ಟಿ-20 ವಿಶ್ವಕಪ್ ಹೈವೋಲ್ಟೇಜ್ ಪಂದ್ಯಕ್ಕೆ ಕ್ಷಣಗಣನೆ | ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ-ಭಾರತ ಹಣಾಹಣಿ

June 29, 2024
12:25 PM

ಇಂದು ಎಲ್ಲರ ಚಿತ್ತ ಚುಟುಕ ಮಾದರಿಯ ಕ್ರಿಕೆಟ್ ವಿಶ್ವಕಪ್ ಫೈನಲ್ (T20 World Cup Final) ಪಂದ್ಯದತ್ತ. ಪಂದ್ಯ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಇಂದು ದಕ್ಷಿಣ ಆಫ್ರಿಕಾ (South Africa) ಮತ್ತು ಭಾರತ (India) ತಂಡಗಳು ಫೈನಲ್‌ನಲ್ಲಿ(Final) ಪ್ರಶಸ್ತಿಗಾಗಿ ಸೆಣಸಾಟ ನಡೆಸಲಿದೆ. 11 ವರ್ಷಗಳ ಹಿಂದೆ ಫೈನಲ್‌ನಲ್ಲಿ ಮುಗ್ಗರಿಸಿದ್ದ ಭಾರತ ತಂಡ ಇದೀಗ ಫೈನಲ್ ತಲುಪಿದ್ದು, ಟ್ರೋಫಿ(trophy) ಮುಡಿಗೇರಿಸಿಕೊಳ್ಳುವ ನೀರಿಕ್ಷೆಯಲ್ಲಿದೆ. ಭಾರತದ ಕೋಟ್ಯಂತರ ಅಭಿಮಾನಿಗಳು ‘ಗೆದ್ದು ಬಾ ಟೀಂ ಇಂಡಿಯಾ’ ಎಂದು ಆಶಿಸುತ್ತಿದ್ದಾರೆ.

Advertisement

10 ವರ್ಷಗಳ ಹಿಂದೆ ಫೈನಲ್‌ನಲ್ಲಿ ಮುಗ್ಗರಿಸಿದ್ದ ಟೀಂ ಇಂಡಿಯಾ, ಈ ಬಾರಿ ಎಚ್ಚರಿಕೆ ಆಟವಾಡಲು ಕಠಿಣ ತಾಲೀಮು ನಡೆಸಿದೆ. ಹರಿಣರನ್ನು ಅಷ್ಟು ಹಗುರವಾಗಿ ತೆಗೆದುಕೊಳ್ಳುವಂತಿಲ್ಲ. ಯಾಕೆಂದರೆ, ಹೊಡಿಬಡಿ ಆಟಗಾರರ ದಂಡೇ ಇದೆ. ಸ್ವಲ್ಪ ಯಾಮಾರಿದರೂ ಭಾರತಕ್ಕೆ ಮತ್ತೆ ವನವಾಸ ತಪ್ಪಿದ್ದಲ್ಲ ಎನ್ನವಂತಿದೆ. ಇಂದು ರಾತ್ರಿ 8 ಗಂಟೆಗೆ ಬ್ರಿಡ್ಜ್‌ಟೌನ್‌ನ ಕೆನ್ಸಿಲ್‌ಟೌನ್‌ ಓವೆಲ್‌ನಲ್ಲಿ ನಡೆಯಲಿರುವ ಫೈನಲ್ ಹಣಾಹಣಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೀಂ ಇಂಡಿಯಾದ ಸೆಣಸಾಡಲಿದೆ. ಟೀಂ ಇಂಡಿಯಾಗೆ ತಲೆನೋವಾಗಿರೋದು ವಿರಾಟ್ ಕೊಹ್ಲಿ ಬ್ಯಾಟ್‌ನಿಂದ ರನ್ ಬಾರದೇ ಇರೋದು. ರನ್ ಮಷಿನ್ ಕೊಹ್ಲಿ, ಬ್ಯಾಟ್ ಸಿಡಿಯುತ್ತಿಲ್ಲ. ಸತತ ವೈಫಲ್ಯ ಕೊಹ್ಲಿಯನ್ನೇ ಕುಗ್ಗುವಂತೆ ಮಾಡಿದೆ. ಇದು ಟೀಂ ಇಂಡಿಯಾದ ಮೇಲೂ ಪರಿಣಾಮ ಬೀರಿದೆ. ಕಾರಣ, ಭಾರತ ಉತ್ತಮ ಆರಂಭ ಪಡೆದುಕೊಳ್ಳದೆ ಇರುವುದು.

ತಂಡದ ನಾಯಕ ಹಿಟ್‌ಮ್ಯಾನ್ ರೋಹಿತ್ ಶರ್ಮಾ ಉತ್ತಮ ಫಾರ್ಮ್‌ನಲ್ಲಿದ್ದಾರೆ. ರನ್ ಬರವನ್ನ ನೀಗಿಸುತ್ತಿದ್ದಾರೆ. ಎದುರಾಳಿಗಳನ್ನ ಚಂಡಾಡುತ್ತಿರುವ ರೋಹಿತ್, ಇಂದಿನ ಪಂದ್ಯದಲ್ಲೂ ಅಬ್ಬರಿಸುವ ತವಕದಲ್ಲಿದ್ದಾರೆ. ಇತ್ತ, ಸ್ಫೋಟಕ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್,‌ ರಿಷಭ್‌ ಪಂತ್, ಪಾಂಡ್ಯ, ಶಿವಂ ದುಬೆ ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ನೆರವಾಗುತ್ತಿದ್ದಾರೆ. ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್ ಬೌಲಿಂಗ್ ಜಾದು ಹರಿಣರಿಗೆ ಸವಾಲಾಗಿ ಕಂಡಿದ್ದಾರೆ. ಅರ್ಷದೀಪ್‌ಸಿಂಗ್, ಬೂಮ್ರಾ ಎದುರಾಳಿಗಳ ನಿದ್ದೆಗೆಡಿಸಿದ್ದಾರೆ.

ಬರೋಬ್ಬರಿ 37 ವರ್ಷಗಳಿಂದ ಚೋಕರ್ಸ್ ಹಣೆಪಟ್ಟಿ ದಕ್ಷಿಣ ಆಫ್ರಿಕಾ ತಂಡಕ್ಕಿದೆ. ಅದು ಎಷ್ಟೋ ಐಸಿಸಿ ಟೂರ್ನಿಗಳಲ್ಲಿ ಅಂತಿಮ ಸುತ್ತಿನ ವರೆಗೆ ಬಂದು ಮುಗ್ಗರಿಸಿದ್ದೇ ಹೆಚ್ಚು. ಸೆಮಿಸ್‌ನಲ್ಲಿ ಸೋತು ನಿರಾಸೆಗೊಳ್ಳುತ್ತಿತ್ತು. ಕೊನೆಗೂ 37 ವರ್ಷಗಳ ಬಳಿಕ ಫೈನಲ್‌ಗೆ ಲಗ್ಗೆ ಇಟ್ಟಿದೆ. ಪ್ರಸ್ತುತ ವಿಶ್ವಕಪ್ ಟೂರ್ನಿಯಲ್ಲಿ ಸತತ ಗೆಲುವಿನೊಂದಿಗೆ ಫೈನಲ್‌ಗೇರಿರುವ ಮಾರ್ಕ್ರಮ್ ಪಡೆ, ಈ ಬಾರಿ ಶತಾಯಗತಾಯ ಪ್ರಶಸ್ತಿ ಗೆಲ್ಲಲೇಬೇಕೆಂದು ಪಣ ತೊಟ್ಟಿದೆ. ಕ್ವಿಂಟನ್ ಡಿಕಾಕ್, ಕ್ಲಾಸೆನ್, ಸ್ಟಬ್ಸ್, ಹೆಂಡ್ರಿಕ್ಸ್, ಡೆವಿಡ್ ಮಿಲ್ಲರ್‌ರಂತಹ ಆಟಗಾರರು ಪಂದ್ಯದ ಗತಿಯನ್ನೇ ಬದಲಿಸುವ ತಾಕತ್ತನ್ನು ಹೊಂದಿದ್ದಾರೆ. ಕೇಶವ್ ಮಹರಾಜ್, ರಬಡ, ನಾರ್ಟ್ಜೆ, ತಬ್ರೇಜ್ ಶಮ್ಸಿ ತಂಡದ ಟ್ರಂಪ್‌ಕಾರ್ಡ್.

  • ಅಂತರ್ಜಾಲ ಮಾಹಿತಿ

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಪಡಿತರ ಚೀಟಿದಾರರ ಇ-ಕೆವೈಸಿ ಮರುಸಂಗ್ರಹಿಸುವ ಕೊನೆಯ ಅವಕಾಶ
April 25, 2025
9:30 PM
by: ದ ರೂರಲ್ ಮಿರರ್.ಕಾಂ
ರಬ್ಬರ್ ತೋಟಗಳ ಮಾಹಿತಿ ಸಂಗ್ರಹ | ರಬ್ಬರ್ ತೋಟಗಳ ಜಿಯೋ-ಮ್ಯಾಪಿಂಗ್
April 25, 2025
9:15 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 25-04-2025 | ಅಲ್ಲಲ್ಲಿ ಗುಡುಗು ಸಹಿತ ಸಾಮಾನ್ಯ ಮಳೆ |
April 25, 2025
2:04 PM
by: ಸಾಯಿಶೇಖರ್ ಕರಿಕಳ
ಒತ್ತುವರಿಯಾಗಿರುವ  ಕೆರೆಗಳನ್ನು ಮುಲಾಜಿಲ್ಲದೆ ತೆರವುಗೊಳಿಸಲು ಮುಖ್ಯಮಂತ್ರಿ ಸೂಚನೆ
April 25, 2025
7:47 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group