6 ) ಜ್ಞಾನ ದೀಪವನಲ್ಲಿ ಬೆಳಗಿರುವ ಮುನಿ ವೇದ ಸಾನುರಾಗದ ಋಷೀ ವ್ಯಾಸರಿಗೆ ನಮನ ಮಾನಸಮ್ಮಾನದಾ ಜ್ಞಾನವನು ನೀಡಿಹಾ ಜ್ಞಾನನಿಧಿಗಿದೊ ನಮನ ಗೋಪ ಬಾಲ |
5. ಅರಳಿರುವ ಕಮಳದಳದಂತಿರುವ ಕಂಗಳವು ವಿರಳಾತಿ ವಿರಳ ಬಹು ಘನವಿಶಾಲತೆಯ ಭರಪೂರ ಬುದ್ಧಿಯಾ ಭಾರತಾ ತೈಲದಿಂ ಗರಿಮೆ ಜೋತಿಯ ಬೆಳಕು ಗೋಪ ಬಾಲ |
4. ಸಕಲ ಸಂಸಾರಗಳ ಕರ್ಮದೆಡೆ ಗೀತೆ ನೀ ವಿಕಲತೆಗಳನ್ನು ಬಲು ದೂರ ಸರಿಪೆ ಸಕಲಾತ್ಮ ಬಂಧುಗಳ ಸಲಹುತಲಿ ರಕ್ಷಿಸುವೆ ಅಖಿಲ ಜನನೀ ನಮಿಪೆ ಗೋಪ ಬಾಲ
3. ಒಂದಲ್ಲ ಎರಡಲ್ಲ ಹದಿನೆಂಟು ಅಧ್ಯಾಯ ಸುಂದರವು ಅದ್ವೈತ ಅಮೃತದ ಧಾರೆ ಮಂದಿ ಸಂಸಾರದಲಿ ಸಿಲುಕಿ ಒದ್ದಾಡುತಿರೆ ಚೆಂದ ಸಂರಕ್ಷಿಸುವೆ ಗೋಪ ಬಾಲ |
ದೇವ ಕೃಷ್ಣನ ನುಡಿಯ ವೇದ ಮುನಿ ಮಹಿಮರದೊ ತಾವಲ್ಲಿ ಮಹಕಥನ ಮಧ್ಯೆ ಕೂಡಿಸಲು ಜೀವಾತ್ಮ ಪರಮಾತ್ಮ ಸಂಬಂಧಗಳನಲ್ಲಿ ದೇವನರುಹಿದ ಕಥೆಯು ಗೋಪ ಬಾಲ |
(ಮೂಲತ: ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದ ಸಿ ಎಚ್ ಗೋಪಾಲ ಭಟ್ ಅವರು ನಿವೃತ್ತ ಮುಖ್ಯೋಪಾಧ್ಯಾಯರು. ನಿವೃತ್ತಿ ಬಳಿಕ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಅವರು ಈಗಾಗಲೇ ಶ್ರೀಕೃಷ್ಣ…