, ಮಾನಸಿಕ ಒತ್ತಡ, ದೈಹಿಕ ಚಟುವಟಿಕೆಗಳ ಕೊರತೆ, ಪರಿಸರ ಮಾಲಿನ್ಯ ಅಂದರೆ ನಾವು ಎಷ್ಟು ಕೃತ್ರಿಮ ರಾಸಾಯನಿಕ ಗಳಿಗೆ ನಮ್ಮನ್ನು ಒಡ್ಡಿಕೊಂಡಿದ್ದೇವೆ, ನಿಸರ್ಗದಿಂದ ನಾವು ಎಷ್ಟು ದೂರವಾಗಿದ್ದೇವೆ, ಅನಿಯಮಿತ ನಿದ್ರೆ ಅಥವಾ ನಿದ್ರಾನಾಶ, ವಿವಿಧ ಆರೋಗ್ಯ ಸಮಸ್ಯೆಗಳಿಗಾಗಿ ಪದೇಪದೇ ಸೇವಿಸುವ ಕೃತಿಮ ರಾಸಾಯನಿಕ (ಇಂಗ್ಲಿಷ್) ಔಷಧಿಗಳು, ಇತ್ಯಾದಿ ಅನೇಕ ಅಂಶಗಳು ಯಾವುದೇ ಕಾಯಿಲೆ ಸಂಭವಿಸಲು ಕಾರಣವಾಗುತ್ತವೆ.

ನಿದ್ರೆ : ಸಾಕಷ್ಟು ನಿದ್ದೆ ಮಾಡದವರಲ್ಲಿ ಮಧುಮೇಹ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ ಕೆಲವೊಮ್ಮೆ ನಿದ್ರೆಯ ಕೊರತೆ ಇರುವುದು ಸಹಜ, ಆದರೆ ಸಮಯಕ್ಕೆ ಸರಿಯಾಗಿ ಅಥವಾ ಗಾಢವಾದ ನಿದ್ದೆ ಮಾಡದಿದ್ದರೆ ಅಂತಹವರು ಜಾಗ್ರತೆ ವಹಿಸಬೇಕು. ಮಧುಮೇಹದಿಂದ ಬಳಲುವ ಸಾಧ್ಯತೆಯಿದೆ.

Advertisement

ಬೊಜ್ಜು: ದೇಹದ ತೂಕವನ್ನು ನಿಯಂತ್ರಣದಲ್ಲಿಟ್ಟರೆ ಮಧುಮೇಹದ ಸಮಸ್ಯೆಯನ್ನು ದೂರವಿಡಬಹುದು.

ಒತ್ತಡ : ಒಬ್ಬ ವ್ಯಕ್ತಿಯು ನಿರಂತರ ಒತ್ತಡದಲ್ಲಿದ್ದರೆ ಆಗ ಸಕ್ಕರೆಯ ಮಟ್ಟವು ಹೆಚ್ಚಾಗುತ್ತದೆ.

Advertisement

ಜಡ ಕೆಲಸ: ದಿನವಿಡೀ ಕಚೇರಿಯ ಕುರ್ಚಿಯಲ್ಲಿ ಕುಳಿತು ಕೆಲಸ ಮಾಡುವವರು ಮಧುಮೇಹದ ಅಪಾಯವನ್ನು 80% ವರೆಗೆ ಹೆಚ್ಚಿಸುತ್ತಾರೆ.

ವ್ಯಾಯಾಮದ ಕೊರತೆ: ದಿನಕ್ಕೆ ಕನಿಷ್ಠ 30 ನಿಮಿಷ ವ್ಯಾಯಾಮ ಮಾಡುವುದು ಕಡ್ಡಾಯ. ತಮ್ಮ ದಿನಚರಿಯಲ್ಲಿ ವ್ಯಾಯಾಮದ ಕೊರತೆ ಇರುವವರಿಗೆ ಮಧುಮೇಹ ಬರುವ ಸಾಧ್ಯತೆ ಹೆಚ್ಚು. ಆದ್ದರಿಂದ ಸಮಗ್ರ ಆರೋಗ್ಯಕರ ಜೀವನ ಶೈಲಿಯನ್ನು ರೂಢಿಸಿಕೊಳ್ಳುವುದು ಆಧುನಿಕ ಕಾಲದ ಅನಿವಾರ್ಯತೆಯಾಗಿದೆ.

Advertisement

ಪೌಷ್ಟಿಕ ತಜ್ಞ ಮತ್ತು ಆಹಾರ ತಜ್ಞರು ಪ್ರಕೃತಿ ಚಿಕಿತ್ಸಕ ಡಾ. ಭೋರ್ಕರ್ ಕನ್ನಡಕ್ಕೆ ಅನುವಾದ ಹಾಗೂ ಸಂಪಾದನೆ: ಡಾ. ಕುಲಕರ್ಣಿ ಪಿ. ಎ.

Busy lifestyle and irregular diet lead to many diseases, one of which is diabetes. You will definitely find diabetics in many places, there are many people in the society that diabetes is caused by consuming too much sugar, so you may have heard people saying that don’t eat too much sweets, but this is not entirely true.

Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

 ಕಸ್ತೂರಿ ರಂಗನ್ ವರದಿ ಬಗ್ಗೆ ಕೋರ್ಟ್‌ಗೆ ಮನವರಿಕೆ | ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ |
October 8, 2024
11:03 PM
by: ದ ರೂರಲ್ ಮಿರರ್.ಕಾಂ
 ದಸರಾ ಅಂಗವಾಗಿ  ರಾಜ್ಯ ಮಟ್ಟದ ಹಾಲು ಕರೆಯುವ ಸ್ಪರ್ಧೆ | ಮೊದಲ ಬಹುಮಾನ 1 ಲಕ್ಷ |
October 8, 2024
10:20 PM
by: ದ ರೂರಲ್ ಮಿರರ್.ಕಾಂ
ತಂಬಾಕು ನಿಯಂತ್ರಿಸಲು ಕ್ರಮ | ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 6 ತಿಂಗಳಲ್ಲಿ 265 ಮಂದಿ ತಂಬಾಕಿನಿಂದ ದೂರ |
October 8, 2024
8:25 PM
by: ದ ರೂರಲ್ ಮಿರರ್.ಕಾಂ
 ರಾಸುಗಳಿಗೆ ತಪ್ಪದೇ ಜೀವ ವಿಮೆ ಮಾಡಿಸಿ
October 8, 2024
8:16 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror