16. ಹರಿಕಥಾ ಬೋಧನೆಯು ವಿಕಸಿತದ ಚಿಂತನೆಯು ಭರಪೂರ ಮಕರಂದ ಹೀರ್ವ ಭ್ರಮರಗಳು ನರರಲ್ಲಿ ಸಜ್ಜನರು ಕಲಿದೋಷ ಕಳೆಯುತಲಿ ಮರುಗದೆಲೆ ತೋಷಿಸಲಿ ಗೋಪ ಬಾಲ |
15.ಗೀತೆಯೆಂಬುದು ವಚನದಾ ಜಲಾಶ್ರಯದಲ್ಲಿ ಗೀತಾರ್ಥ ನಿರ್ಮಲದ ಬಲುಚೆಂದ ಕಮಲ ನೀತಿಯದು ಅತಿಮಧುರ ಗಂಧೋಪಕಥೆಗಳೂ ನೇತಿಯೆನು ಭಾರತವು ಗೋಪ ಬಾಲ |
14. ಇಂಥ ರಣನದಿಯನ್ನು ಆ ಪಾಂಡು ಪುತ್ರರೂ ಅಂತೆ ಆ ಕೃಷ್ಣ ಅಂಬಿಗನ ಜೊತೆಗೆ ಸಂತ ಮಹಮಹಿಮ ವೇದಾ ವ್ಯಾಸರಂದಂತೆ ಚಿಂತಿಸದೆ ದಾಟಿದರು ಗೋಪ ಬಾಲ |
13.ನೋಡು ಕರ್ಣನವ ಪ್ರಕ್ಷುಬ್ದ ಪ್ರವಾಹವೂ ನೋಡು ಅಶ್ವತ್ಥಾಮ ಆ ವಿಕರ್ಣರವರು ನೋಡವರೆ ಘೋರ ಮೊಸಳೆಗಳು ಮತ್ತವು ಅಲ್ಲಿ ನೋಡು ಕೌರವ ಸುಳಿಯು ಗೋಪ ಬಾಲ |
11.ಜಗಕೆ ಆಚಾರ್ಯನೇಯಾಗಿ ನೀನೊಲವಿಂದ ಜಗದಲ್ಲಿ ಸಕಲ ಜನ ರಕ್ಷಕನೆಯಾದ ಜಗದೀಶ ಕರುಣಾಳು ಮಹಮಹಿಮ ದೇವನೇ ಸುಗುಣ ಕೃಷ್ಣನೆ ನಮನ ಗೋಪ ಬಾಲ |
12. ಅಲ್ಲಿ ಭೀಷ್ಮಾ ದ್ರೋಣ ದಂಡೆಗಳು ನೀನರಿಯೊ ಕಲ್ಲು ಬಂಡೆಯೆ ಜಯದ್ರತನೆ ಅರಿಯೊ ಮಲ್ಲ ಶಲ್ಯನು ತಿಮಿಂಗಿಲ ಕೃಪನು ಬಲು ಸೆಳೆತ ಎಲ್ಲವನು ನೀ ನೋಡು ಗೋಪ…
9. ಎಲ್ಲ ಆ ಉಪನಿಷತ್ತುಗಳೆ ದನವಾಗಿಹವು ಬಲ್ಲವನು ಕರೆದಿರುವ ಗೀತಾಮೃತವದು ಎಲ್ಲ ಬಲ್ಲಾ ಜ್ಞಾನಿಗಳೆ ಅದನು ಕುಡಿವವರು ಎಲ್ಲವನು ನೀನರಿಯೊ ಗೋಪ ಬಾಲ |
8. ನೀ ಗೀತೆಯೆಂಬುವಾ ಅಮೃತ ಸಮ ಹಾಲನ್ನು ಬಾಗಿ ಹಿಂಡುವ ಕೃಷ್ಣ ನಿನಗೆನ್ನ ನಮನ ಬೇಗ ಬೇಗನೆ ಹಾಲು ಕರೆಯುವವ ನೀನಾಗೆ ಆಗಿಹನು ಪಾರ್ಥ ಕರು ಗೋಪ…
7. ನೀನು ಆಶ್ರಿತರಿಂಗೆ ಕಲ್ಪವೃಕ್ಷವೆಯಾಗಿ ನೀನೊಂದು ಕರದಲ್ಲಿ ಚಾಟಿಯನು ಪಿಡಿದು ನೀನು ಆ ಮತ್ತೊಂದು ಕೈ ಜ್ಞಾನಮುದ್ರೆಯಲಿ ಮಾನದಲಿ ಶೋಭಿಸುವೆ ಗೋಪ ಬಾಲ |
6 ) ಜ್ಞಾನ ದೀಪವನಲ್ಲಿ ಬೆಳಗಿರುವ ಮುನಿ ವೇದ ಸಾನುರಾಗದ ಋಷೀ ವ್ಯಾಸರಿಗೆ ನಮನ ಮಾನಸಮ್ಮಾನದಾ ಜ್ಞಾನವನು ನೀಡಿಹಾ ಜ್ಞಾನನಿಧಿಗಿದೊ ನಮನ ಗೋಪ ಬಾಲ |