ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕ್ಷಯರೋಗ ಪತ್ತೆ ಮತ್ತು ಚಿಕಿತ್ಸೆ ಆಂದೋಲನದ ಅಂಗವಾಗಿ ಆರೋಗ್ಯ ಸಿಬ್ಬಂದಿ ತಂಡ ಮನೆಮನೆಗೆ ಭೇಟಿ ನೀಡಿ, ಜನರಲ್ಲಿ ಅರಿವು ಮೂಡಿಸಲಿದೆ. ಇದೇ ಸಂದರ್ಭದಲ್ಲಿ ತ್ವರಿತಗತಿಯಲ್ಲಿ ತಪಾಸಣೆ ನಡೆಸಲಾಗುತ್ತದೆ ಎಂದು ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಎಸ್.ನಾಗೇಶ್ ತಿಳಿಸಿದ್ದಾರೆ.
ಡಿಸೆಂಬರ್ 7 ರಿಂದ 2025 ರ ಮಾರ್ಚ್ 17 ರವರೆಗೆ ಹಮ್ಮಿಕೊಂಡಿರುವ 100 ದಿನಗಳ ಪರಿಣಾಮಕಾರಿ ಕ್ಷಯರೋಗ ಪತ್ತೆ ಮತ್ತು ಚಿಕಿತ್ಸೆ ಆಂದೋಲನ ಕಾರ್ಯಕ್ರಮವನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯಾದ್ಯಂತ ಅನುಷ್ಠಾನಗೊಳಿಸಲಾಗುತ್ತಿದೆ. ಈ ಚಟುವಟಿಕೆಗಳಲ್ಲಿ ಸಮಾಜದ ದುರ್ಬಲ ಜನಸಂಖ್ಯೆಗಳಾದ ಮಧುಮೇಹಿಗಳು, ದೂಮಪಾನಿಗಳು, ವೃದ್ದರು, ಮದ್ಯವ್ಯಸನಿಗಳು, ಈ ಹಿಂದೆ ಕ್ಷಯರೋಗ ಚಿಕಿತ್ಸೆ ಪೂರ್ಣಗೊಳಿಸಿರುವವರು ಮತ್ತು ಕುಟುಂಬ ಸದಸ್ಯರು, ಹೆಚ್‌ಐವಿ ಸೋಂಕಿತರು ಹಾಗೂ ಇತರೆ ವಲಸೆ ಕಾರ್ಮಿಕರ ಮನೆ ಬಾಗಿಲಿಗೆ ಆರೋಗ್ಯ ಸಿಬ್ಬಂದಿ ತಂಡಗಳು ಭೇಟಿನೀಡಿ ಕ್ಷಯರೋಗದ ಅರಿವು ಮೂಡಿಸುವುದರ ಜೊತೆಗೆ ತ್ವರಿತ ರೀತಿಯಲ್ಲಿ ತಪಾಸಣೆ ನಡೆಸಲಾಗುತ್ತದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಎಸ್.ನಾಗೇಶ್ ತಿಳಿಸಿದ್ದಾರೆ.