ಅಡಿಕೆ ಮರದ ಜೊತೆಗೂ ಕಾಫಿ ಬೆಳೆ ಅನುಕೂಲಕರವಾಗಿದೆ. ಹೀಗಾಗಿ ಅಡಿಕೆ ಬೆಳೆಗಾರರು ಉಪ ಆದಾಯದ ನಿಟ್ಟಿನಲ್ಲಿ ಅಥವಾ ಪರ್ಯಾಯ ಬೆಳೆಯಾಗಿಯೂ ಕಾಫಿಯನ್ನು ಬೆಳೆಯಬಹುದಾಗಿದೆ.
10 ವರ್ಷಗಳಿಂದ ಅಡಿಕೆ ಬೆಳೆಯ ನಡುವೆ ಉಪಬೆಳೆಯಾಗಿ ಕಾಫಿಯನ್ನು ಮಾಡಿದವರು ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಚೈಪೆಯ ಗೋವಿಂದ ಭಟ್ ಅವರು. ಕಾಫಿಯಲ್ಲಿ ಉತ್ತಮ ಇಳುವರಿಯನ್ನೂ ಪಡೆಯುತ್ತಿದ್ದಾರೆ.